ಬುದ್ಧಿವಂತ ಉಪೇಂದ್ರ ಅವರಿಂದ ಪ್ರೇಮಿಗಳ ದಿನಕ್ಕೆ ಬಿಗ್ ಗಿಫ್ಟ್!
ರಿಯಲ್ ಸ್ಟಾರ್ & ಸೂಪರ್ ಸ್ಟಾರ್ ಉಪೇಂದ್ರ ಅವರು ಏನೇ ಮಾಡಿದರೂ ತುಂಬಾ ಅಂದ್ರೆ ತುಂಬಾನೆ ಡಿಫರೆಂಟ್. ಹೀಗಾಗಿಯೇ ಉಪ್ಪಿ ಅವರಿಗೆ ಸಿಕ್ಕಾಪಟ್ಟೆ ದೊಡ್ಡ ಫ್ಯಾನ್ಸ್ ಇದ್ದು, ಕರ್ನಾಟಕ ಮಾತ್ರವಲ್ಲದೆ ದೇಶದ ಮೂಲೆ ಮೂಲೆಯಲ್ಲೂ ಅಭಿಮಾನಿ ಬಳಗ ಇದೆ. ಹೀಗೆ ನಟ ಉಪೇಂದ್ರ ಅವರ ಹವಾ ಜೋರಾಗಿರುವ ಸಮಯದಲ್ಲೇ, ಉಪ್ಪಿ ನಿರ್ದೇಶನದ ಸಿನಿಮಾ 'UI' ತಂಡದಿಂದ ಭರ್ಜರಿ ಸುದ್ದಿ ಹೊರಬಿದ್ದಿದೆ.
ಹೌದು, ಹಿಂದೆ ತಮ್ಮ ಸಿನಿಮಾದಲ್ಲಿ 'ಪ್ರೀತಿ ಪ್ರೇಮ ಪುಸ್ತಕದ ಬದ್ನೆಕಾಯಿ' ಅಂತಾ ಹೇಳ್ತಾ ಸದ್ದು ಮಾಡಿದ್ದ ಉಪೇಂದ್ರ ಅವರು. ಇದೀಗ ಪ್ರೇಮಿಗಳ ದಿನವೇ 'UI' ಸಿನಿಮಾ ಕುರಿತು ಭರ್ಜರಿ ಸುದ್ದಿ ನೀಡಲು ತಯಾರಿ ಆರಂಭಿಸಿದ್ದಾರೆ. ಈ ಮೂಲಕ ನಿರ್ದೇಶಕ ಉಪೇಂದ್ರರ ಹೆಜ್ಜೆ ಕಂಡು ಹಿಡಿಯೋಕೆ ಆಗಲ್ಲ ಅನ್ನೋದು ಮತ್ತೆ ಪ್ರೂವ್ ಆಗಿದೆ. ತಮ್ಮ ಮೊದಲನೇ ಸಿನಿಮಾದಿಂದ ಹಿಡಿದು, ಇತ್ತೀಚಿನ ಸಿನಿಮಾಗಳ ತನಕ ಉಪೇಂದ್ರ ಅವರು ಹಲವು ಅದ್ಭುತ ನೀಡಿದ್ದಾರೆ. ಕನ್ನಡಿಗರನ್ನ ಮಾತ್ರವಲ್ಲ ಇಡೀ ದೇಶವನ್ನೇ ರಂಜಿಸಿದ್ದಾರೆ. ಇಂತಿಪ್ಪ ಉಪ್ಪಿ ಅವರು ಇದೀಗ ಪ್ರೇಮಿಗಳ ದಿನಕ್ಕೆ ಏನು ಉಡುಗೊರೆ ಕೊಡ್ತಿದ್ದಾರೆ ಗೊತ್ತಾ? ಮುಂದೆ ಓದಿ

ಫೆ.14ರ ಬೆಳಗ್ಗೆ 10 ಗಂಟೆಗೆ...
ಅಷ್ಟಕ್ಕೂ ತಮ್ಮ ಯುಐ (UI) ಸಿನಿಮಾದ ಫಸ್ಟ್ ಸಿಂಗಲ್ ಪ್ರೋಮೋ ರಿಲೀಸ್ ಮಾಡುವುದಾಗಿ ಘೋಷಣೆ ಮಾಡಿದ್ದಾರೆ ಉಪೇಂದ್ರ ಅವರು. ಅದರಲ್ಲೂ ಪ್ರೇಮಿಗಳ ದಿನಾಚರಣೆ ದಿನವೇ, ಅಂದ್ರೆ ನಾಳೆ ಫೆ.14ರ ಬೆಳಗ್ಗೆ 10 ಗಂಟೆಗೆ ಫಸ್ಟ್ ಸಿಂಗಲ್ ಪ್ರೊಮೋ ರಿಲೀಸ್ ಆಗುತ್ತಿದೆಯಂತೆ. ಈ ಮೂಲಕ ಉಪೇಂದ್ರ ಅವರು ಮತ್ತೊಂದು ಸರ್ಪ್ರೈಸ್ ಕೊಡುತ್ತಿದ್ದಾರೆ. ಈಗಾಗಲೇ ನಟ ಉಪೇಂದ್ರ ಅವರು ಯುಐ ಸಿನಿಮಾದ ಡಬ್ಬಿಂಗ್ ಕೆಲಸದಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಈ ವೇಗ ನೋಡುತ್ತಿದ್ದರೆ ಇನ್ನೇನು ಕೆಲವೇ ತಿಂಗಳಲ್ಲಿ ಅಭಿಮಾನಿಗಳು ಸಿನಿಮಾ ಕೂಡ ಸಿಲ್ವರ್ ಸ್ಕ್ರೀನ್ ಮೇಲೆ ಕಣ್ತುಂಬಿಕೊಳ್ಳಬಹುದು.
ಟೀಸರ್‌ಗೆ 23 ಮಿಲಿಯನ್ ವೀವ್ಸ್
ಅಂದಹಾಗೆ ಈ ಹಿಂದೆ ಯುಐ (UI) ಸಿನಿಮಾದ ಟೀಸರ್ ರಿಲೀಸ್ ಆಗಿತ್ತು. ಟೀಸರ್‌ಗೆ ಅದ್ಭುತ ರೆಸ್ಪಾನ್ಸ್ ಕೂಡ ಸಿಕ್ಕಿತ್ತು. ಕೆಲವೆ ಗಂಟೆಗಳಲ್ಲಿ 23 ಮಿಲಿಯನ್ ವೀಕ್ಷಣೆಯ ಪಡೆದುಕೊಂಡಿತ್ತು. ಇದೀಗ ಯುಐ (UI) ಸಿನಿಮಾದ ಫಸ್ಟ್ ಸಿಂಗಲ್ ಪ್ರೋಮೋ ರಿಲೀಸ್ ಮಾಡುವುದಾಗಿ ಘೋಷಣೆ ಮಾಡಿದ್ದಾರೆ ಉಪೇಂದ್ರ ಅವರು. ಹೀಗಾಗಿ ಕುತೂಹಲ ಮತ್ತಷ್ಟು ಹೆಚ್ಚಾಗಿದ್ದು, ಉಪೇಂದ್ರ ಅವರ ಫ್ಯಾನ್ಸ್‌ಗೆ ದೊಡ್ಡ ಸರ್ಪ್ರೈಸ್ ಸಿಗೋ ನಿರೀಕ್ಷೆ ಕೂಡ ಮೂಡಿದೆ.
9 ಭಾಷೆಗಳಲ್ಲಿ 'UI' ರಿಲೀಸ್
ಕನ್ನಡಿಗರ ನಿರೀಕ್ಷೆ ಕೆರಳಿಸಿದ್ದ 'UI' ಸಿನಿಮಾ ಅದನ್ನು ನಿಜ ಮಾಡಲು ಸಜ್ಜಾಗಿದೆ. ಉಪೇಂದ್ರ ಅವರು ಇದೀಗ ದೊಡ್ಡ ಮಟ್ಟದಲ್ಲಿ ಕಂಬ್ಯಾಕ್ ಮಾಡುವ ಮುನ್ಸೂಚನೆ ನೀಡುತ್ತಿದ್ದಾರೆ ಉಪ್ಪಿ ಡೈರೆಕ್ಷನ್ ಮಾಡಿ ನಟನೆ ಮಾಡಿ ಕನ್ನಡಿಗರ ಎದುರು ಹೊಸ ಲೋಕ ತೆರೆದಿಡಲು ಸಜ್ಜಾಗಿದ್ದಾರೆ. ಹೀಗಿದ್ದಾಗ 'UI' ಸಿನಿಮಾ ಒಟ್ಟಾರೆಯಾಗಿ 9 ಭಾಷೆಗೆ ಡಬ್ ಮಾಡಲು ಸಿದ್ಧತೆ ನಡೆಸಲಾಗಿದೆ. ಈ ಮೂಲಕ ಕನ್ನಡ ಸಿನಿಮಾ ಇಡೀ ಜಗತ್ತಿನಲ್ಲಿ ತನ್ನ ಖದರ್ ತೋರಿಸಲು ಸಜ್ಜಾಗುತ್ತಿದೆ.

ಮೂಲ ಕನ್ನಡ ಭಾಷೆಯಲ್ಲಿ 'UI' ಸಿನಿಮಾ ತಯಾರಾಗುತ್ತಿದೆ. ಜೊತೆಗೆ ತೆಲುಗು & ತಮಿಳು, ಮಲಯಾಳಂ, ಹಿಂದಿಯಲ್ಲೂ ರಿಲೀಸ್ ಆಗುತ್ತೆ. ಈ ಭಾಷೆಗಳು ಭಾರತೀಯ ಭಾಷೆಗಳಾಗಿದ್ದರೆ, ಇದರ ಜೊತೆಗೆ ವಿದೇಶಿ ಭಾಷೆಗಳಿಗೂ 'UI' ಸಿನಿಮಾ ಡಬ್ ಆಗಲಿದ್ದು. ಫ್ರೆಂಚ್, ಸ್ಪ್ಯಾನಿಷ್, ಡಚ್, ಇಟಾಲಿಯನ್ ಭಾಷೆಗಳಿಗೂ ಉಪೇಂದ್ರರ ಬಹು ನಿರೀಕ್ಷಿತ ಸಿನಿಮಾ ಡಬ್ ಆಗಿ ರಿಲೀಸ್ ಆಗಲಿದೆಯಂತೆ. ಹೀಗಾಗಿ ನಾಳೆಯ ಪ್ರೇಮಿಗಳ ದಿನಕ್ಕೆ ಮತ್ತಷ್ಟು ರಂಗು ಬರಲಿದೆ ಅಂತಾ ಹೇಳುತ್ತಿದ್ದಾರೆ ಅಭಿಮಾನಿಗಳು.












Click it and Unblock the Notifications