‘ಯಾರೂ ಗೂಟ ಹೊಡ್ಕೊಂಡು ಇರಲ್ಲ’: ದರ್ಶನ್‌ಗೆ ಉಮಾಪತಿ ನೇರ ವಾರ್ನಿಂಗ್!
ಚಾಲೆಂಜಿಂಗ್ ಸ್ಟಾರ್ ದರ್ಶನ್ ಸುಮ್ಮನೆ ಇರದೆ ಮತ್ತೊಂದು ವಿವಾದವನ್ನ ತಮ್ಮ ಮೈಮೇಲೆ ಎಳೆದುಕೊಂಡಂತೆ ಕಾಣುತ್ತಿದೆ. ನಿರ್ಮಾಪಕ ಉಮಾಪತಿ ವಿರುದ್ಧ ಮಾತನಾಡಿ ನಟ ದರ್ಶನ್ ಈಗ ವಿವಾದದ ಸುಳಿಗೆ ಸಿಲುಕಿದ್ದಾರೆ. ಹಾಗೇ ತಮ್ಮ ವಿರುದ್ಧ ಮಾತನಾಡಿರುವ ದರ್ಶನ್‌ಗೆ ಇದೀಗ ನಿರ್ಮಾಪಕ ಉಮಾಪತಿ ಸರಿಯಾಗಿ ತಿರುಗೇಟು ನೀಡುತ್ತಿದ್ದಾರೆ. 'ಯಾರೂ ಗೂಟ ಹೊಡ್ಕೊಂಡು ಇರಲ್ಲ' ಅಂತಾ ನೇರವಾಗಿಯೇ ವಾರ್ನಿಂಗ್ ಕೊಟ್ಟಿದ್ದಾರೆ.
ನಟ ದರ್ಶನ್ ಮತ್ತು ಉಮಾಪತಿ ನಡುವೆ ನಡೆಯುತ್ತಿರುವ ಜಗಳ ಈಗ, ಸ್ಟ್ರೀಟ್ ಫೈಟ್‌ಗೆ ತಿರುಗಿದೆ. ಅಂದ್ರೆ ಇಬ್ಬರೂ ಸಿನಿಮಾ ಐಕಾನ್‌ಗಳ ಕಿತ್ತಾಟ ಈಗ ಬೀದಿ ಜಗಳ ಆಗಿದೆ. ಹೀಗೆ ನಟ ದರ್ಶನ್ ಹೇಳಿಕೆಗೆ ಉಮಾಪತಿ ತಿರುಗೇಟು ನೀಡುವುದು, ಉಮಾಪತಿ ಮಾತಿಗೆ ದರ್ಶನ್ ತಿರುಗೇಟು ಕೊಡೋದು ದೊಡ್ಡ ವಿವಾದಕ್ಕೆ ನಾಂದಿ ಹಾಡುತ್ತಿದೆ. ಅದೇ ರೀತಿ ಈಗ ತಮ್ಮ ವಿರುದ್ಧ ಮಾತನಾಡಿದ್ದ ನಟ ದರ್ಶನ್‌ಗೆ, ನಿರ್ಮಾಪಕ ಉಮಾಪತಿ ನೇರವಾಗಿ ವಾರ್ನಿಂಗ್ ಕೊಟ್ಟಿದ್ದಾರೆ. ಹಾಗಾದರೆ ಉಮಾಪತಿ ಹೇಳಿದ್ದೇನು? ಮುಂದೆ ಓದಿ.

'ಅಯ್ಯೋ ತಗಡೇ, ರಾಬರ್ಟ್ ಕಥೆ..'
ನಿರ್ಮಾಪಕ ಉಮಾಪತಿ ವಿರುದ್ಧ ನಿನ್ನೆ ಗರಂ ಆಗಿದ್ದ ದರ್ಶನ್ ಅವರು ನೇರವಾಗಿ ವಾಗ್ದಾಳಿಯ ನಡೆಸಿದ್ದರು. 'ಅಯ್ಯೋ ತಗಡೇ ರಾಬರ್ಟ್ ಕಥೆ ನಿನಗೆ ಕೊಟ್ಟಿದ್ದು ನಾವು. ಹಾಗಾದರೆ ಇಂತಹ ಒಳ್ಳೆ ಕಥೆ ಮತ್ತೆ ಯಾಕ್ ಬಿಟ್ಟೆ ನೀನು?' ಅಂತಲೂ ದರ್ಶನ್ ಗುಡುಗಿದ್ರು. ಹೀಗೆ ಕಾಟೇರ ಕಥೆ ಬಿಟ್ಟುಕೊಟ್ಟಿದ್ದು ಯಾಕೆ? ಅಂತಾ ನಿರ್ಮಾಪಕ ಉಮಾಪತಿಗೆ ಪ್ರಶ್ನೆ ಮಾಡಿದ್ದರು ದರ್ಶನ್. ಈ ಮಾತಿನ ಜೊತೆಯಲ್ಲೇ ಮತ್ತಷ್ಟು ವಾಗ್ದಾಳಿ ಕೂಡ ನಡೆಸಿದ್ದರು ನಟ ದರ್ಶನ್. 'ಕೊಟ್ಟಿದ್ದು, ಮಾಡಿದ್ದನ್ನ ಹೇಳಬಾರದು. ಯಾಕೆ ಪದೇ ಪದೇ ನಮ್ಮ ಹತ್ರಾನೆ...' ಹಿಂಗೆಲ್ಲಾ ಮಾತು ಆಡಿದ್ದರು ಚಾಲೆಂಜಿಂಗ್ ಸ್ಟಾರ್. ಇದಕ್ಕೆ ಈಗ ಉಮಾಪತಿ ಶ್ರೀನಿವಾಸ್ ಗೌಡ, 'ಯಾರೂ ಗೂಟ ಹೊಡ್ಕೊಂಡು ಇರಲ್ಲ' ಅಂತಿದ್ದಾರೆ.
ಹೆಂಗೆಲ್ಲಾ ಮೆರೆದವರು ಎಲ್ಲಿಗೆ ಹೋದರು...
ದರ್ಶನ್ ಅವರ ಮಾತಿಗೆ ಉತ್ತರ ನೀಡಿರುವ ನಿರ್ಮಾಪಕ ಉಮಾಪತಿ, ಸಿನಿಮಾ ಕ್ಷೇತ್ರದಲ್ಲಿ ಮೆರೆದು ನಿಂತವರು ಮರೆಯಾಗಿದ್ದಾರೆ. ಹೆಂಗೆಲ್ಲಾ ಮೆರೆದವರು ಈಗ ಎಲ್ಲಿದ್ದಾರೆ. ಯಾರೂ ಇಲ್ಲಿ ಗೂಟ ಹೊಡೆದುಕೊಂಡು ಇರಲ್ಲ, ಎಲ್ಲರಿಗೂ ಬೀಳುವ ಟೈಂ ಬರುತ್ತದೆ ಅಂತಾನೂ ಹೇಳಿದ್ದಾರೆ ಉಮಾಪತಿ. ಈ ಮೂಲಕ ನಟ ದರ್ಶನ್ ತಮ್ಮನ್ನು ತಗಡು ಅಂತಾ ಕರೆದು, ಗುಮ್ಮಿದ್ದೀನಿ ಅಂತಾ ಹೇಳಿದ್ದಕ್ಕೆಲ್ಲಾ ಉಮಾಪತಿ ಪರೋಕ್ಷ ಉತ್ತರ ನೀಡಿದ್ದಾರೆ. ಈ ಜಗಳ ಈಗ ಮತ್ತಷ್ಟು ದೊಡ್ಡದಾಗುತ್ತಿದೆ.

ಯಾರೂ ಏನೂ ಮಾಡೋಕೆ ಆಗಲ್ಲ!
ಹಾಗೇ ಈ ವೇಳೆ ಉಮಾಪತಿ ಶ್ರೀನಿವಾಸ್ ಗೌಡ, ತಮ್ಮ ವಿರುದ್ಧ ಮಾತನಾಡುತ್ತಿರುವವರಿಗೆ ಕೂಡ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ನನ್ನ ಗುಮ್ಮಿದ್ದೀನಿ ಅನ್ನೋರು ಯಾರು? ಅವರು ಗುಮ್ಮಿದರೆ ನಾವು ಸುಮ್ಮನೆ ಇರ್ತೀವಾ? ನನ್ನ ಯಾರೂ ಏನೂ ಮಾಡೋಕೆ ಆಗಲ್ಲ, ಈಗ ನಾನು ಒಂದು ಸಮುದಾಯದ ನಾಯಕನಾಗಿ ಬೆಳೆದಿದ್ದೀನಿ ಅಂದ್ರೆ ಅದು ನನ್ನ ಸಾಮರ್ಥ್ಯ ಅಂತಾ ಅವರು ಅರ್ಥ ಮಾಡಿಕೊಳ್ಳಬೇಕು. ಉಮಾಪತಿ ಗಟ್ಟಿಯಾಗಿ ಇದ್ದಾರೆ ಅನ್ನೋದನ್ನ ಅವರು ಅರ್ಥ ಮಾಡಿಕೊಳ್ಳಲಿ ಎಂದಿದ್ದಾರೆ. ಈ ಮೂಲಕ ದರ್ಶನ್ ಅವರಿಗೆ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ ನಿರ್ಮಾಪಕ ಉಮಾಪತಿ.
ಒಟ್ನಲ್ಲಿ ದರ್ಶನ್ ಮತ್ತು ಉಮಾಪತಿ ನಡುವೆ ಜಗಳ ಕೈಮೀರಿ ಹೋಗುತ್ತಿದೆ. ಅದರಲ್ಲೂ, ನಿರ್ಮಾಪಕ ಉಮಾಪತಿ ಅವರು ಈಗ ತಮ್ಮ ವಿರುದ್ಧ ಮಾತನಾಡಿದ್ದ ನಟ ದರ್ಶನ್ ಅವರಿಗೆ ನೇರವಾಗಿ ಉತ್ತರ ನೀಡಿದ್ದಾರೆ. ಹಾಗೇ ತಮಗೂ ದೊಡ್ಡ ಸಪೋರ್ಟ್ ಇದೆ ಅನ್ನೋದನ್ನು ಪರೋಕ್ಷವಾಗಿ ಹೇಳಿದ್ದಾರೆ. ಈ ಮೂಲಕ ದರ್ಶನ್ ಮತ್ತು ಉಮಾಪತಿ ಜಗಳ ಈಗ ಮತ್ತೆ, ಮತ್ತೆ ದೊಡ್ಡದಾಗುತ್ತಿದೆ.












Click it and Unblock the Notifications