Reba Monica: ಖ್ಯಾತ ನಿರ್ದೇಶಕನ ಮೇಲೆ ಗಂಭೀರ ಆರೋಪ ಮಾಡಿದ 'ರತ್ನನ್ ಪ್ರಪಂಚ' ನಟಿ
ಕನ್ನಡ, ತಮಿಳು, ತೆಲುಗು ಸಿನಿಮಾಗಳಲ್ಲಿ ನಟಿಸುತ್ತಿರುವ ನಟಿ ರೆಬಾ ಮೋನಿಕಾ ಜಾನ್ (Reba Monica John) ಅವರು ಖ್ಯಾತ ನಿರ್ದೇಶಕರೊಬ್ಬರ ಮೇಲೆ ಗಂಭೀರ ಆರೋಪ ಮಾಡಿದ್ದಾರೆ ಎನ್ನಲಾಗಿದೆ. ಡಾಲಿ ಧನಂಜಯ್ ಅಭಿನಯದ ರತ್ನನ್ ಪ್ರಪಂಚ ಸಿನಿಮಾದಲ್ಲಿ ರೆಬಾ ಮಯೂರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದಲ್ಲದೆ ಕನ್ನಡದ ಕೆಲವು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಇತ್ತೀಚೆಗೆ ತೆರೆಕಂಡ ನಟ ರಜನಿಕಾಂತ್ ಅಭಿನಯದ ಕೂಲಿ ಸಿನಿಮಾದಲ್ಲೂ ರೆಬಾ ಕಾಣಿಸಿಕೊಂಡಿದ್ದರು. ಇದಾದ ಬಳಿಕ ಸಂದರ್ಶನವೊಂದರಲ್ಲಿ ರೆಬಾ ಅವರು ಖ್ಯಾತ ನಿರ್ದೇಶಕನ ಮೇಲೆ ಗಂಭೀರ ಆರೋಪ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಕೂಲಿ ಸಿನಿಮಾವನ್ನು ಲೋಕೇಶ್ ಕನಗರಾಜ್ ನಿರ್ದೇಶನ ಮಾಡಿದ್ದರು. ಕೂಲಿ ಸಿನಿಮಾದಲ್ಲಿ ರೇಬಾ ಮೋನಿಕಾ ಜಾನ್ ಅವರು ಸತ್ಯರಾಜ್ ಅವರ ಮಗಳು ಹಾಗೂ ಶ್ರುತಿ ಹಾಸನ್ ಸಹೋದರಿ ಪಾತ್ರವಾದ ರೇವತಿಯಾಗಿ ಕಾಣಿಸಿಕೊಂಡಿದ್ದರು. ಅವರ ಪಾತ್ರವು ಚಿನ್ನದ ಕಳ್ಳಸಾಗಣೆ ಸಿಂಡಿಕೇಟ್‌ನಿಂದ ಗುರಿಯಾಗಿಸಿಕೊಂಡ ಕುಟುಂಬದ ಭಾಗವಾಗಿದ್ದು, ರೆಬಾ ಒಂದು ಸಣ್ಣಪಾತ್ರದಲ್ಲಿ ಮಾತ್ರವೇ ಕಾಣಿಸಿಕೊಂಡಿದ್ದರು.

ಆದರೆ ಕೂಲಿ ದೊಡ್ಡ ಬಜೆಟ್ ಹಾಗೂ ಮಲ್ಟಿಸ್ಟಾರ್ ಸಿನಿಮಾ ಆಗಿದ್ದರಿಂದ ರೆಬಾ ಅವರಿಗೆ ನಿರೀಕ್ಷಿತ ಮಟ್ಟದ ಅವಕಾಶ ಸಿಗಲಿಲ್ಲ ಎಂದು ಬೇಸರ ಹೊರಹಾಕಿದ್ದಾರೆ ಎನ್ನಲಾಗಿದೆ. ನನ್ನದು ಅತಿಥಿ ಪಾತ್ರವಾಗಿದ್ದು, ರಜನಿಕಾಂತ್ ಅವರೊಂದಿಗೆ ಕೆಲಸ ಮಾಡಿದ್ದಕ್ಕಾಗಿ ಕೃತಜ್ಞತೆಯ ಹೊರತಾಗಿ ನನ್ನ ಪಾತ್ರದ ಬಗ್ಗೆ ನಿರಾಶೆ ವ್ಯಕ್ತಪಡಿಸಿದ್ದಾರೆ.
'ನಾವು ಅಂದುಕೊಂಡಂತೆ ನಡೆಯಲ್ಲ'
ನನಗೆ ನಿಜಕ್ಕೂ ಬೇಸರವಾಯಿತು ಹಾಗೂ ನಿರಾಶೆಯಾಯಿತು. ನಾನು ಇನ್ನೂ ಹೆಚ್ಚಿನದನ್ನು ನೀಡಬಹುದಿತ್ತು. ಆದರೆ ಕೆಲವೊಮ್ಮೆ ಎಲ್ಲವೂ ನಾವು ಅಂದುಕೊಂಡಂತೆ ನಡೆಯುವುದಿಲ್ಲ. ಆದರೂ ಕೂಲಿ ಸಿನಿಮಾದಲ್ಲಿ ರಜನಿಕಾಂತ್ ಸರ್ ಅವರೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದಕ್ಕಾಗಿ ನಾನು ಕೃತಜ್ಞನಾಗಿದ್ದೇನೆ ಎಂದು ರೆಬಾ ಹೇಳಿದ್ದಾರೆ.
ಆದರೆ ಕೂಲಿ ರಿಲೀಸ್‌ಗೂ ಮುನ್ನ ರೆಬಾ ಮೋನಿಕಾ ಜಾನ್ ಹಲವಾರು ಸಂದರ್ಶನಗಳಲ್ಲಿ ನನ್ನ ಪಾತ್ರ ಒಂದು ದೊಡ್ಡ ಅಚ್ಚರಿ ಉಂಟು ಮಾಡುತ್ತದೆ. ರಜನಿ ಸರ್ ಅವರೊಂದಿಗಿನ ದೃಶ್ಯಗಳು ಅಭಿಮಾನಿಗಳನ್ನು ರೋಮಾಂಚನಗೊಳಿಸುತ್ತವೆ ಎಂದೆಲ್ಲ ಹೇಳಿಕೊಂಡಿದ್ದರು. ಇದರಿಂದಾಗಿ ರೆಬಾ ಪಾತ್ರದ ಮೇಲೆ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಸಿನಿಮಾ ರಿಲೀಸ್ ಆದ ನಂತರ ರೆಬಾ ಹೇಳಿದಂತೆ ಅವರ ಪಾತ್ರ ಇರಲಿಲ್ಲ ಎಂದು ಅಭಿಮಾನಿಗಳು ಕೂಡ ಹೇಳಿದ್ದರು. ಇದೇ ಕಾರಣಕ್ಕೆ ರೆಬಾ ಟ್ರೋಲ್ ಕೂಡ ಆಗಿದ್ದಾರೆ. ಅಲ್ಲದೆ ಅವರು ಈಗ ಅಸಮಾಧಾನ ಹೊರಹಾಕಿರುವುದು ಹಳೆಯ ಸಂದರ್ಶನಗಳಿಗೆ ವಿರುದ್ಧವಾಗಿವೆ ಎಂದು ಹೇಳಿಕೊಳ್ಳುತ್ತಿದ್ದಾರೆ.
ರೆಬಾ ಸದ್ಯ ಬಹುಭಾಷಾ ನಟಿಯಾಗಿ ಮಿಂಚುತ್ತಿದ್ದಾರೆ. ಕನ್ನಡ ಹಾಗೂ ತೆಲುಗು ಸಿನಿಮಾಗಳಲ್ಲಿ ಅವರಿಗೆ ಮುಖ್ಯ ಪಾತ್ರಗಳನ್ನು ನೀಡಲಾಗುತ್ತಿದೆ. ಆದರೆ ತಮಿಳು ಸಿನಿಮಾಗಳಲ್ಲಿ ಅತಿಥಿ ಪಾತ್ರಗಳು, ಸಣ್ಣ ಪಾತ್ರಗಳಿಗೆ ಹೆಚ್ಚಾಗಿ ಆಯ್ಕೆ ಮಾಡಲಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ತಮಿಳು ನಟ ದಳಪತಿ ವಿಜಯ್ ಅವರ 'ಬಿಗಿಲ್' ಸಿನಿಮಾದಲ್ಲಿ ಸಣ್ಣ ಪಾತ್ರದಿಂದಲೇ ರೆಬಾ ಗಮನ ಸೆಳೆದಿದ್ದರು. ಆಸಿಡ್ ದಾಳಿಯಿಂದ ಬಳಲುತ್ತಿರುವ ಫುಟ್ಬಾಲ್ ಆಟಗಾರ್ತಿ ಅನಿತಾ ಪಾತ್ರವನ್ನು ರೆಬಾ ನಿರ್ವಹಿಸಿದ್ದರು. ಈಗ ಕೂಲಿಯಲ್ಲಿ ನಿರೀಕ್ಷಿತ ಪಾತ್ರ ಸಿಗಲಿಲ್ಲ ಎಂದು ಬೇಸರ ಹಂಚಿಕೊಂಡಿದ್ದಾರೆ.












Click it and Unblock the Notifications