Bigg Boss 12: ಬಿಗ್‌ಬಾಸ್‌ನಿಂದ ಮೂರು ಬಾರಿ ಆಫರ್: ಈ ಸೀಸನ್‌ನಲ್ಲಿ 'ಭೀಮ' ನಟಿ ಆಶ್ ಇರ್ತಾರಾ?
Kannada Bigg Boss season 12: ಬಿಗ್‌ಬಾಸ್ ಕನ್ನಡ ಸೀಸನ್ 12ಕ್ಕೆ ದಿನಗಣನೆ ಶುರುವಾಗಿದೆ. ಪ್ರೋಮೋ ಮೂಲಕ ಕಿಚ್ಚ ಸುದೀಪ್ ಕುತೂಹಲ ಹೆಚ್ಚಿಸಿದ್ದಾರೆ. ಇದರ ನಡುವೆ ಯಾರೆಲ್ಲ ಈ ಸೀಸನ್‌ನ ಸ್ಪರ್ಧಿಗಳಾಗಿ ಕಾಣಿಸಿಕೊಳ್ತಾರೆ ಎನ್ನುವ ಚರ್ಚೆಗಳು ಜೋರಾಗಿವೆ. ಈಗಾಗಲೇ ಕೆಲ ನಟ, ನಟಿಯರ ಹೆಸರುಗಳು ಹರಿದಾಡುತ್ತಿದ್ದು, ಕೆಲವರು ಇದೆಲ್ಲ ಸುಳ್ಳು ಎಂದು ಕ್ಲಾರಿಟಿ ಕೊಟ್ಟಿದ್ದಾರೆ. ಆದರೆ ಭೀಮ ಸಿನಿಮಾ ಮೂಲಕ ಖ್ಯಾತಿ ಪಡೆದಿರುವ ರೀಲ್ಸ್ ಸ್ಟಾರ್ ಆಶ್ ಮೆಲೋ ಸ್ಕೈಲರ್ (Ash Melo Skyler) ಬಿಗ್‌ಬಾಸ್ ಆಫರ್ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ. ಇತ್ತೀಚೆಗಷ್ಟೇ ಆಶ್ ಹಳ್ಳಿ ಪವರ್ ರಿಯಾಲಿಟಿ ಶೋನಿಂದ ಹೊರಬಂದಿದ್ದರು. ಬಿಗ್‌ಬಾಸ್‌ನಿಂದ ಆಫರ್ ಬಂದಿರುವುದಕ್ಕೇ ಆಶ್ ಹಳ್ಳಿ ಪವರ್‌ಗೆ ಗುಡ್‌ಬೈ ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ.
ಇನ್‌ಸ್ಟಾಗ್ರಾಂನಲ್ಲಿ ರೀಲ್ಸ್ ಮೂಲಕ ಆಶ್ ಮೆಲೋ ಸ್ಕೈಲರ್ ಸಖತ್ ಫೇಮಸ್ ಆಗಿದ್ದರು. ದುನಿಯಾ ವಿಜಯ್ ನಟನೆಯ ಭೀಮ ಸಿನಿಮಾದಲ್ಲಿ ಆಶ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದರ ಬೆನ್ನಲ್ಲೇ ಅಕುಲ್ ಬಾಲಾಜಿ ನಡೆಸಿಕೊಡುತ್ತಿರುವ ಹೊಸ ಶೋ ಹಳ್ಳಿಪವರ್ ಸ್ಪರ್ಧಿಯಾಗಿದ್ದರು. ಆದರೆ ರಿಯಾಲಿಟಿ ಶೋ ಮೇಲೆ ಗಂಭೀರ ಆರೋಪ ಮಾಡಿರುವ ಆಶ್, ಟಿಆರ್‌ಪಿಗಾಗಿ ನನ್ನ ಕೆಟ್ಟದಾಗಿ ತೋರಿಸಲಾಗಿದೆ. ಈ ವೇದಿಕೆ ನನಗಲ್ಲ ಎಂದು ಗುಡ್‌ಬೈ ಹೇಳಿದ್ದರು. ಅಲ್ಲಿಂದ ಹೊರಬಂದು ಬಿಗ್‌ಬಾಸ್‌ಗೆ ಹೋಗುವ ಬಗ್ಗೆ ಅಚ್ಚರಿ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

'ಬಿಗ್‌ಬಾಸ್‌ನಲ್ಲಿ ಫೇವರಿಸಂ ತೋರಿಸಲ್ಲ'
'ಈವರೆಗೆ ನನಗೆ ಬಿಗ್‌ಬಾಸ್‌ನಿಂದ ಮೂರು ಸಲ ಆಫರ್ ಬಂದಿತ್ತು. ಕೊನೆಯ ಸೀಸನ್‌ನಲ್ಲೂ ಎಲ್ಲ ಒಪ್ಪಂದ ಆಗಿತ್ತು. ಆದ್ರೆ ಕೊನೆಯಲ್ಲಿ ನನಗೆ ಹೋಗೋಕೆ ಸಾಧ್ಯವಾಗಲಿಲ್ಲ. ಇದಕ್ಕೂ ಮುಂಚೆ ನಾನು ಭೀಮ ಸಿನಿಮಾದಲ್ಲಿ ಆಕ್ಟ್ ಮಾಡುವಾಗಲೂ ಅವಕಾಶ ಬಂದಿತ್ತು. ಆಗ ಶೂಟಿಂಗ್ ಇದ್ದ ಕಾರಣಕ್ಕೆ ಹೋಗಲಿಲ್ಲ. ನಿಜ ಹೇಳಬೇಕು ಅಂದ್ರೆ ಹನುಮಂತು ಗೆದ್ದ ಸೀಸನಲ್ಲಿ ನಾನೂ ಇರಬೇಕಿತ್ತು. ಆದರೆ ಅದು ಸಾಧ್ಯವಾಗಲಿಲ್ಲ' ಎಂದು ಆಶ್ ವಿಜಯ ಕರ್ನಾಟಕ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ.
'ಈಗ ನಾನು ಕೂಡ ಟ್ರೈ ಮಾಡ್ತಿದ್ದೀನಿ. ಬಿಗ್‌ಬಾಸ್ ಸೀಸನ್-12ಕ್ಕೆ ನನ್ನ ಕರೆಸಿಕೊಳ್ಳಿ ಎಂದು ಸುದೀಪ್ ಅಣ್ಣನಿಗೆ ಕೇಳಿಕೊಳ್ತೀನಿ. ಸದ್ಯಕ್ಕೆ ಚಾನಲ್ ಸ್ವಿಚ್ ಮಾಡಂಗಿಲ್ಲ ಅಂದಿದ್ದಾರೆ. ಆದ್ರೆ ದೊಡ್ಡ ಅವಕಾಶ ಸಿಕ್ಕರೆ ಖಂಡಿತವಾಗಿಯೂ ಹೋಗ್ತೀನಿ. ಬಿಗ್‌ಬಾಸ್‌ನಲ್ಲಿ ಫೇವರಿಸಂ ತೋರಿಸದೇ ಇದ್ದರೆ ಹೋಗ್ತೀನಿ. ಸುದೀಪ್ ಅವ್ರು ಫೇವರಿಸಂ ತೋರಿಸಲ್ಲ ಅಂತ ಗೊತ್ತು. ಅವರು ಎಲ್ಲರನ್ನೂ ಸಮಾನವಾಗಿ ಕಾಣ್ತಾರೆ. ಹಾಗಾಗಿ ಅವಕಾಶ ಸಿಕ್ಕರೆ ಹೋಗೋದು ಫಿಕ್ಸ್' ಎಂದಿದ್ದಾರೆ ಆಶ್.
ಹಳ್ಳಿ ಪವರ್‌ನಿಂದ ಹೊರಬಂದಿದ್ದೇಕೆ?
ಹಳ್ಳಿ ಪವರ್ ಶೋನಲ್ಲಿ ಆಶ್ ಆರಂಭದಲ್ಲಿ ಮಿಂಚುತ್ತಿದ್ದರು. ಆದರೆ ದಿಢೀರನೆ ಅಲ್ಲಿಂದ ಹೊರಬರುವ ನಿರ್ಧಾರ ಮಾಡಿದ್ದರು. ನಂತರ ಇನ್‌ಸ್ಟಾಗ್ರಾಂ ಪೋಸ್ಟ್ ಮೂಲಕ ಕಾರಣ ಬಹಿರಂಗಪಡಿಸಿದ್ದರು. 'ನಾನು ನನ್ನೆಲ್ಲ ಪ್ರೇಕ್ಷಕರನ್ನು ನಿಜವಾಗಿಯೂ ಗೌರವಿಸುತ್ತೇನೆ. ನಾನು ಪ್ರೇಕ್ಷಕರಿಗೆ ಕೆಟ್ಟ ರೀತಿಯಲ್ಲಿ ಚಿತ್ರೀಕರಿಸಲ್ಪಿಟ್ಟದ್ದರಿಂದ ಮಾತ್ರ ನಾನು ಕಾರ್ಯಕ್ರಮವನ್ನು ತೊರೆದಿದ್ದೇನೆ. ಈ ಕಾರ್ಯಕ್ರಮದಲ್ಲಿ ನನ್ನನ್ನು ಕೆಳಗಿಳಿಸುವಂತಹ ತಪ್ಪು ರೀತಿಯಲ್ಲಿ ತೋರಿಸಲಾಗಿದೆ. ನನ್ನನ್ನು ತುಂಬಾ ಕೆಟ್ಟ ರೀತಿಯಲ್ಲಿ ಚಿತ್ರಿಸಲಾಗುತ್ತಿತ್ತು, ನಾನು ಕಾರ್ಯಕ್ರಮದಿಂದ ಹೊರಬರಲು ಇದೇ ಕಾರಣ. ಟಿಆರ್‌ಪಿಗಾಗಿ ನನ್ನನ್ನು ಕೆಟ್ಟ ರೀತಿಯಲ್ಲಿ ತೋರಿಸಬೇಡಿ ಎಂದು ಕೇಳಿಕೊಂಡರೂ ಅವರು ಕಾಳಜಿ ವಹಿಸಲಿಲ್ಲ. ಕೊನೆಗೆ ನಾನು ಹೊರಬರಲು ನಿರ್ಧರಿಸಿದೆ' ಎಂದು ಬರೆದುಕೊಂಡಿದ್ದರು. ಆಶ್ ಸದ್ಯ ಬಿಗ್‌ಬಾಸ್‌ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.












Click it and Unblock the Notifications