‘ಕೆಜಿಎಫ್’ ಪಾತ್ರದಲ್ಲಿ ಚಿಕ್ಕಣ್ಣ, ರಾಕಿಭಾಯ್ ಯಶ್ ಹೇಳಿದ್ದೇನು?
ನಟ ಚಿಕ್ಕಣ್ಣ ಕಾಮಿಡಿ ಮಾಡ್ತಾ.. ಮಾಡ್ತಾನೆ ಕೋಟಿ ಕೋಟಿ ಕನ್ನಡಿಗರ ಹೃದಯ ಗೆದ್ದಿದ್ದಾರೆ. ಅದರಲ್ಲೂ ಈ ನಟನ ಎಂಟ್ರಿ ಇಲ್ಲದೆ ಬಹುತೇಕ ಸಿನಿಮಾಗಳು ಗೆಲ್ಲೋದಕ್ಕೆ ಸಾಧ್ಯ ಆಗಿಲ್ಲ ಎನ್ನಬಹುದು. ಯಾಕಂದ್ರೆ ಕನ್ನಡ ಸಿನಿಮಾ ರಂಗಕ್ಕೆ ಚಿಕ್ಕಣ್ಣ ಅವರಂತಹ ಒಬ್ಬ ನಟನು ಬೇಕಿದ್ದ. ಆ ಸ್ಥಾನ ತುಂಬಿರುವ ಚಿಕ್ಕಣ್ಣ ಈಗ ಹೀರೋ ಆಗಿ ಎಂಟ್ರಿ ಕೊಡುತ್ತಿದ್ದಾರೆ. ಈ ಸಮಯಕ್ಕೇ 'ಕೆಜಿಎಫ್' ಸ್ಟಾರ್ ರಾಕಿಂಗ್ ಸ್ಟಾರ್ ಯಶ್, ಚಿಕ್ಕಣ್ಣಗೆ ಏನ್ ಹೇಳಿದ್ದಾರಂತೆ ಗೊತ್ತೆ?
ನಟ ಚಿಕ್ಕಣ್ಣ 'ಉಪಾಧ್ಯಕ್ಷ' ಸಿನಿಮಾ ಮೂಲಕ ಮೊದಲ ಬಾರಿಗೆ ಹೀರೋ ಆಗುತ್ತಿದ್ದಾರೆ. ಈ ಸಿನಿಮಾ ಇನ್ನೇನು ಜನವರಿ 26ಕ್ಕೆ ರಿಲೀಸ್ ಆಗಲಿದೆ. ಈ ಸಮಯದಲ್ಲಿ ನಟ ಚಿಕ್ಕಣ್ಣ, ಯಶ್ ಅವರ ರಿಯಾಕ್ಷನ್ ಬಗ್ಗೆ ಮಾತನಾಡಿದ್ದಾರೆ. ಕೆಲವೇ ದಿನಗಳ ಹಿಂದೆ ರಿಲೀಸ್ ಆಗಿದ್ದ 'ಉಪಾಧ್ಯಕ್ಷ' ಸಿನಿಮಾದ ಟ್ರೇಲರ್ ನೋಡಿ, ನಟ ಯಶ್ ಅವರು ಜೋರಾಗಿ ನಕ್ಕಿದ್ದಾರಂತೆ. ಯಾಕಂದ್ರೆ ಅದರಲ್ಲಿ ನಟ ಚಿಕ್ಕಣ್ಣ ಅವರು ಯಶ್ ರೀತಿ, ಕೆಜಿಎಫ್ ಅವತಾರದಲ್ಲಿ ಸುತ್ತಿಗೆ ಹಿಡಿದು ಎಂಟ್ರಿ ಕೊಡುವ ದೃಶ್ಯ ಇದೆ. ಆ ಸೀನ್ ನೋಡಿ ಯಶ್ ನಕ್ಕಿದ್ದಾರಂತೆ, ಹಾಗಾದ್ರೆ ಯಶ್ ಹೀಗೆ ನಕ್ಕಿದ್ದು ಯಾಕೆ? ಮುಂದೆ ಓದಿ.

ಯಶ್ ಅವತಾರದಲ್ಲಿ ಚಿಕ್ಕಣ್ಣ!
ಹೌದು, ಕೆಜಿಎಫ್ ಚಾಪ್ಟರ್-1 ಸಿನಿಮಾದ ಹೈಲೈಟ್ ಅಂದರೆ ರಾಕಿಂಗ್ ಸ್ಟಾರ್ ಯಶ್ ಅವರ ಸುತ್ತಿಗೆ. ಹೀಗೆ ಅವರ ಕೈಯಲ್ಲಿ ಸುತ್ತಿಗೆ ಹಿಡಿದು, ವಿಲನ್‌ಗಳನ್ನೆಲ್ಲ ಹೊಡೆದು ಸಾವಿರಾರು ಜನರ ಜೀವ ಉಳಿಸುತ್ತಾರೆ. ಕಾರ್ಮಿಕರನ್ನು ಜೀತದಿಂದ ಮುಕ್ತಗೊಳಿಸುತ್ತಾರೆ. ಹೀಗಾಗಿಯೇ ಕೆಜಿಎಫ್ ಚಾಪ್ಟರ್-1 ಸಿನ್ಮಾ ಜಗತ್ತಿನಾದ್ಯಂತ ಅಬ್ಬರಿಸಿತ್ತು. ಹಾಗೇ ಕೆಜಿಎಫ್ ಚಾಪ್ಟರ್-2 ಸಾವಿರ ಕೋಟಿ ಕಲೆಕ್ಷನ್ ಮಾಡಿ ಭಾರತೀಯ ಸಿನಿಮಾ ರಂಗವನ್ನೇ ಶೇಕ್ ಮಾಡಿತ್ತು. ಹೀಗೆ ಇಡೀ ಜಗತ್ತನ್ನೇ ಸೆಳೆದಿದ್ದ ಕೆಜಿಎಫ್ ಸಿನಿಮಾದ ಪಾತ್ರವನ್ನ ಇದೀಗ ಚಿಕ್ಕಣ್ಣ, ಉಪಾಧ್ಯಕ್ಷ ಸಿನಿಮಾದ ಟ್ರೇಲರ್‌ನಲ್ಲಿ ಮಾಡಿದ್ದಾರೆ.
ಚಿಕ್ಕಣ್ಣ ಕೈಯಲ್ಲೂ ಸುತ್ತಿಗೆ ಇದೆ
ಹೀಗೆ ಯಶ್ ಅವರ ರೀತಿಯೇ ನಟ ಚಿಕ್ಕಣ್ಣ ಕೈಯಲ್ಲಿ ಸುತ್ತಿಗೆ ಹಿಡಿದು, ಹಣೆಗೆ ಬಟ್ಟೆಯ ಸುತ್ತಿಕೊಂಡು ವಿಲನ್‌ಗಳನ್ನ ಬಾರಿಸಲು ಬರ್ತಾರೆ. ಇನ್ನು ಹೀಗೆ ಚಿಕ್ಕಣ್ಣ ಅವರು, ಯಶ್ ರೀತಿ ಕೆಜಿಎಫ್ ಕಾಸ್ಟ್ಯೂಮ್ ಹಾಕಿ ಉಪಾಧ್ಯಕ್ಷ ಸಿನಿಮಾದ ಟ್ರೇಲರ್‌ನಲ್ಲಿ ಮಿಂಚಿರುವುದು ಈಗ ಅಭಿಮಾನಿಗಳ ಗಮನ ಸೆಳೆದಿದೆ. ಹಾಗೇ ಈ ಬಗ್ಗೆ ಖುದ್ದು ಯಶ್ ಅವರು ರಿಯಾಕ್ಷನ್ ಕೊಟ್ಟಿದ್ದಾರಂತೆ. ಚಿಕ್ಕಣ್ಣ ಅವರು ತಮ್ಮ 'ಉಪಾಧ್ಯಕ್ಷ' ಸಿನಿಮಾ ಟ್ರೇಲರ್‌ನ ರಾಕಿಭಾಯ್ ಯಶ್‌ಗೆ ಕಳಿಸಿದಾಗ, ಯಶ್ ಅವರು ನಗುವ ಎಮೋಜಿ ಕಳಿಸಿದ್ದಾರಂತೆ. ಹಾಗೇ ಚಿಕ್ಕಣ್ಣ, ತಮ್ಮ ರಿತಿಯೇ ಕಾಸ್ಟ್ಯೂಮ್ ಹಾಕಿದ್ದಕ್ಕೆ ಇಷ್ಟಪಟ್ಟಿದ್ದಾರಂತೆ ಯಶ್.
ಯಶ್ ಅವರ ಭೇಟಿ ಸಾಧ್ಯವಾಗಿಲ್ಲ?
ನಟ ಚಿಕ್ಕಣ್ಣ ಅವರ 'ಉಪಾಧ್ಯಕ್ಷ' ಸಿನಿಮಾ ಇನ್ನೇನು ರಿಲೀಸ್ ಆಗಿ ಅಬ್ಬರಿಸಲಿದೆ. ಆದ್ರೆ ಇದೇ ಸಮಯದಲ್ಲಿ ನಟ ಚಿಕ್ಕಣ್ಣ ಕೂಡ ಫುಲ್ ಬ್ಯುಸಿ ಆಗಿದ್ದಾರೆ. ಅಲ್ಲದೆ ಹಲವರನ್ನ ಇದೀಗ ಭೇಟಿ ಮಾಡುತ್ತಿದ್ದಾರೆ ಚಿಕ್ಕಣ್ಣ. ಆದರೆ ಯಶ್ ಅವರನ್ನ ಭೇಟಿ ಮಾಡಲು ಆಗಿಲ್ಲ, ಹೀಗಾಗಿಯೇ ವಾಟ್ಸಾಪ್ ಮೂಲಕ ತಮ್ಮ ಸಿನಿಮಾದ ಟ್ರೇಲರ್ ಕಳುಹಿಸಿದ್ದಾರೆ ಚಿಕ್ಕಣ್ಣ. ಅದಕ್ಕೆ ಯಶ್ ಅವರು ರಿಯಾಕ್ಷನ್ ಕೊಟ್ಟಿದ್ದಾರಂತೆ. ಇದನ್ನ ಖುದ್ದು ಚಿಕ್ಕಣ್ಣ ಅವರೇ ಹೇಳಿಕೊಂಡಿದ್ದು ವೈರಲ್ ಆಗುತ್ತಿದೆ.

ಒಟ್ನಲ್ಲಿ ನಟ ಯಶ್ ಅವರು ಮೊದಲಿನಿಂದ ಕೂಡ ನಟ ಚಿಕ್ಕಣ್ಣ ಅವರ ಬೆನ್ನಿಗೆ ನಿಂತು ಅವರ ಯಶಸ್ಸಿಗೆ ಕೈಜೋಡಿಸಿದ್ದಾರೆ. ಈ ಮಾತನ್ನು ಆಗಾಗ ಚಿಕ್ಕಣ್ಣ ಕೂಡ ಹೇಳಿಕೊಂಡು ಯಶ್ ಅವರ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಇದೀಗ ಮತ್ತೊಮ್ಮೆ ಯಶ್ ಅವರ ಕುರಿತು, ಹೆಮ್ಮೆ ವ್ಯಕ್ತಪಡಿಸಿದ್ದಾರೆ ನಟ ಚಿಕ್ಕಣ್ಣ. ಹಾಗೇ ಯಶ್ ಅವರಿಗೆ ಚಿಕ್ಕಣ್ಣ ಧನ್ಯವಾದ ಕೂಡ ಅರ್ಪಿಸಿದ್ದಾರೆ.












Click it and Unblock the Notifications