ಕಮಲ್ ಹಾಸನ್‌ಗೆ ಕನ್ನಡ ಪುಸ್ತಕ ಕೊಟ್ಟ 'ಕನ್ನಡತಿ'
ಕನ್ನಡ ಭಾಷೆ ತಮಿಳಿನಿಂದ ಹುಟ್ಟಿದ್ದು ಎಂದು ಹೇಳಿರುವ ನಟ ಕಮಲ್ ಹಾಸನ್ ಅವರು ತಮ್ಮ ಮೊಂಡಾಟ ಮುಂದುವರಿಸಿದ್ದಾರೆ. ಕನ್ನಡಿಗರ ಕ್ಷಮೆ ಕೇಳಲು ನಿರಾಕರಿಸಿರುವ ಕಮಲ್ ಹಾಸನ್ ಅವರು ತಮ್ಮ ಥಗ್ ಲೈಫ್ ಸಿನಿಮಾದ ಪ್ರಮೋಷನ್‌ನಲ್ಲಿದ್‌ದಾರೆ. ಕಮಲ್ ಹಾಸನ್ ಅವರ ಥಗ್ ಲೈಫ್ ಸಿನಿಮಾ ಬಿಡುಗಡೆ ವಿರೋಧಿಸಿ ಕನ್ನಡಿಗರು ಹೋರಾಟಕ್ಕೆ ಸಜ್ಜಾಗಿದ್ದಾರೆ. ಒಂದೇ ಒಂದು ಹೇಳಿಕೆ ಮೂಲಕ ಕನ್ನಡಿಗರ ಮನಸ್ಸಿಗೆ ನೋವುಂಟು ಮಾಡಿರುವ ಕಮಲ್ ಹಾಸನ್ ಕನ್ನಡಿಗರ ಪಾಲಿಗೆ ಕೆಟ್ಟವರಾಗಿದ್ದಾರೆ.
ಕನ್ನಡ ಭಾವನೆಗಳಿಗೆ ಧಕ್ಕೆ ತಂದು ಕ್ಷಮೆ ಕೇಳುವುದಿಲ್ಲ ಮುಖ ತಿರುಗಿಸಿ ಕೂತಿರುವ ಕಮಲ್ ಹಾಸನ್ ವಿರುದ್ಧ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸುತ್ತಿರುವ ಬೆನ್ನಲ್ಲೇ 'ಕನ್ನಡತಿ' ಧಾರಾವಾಹಿ ಖ್ಯಾತಿಯ ನಟಿ ರಂಜನಿ ರಾಘವನ್ ವಿವಾದದಲ್ಲಿ ಸಿಲುಕಿರುವ ಕಮಲ್ ಹಾಸನ್‌ಗೆ ʼಕನ್ನಡʼ ಪುಸ್ತಕ ಕೊಟ್ಟು ಬಂದಿದ್ದಾರೆ. ಕಮಲ್ ಹಾಸನ್ ಗೆ ಕನ್ನಡ ಪುಸ್ತಕ ಕೊಟ್ಟ ಫೋಟೋ ಹಾಗೂ ವಿಡಿಯೋವನ್ನ ರಂಜನಿ ರಾಘವನ್ ಸ್ವತ: ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗುತ್ತಿವೆ. ನೆಟ್ಟಿಗರು ಕಮಲ್ ಹಾಸನ್ ವಿರುದ್ಧ ಕಿಡಿಕಾರಿದ್ದಾರೆ.

ಕನ್ನಡ ಭಾಷೆಯ ಬಗ್ಗೆ ಕಮಲ್ ಹಾಸನ್ ವಿವಾದ ಸದ್ಯ ಕಮ್ಮಿಯಾಗುವಂತೆ ಕಾಣುತ್ತಿಲ್ಲ. ಕರ್ನಾಟಕದಲ್ಲಿ 'ಥಗ್ ಲೈಫ್' ಬ್ಯಾನ್ ಮಾಡುವ ನಿರ್ಧಾರಕ್ಕೆ ಬಂದಿದ್ದರೂ ಕಮಲ್ ಹಾಸನ್ ಅಹಂಕಾರ ಇನ್ನೂ ಕಮ್ಮಿಯಾಗಿಲ್ಲ. ಹೀಗಾಗಿ ಕನ್ನಡ ಪರ ಹೋರಾಟಗಾರರು ಬೆಂಗಳೂರು ಬಂದ್ ಮಾಡುವ ಬಗ್ಗೆನೂ ಚರ್ಚೆ ನಡೆಸಿದ್ದಾರೆ. ಒಂದು ವೇಳೆ ಕಮಲ್ ಹಾಸನ್ ಸಿನಿಮಾ ಕರ್ನಾಟಕದಲ್ಲಿ ರೀಲಿಸ್ ಆದ್ರೆ, ಪರಿಣಾಯ ಸರಿ ಇರಲ್ಲ ಎಂದು ಕನ್ನಡ ಪರ ಹೋರಾಟಗಾರರು ಆಕ್ರೋಶ ವ್ಯಕ್ತಪಿಸಿದ್ದಾರೆ.
ಇನ್ನೂ ಕನ್ನಡ ಸಂಘಟನೆಗಳು ಕಮಲ್ ಹಾಸನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವ ಬೆನ್ನಲ್ಲೇ ಕಮಲ್ ಹಾಸನ್‌ಗೆ ನಟಿ ರಂಜನಿ ರಾಘವನ್ ಕನ್ನಡ ಪುಸ್ತಕಗಳನ್ನು ಕೊಟ್ಟಿದ್ದು ಚರ್ಚೆಗೆ ಗ್ರಾಸವಾಗಿದೆ. 'ಕನ್ನಡತಿ' ಧಾರಾವಾಹಿ ಮೂಲಕ ಕನ್ನಡಿಗರ ಮನಗೆದ್ದಿದ್ದ ನಟಿ ರಂಜನಿ ರಾಘವನ್ ಬಹುಮುಖ ಪ್ರತಿಭೆ. ಕೇವಲ ನಟನೆಯಷ್ಟೇ ಅಲ್ಲ. ಲೇಖಕಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಈಗಾಗಲೇ ಅವರ ಲೇಖನಿಯಿಂದ ಹಲವು ಕೃತಿಗಳು ಹೊರಬಂದಿವೆ. ಈಗ ನಿರ್ದೇಶನಕ್ಕೂ ಇಳಿದ್ದು, ಸಿನಿಮಾ ಬಿಡುಗೆ ಮಾಡುವುದಕ್ಕೆ ಸಿದ್ಧತೆಗಳನ್ನು ಮಾಡಿಕೊಡುತ್ತಿದ್ದಾರೆ. ಈ ಮಧ್ಯೆ ಕಮಲ್ ಹಾಸನ್ ಅವರನ್ನು ಭೇಟಿ ಮಾಡಿ, ವಿವಾದದ ಬೆನ್ನಲ್ಲೇ ಕನ್ನಡ ಪುಸ್ತಕವನ್ನು ಕೊಟ್ಟಿದ್ದಾರೆ.
ಕಮಲ್ ಹಾಸನ್ 'ಥಗ್ ಲೈಫ್' ಸಿನಿಮಾ ಪ್ರಚಾರದ ನಡುವೆ ವಿವಾದದಲ್ಲಿ ಬ್ಯುಸಿಯಾಗಿದ್ದಾರೆ. ಇಂತಹ ಸಮಯದಲ್ಲಿ ಕಮಲ್ ಹಾಸನ್ ಅವರನ್ನು ನಟಿ ರಂಜನಿ ರಾಘವನ್ ಭೇಟಿ ಮಾಡಿ ಪುಸ್ತಕ ಕೊಟ್ಟಿರುವುದು ತೀವ್ರ ಸಂಚಲನ ಸೃಷ್ಟಿಸಿದೆ. ಫೋಟೊ, ವಿಡಿಯೋಗಳನ್ನು ಹಂಚಕೊಂಡ "ಕಮಲ್ ಸರ್‌ಗೆ ಕನ್ನಡ ಪುಸ್ತಕ" ಎಂದು ಕ್ಯಾಪ್ಶನ್ ಬರೆದು ಎರಡು ಎಮೋಜಿಗಳನ್ನು ನಟಿ ರಂಜನಿ ರಾಘವನ್ ಹಂಚಿಕೊಂಡಿದ್ದಾರೆ. ರಂಜನಿ ರಾಘವನ್ ಈ ಫೋಟೊಗಳನ್ನು ಹಂಚಿಕೊಳ್ಳುತ್ತಿದ್ದಂತೆ ನೆಟ್ಟಿಗರು "ಸೂಪರ್ ಮೇಡಮ್, ನಮ್ಮ ಕನ್ನಡತಿ ಸರಿಯಾದ ಟೈಮ್‌ನಲ್ಲಿ ಕನ್ನಡ ಪುಸ್ತಕ ಕೊಟ್ಟಿದ್ದು" ಎಂದು ಒಬ್ಬರು ಕಮೆಂಟ್ ಮಾಡಿದ್ದರೆ.












Click it and Unblock the Notifications