"ಕರಿಯ" ಶೂಟಿಂಗ್ ವೇಳೆ ದರ್ಶನ್-ಪ್ರೇಮ್ ನಡುವೆ ಮನಸ್ತಾಪ ಆಗಿದ್ದೇಕೆ?
ನಟ ದರ್ಶನ್ ತೂಗುದೀಪ ಅವರು ಹಿಟ್ ಸಿನಿಮಾದಲ್ಲಿ ಕರಿಯ ಒಂದು ಮೈಲಿಗಲ್ಲು. ಮೆಜೆಸ್ಟಿಕ್ ಸಿನಿಮಾ ಮೂಲಕ ಹೆಸರು ಮಾಡಿದ್ದ ದರ್ಶನ್ ಅವರಿಗೆ ಕರಿಯ ಸಿನಿಮಾ ಒಂದು ದೊಡ್ಡ ತಿರುವು ನೀಡಿತ್ತು. ಈ ಸಿನಿಮಾ ನಿರ್ದೇಶಿಸಿದ್ದು ಜೋಗಿ ಪ್ರೇಮ್. ಇಬ್ಬರ ಕಾಂಬಿನೇಷನ್‌ನಲ್ಲಿ ದೊಡ್ಡ ಹೆಸರು ಮಾಡಿತ್ತು ಕರಿಯ. ದಶಕಗಳೇ ಉರುಳಿದರೂ ಕರಿಯ ಕ್ರೇಜ್ ಕಡಿಮೆಯಾಗಿಲ್ಲ. ಇಂದಿಗೂ ಕರಿಯ ಡೈಲಾಗ್, ಹಾಡುಗಳು ಜನರ ಬಾಯಲ್ಲಿವೆ. ಆದರೆ ಈ ಸಿನಿಮಾ ಶೂಟಿಂಗ್ ವೇಳೆ ಪ್ರೇಮ್ ಹಾಗೂ ದರ್ಶನ್ ನಡುವೆ ಮನಸ್ತಾಪ ಮುನಿಸು ಎಲ್ಲವೂ ನಡೆದಿತ್ತಂತೆ.
ಕರಿಯ ಅಷ್ಟು ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡಿದ್ರೂ ಮತ್ತೆ ಈ ಜೋಡಿ ಸಿನಿಮಾ ಮಾಡಲಿಲ್ಲ. ಗ್ಯಾಂಗ್‌ಸ್ಟರ್ ಕಥೆಯನ್ನೇ ಆರಿಸಿಕೊಂಡಿದ್ದ ಪ್ರೇಮ್ ಅವರಿಗೂ ಇದು ಚೊಚ್ಚಲ ನಿರ್ದೇಶನವಾಗಿತ್ತು. ಒಟ್ಟಾರೆ ಒಬ್ಬರನ್ನೂ ಕೈಹಿಡಿದ ಈ ಸಿನಿಮಾದಿಂದ ಈ ಜೋಡಿ ಮತ್ತೆ ಒಂದಾಗಿ ಸಿನಿಮಾ ಮಾಡುತ್ತೆ ಎಂಬ ನಿರೀಕ್ಷೆ ಎಲ್ಲರಲ್ಲಿತ್ತು. ಆದರೆ ಕರಿಯ ಸಿನಿಮಾ ವೇಳೆಯ ಇಬ್ಬರ ನಡುವೆ ಕೆಲ ವಿಚಾರಕ್ಕೆ ಕ್ಲ್ಯಾಶ್ ಆಗಿತ್ತಂತೆ.

1 ವರ್ಷ ಪ್ರದರ್ಶನ ಕಂಡ ಸಿನಿಮಾ
ಕರಿಯ ಸಿನಿಮಾ ರಿಲೀಸ್ ಆದ ಆರಂಭದಲ್ಲಿ ಪ್ರದರ್ಶನ ಕಂಡಿರಲಿಲ್ಲ. ಇದರಿಂದ ನಿರ್ಮಾಪಕ ಆನೇಕಲ್ ಬಾಲರಾಜ್ ಅವರು ಈ ಸಿನಿಮಾ ಮಾರಲು ನಿರ್ಧರಿಸಿದ್ದರು. ಆದರೆ ವಿತರಕರು ಎರಡನೇ ಬಾರಿ ರಿಲೀಸ್ ಮಾಡಲು ಮುಂದೆ ಬಂದಿದ್ದಲ್ಲದೆ ಹೆಚ್ಚು ಪ್ರಚಾರ ಮಾಡಿದ್ರು. ಹಾಡುಗಳಿಂದಲೂ ಪ್ರೇಕ್ಷಕರು ಮತ್ತೆ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿದ್ರು. ಇದರ ಓಟಕ್ಕೆ ಸಾಕ್ಷಿ ಎನ್ನುವಂತೆ ಕೆಲವು ಚಿತ್ರಮಂದಿರಗಳಲ್ಲಿ ಕರಿಯ ಒಂದು ವರ್ಷ ಪ್ರದರ್ಶನ ಕಂಡಿತ್ತು. ಇಷ್ಟು ದೊಡ್ಡ ಹಿಟ್ ಕೊಟ್ಟ ಜೋಡಿ ಮತ್ತೊಂದು ಸಿನಿಮಾ ಮಾಡಲು ಒಪ್ಪಿದ್ದು ಬರೋಬ್ಬರಿ 20 ವರ್ಷಗಳ ನಂತರ ಎನ್ನುವುದು ಅಚ್ಚರಿ ಮೂಡಿಸಿತ್ತು.
ಓಂ ಸಿನಿಮಾದಲ್ಲಿ ಉಪೇಂದ್ರ ರಿಯಲ್ ರೌಡಿಗಳನ್ನ ಹಾಕೊಂಡು ಸಿನಿಮಾ ಮಾಡಿ ಗೆದ್ದಿದ್ದರು. ಇನ್ನು ಪ್ರೇಮ್ ಕೂಡ ತಮ್ಮ ಮೊದಲ ಸಿನಿಮಾದಲ್ಲಿಯೇ ರಿಯಲ್ ರೌಡಿಗಳನ್ನೇ ಹಾಕೊಂಡು ಸಿನಿಮಾ ಮಾಡಿದ್ದರು. ರೌಡಿಗಳ ದೃಶ್ಯ ಶೂಟ್ ಮಾಡುವಾಗ ಕೆಲ ಸಮಸ್ಯೆಗಳಾಗಿದ್ದವು. ಶೂಟಿಂಗ್ ಮಾಡುವಾಗ ದರ್ಶನ್ ಹಾಗೂ ಪ್ರೇಮ್ ನಡುವೆ ಮನಸ್ತಾಪ ಕೂಡ ಆಗಿತ್ತು. ಈ ಸಿನಿಮಾದಲ್ಲಿದ್ದ ರಿಯಲ್ ರೌಡಿ ರಾಜೇಂದ್ರ ಆ ಸಮಯಕ್ಕೆ ಅರೆಸ್ಟ್ ಆಗಿದ್ರು. ಇದರಿಂದ ಶೂಟಿಂಗ್ ಕೂಡ ತಡವಾಗಿತ್ತು.
ಆದರೆ ದರ್ಶನ್ ಮತ್ತೊಂದು ಸಿನಿಮಾದಲ್ಲಿಯೂ ನಟಿಸುತ್ತಿದ್ದರು. ದರ್ಶನ್ ಡೇಟ್ ಕ್ಲ್ಯಾಶ್ ವಿಚಾರಕ್ಕೆ ಇಬ್ಬರ ನಡುವೆ ಕ್ಲ್ಯಾಶ್ ಆಗಿತ್ತು. ಹೀಗಾಗಿ ಇಬ್ಬರ ನಡುವೆ ಇದೇ ವಿಚಾರಕ್ಕೆ ಮುನಿಸು ಮೂಡಿತ್ತು. ನಂತರ ಅವರು ಒಟ್ಟಿಗೆ ಸಿನಿಮಾ ಮಾಡಲಿಲ್ಲ. ಮತ್ತೊಂದು ಸಿನಿಮಾ ಘೋಷಣೆ ಮಾಡಲು ಬರೋಬ್ಬರಿ 20 ವರ್ಷಗಳನ್ನು ತೆಗೆದುಕೊಂಡಿದ್ದರು. ಸದ್ಯ ದರ್ಶನ್ ಜೈಲಿನಲ್ಲಿದ್ದು, ರಿಲೀಸ್ ಆದ ಮೇಲೆ ಒಟ್ಟಿಗೆ ಸಿನಿಮಾ ಬರುವ ಸಾಧ್ಯತೆ ಇದೆ.












Click it and Unblock the Notifications