Ramy: ಕಾಲ್ತುಳಿತಕ್ಕೆ ಅಧಿಕಾರಿಗಳ ತಲೆದಂಡ; ನಟಿ ರಮ್ಯಾ ಹೇಳಿದ್ದೇನು?

ಬೆಂಗಳೂರು, ಜೂನ್‌ 07: ಆರ್.ಸಿ.ಬಿ. ವಿಜಯೋತ್ಸವದ ವೇಳೆ ಕಾಲ್ತುಳಿತದಿಂದ ಸಂಭವಿಸಿದ ಸಾವು- ನೋವಿನ ನೇರ ಹೊಣೆಯನ್ನು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರೇ ಹೊರಬೇಕು ಎಂದು ಬಿಜೆಪಿ ರಾಜ್ಯಾಧ್ಯ್ಷ ಬಿ ವೈ ವಿಜಯೇಂದ್ರ ಹಾಗೂ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಹೆಚ್‌ ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಆರ್ಸಿಬಿ ಐಪಿಎಲ್ ಗೆಲುವಿನ ಸಂಭ್ರಮಾಚರಣೆಯ ವೇಳೆ ಕಾಲ್ತುಳಿತದ ಪ್ರಕರಣದ ಕುರಿತು ನಟಿ ಹಾಗೂ ಮಾಜಿ ಸಂಸದೆ ನಡಿ ರಮ್ಯಾ ಅವರೂ ತೀವ್ರ ಅಸಮಾಧನ ವ್ಯಕ್ತಪಡಿಸಿದ್ದಾರೆ.

ಧಿಕಾರಿಗಳ ಸಾಮೂಹಿಕ ವೈಫಲ್ಯ ಮತ್ತು ಯೋಜನೆಯ ಕೊರತೆಯಿಂದಆರ್ಸಿಬಿ ಐಪಿಎಲ್ ಗೆಲುವಿನ ಸಂಭ್ರಮಾಚರಣೆಯಲ್ಲಿ 11 ಮಂದಿ ಮೃತಪಟ್ಟ ಘಟನೆಯನ್ನು ನಟಿ ರಮ್ಯಾ ಖಂಡಿಸಿದ್ದಾರೆ. ಅವರು ಅಧಿಕಾರಿಗಳ ಅಮಾನತು ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದು, ವರದಿಗಾಗಿ ಕಾಯದೆ ಈ ನಿರ್ಧಾರ ತೆಗೆದುಕೊಂಡಿರುವುದು ಸರಿಯಲ್ಲ ಎಂದು ನಟಿ ಹಾಗೂ ಮಾಜಿ ಸಂಸದೆ ನಟಿ ರಮ್ಯಾ ಅವರು ಹೇಳಿದ್ದಾರೆ.

RCB Celebrations Ramya said that officials beheading for the stampede is condemnable

ಐಪಿಎಲ್ ಕಪ್ ಗೆದ್ದ ವೇಳೆ ನಡೆಸಿದ ಸಂಭ್ರಮಾಚರಣೆಯಲ್ಲಿ 11 ಮುಗ್ಧ ಜನರು ಪ್ರಾಣ ಕಳೆದುಕೊಂಡರು. ಆರ್ಸಿಬಿ ತಂಡದ ವಿಜಯೋತ್ಸವವನ್ನು ನೋಡಬೇಕು ಎಂದು ಕಾದು ಕುಳಿತಿದ್ದ ಇವರು ಕಾಲ್ತುಳಿತಕ್ಕೆ ಬಲಿಯಾಗಿ ಹೋದರು. ಆರ್‌ ಸಿ ಬಿ ಅಭಿಮಾನಿಗಳ ಸಂಭ್ರಮಾಚರಣೆಯ ವೇಳೆ ನಡೆದ ಬೆಳವಣಿಗೆಗಳು ಒಂದೆರಡಲ್ಲ. ಈ ಘಟನೆಗೆ ಅನೇಕ ಅಧಿಕಾರಿಗಳ ತಲೆದಂಡ ತೆತ್ತಿದ್ದು, ಈ ಬೆಳವಣಿಗೆ ಬಗ್ಗೆ ನಟಿ ಹಾಗೂ ಮಾಜಿ ಸಂಸದೆ ನಟಿ ರಮ್ಯಾ ಅವರು ಮಾತನಾಡಿದ್ದು ಅಸಮಾಧಾನ ಹೊರಹಾಕಿದ್ದಾರೆ.

ನಟಿ ರಮ್ಯಾ ಹೇಳಿದ್ದೇನು?

ಈ ಕುರಿತು ಇನ್ಸ್ಟಾಗ್ರಾಮ್ ಪೋಸ್ಟ್‌ ಮಾಡಿರುವ ರಮ್ಯಾ ಅವರು, ಆರ್‌ಸಿಬಿ ಗೆದ್ದ ರಾತ್ರಿ ಕರ್ನಾಟಕದಾದ್ಯಂತ ಸಂಭ್ರಮಾಚರಣೆಗಳು ನಡೆದವು. ಮಾಲ್‌ಗಳಲ್ಲಿ ಮತ್ತು ಬೀದಿಗಳಲ್ಲಿ ಜನರು ಖುಷಿಯಿಂದ ಕುಣಿದರು. ಆಗ ಒಂದೇ ಒಂದು ಅಹಿತಕರ ಘಟನೆಯೂ ನಡೆದಿಲ್ಲ. ಕಾಲ್ತುಳಿತಗಳು ಸುಮ್ಮನೆ ಸಂಭವಿಸುವುದಿಲ್ಲ, ಅವುಗಳನ್ನು ಸೃಷ್ಟಿ ಮಾಡಲಾಗುತ್ತದೆ. ಸರ್ಕಾರ, ಅಧಿಕಾರಿಗಳು, ಆರ್ಸಿಬಿ, ಪೊಲೀಸರು, ಕೆಎಸ್‌ಸಿಎ ಮತ್ತು ಸಾರ್ವಜನಿಕರ ಸಾಮೂಹಿಕ ವೈಫಲ್ಯದಿಂದ ಈ ಕಾಲ್ತುಳಿತ ನಡೆದಿದೆ ಎಂದು ರಮ್ಯಾ ಹೇಳಿದ್ದಾರೆ.

ಕ್ರೀಡೆಯ ಗೆಲುವನ್ನು ಆಚರಿಸಲು ಬಂದ ಮುಗ್ಧರು ಮೃತಪಟ್ಟಿದ್ದಾರೆ. ಈ ಸಾವಿಗೆ ಕಾರಣಗಳನ್ನು ಕಂಡುಹಿಡಿಯಲು ಮತ್ತು ನ್ಯಾಯ ಒದಗಿಸಲು ಪ್ರಾಮಾಣಿಕ ಆತ್ಮಾವಲೋಕನದ ಅಗತ್ಯವಿದೆ. ಇಲ್ಲಿ ಅಧಿಕಾರಿಗಳನ್ನು ಅಮಾನತುಗೊಳಿಸಿರುವ ನಿರ್ಧಾರವು ಯೋಚಿಸದೇ ತೆಗೆದುಕೊಂಡ ನಿರ್ಧಾರದಂತೆ ಕಾಣುತ್ತದೆ. ಈ ನಿರ್ಧಾರ ತೆಗೆದುಕೊಳ್ಳುವ ಮೊದಲು ವರದಿಗಾಗಿ ಕಾಯಬೇಕಿತ್ತು' ಎಂದು ರಮ್ಯಾ ಅಭಿಪ್ರಾಯ ಹೊರಹಾಕಿದ್ದಾರೆ. ಅಲ್ಲಿ ಬಂದ ಎಲ್ಲರಿಗೂ ಒಳ್ಳೆಯ ಉದ್ದೇಶವೇ ಇತ್ತು. ಆದರೆ, ಯೋಜನೆ ಇಲ್ಲದೆ, ಸಮನ್ವಯದ ಕೊರತೆಯಿಂದ ಈ ರೀತಿ ಆಯಿತು. ಆಟಗಾರನ್ನು ಒಂದೇ ಸ್ಥಳದಲ್ಲಿ ಸೇರಿಸುವ ಬದಲು ತೆರೆದ ಬಸ್ನಲ್ಲಿ ರ್ಯಾಲಿ ಮಾಡಿದ್ದರೆ ಭಯಾನಕ ಘಟನೆಯನ್ನು ತಪ್ಪಿಸಬಹುದಿತ್ತು' ಎಂದು ರಮ್ಯಾ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+