Rashmika Mandanna: ವಿಜಯ್ ದೇವರಕೊಂಡ ಜತೆಗಿನ ಮದುವೆ ಬಗ್ಗೆ ಕೊನೆಗೂ ಮೌನ ಮುರಿದ ರಶ್ಮಿಕ
ಈ ವರ್ಷ ನಟಿ ರಶ್ಮಿಕಾ ಮಂದಣ್ಣ ಅವರ ಸಾಲು ಸಾಲು ಸಿನಿಮಾಗಳು ಬಿಡುಗಡೆ ಆಗಿವೆ. ಅದರಲ್ಲಿ ಐದನೇ ಸಿನಿಮಾ 'ದಿ ಗರ್ಲ್‌ಫ್ರೆಂಡ್' ಸಹ ಒಂದು. ಶುಕ್ರವಾರ ಚಿತ್ರಮಂದಿರಗಳಿಗೆ ಲಗ್ಗಿ ಇಟ್ಟ ಸಿನಿಮಾವನ್ನು ಪ್ರೇಕ್ಷಕರು ಕಣ್ತುಂಬಿಕೊಟ್ಟಿದ್ದಾರೆ. ರಶ್ಮಿಕಾ ನಟನೆಗೆ ಫ್ಯಾನ್ಸ್ ಸೆಲ್ಯೂಟ್ ಹೊಡೆದಿದ್ದಾರೆ. ಸಿನಿಮಾ ಬಿಡುಗಡೆಗೂ ಮೊದಲು ಫ್ಯಾನ್ಸ್ ಜೊತೆಗೆ ಸಂವಾದಾತ್ಮಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನಟಿ ರಶ್ಮಿಕಾ ತಮ್ಮ ಮದುವೆ ಹುಡುಗ, ರಿಲೇಷನ್ ಶಿಪ್ ವದಂತಿ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದರು. ಸಹನಟ ವಿಜಯ್ ದೇವರಕೊಂಡ, ಪುಷ್ಪ 3, ಎಐ ಸೇರಿ ವಿಚಾರಗಳ ಬಗ್ಗೆ ಮುಕ್ತವಾಗಿ ತಿಳಿಸಿದ್ದಾರೆ.
'ದಿ ಗರ್ಲ್‌ಫ್ರೆಂಡ್' ಬೆಡಗಿ ರಶ್ಮಿಕಾರಿಗೆ ಕಾರ್ಯಕ್ರಮದಲ್ಲಿ ಫ್ಯಾನ್ಸ್ ವಿವಿಧ ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ. ಕೆಲವು ಪ್ರಶ್ನೆಗಳಿಗೆ ಅವರು ಉತ್ತರಿಸಿದ್ದಾರೆ. ರಶ್ಮಿಕಾ ಮಂದಣ್ಣ ಅವರು ತಮ್ಮ ಸಂಗಾತಿ ಬಗ್ಗೆ ಕೇಳಿದ್ದಾರೆ. "ಪ್ರಾಮಾಣಿಕವಾಗಿ ಹೇಳುವುದಾದರೆ, ಹೆಚ್ಚು ಆಳವಾಗಿ ಅರ್ಥಮಾಡಿಕೊಳ್ಳುವ ಸಾಮರ್ಥ್ಯವಿರುವ ವ್ಯಕ್ತಿ ಆಗಿರಬೇಕು. ಅವನು ಕೆಲವು ಸಂದರ್ಭಗಳನ್ನು ಹೇಗೆ ಗ್ರಹಿಸುತ್ತಾನೆ? ನನಗೆ ಅರ್ಥಮಾಡಿಕೊಳ್ಳಲು ಮುಕ್ತವಾಗಿದ ವ್ಯಕ್ತಿ ಬೇಕು. ಒಳ್ಳೆಯವನಾಗಿರಬೇಕು. ಬದುಕಿನೊಂದಿಗೆ ನನ್ನ ಜೊತೆ ನಿಲ್ಲುವವನಾಗಿರಬೇಕು. ಯುದ್ಧ ನಡೆದರೆ ಆ ವ್ಯಕ್ತಿ ನನ್ನೊಂದಿಗೆ ಹೋರಾಡುತ್ತಾನೆ ಎಂದು ನನಗೆ ತಿಳಿದಿದೆ ಎಂದು ತಮ್ಮ ಸಂಗಾತಿ ಗುಣಗಳ ಬಗ್ಗೆ ತಿಳಿಸಿದ್ದಾರೆ.

"ಡೇಟ್, ಮ್ಯಾರಿ, ಅಂಡ್ ಕಿಲ್" ಆಟದ ಸಂದರ್ಭ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ರಶ್ಮಿಕಾ ಮಂದಣ್ಣ ಅವರು, ಒಂದು ಅನಿಮೆ ಪಾತ್ರದೊಂದಿಗೆ ಡೇಟಿಂಗ್ ಮಾಡಿ ವಿಜಯ್ ದೇವರಕೊಂಡ ಅವರನ್ನು ಮದುವೆಯಾಗುತ್ತೇನೆ ಎಂದಿದ್ದಾರೆ. ಮತ್ತೊಬ್ಬರು ನಿಮ್ಮ ಬಗ್ಗೆ ಇರುವ ವದಂತೆ ಮತ್ತು ಅದು ನಿಜವಾಗಿರಬೇಕು ಅಂತಹ ಸಂಗತಿ ಏನು? ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ನಗುತ್ತಲೇ ಉತ್ತರಿಸಿದ ರಶ್ಮಿಕಾ, ಅದು ಈಗಾಗಲೇ ಎಲ್ಲರಿಗೂ ಗೊತ್ತಿದೆ. ಐ ವಿಲ್ ಮ್ಯಾರಿ ವಿಥ್ ವಿಜಯ್ ಎಂದು ಹೇಳಿದ್ದಾರೆ. ಹೀಗೆ ಹೇಳುತ್ತಲೇ ಫ್ಯಾನ್ಸ್ ಹರ್ಷೋದ್ಘಾರ ಮುಗಿಲು ಮುಟ್ಟಿದೆ.
ಇತ್ತೀಚೆಗೆ ನಟಿ ರಶ್ಮಿಕಾ ಹಾಗೂ ವಿಜಯ್ ಅವರು ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆಂದು ಹೇಳಲಾಗಿತ್ತು. ಕುಟುಂಬದ ಮೂಲಗಳು ಮಾಹಿತಿ ನೀಡಿವೆ. ಆದರೆ ಬಹಿರಂಗವಾಗಿ, ಸಾಮಾಜಿಕ ಜಾಲತಾಣದಲ್ಲಿ ಎಲ್ಲೂ ಈ ಬಗ್ಗೆ ನಟ, ನಟಿ ಇಬ್ಬರು ಬಹಿರಂಗವಾಗಿ ಹೇಳಿರಲಿಲ್ಲ. ಇದೀಗ ರಶ್ಮಿಕಾ ಸಂದರ್ಶನದಲ್ಲಿ ವಿಜಯ್ ಅವರನ್ನು ಮದುವೆ ಆಗುವುದಾಗಿ ಮೊದಲ ಬಾರಿಗೆ ಬಹಿರಂಗವಾಗಿ ಹೇಳಿಕೊಂಡಿದ್ದಾರೆ.
ಮುಂದಿನ ವರ್ಷ ಫೆಬ್ರವರಿ 2026 ರಲ್ಲಿ ಉತ್ತರ ಭಾರತದ ಪ್ರಮುಖ ರಾಜ್ಯದಲ್ಲಿ ಈ ತಾರಾಜೋಡಿ ವಿವಾಹವಾಗಲಿದೆ. ಎರಡು ಕುಟುಂಬಗಳು ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ.

ದಿ ಗರ್ಲ್‌ಫ್ರೆಂಡ್ ಕುರಿತು..
ತಮ್ಮ ಸಿನಿಮಾ ಬಗ್ಗೆ ಮಾತನಾಡಿದ ನಟಿ ರಶ್ಮಿಕಾ ಮಂದಣ್ಣ ಅವರು, ತಮ್ಮ ಪಾತ್ರದ ಕುರಿತು ವಿವರಿಸಿದರು. "ನಾನು ಗರ್ಲ್‌ಫ್ರೆಂಡ್‌ಗೆ ಪಾತ್ರದ ವಿಶೇಷತೆ ನೋಡಿ ಒಪ್ಪಿದೆ. ಮುಖ್ಯವಾದ ಕಥೆ ಮತ್ತು ಬಹಳ ಚಿಂತನಶೀಲ ಚಿತ್ರವಾಗಿದೆ. ಈ ಚಿತ್ರವು ಮನಸ್ಸಿಗೆ ಹತ್ತಿರವಾಗುತ್ತದೆ. ಪ್ರತಿಯೊಬ್ಬರೂ ತಮ್ಮ ಜೀವನದ ಒಂದು ಹಂತದಲ್ಲಿ ಇದಕ್ಕೆ ಸಂಬಂಧ ಹೊಂದಿರುತ್ತಾರೆ ಎಂದನಿಸುತ್ತದೆ' ಎಂದಿದ್ದಾರೆ.
"ಇಂತಹ ಕಥೆಯನ್ನು ಹೇಳಲು ತುಂಬಾ ಧೈರ್ಯ ಬೇಕು ಎಂದು ನಾನು ಭಾವಿಸುತ್ತೇನೆ ಎಂದು ನಿರ್ದೇಶಕ ಬರವಣಿಗೆ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ. ಇಂತಹ ಪಾತ್ರದಲ್ಲಿ ಕಾಣಲು ನಾನು ಉತ್ಸುಕನಾಗಿದ್ದೇನೆ ಎಂದಿದ್ದಾರೆ. ದಿ ಗರ್ಲ್ ಫ್ರೆಂಡ್ ಸಿನಿಮಾ ನಟಿಯಾಗಿ, ಮನುಷ್ಯನಾಗಿ ನೋಡಿದ್ದೇನೆ. ಪ್ರೇಕ್ಷಕರು ಸಿನಿಮಾ ನೋಡಿ ಮೆಚ್ಚುತ್ತೀರಿ. ಈ ಸಿನಿಮಾ ಕನಿಷ್ಠ ಒಬ್ಬ ವ್ಯಕ್ತಿಯನ್ನು ಬದಲಾಯಿಸುತ್ತದೆ' ಎಂದು ಅವರು ಅಭಿಪ್ರಾಯ ಹೊರ ಹಾಕಿದ್ದಾರೆ.
ರಶ್ಮಿಕಾಗೆ ಕನ್ನಡದ ನಟ ದೀಕ್ಷಿತ್ ಶೆಟ್ಟಿ ನಾಯಕರಾಗಿದ್ದಾರೆ. ರಾಹುಲ್ ರವಿಚಂದ್ರನ್ ನಿರ್ದೇಶಿಸಿದ್ದಾರೆ. ಸಿನಿಮಾ ನೆನ್ನೆ ಶುಕ್ರವಾರ ನವೆಂಬರ್ 07ರಂದು ರಿಲೀಸ್ ಆಗಿದ್ದು, ತನ್ನ ಹಾಡು, ಪಾತ್ರಗಳು, ನೃತ್ಯದಿಂದ ಗಮನ ಸೆಳೆದಿದೆ. ಪ್ರೇಕ್ಷಕರು ಮೆಚ್ಚಿದ್ದಾರೆ. ರಶ್ಮಿಕಾ ಸಿನಿಮಾಗಳ ಸಾಲಿಗೆ ಮತ್ತೊಂದು ಹಿಟ್ ಸಿನಿಮಾ ಸೇರಿಕೊಳ್ಳಲಿದೆ ಎಂದು ಫ್ಯಾನ್ಸ್ ಹೇಳುತ್ತಿದ್ದಾರೆ.












Click it and Unblock the Notifications