Jai Hanuman: ಹನುಮನ ಪಾತ್ರದಲ್ಲಿ ರಿಷಬ್ ಶೆಟ್ಟಿ; ಫಸ್ಟ್ ಲುಕ್‌ ರಿಲೀಸ್‌

ಕಾಂತಾರ ಸಿನಿಮಾ ಮೂಲಕ ದೇಶಾದ್ಯಂತ ತನ್ನದೇ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿರುವ ನಟ ರಿಷಬ್ ಶೆಟ್ಟಿ. ಸದ್ಯ ಭಾರಿ ಬಜೆಟ್‌ನಲ್ಲಿ ಕಾಂತಾರ-ಅಧ್ಯಾಯ 1 ಸಿನಿಮಾವನ್ನು ತೆರೆಗೆ ತರಲು ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, 2025ರಲ್ಲಿ ತೆರೆ ಮೇಲೆ ಬರುವ ಸಾಧ್ಯತೆ ಇದೆ. ಈ ನಡುವೆ ಮತ್ತೊಂದು ದೊಡ್ಡ ಬಜೆಟ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ರಿಷಬ್ ಶೆಟ್ಟಿ.

ತೆಲುಗು, ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಬಿಡುಗಡೆಯಾಗಿದ್ದ ಹನು-ಮ್ಯಾನ್ ಸಿನಿಮಾ ಭಾರಿ ಯಶಸ್ಸು ಕಂಡಿತ್ತು. ಈ ಸಿನಿಮಾ ಮುಂದುವರಿದ ಭಾಗ 'ಜೈ ಹನುಮಾನ್' ತೆರೆಗೆ ಬರಲಿದೆ. ಚಿತ್ರೀಕರಣ ನಡೆಯುತ್ತಿದ್ದು ಈ ಸಿನಿಮಾ ಕೂಡ 2025ರಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ. ಜೈ ಹನುಮಾನ್ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಹನುಮನ ಪಾತ್ರ ಮಾಡುತ್ತಿದ್ದು ಇಂದು ಮೊದಲ ಲುಕ್ ರಿಲೀಸ್ ಮಾಡಿದ್ದಾರೆ.

rishabh shetty hanuman character jai hanuman movie first look

ಪ್ರಶಾಂತ್ ವರ್ಮಾ ನಿರ್ದೇಶನದ ಹನು-ಮ್ಯಾನ್ ಸಿನಿಮಾ ತೆಲುಗು ಸಿನಿಮಾ ರಂಗದಲ್ಲಿ ಹಲವು ದಾಖಲೆ ಬರೆದಿದೆ. ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾದ ಸಿನಿಮಾ, ಸ್ಟಾರ್ ನಟರ ಸಿನಿಮಾಗಳಿಗೆ ಸಡ್ಡು ಹೊಡೆದು ಗಲ್ಲಾ ಪೆಟ್ಟಿಗೆಯಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಹೊಸಬರ ಸಿನಿಮಾವಾದರೂ ತಂತ್ರಜ್ಞಾನ, ಆಧ್ಯಾತ್ಮ ಎಲ್ಲವನ್ನೂ ಮಿಳಿತಗೊಳಿಸಿದ ಒಂದು ಫ್ಯಾಂಟಸಿ ಸಿನಿಮಾವಾಗಿ ಕೌಟುಂಬಿಕ ಪ್ರೇಕ್ಷಕರ ಮನ ಗೆದ್ದಿತ್ತು.

ಮೊದಲ ಭಾಗ ದೊಡ್ಡ ಮಟ್ಟದಲ್ಲಿ ಹಿಟ್ ಆದ ಬಳಿಕ ಇದೀಗ ಭಾರಿ ಬಜೆಟ್‌ನಲ್ಲಿ ಜೈ ಹನುಮಾನ್ ಸಿನಿಮಾವರನ್ನು ತೆರೆಗೆ ತರಲು ಸಿನಿಮಾ ತಂಡ ಸಜ್ಜಾಗಿದೆ. ಎರಡನೇ ಭಾಗದಲ್ಲಿ ಹನುಮನ ಪಾತ್ರ ಸಾಕಷ್ಟು ಪ್ರಮುಖವಾಗಿರುವ ಕಾರಣ, ದೊಡ್ಡ ನಟರೊಬ್ಬರು ಈ ಪಾತ್ರ ಮಾಡಬೇಕು ಎನ್ನುವುದು ಚಿತ್ರತಂಡದ ಆಸೆಯಾಗಿತ್ತು. ಸಿನಿಮಾ ತಂಡ ರಿಷಬ್ ಶೆಟ್ಟಿಯವರನ್ನು ಪಾತ್ರಕ್ಕಾಗಿ ಸಂಪರ್ಕಿಸಿದ್ದು, ರಿಷಬ್ ಶೆಟ್ಟಿ ಕೂಡ ಸಂತೋಷದಿಂದಲೇ ಒಪ್ಪಿಕೊಂಡಿದ್ದಾರೆ.

ಫಸ್ಟ್ ಲುಕ್ ಹಂಚಿಕೊಂಡ ರಿಷಬ್ ಶೆಟ್ಟಿ

ಸಿನಿಮಾದಲ್ಲಿ ಹನುಮನ ಪಾತ್ರದಲ್ಲಿ ಯಾರು ಕಾಣಿಸಿಕೊಳ್ಳುತ್ತಾರೆ ಎನ್ನುವ ಗುಟ್ಟನ್ನು ಈವರೆಗೂ ಬಿಟ್ಟುಕೊಟ್ಟಿರಲಿಲ್ಲ. ಇದೀಗ ಸಿನಿಮಾ ತಂಡ ಅಧಿಕೃತವಾಗಿ ಫಸ್ಟ್ ಲುಕ್ ಬಿಡುಗಡೆ ಮಾಡುವ ಮೂಲಕ ಎಲ್ಲಾ ಕುತೂಹಲಗಳಿಗೆ ತೆರೆ ಎಳೆದಿದೆ.

ರಿಷಬ್ ಶೆಟ್ಟಿ ರಾಮನ ವಿಗ್ರಹ ಕುಳಿತಿರುವ ಹನುಮನ ಚಿತ್ರವನ್ನು ಹಂಚಿಕೊಂಡಿದ್ದು ಸಂತಸ ವ್ಯಕ್ತಪಡಿಸಿದ್ದಾರೆ. "ಕನ್ನಡ ನೆಲದ ವರಸುತ ಆಂಜನೇಯನ ಆಶೀರ್ವಾದದೊಂದಿಗೆ ಭಾರತ ಇತಿಹಾಸದ ಸರ್ವಶ್ರೇಷ್ಠ ಭಾವವೊಂದನ್ನು ತೆರೆಯ ಮೇಲೆ ತರಲಿದ್ದೇವೆ. ನಿಮ್ಮೆಲ್ಲರ ಪ್ರೀತಿ ಬೆಂಬಲ ಆಶೀರ್ವಾದ ಎಂದಿನಂತೆ ಸದಾ ಇರಲಿ - ಜೈ ಹನುಮಾನ್" ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+