Sonu Srinivas Gowda: ಬೀಚ್‌ನಲ್ಲಿ ಬಿಕಿನಿ ತೊಟ್ಟ ಶ್ರೀನಿವಾಸ್ ಗೌಡ ಹಾಟ್ ಫೋಟೋಶೂಟ್ ವೈರಲ್
Photos of Sonu Srinivas Gowda: ರೀಲ್ಸ್ ರಾಣಿ, ಬಿಗ್ ಬಾಸ್ ಕನ್ನಡದ ಒಟಿಟಿ ಸೀಸನ್ 1ರ ಮಾಜಿ ಸ್ಪರ್ಧಿ ಸೋನು ಶ್ರೀನಿವಾಸ ಗೌಡ (Sonu Srinivas Gowda) ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಲ್ಲಿ ಇರುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯವಾಗಿರುವ ಈ ಸೋನು ಸಾಕಷ್ಟು ಸಲ ಟ್ರೋಲ್ ಸಹ ಆಗಿದ್ದಾರೆ. ಇದೀಗ ಬೀಚ್‌ನಲ್ಲಿ ಬಿಕಿನಿ ತೊಟ್ಟು ಬೋಲ್ಡ್ ಆಗಿ ಫೋಟೋ ಶೂಟ್ ಮಾಡಿಸಿದ್ದಾರೆ. ಹಾಟ್ ಲುಕ್‌ನಲ್ಲಿ ನೋಡಿದ ನೆಟ್ಟಿಗರಿಗೆ ಕಣ್ಣು ಕುಕ್ಕುವಂತೆ ಮಾಡಿದ್ದಾರೆ. ಕೆಲವರು ಇವರ ಹಾಟ್‌ನೆಸ್‌ಗೆ ಫಿದಾ ಆಗಿದ್ದಾರೆ.
ಹೌದು, ರೀಲ್ಸ್ ಮಾಡುತ್ತಲೇ ಸುದ್ದಿಯಾಗಿದ್ದ ಸೋನು ಶ್ರೀನಿವಾಸ ಗೌಡ ಬೆಟ್ಟಿಂಗ್ ಆಪ್, ಕಾನೂನು ಬಾಹಿರವಾಗಿ ಹೆಣ್ಣುಮಗಳನ್ನು ದತ್ತು ಪಡೆದ ಆರೋಪ ಹೀಗೆ ಹಲವು ವಿಚಾರಗಳಲ್ಲಿ ಸುದ್ದಿಯಾಗಿದ್ದರು. ಕೆಲವು ವಿಚಾರಗಳಿಗೆ ಕಣ್ಣೀರು ಹಾಕಿ ರೀಲ್ಸ್ ಮಾಡಿದ್ದುಂಟು. ಇದೀಗ ಮದುವೆ ಆಗ್ತಾರೆ ಸೋನು ಗೌಡ ಅಂದ ಬೆನ್ನಲ್ಲೆ ಶ್ರೀಲಂಕಾ ಬೀಚ್‌ನಲ್ಲಿ ಪ್ರತ್ಯಕ್ಷಳಾಗಿದ್ದಾರೆ. ಬಿಕಿನಿಯಲ್ಲಿ ಬಿಸಿಲು ಕಾಯಿಸುವ ಸೋನುಗೌಡ ಹಾಟ್ ಫೋಟೋ ಶೂಟ್ ಮಾಡಿಸಿದ್ದಾಳೆ.

ಈ ಹಿಂದೆ ಮಾಲ್ಡಿವ್ಸ್‌ನಲ್ಲಿ ಮೇಲುಡುಗೆ ಬಿಚ್ಚಿ ಒಳ ಉಡುಪು ತೋರಿಸುವ ವಿಡಿಯೋ ಮಾಡಿ ಸಖತ್ ಸದ್ದು ಮಾಡಿದ್ದಳು. ಇದೀಗ ಫುಲ್ ಬಿಕಿನಿಯಲ್ಲಿ ಕಾಣಿಸಿಕೊಂಡು ಪಡ್ಡೆ ಹುಡುಗರ ನಿದ್ದೆ ಕದ್ದಿದ್ದಾಳೆ. ನೆಟ್ಟಿಗರು ತರಹೇವಾರಿಯಾಗಿ ಕಾಮೆಂಟ್ ಮಾಡಿದ್ದಾರೆ. ಯಾವುದಕ್ಕೂ ತಲೆಕೆಸಿಕೊಳ್ಳದೇ ಫುಲ್ ಎಂಜಾಯ್ ಮೂಡ್‌ನಲ್ಲಿದ್ದಾರೆ.
ಶನಿವಾರ ಇನ್ಸ್‌ಟಾಗ್ರಾಮ್‌ನಲ್ಲಿ ಸುಮಾರು 16 ಬಿಕಿನಿ ಫೋಟೋಗಳನ್ನು ಶೇರ್ ಮಾಡಿಕೊಂಡಿರುವ ಸೋನುಗೌಡ ಶ್ರೀಲಂಕಾದ ಶ್ರಾಂಗೀಲಾ ಕೊಲಂಬೊ ಬೀಚ್‌ನಲ್ಲಿರುವುದಾಗಿ ಹೇಳಿಕೊಂಡಿದ್ದಾರೆ. ಪೋಸ್ಟ್‌ಗೆ ಕೆಲವೇ ಗಂಟೆಗಳಲ್ಲಿ 20,000 ಲೈಕ್ಸ್, 1200ಕ್ಕೂ ಅಧಿಕ ಕಾಮೆಂಟ್‌ಗಳು ಬಂದಿವೆ. ಕೆಲವರು, ಹಾಟ್, ಸೂಪರ್ ಎಂದು ಎಮೋಜಿ ಕಳುಹಿಸಿದ್ದಾರೆ. ಮಾತಾಡುವವರನ್ನು ಮಾತಾಡುವುದಕ್ಕೆ ಬಿಟ್ಟು ನಿ ದೇವರಾಗು ಎಂದು ಹೇಳಿದರೆ, ಮತ್ತೊಬ್ಬರು ಒಮ್ಮೆ ಸೀರೆಯಲ್ಲಿ, ಒಮ್ಮೆ ಬಿಕಿನಿಯಲ್ಲಿ ಶೇರ್ ಮಾರ್ಕೆಟ್ ತರಾ ಏರೋದು, ಇಳಿಯೋದು ಎಂದು ಕಾಮೆಂಟ್ ಮಾಡಿದ್ದಾರೆ.
ಗುಟ್ಟಾಗಿ ಮದುವೆ ಆಗಲ್ಲ: ಸೋನು ಗೌಡ
ಇತ್ತೀಚೆಗೆ ಮದುವೆ ಸೋನುಗೌಡ ಗುಟ್ಟಾಗಿ ಮದುವೆ ಆದರಾ ಎಂಬ ವಿಚಾರ ಸುದ್ದಿಯಾಗಿತ್ತು. ಅವರ ತಾಯಿ ಮಗಳಿಗೆ ಒಳ್ಳೆಯ ಗುಣವಂತನನ್ನೇ ನೋಡಿ, ಗೌಡ ಕುಟುಂಬದ ವರನನ್ನೆ ನೋಡಿ ಮದುವೆ ಮಾಡುವುದಾಗಿ ತಿಳಿಸಿದ್ದರು. ದೇವರ ಪೂಜೆಯ ಅರಿಶಿಣ ದಾರ ಕಟ್ಟಿಕೊಂಡಿದ್ದ ಸೋನುಗೌಡ ಫೊಟೋ ನೋಟಿ ನೆಟ್ಟಿಗರು ಬಗೆ ಬಗೆಯ ಕಾಮೆಂಟ್ ಹಾಕಿದ್ದರು. ಹೀಗಾಗಿ ಸ್ಪಷ್ಟನೆ ನೀಡಿದ್ದ ಸೋಣುಗೌಡ, ನಾನು ಹತ್ತು ಸಾವಿರ ಮಂದಿ ಸಮ್ಮುಖದಲ್ಲಿ ಅದ್ಧೂರಿಯಾಗಿ ಮದುವೆ ಆಗುತ್ತೇನೆ. ಗುಟ್ಟಾಗಿ ಮದುವೆ ಆಗಲ್ಲ ಎಂದು ಹೇಳಿದ್ದಳು. ಅದರ ಬೆನ್ನಲ್ಲೆ ಬಿಕಿನಿಯ ಫೋಟೋಗಳು ವೈರಲ್ ಆಗಿದ್ದು, ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾಳೆ.












Click it and Unblock the Notifications