ಪವಿತ್ರಾ ಗೌಡಾಗೆ 200ಕ್ಕೂ ಹೆಚ್ಚು ಮೆಸೇಜ್ ಮಾಡಿದ್ದ ರೇಣುಕಾಸ್ವಾಮಿ- ರಹಸ್ಯ ಬಯಲು
ಬೆಂಗಳೂರು ಜೂನ್ 28: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆಗೂ ಮುನ್ನ ಪವಿತ್ರಾ ಗೌಡ ಅವರಿಗೆ ಅಶ್ಲೀಲವಾಗಿ ಮೆಸೇಜ್ ಮಾಡುತ್ತಿದ್ದರು ಎನ್ನುವ ಆರೋಪದ ಬೆನ್ನಲ್ಲೆ ಆತನ ಮೊಬೈಲ್ ನಂಬರ್ ತಪಾಸಣೆ ಕಾರ್ಯ ಚುರುಕುಗೊಂಡಿದೆ. ಈ ವೇಳೆ ಪವಿತ್ರಾ ಗೌಡ ಅವರಿಗೆ ರೇಣುಕಾಸ್ವಾಮಿ ಮಾಡಿದ್ದ ಮೆಸೇಜ್ ರಹಸ್ಯ ಬಯಲಾಗಿದೆ.
ರೇಣುಕಾಸ್ವಾಮಿ ದೇಹವನ್ನು ಎಸೆಯಲಾಗಿದ್ದ ಚರಂಡಿಯಲ್ಲಿ ಆತನ ಮೊಬೈಲ್ ಫೋನ್ ಪತ್ತೆಯಾಗದ ಹಿನ್ನೆಲೆಯಲ್ಲಿ ಪೊಲೀಸರು ಆತನ ಮೊಬೈಲ್ ನಂಬರ್‌ನ ಹೊಸ ಸಿಮ್ ಕಾರ್ಡ್ ತೆಗೆದುಕೊಂಡು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ರೇಣುಕಾಸ್ವಾಮಿಯಿಂದ ಪವಿತ್ರಾ ಗೌಡ ಅವರಿಗೆ 200ಕ್ಕೂ ಹೆಚ್ಚು ಮೆಸೇಜ್ ಕಳುಹಿಸಿರುವುದು ಗೊತ್ತಾಗಿದೆ.

ಅಲ್ಲದೆ ಪವಿತ್ರಾ ಅವರಿಗೆ ಕಳೆದ ಐದು ತಿಂಗಳಿಂದ ರೇಣುಕಾಸ್ವಾಮಿ ಮೆಸೇಜ್ ಮಾಡುತ್ತಿರುವುದು ತನಿಖೆಯಿಂದ ಬಯಲಾಗಿದೆ. ಫೆಬ್ರವರಿಯಿಂದ ಸುಮಾರು 200ಕ್ಕೂ ಹೆಚ್ಚು ಮೆಸೇಜ್‌ಗಳನ್ನು ರೇಣುಕಾಸ್ವಾಮಿ ಮಾಡಿದ್ದು ಎಲ್ಲಾ ಮೆಸೇಜ್‌ಗಳು ಅಶ್ಲೀಲ ಮೆಸೇಜ್‌ಗಳಾಗಿದ್ದವು ಎಂದು ತಿಳಿದು ಬಂದಿದೆ.
ಆದರೆ ರೇಣುಕಾಸ್ವಾಮಿ ಮೆಸೇಜ್‌ಗೆ ಪವಿತ್ರಾ ರಿಪ್ಲೈ ಮಾಡಿರಲಿಲ್ಲ. ಇದರಿಂದ ಕೋಪಗೊಂಡ ರೇಣುಕಾಸ್ವಾಮಿ ಅಶ್ಲೀಲ ಮೆಸೇಜ್ ಮಾಡಿದ್ದಾರೆ. ಇದರಿಂದ ಬೇಸರಗೊಂಡ ಪವಿತ್ರಾ ಈ ಬಗ್ಗೆ ಪವನ್‌ಗೆ ಮಾಹಿತಿ ನೀಡಿದ್ದಾರೆ. ಬಳಿಕ ಪವನ್ ಪವಿತ್ರಾ ಗೌಡ ರೀತಿ ಮಸೇಜ್ ಮಾಡಲು ಶುರು ಮಾಡಿದ್ದಾರೆ.

ಇದನ್ನು ಅರಿಯದ ರೇಣುಕಾಸ್ವಾಮಿ ಕೇಳಿದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಪವನ್ ರೇಣುಕಾಸ್ವಾಮಿಯಿಂದ ಫೋಟೋ ಹಾಗೂ ಅವರು ಇರುವ ಸ್ಥಳ ಎಲ್ಲಾ ಮಾಹಿತಿಯನ್ನು ಕಲೆ ಹಾಕಿದ ಬಳಿಕ ಆತನ ಕೊಲೆ ಸಂಚು ರೂಪಿಸಲಾಗಿದೆ.
ದರ್ಶನ್ ಖೈದಿ ನಂ. ವಾಹನಗಳ ಮೇಲೆ...
ಇನ್ನೂ ದರ್ಶನ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನು ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದರೂ ಹೆಚ್ಚಿನ ಅಭಿಮಾನ ತೋರುತ್ತಿದ್ದಾರೆ. ದರ್ಶನ್ ಖೈದಿ ನಂಬರ್ 6106 ಟ್ಯಾಟೂ ಹಾಕಿಸಿಕೊಳ್ಳುವುದು, ಆ ನಂಬರ್ ವಾಹನಗಳಿಗೆ ಬರೆಸುವುದು ಕಂಡು ಬಂದಿದೆ.
ದರ್ಶನ್ ಹೇಗಿದ್ದರೂ ತಮ್ಮ ನೆಚ್ಚಿನ ನಟ ಎಂದು ಫ್ಯಾನ್ಸ್ ಹೇಳುತ್ತಿದ್ದಾರೆ. ನಿಯಮದ ಪ್ರಕಾರ ನಂಬರ್ ಪ್ಲೇಟ್ ಅನ್ನು ವಿರೂಪಗೊಳಿಸುವ ಹಾಗಿಲ್ಲ. ಹೀಗಿದ್ದರೂ ಅಭಿಮಾನಿಗಳು ದರ್ಶನ್ ಮೇಲಿನ ಅಭಿಮಾನವನ್ನು ಮತ್ತೆ ಸಾಬೀತು ಮಾಡುತ್ತಿದ್ದಾರೆ. ಹೀಗಾಗಿ 6106 ಸ್ಟಿಕ್ಕರ್‌ಗಳಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಶುರುವಾಗಿದೆ.












Click it and Unblock the Notifications