Pragathi Shetty: "ರಿಷಬ್‌ಗೆ ಆಕ್ಸಿಡೆಂಟ್‌ ಆಯ್ತು, ಆ ದಿನ..." ಶೂಟಿಂಗ್‌ ಅವಘಡದ ಬಗ್ಗೆ ಪ್ರಗತಿ ಶೆಟ್ಟಿ ಹೇಳಿದ್ದೇನು?

ನಟ ರಿಷಬ್‌ ಶೆಟ್ಟಿ ಅಭಿನಯದ ಕಾಂತಾರ ಚಾಪ್ಟರ್‌-1 ಸಿನಿಮಾ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಈ ಸಿನಿಮಾಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ರಿಷಬ್‌ ಈ ಸಿನಿಮಾಗೆ ಪಟ್ಟಿರುವ ಕಷ್ಟ ಅಷ್ಟಿಷ್ಟಲ್ಲ. ತಾವೇ ನಿರ್ದೇಶಿಸಿ, ನಟಿಸಿರುವುದರಿಂದ ಒಂದು ದೊಡ್ಡ ಸವಾಲಿನ ಕೆಲಸವಾಗಿತ್ತು. ಶೂಟಿಂಗ್‌ ವೇಳೆಯೂ ರಿಷಬ್‌ ಅಪಾಯಗಳನ್ನು ಎದುರಿಸಿದ್ದರು. ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಪತ್ನಿ ಪ್ರಗತಿ ರಿಷಬ್‌ ಶೆಟ್ಟಿ, ರಿಷಬ್‌ಗೆ ಆಕ್ಸಿಡೆಂಟ್‌ ಆಗಿದ್ದ ವಿಚಾರವನ್ನು ರಿವೀಲ್‌ ಮಾಡಿದ್ದಾರೆ.

ಹೌದು, ರಿಷಬ್‌ ಶೆಟ್ಟಿ ಅವರ ಕಾಂತಾರ-1 ಸಿನಿಮಾ ರಿಲೀಸ್‌ಗೂ ಮುನ್ನ ಕೆಲ ಶಾಕಿಂಗ್‌ ವಿಚಾರಗಳನ್ನು ಅವರೇ ಬಹಿರಂಗಪಡಿಸಿದ್ದರು. ಶೂಟಿಂಗ್‌ ವೇಳೆ ನಾನೇ ನಾಲ್ಕೈದು ಬಾರಿ ಹೋಗೇಬಿಡಬೇಕಿತ್ತು. ಅಂತಹ ಸವಾಲುಗಳನ್ನು ದಾಟಿ ಸಿನಿಮಾ ಇಂದು ನಿಮ್ಮ ಮುಂದೆ ತಂದಿದ್ದೇವೆ ಎಂದಿದ್ದರು. ಅಲ್ಲದೆ ಕ್ಲೈಮ್ಯಾಕ್ಸ್‌ ಶೂಟಿಂಗ್‌ ವೇಳೆ ಕಾಲು ಊದಿಕೊಂಡಿದ್ದ ಫೋಟೋಗಳನ್ನು ಸಹ ರಿಷಬ್‌ ಇತ್ತೀಚೆಗೆ ಶೇರ್‌ ಮಾಡಿದ್ದರು. ಈ ಸಿನಿಮಾಗಾಗಿ ಪತ್ನಿ ಪ್ರಗತಿ ಕೂಡ ಕೆಲಸ ಮಾಡಿದ್ದು, ಈ ವೇಳೆ ರಿಷಬ್‌ಗೆ ಆದ ಅವಘಡವೊಂದನ್ನು ಬಹಿರಂಗಪಡಿಸಿದ್ದಾರೆ.

Rishab Shetty Wife Pragathi Reveals His Accident During Kantara Chapter 1 Shooting

'ಕಾಂತಾರ ಚಾಪ್ಟರ್‌-1 ಶೂಟಿಂಗ್‌ ಸಮಯದಲ್ಲಿ ಎಷ್ಟೋ ಆತಂಕದ ರಾತ್ರಿಗಳನ್ನು ಕಳೆಯಬೇಕಾಯಿತು. ನನಗೆ ಜ್ವರ ಇದ್ದಿದ್ದರಿಂದ ಆ ದಿನ ಶೂಟಿಂಗ್‌ ಸೆಟ್‌ಗೆ ಹೋಗಿರಲಿಲ್ಲ. ಅದೇ ದಿನ ರಿಷಬ್‌ಗೆ ಆಕ್ಸಿಡೆಂಟ್‌ ಆಗಿತ್ತು. ಆದರೆ ನಾನು ಆತಂಕಪಡ್ತೀನಿ ಎಂದು ಈ ವಿಚಾರ ನನ್ನಿಂದ ಮುಚ್ಚಿಟ್ಟಿದ್ದರು. ಆದರೆ ಕಾಸ್ಟ್ಯೂಮ್‌ ವಿಚಾರವಾಗಿ ಅಲ್ಲಿದ್ದ ಅಸಿಸ್ಟೆಂಟ್‌ಗೆ ಫೋನ್‌ ಮಾಡಿದಾಗ ಈ ಘಟನೆ ಬಗ್ಗೆ ತಿಳಿಯಿತು. ಕೂಡಲೇ ನಾನು ಗಾಬರಿಯಿಂದ ಶೂಟಿಂಗ್‌ ಜಾಗಕ್ಕೆ ಹೋದೆ. ರಿಷಬ್‌ ಕ್ಷೇಮವಾಗಿದ್ದರು. ಅದನ್ನು ನೋಡಿ ಸಮಾಧಾನ ಆಯ್ತು' ಎಂದಿದ್ದಾರೆ.

'ಪರಿಶ್ರಮಕ್ಕೆ ಯಶಸ್ಸು ಸಿಕ್ಕಿದೆ'

'ಸಿನಿಮಾ ಕ್ಲೈಮ್ಯಾಕ್ಸ್‌ನಲ್ಲಿ ರಿಷಬ್‌ ಕಾಲಿಗೆ ಫ್ರಾಕ್ಚರ್‌ ಆಯ್ತು. ಅದಕ್ಕೆ ಅಲ್ಲೇ ಸಣ್ಣಪುಟ್ಟ ಟ್ರೀಟ್‌ಮೆಂಟ್‌ ತಗೋತಿದ್ರು. ಶೂಟಿಂಗ್‌ ಕಂಪ್ಲೀಟ್‌ ಆಗುತ್ತಿರಲಿಲ್ಲ. ಅವರಿಗೆ ಏನೇ ಆಗಿದ್ರೂ ಮರುದಿನ ಎಂದಿನಂತೆ ಶೂಟಿಂಗ್‌ಗೆ ಹೋಗ್ತಿದ್ರು. ನಾನೇ ರೆಸ್ಟ್‌ ತಗೋ ಅಂದ್ರೂ ಕೇಳುತ್ತಿರಲಿಲ್ಲ. ಸಿನಿಮಾ ಮೇಲೆ ಅವರ ಪರಿಶ್ರಮ ಹಾಗೂ ತಾಳ್ಮೆ ಹೆಚ್ಚಾಗಿತ್ತು. ಇದರಿಂದಲೇ ಸಿನಿಮಾಗೆ ಇವತ್ತು ದೊಡ್ಡಮಟ್ಟದ ಯಶಸ್ಸು ಸಿಕ್ಕಿದೆ. ಸಿನಿಮಾ ಮಾಡುವಾಗ ರಿಷಬ್‌ ತುಂಬಾ ಸಮಸ್ಯೆಗಳನ್ನು ಎದುರಿಸಿದ್ದಾರೆ, ನೋವು ತಡೆದುಕೊಂಡಿದ್ದಾರೆ' ಎಂದು ಪ್ರಗತಿ ಹೇಳಿಕೊಂಡಿದ್ದಾರೆ.

'ಸಿನಿಮಾದಲ್ಲಿನ ಎಲ್ಲ ಫೈಟಿಂಗ್‌ ಸೀನ್‌ಗಳನ್ನು ಮುಂಜಾಗ್ರತೆ ಕ್ರಮ ವಹಿಸಿಯೇ ಶೂಟ್‌ ಮಾಡಲಾಯಿತು. ಎಲ್ಲ ಸುರಕ್ಷತೆ ಪಾಲಿಸಿ ಮಾಸ್ಟರ್‌ಗಳು ಆಕ್ಷನ್‌ ಸೀನ್‌ಗಳನ್ನು ನಿರ್ಮಿಸಿದರು. ರಿಷಬ್‌ಗೆ ಈ ವಿಚಾರದಲ್ಲಿ ಆಸಕ್ತಿ ಜೊತೆಗೆ ಹಠ ಕೂಡ ಜಾಸ್ತಿ ಇತ್ತು. ಶೂಟಿಂಗ್‌ ವೇಳೆ ಎಷ್ಟೇ ಸುಸ್ತಾದರೂ ನಾನು ಮಾಡ್ತೀನಿ ಅಂತಿದ್ರು. ಆದರೆ ನನಗೆ ಗಾಬರಿ ಆಗುತ್ತಿತ್ತು. ಅಂತಿಮವಾಗಿ ಅವರ ಶ್ರಮಕ್ಕೆ ತಕ್ಕ ಫಲ ಸಿಕ್ಕಿದೆ' ಎಂದು ಪ್ರಗತಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+