Rahsmika Mandanna: ಫ್ಯಾನ್ಸ್‌ಗೆ ಸರ್ಪೈಸ್ ಕೊಟ್ಟ ನಟಿ ರಶ್ಮಿಕಾ! ಫೋಟೋ ವೈರಲ್, ಏನಿದು?
Actress Rahsmika Mandanna: ಕರ್ನಾಟಕದ ಕೂರ್ಗ್ ಬೆಡಿಗೆ ನಟಿ ರಶ್ಮಿಕಾ ಮಂದಣ್ಣ ಅವರು 'ದಿ ಗರ್ಲ್ ಫ್ರೆಂಡ್' ಸಿನಿಮಾ ರಿಲೀಸ್ ನಲ್ಲಿ ಬ್ಯೂಸಿಯಾಗಿದ್ದಾರೆ. 'ಅನಿಮಲ್' ನಲ್ಲಿ ಹಾಟ್ ಆಗಿ ಕಾಣಿಸಿಕೊಳ್ಳುತ್ತಿದ್ದ ನಟಿ ರಶ್ಮಿಕಾ ಇದೀಗ ದಿಢೀರ್ ರಾಜಕಾರಣಿ ಅವತಾರದಲ್ಲಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಅವರ ಈ ಫೋಟೋ ಆನ್‌ಲೈನ್‌ನಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ಹೊಸ ಲುಕ್ ನೋಡಿ ಫ್ಯಾನ್ಸ್ ಫೋಟೋ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಸಾಲು ಸಾಲು ಪ್ರಶ್ನೆಗಳು ಫ್ಯಾನ್ಸ್ ಗೆ ಎದುರಾಗಿವೆ.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ರಾಜಕಾರಣಿಯ ಅವತಾರದ ರಶ್ಮಿಕಾ ಮಂದಣ್ಣ ಫೋಟೋ ಸಾಕಷ್ಟು ವದಂತಿ, ಊಹಾಪೋಹಗಳಿಗೂ ಈ ಪೋಟೋ ಕಾರಣವಾಗಿದೆ. ಈವರೆಗೂ ಸಖತ್ ಕ್ಯೂಟ್, ಬ್ಯೂಟಿಫುಲ್ ಆಗಿ ಕಾಣುತ್ತಿದ್ದ ನಟಿ ಇದೀಗ ದಿಢೀರನೇ ಮೊಣಕೈ ಉದ್ದದ ಬ್ಲೌಸ್ & ಸೀರೆಯಲ್ಲಿ ಥೇಟ್ ಮಹಿಳಾ ರಾಜಕೀಯ ನಾಯಕಿಯಂತೆ ಕಾಣಿಸಿದ್ದಾರೆ.

ನಟಿ ರಶ್ಮಿಕಾ ಬದಲಾದರೇ?
ಕೈಮಗ್ಗ ಶೈಲಿಯ ಸೀರೆಯಲ್ಲಿ ಗರಿಗರಿಯಾದ ಸೀರೆಯನ್ನು ಧರಿಸಿದ್ದಾರೆ. ಒಂದು ರೀತಿಯ ಪ್ರಭಾವಶಾಲಿ ಹೆಣ್ಣುಮಗಳಂತೆ ಕಾಣಿಸುತ್ತಾರೆ. ಇದು ಹೊಸ ಪ್ರಾಜೆಕ್ಟ್ ಫೋಟೋ ಇರಬೇಕೆಂದು ಕೆಲವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಮುಂದಿನ ಚಿತ್ರದ ಫೋಟೋ ಶೂಟ್ ಇರಬೇಕು ಅಂತಲೂ ಫ್ಯಾನ್ಸ್ ಮಾತನಾಡಿಕೊಳ್ಳುತ್ತಿದ್ದಾರೆ. ಕ್ಯೂಟ್ ಜೊತೆಗೆ ಗಂಭೀರ ನೋಟದ ಫೋಟೋ ಇದಾಗಿದ್ದು, ಗ್ಲಾಮರಸ್ ಲುಕ್‌ನಿಂದ ನಟಿ ರಶ್ಮಿಕಾ ಈ ರೀತಿ ಬದಲಾದರೇ ಎಂಬ ಪ್ರಶ್ನೆ ಉದ್ಭವವಾಗಿದೆ.
ರಶ್ಮಿಕಾ ವೈರಲ್ ಫೋಟೋ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಇದು ಜಾಹೀರಾತು ಇಲ್ಲವೇ ಅವರ ಮುಂದಿನ ಸಿನಿಮಾದ ಕಥೆಗೆ ತಕ್ಕಂತೆ ಫೋಟೋ ಶೂಟ್ ಮಾಡಿಸಿರಬಹುದೆಂದು ಊಹಿಸಲಾಗಿದೆ. ಈ ಫೋಟೋ ರೆಡ್ ಕಾರ್ಪೆಟ್ ಕಾರ್ಯಕ್ರಮಕ್ಕೆ ಬದಲಾಗಿ ಕ್ಯಾಬಿನೆಟ್ ಮೀಟಿಂಗ್ ವೇಳೆ ಮಹಿಳಾ ರಾಜಕೀಯ ನಾಯಕಿಯರು ಧರಿಸುವ ಗೆಟಪ್‌ನಲ್ಲಿ ರಶ್ಮಿಕಾ ಕಾಣಿಸಿಕೊಂಡಿದ್ದಾರೆ. ಶೀಘ್ರವೇ ಹೊಸ ಸಿನಿಮಾ ಬಗ್ಗೆ ಘೋಷಣೆ ಆದರೂ ಅಚ್ಚರಿ ಇಲ್ಲ. ಒಟ್ಟಿನಲ್ಲಿ ಈ ಬಗ್ಗೆ ಅಧಿಕೃತ ಮಾಹಿತಿಗೆ ರಶ್ಮಿಕಾ ಫ್ಯಾನ್ಸ್ ಕಾಯುತ್ತಿದ್ದಾರೆ.
ರಶ್ಮಿಕಾ ಪ್ಯಾನ್ ಇಂಡಿಯಾ ಸಿನಿಮಾ ರಿಲೀಸ್‌ಗೆ ಸಜ್ಜು
ಮುಂದಿನ ತಿಂಗಳು ಸೆಪ್ಟೆಂಬರ್ 5 ರಂದು 'ದಿ ಗರ್ಲ್ ಫ್ರೆಂಡ್' ಸಿನಿಮಾ ಐದು ಭಾಷೆಗಳಲ್ಲಿ ಭಾರತಾದ್ಯಂತ ತೆರೆಗೆ ಬರಲಿದೆ. ಈಗಾಗಲೇ ಈ ಸಿನಿಮಾದ ಐದು ಭಾಷೆಯಲ್ಲಿನ ಹಾಡು, ವಿನೂತನ ನೃತ್ಯ ಪ್ರೇಕ್ಷರನ್ನು ತನ್ನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ರಾಹುಲ್ ರವೀಂದ್ರನ್ ಅವರು ಈ ಸಿನಿಮಾ ಆಕ್ಷನ್ ಕಟ್ ಹೇಳಿದ್ದರೆ. ಕನ್ನಡದ ನಟ ದೀಕ್ಷಿತ್ ಶೆಟ್ಟಿ ರಶ್ಮಿಕಾಗೆ ನಾಯಕರಾಗಿದ್ದಾರೆ. ನಟಿ ರಶ್ಮಿಕಾ 'ಥಾಮಾ' ಸಿನಿಮಾದಲ್ಲಿ ನಟಿಸಿದ್ದಾರೆ. ಅಲ್ಲದೇ ವಾರಿಯರ್ ರಕ್ತಸಿಕ್ತ ಪೋಸ್ಟರ್ ಮೂಲಕ ಗಮನ ಸೆಳೆದಿದ್ದ 'ಮೈಸಾ' ಶೂಟಿಂಗ್ ಸಹ ಆರಂಬವಾಗಲಿದೆ. ನಟಿ ರಶ್ಮಿಕಾ ಬಾಲಿವುಡ್ ಸೇರಿದಂತೆ ವಿವಿಧ ಭಾಷೆಯ ಸಾಲು ಸಾಳು ಸಿನಿಮಾಗಳಲ್ಲಿ ಬ್ಯೂಸಿಯಾಗಿದ್ದಾರೆ. ಇನ್ನು 'ಮೈಸಾ' ಆಕ್ಷನ್ ಥ್ರಿಲ್ಲರ್ ಸಿನಿಮಾ ಎಂದು ಹೇಳಲಾಗುತ್ತಿದೆ.












Click it and Unblock the Notifications