ಬೆಳಿಗ್ಗೆ ತೆಲುಗು, ಸಂಜೆ ಕೊಡವ ಸಂಪ್ರದಾಯದಂತೆ ರಶ್ಮಿಕಾ ಮಂದಣ್ಣ - ವಿಜಯ್ ದೇವರಕೊಂಡ ಮದುವೆ
Rashmika Mandanna, Deverakonda Marriage: ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಮದುವೆ ಸಮಾರಂಭ ಅದ್ಧೂರಿಯಾಗಿ ಜರುಗಿದೆ. ರಾಜಸ್ಥಾನದ ಉದಯಪುರದಲ್ಲಿರುವ ಐಷಾರಾಮಿ ರಿಸಾರ್ಟ್‌ನಲ್ಲಿ ಫೆಬ್ರವರಿ 26ರ ಗುರುವಾರ ಬೆಳಗ್ಗೆ ಶುಭ ಮುಹೂರ್ತದಲ್ಲಿ ತೆಲುಗು ಸಂಪ್ರದಾಯದಂತೆ ಇಬ್ಬರೂ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕುಟುಂಬದ ಸದಸ್ಯರು, ಬಂಧು-ಬಳಗ ಹಾಗೂ ಆಪ್ತರ ಸಮ್ಮುಖದಲ್ಲಿ ನಡೆದ ಈ ಸಮಾರಂಭದಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ. ಇನ್ನೂ ಸಂಜೆ ಮತ್ತೊಂದು ಸಂಪ್ರದಾಯದಂತೆ ಮತ್ತೊಮ್ಮೆ ವಿವಾಹ ಆಗಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ರಶ್ಮಿಕಾ ಮಂದಣ್ಣ-ವಿಜಯ ದೇವರಕೊಂಡ ಜೋಡಿ ಕಳೆದ ಕೆಲವು ವರ್ಷಗಳಿಂದ ಪರಸ್ಪರ ಆತ್ಮೀಯ ಸಂಬಂಧ ಹೊಂದಿರುವುದು ಎಲ್ಲರಿಗೂ ತಿಳಿದ ವಿಚಾರವಾಗಿತ್ತು. ಕಳೆದ ವರ್ಷದ ಅಕ್ಟೋಬರ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಇವರಿಬ್ಬರು ಇದೀಗ ಅಧಿಕೃತವಾಗಿ ಮದುವೆಯಾಗಿ ತಮ್ಮ ಸಂಬಂಧವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದ್ದಾರೆ.

ಎರಡೂ ಸಂಪ್ರದಾಯದಂತೆ ವಿವಾಹ
ಉದಯಪುರದಲ್ಲಿ ಕಳೆದ ಕೆಲ ದಿನಗಳಿಂದ ಮದುವೆ ಸಂಬಂಧಿತ ಕಾರ್ಯಕ್ರಮಗಳು ನಡೆದಿದ್ದು, ಬುಧವಾರ ಹರಿಶಿಣ ಹಾಗೂ ಸಂಗೀತ ಸಮಾರಂಭಗಳನ್ನು ಆಯೋಜಿಸಲಾಗಿತ್ತು. ಇಂದು ಗುರುವಾರ ತೆಲಂಗಾಣದಿಂದ ಪುರೋಹಿತರ ತಂಡವೊಂದು ಬಂದು ತೆಲುಗು ಸಂಪ್ರದಾಯದಂತೆ ಮದುವೆ ವಿಧಿವಿಧಾನಗಳನ್ನು ನೆರವೇರಿಸಿದೆ. ಮತ್ತೊಂದೆಡೆ ಇದೇ ದಿನ ಸಂಜೆ ಕೊಡವ ಸಂಪ್ರದಾಯದಂತೆ ಮತ್ತೊಮ್ಮೆ ವಿವಾಹ ಕಾರ್ಯಕ್ರಮ ನಡೆಯಲಿದ್ದು, ಎರಡೂ ಕುಟುಂಬಗಳ ಇದಕ್ಕೆ ಒಪ್ಪಿಗೆ ಸೂಚಿಸಿವೆ ಎಂದು ತಿಳಿದುಬಂದಿದೆ. ಈಗಾಗಲೇ ಮದುವೆ ನಡೆದಿದ್ದರೂಕೂಡ ಈ ಜೋಡಿ ಯಾವುದೇ ಫೋಟೋಗಳನ್ನು ಅಧಿಕೃತವಾಗಿ ಎಲ್ಲಿಯೂ ಶೇರ್ ಮಾಡಿಕೊಂಡಿಲ್ಲ.
ಹೈದರಾಬಾದ್‌ನಲ್ಲಿ ಅದ್ಧೂರಿ ಆರಕ್ಷತೆ ಕಾರ್ಯಕ್ರಮ
ವಿವಾಹಕ್ಕೆ ಸೀಮಿತ ಸಂಖ್ಯೆಯಲ್ಲಿ ಆಪ್ತರನ್ನು ಮಾತ್ರ ಆಹ್ವಾನಿಸಲಾಗಿದೆ. ಇನ್ನೂ ಮಾರ್ಚ್ 4ರಂದು ಹೈದರಾಬಾದ್‌ನ ತಾಜ್ ಕೃಷ್ಣ ಹೋಟೆಲ್‌ನಲ್ಲಿ ಅದ್ದೂರಿ ಆರತಕ್ಷತೆ ಸಮಾರಂಭ ನಡೆಯಲಿದೆ. ಆ ಕಾರ್ಯಕ್ರಮದಲ್ಲಿ ತೆಲುಗು, ಕನ್ನಡ ಸೇರಿದಂತೆ ಹಲವು ಚಿತ್ರರಂಗದ ಗಣ್ಯರು, ರಾಜಕೀಯ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.
ವಿಕಿಪೀಡಿಯಾ ಪೇಜ್ ಅಪ್‌ಡೇಟ್
ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಅವರ ಮದುವೆಯ ಕುರಿತಾಗಿ ಅಧಿಕೃತ ಫೋಟೋಗಳ ಬಿಡುಗೆಗೂ ಮುನ್ನ ಇವರಿಬ್ಬರ ವಿಕಿಪೀಡಿಯಾ ಪೇಜ್ ಬದಲಾವಣೆಯಾಗಿದೆ. ಇಬ್ಬರ ಪ್ರೊಫೈಲ್‌ನಲ್ಲೂ ಸಂಗಾತಿ ಕಾಲಂಗಳಲ್ಲಿ ಪರಸ್ಪರರ ಹೆಸರುಗಳು ಸೇರ್ಪಡೆ ಆಗಿ ದೊಟ್ಟ ಟ್ರೆಂಡ್ ಸೃಷ್ಟಿಯಾಗಿದೆ. ವಿಜಯ್ ದೇವರಕೊಂಡ ಅವರ ಪೇಜ್‌ನಲ್ಲಿ ಸಂಗಾತಿಯ ಹೆಸರಿನ ಜಾಗದಲ್ಲಿ ರಶ್ಮಿಕಾ ಮಂದಣ್ಣ (ವಿವಾಹ 2026)' ಎಂದು ಉಲ್ಲೇಖಿಸಲಾಗಿದೆ. ರಶ್ಮಿಕಾ ಮಂದಣ್ಣ ಅವರ ವಿಕಿಪೀಡಿಯಾ ಪುಟದಲ್ಲೂ ಸಂಗಾತಿಯ ಹೆಸರಿನ ಜಾಗದಲ್ಲಿ 'ವಿಜಯ್ ದೇವರಕೊಂಡ (ವಿವಾಹ 2026)' ಎಂದು ನಮೂದಿಸಲಾಗಿದೆ.
ವಿಜಯ್ ಮತ್ತು ರಶ್ಮಿಕಾ ಕಳೆದ ಕೆಲವು ವರ್ಷಗಳಿಂದ ಪ್ರೀತಿಯಲ್ಲಿದ್ದಾರೆ ಎಂಬ ವದಂತಿಗಳು ದೊಡ್ಡ ಮಟ್ಟದಲ್ಲಿ ಹಬ್ಬಿದ್ದವು. ಕಳೆದ ವರ್ಷದ ಅಕ್ಟೋಬರ್ ವೇಳೆ ಇಬ್ಬರ ನಿಶ್ಚಿತಾರ್ಥ ಆಗಿದ್ದ ಸುದ್ದಿ ಹಬ್ಬಿತ್ತು. ಬಳಿಕ ಪ್ರವಾಸದ ಫೋಟೋಗಳು ಮತ್ತು ಕುಟುಂಬದ ಸಮಾರಂಭಗಳಲ್ಲಿ ಇಬ್ಬರೂ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದು, ಇದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿತ್ತು. ಈವರೆಗೂ ವಿಕಿಪೀಡಿಯಾ ಪೇಜ್‌ಗಳಲ್ಲಿ ಇವರಿಬ್ಬರ ನಡುವಿನ ಸಬಂಧದ ವಿವರವನ್ನು ಅಪ್‌ಡೇಟ್ ಮಾಡಿರಲಿಲ್ಲ. ಇದೀಗ ಉದಯಪುರದಲ್ಲಿ ಇವರಿಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬೆನ್ನಲ್ಲೆ ಪೇಜ್ ಅಪ್‌ಡೇಟ್ ಆಗಿ ಗಮನ ಸೆಳೆದಿದೆ. ಅಲ್ಲದೆ, ಇದರಲ್ಲಿ ಇವರಿಬ್ಬರ ಸಿನಿಪ್ರಯಾಣದ ಬಗ್ಗೆಯೂ ಕೂಡ ಮಾಹಿತಿ ಇದೆ. ವಿಕಿಪೀಡಿಯಾ ಮುಕ್ತ ವೇದಿಕೆ ಆಗಿದ್ದು, ಯಾರು ಬೇಕಾದರೂ ಮಾಹಿತಿಯನ್ನು ಎಡಿಟ್ ಮಾಡಬಹುದಾಗಿದೆ.












Click it and Unblock the Notifications