ಕಾಂತಾರಾ ಸಿನಿಮಾಗೆ ಸಾಲು ಸಾಲು ನೋವು, ರಂಗಿತರಂಗ ನಿರ್ದೇಶಕ ಅನೂಪ್ ಭಂಡಾರಿ... Kantara Movie
ಕನ್ನಡಿಗರ ಕಾಂತಾರಾ ಸಿನಿಮಾ ಇಡೀ ಜಗತ್ತಿನಾದ್ಯಂತ ಸದ್ದು ಮಾಡಿತ್ತು, 2022 ಸೆಪ್ಟೆಂಬರ್ ಕೊನೆಯಲ್ಲಿ ರಿಲೀಸ್ ಆಗಿದ್ದ ಕನ್ನಡಿಗರ ಕಾಂತಾರಾ ಸಿನಿಮಾ ಕೊನೆಗೆ 400 ಕೋಟಿ ರೂಪಾಯಿಂದ 450 ಕೋಟಿ ರೂಪಾಯಿ ಗಳಿಕೆ ಮಾಡಿತ್ತು ಅನ್ನೋ ಮಾತು ಇದೆ. ಆದರೆ ಕಾಂತಾರಾ ಸಿನಿಮಾ ಎಷ್ಟು ಗಳಿಸಿತ್ತು ಅನ್ನೋ ಕುರಿತು ಅಧಿಕೃತ ಮಾಹಿತಿ ಇಲ್ಲ. ಹೀಗಿದ್ದಾಗಲೇ, ಕಾಂತಾರಾ ಸಿನಿಮಾದ ಮತ್ತೊಂದು ಭಾಗ ಶೂಟಿಂಗ್ ಮಾಡುವ ಸಮಯದಲ್ಲೇ ಸಾಲು ಸಾಲು ಸಾವುಗಳು ಸಂಭವಿಸುತ್ತಿವೆ.
ಹೀಗೆ ರಿಷಬ್ ಶೆಟ್ಟಿ ಅವರ ಬಹುನಿರೀಕ್ಷಿತ ಸಿನಿಮಾ ಕಾಂತಾರಾ-1 ಭಾರಿ ಭರ್ಜರಿಯಾಗಿ ಸಿದ್ಧವಾಗುತ್ತಿದೆ. ಇನ್ನೇನು ಕೆಲವೇ ದಿನಗಳಲ್ಲಿ ಕಾಂತಾರಾ-1 ಬೆಳ್ಳಿತೆರೆ ಮೇಲೆ ಕಂಗೊಳಿಸಲಿದೆ ಅಂತಾನೇ ಕೋಟಿ, ಕೋಟಿ ಅಭಿಮಾನಿಗಳು & ಕನ್ನಡಿಗರು ಕಾಯುತ್ತಿದ್ದಾರೆ. ಆದರೆ, ಇಂತಹ ಸಮಯದಲ್ಲೇ ಕಾಂತಾರಾ ಸಿನಿಮಾದ ಶೂಟಿಂಗ್ ಸಮಯದಲ್ಲಿ ಸಾಲು ಸಾಲು ಸಾವುಗಳು ಸಂಭವಿಸಿವೆ. ಇದೇ ಕಾರಣಕ್ಕೆ, ಕಾಂತಾರಾ-1 ಶೂಟಿಂಗ್ ನಿಲ್ಲುತ್ತಾ? ಅನ್ನೋ ಆತಂಕದ ಚರ್ಚೆಗಳು ಕೂಡ ಜೋರಾಗಿವೆ. ಇಷ್ಟೆಲ್ಲದರ ಮಧ್ಯೆ ಕಾಂತಾರಾ ಸಿನಿಮಾಗೆ ಎದುರಾಗಿರುವ ಸಮಸ್ಯೆ & ನೋವಿನ ಬಗ್ಗೆ ರಂಗಿತರಂಗ ನಿರ್ದೇಶಕ ಅನೂಪ್ ಭಂಡಾರಿ ಹೇಳಿದ್ದೇನು?

ಕಾಂತಾರ ಬಗ್ಗೆ ರಂಗಿತರಂಗ ಅನೂಪ್ ಭಂಡಾರಿ...
ಹೌದು, ಕನ್ನಡಿಗರ ಸಿನಿಮಾ ಜಗತ್ತು ಇದೀಗ ಗಡಿಗಳನ್ನು ದಾಟಿ ಹೋಗಿದೆ. ಜಗತ್ತಿನ ಮೂಲೆ ಮೂಲೆಗೂ ಕನ್ನಡ ಸಿನಿಮಾಗಳು ವ್ಯಾಪಿಸಿವೆ. ಹೀಗೆ ಕನ್ನಡಿಗರ ಸಿನಿಮಾ ಇಂಡಸ್ಟ್ರಿ ಬೆಳೆಯುತ್ತಿರುವ ರೀತಿ ನೋಡಿದ್ರೆ ಭವಿಷ್ಯದಲ್ಲಿ ಬಾಲಿವುಡ್ ಮೀರಿಸಿ ಹೋಗುವುದು ಗ್ಯಾರಂಟಿ ಅಂತಿದ್ದಾರೆ ಕನ್ನಡ ಅಭಿಮಾನಿಗಳು. ಆದರೆ ಇದೇ ಸಮಯದಲ್ಲಿ ಕಾಂತಾರ ಸಿನಿಮಾ ದೈವದ ಕೋಪಕ್ಕೆ ತುತ್ತಾಗಿ, ಸಾಲು ಸಾಲು ಸಾವು ಸಂಭವಿಸಿದೆ ಅಂತಾ ಕೂಡ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗಳು ನಡೆಯುತ್ತಿವೆ...
ಕಾಂತಾರ ಸಿನಿಮಾ ಶೂಟಿಂಗ್ ವೇಳೆ ನಡೆಯುತ್ತಿರುವ ದುರಂತಗಳ ಬಗ್ಗೆ ಇದೀಗ ಪ್ರತಿಕ್ರಿಯೆ ನೀಡಿರುವ, ರಂಗಿತರಂಗ ಹಾಗೂ ವಿಕ್ರಾಂತ್ ರೋಣ ರೀತಿಯ ಬ್ಲಾಕ್ ಬಸ್ಟರ್ ಸಿನಿಮಾಗಳ ನಿರ್ದೇಶಕ ಅನೂಪ್ ಭಂಡಾರಿ ಮತ್ತೆ ಸುದ್ದಿಯಲ್ಲಿದ್ದಾರೆ. ಅಂದಹಾಗೆ ರಂಗಿತರಂಗ ಸಿನಿಮಾ ಕೂಡ ಧೈವಾಧಾರಿತ ಕಥೆಯನ್ನೇ ಹೊಂದಿದೆ, ಹೀಗಾಗಿ ತಮ್ಮ ಸಿನಿಮಾ ಶೂಟಿಂಗ್‌ನ ವೇಳೆ ದೈವದ ವಿಚಾರದಲ್ಲಿ ತಪ್ಪುಗಳು ಆಗದಂತೆ ಹೇಗೆಲ್ಲಾ ಕ್ರಮ ಕೈಗೊಂಡಿದ್ದರು ಅನ್ನೋದನ್ನ ಅನೂಪ್ ಭಂಡಾರಿ ತಿಳಿಸಿದ್ದಾರೆ. ಇದೇ ಸಮಯದಲ್ಲಿ ಕಾಂತಾರಾ ಸಿನಿಮಾ ಸೆಟ್‌ನಲ್ಲಿ ನಡೆಯುತ್ತಿರುವ ದುರಂತ ಹಾಗೂ ಕಾಂತಾರಾ ಸಿನಿಮಾದ ನಟರು ಒಬ್ಬೊಬ್ಬರಾಗಿ ಜೀವ ಬಿಟ್ಟ ಆರೋಪದ ಬಗ್ಗೆ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.
ಕಾಂತಾರಾ ಸಿನಿಮಾ ಶೂಟಿಂಗ್ ದುರಂತದ ಬಗ್ಗೆ...
ರಂಗಿತರಂಗ ಹಾಗೂ ವಿಕ್ರಾಂತ್ ರೋಣ ರೀತಿಯ ಬ್ಲಾಕ್ ಬಸ್ಟರ್ ಸಿನಿಮಾಗಳ ನಿರ್ದೇಶಕ ಅನೂಪ್ ಭಂಡಾರಿ ಈಗ ಮತ್ತೊಂದು ಭರ್ಜರಿ ಹಿಟ್ ಸಿನಿಮಾ ಕೊಡಲು ಸಜ್ಜಾಗಿದ್ದಾರೆ. ಕಿಚ್ಚ ಸುದೀಪ್ ಅವರ ಜೊತೆಯಲ್ಲೇ ಮತ್ತೊಂದು ಸಿನಿಮಾ ಮಾಡುತ್ತಿರುವ ಅನೂಪ್ ಭಂಡಾರಿ ಅವರು, ಕಾಂತಾರಾ ಸಿನಿಮಾ ಶೂಟಿಂಗ್‌ನಲ್ಲಿ ನಡೆಯುತ್ತಿರುವ ದುರಂತಗಳ ಬಗ್ಗೆ ಮಾತನಾಡಿದ್ದಾರೆ. ಎಲ್ಲಾ ಶೂಟಿಂಗ್ ಸೆಟ್‌ಗಳಲ್ಲೂ ಅಪಾಯ ಇದ್ದೇ ಇರುತ್ತದೆ, ಕೆಲವು ಕಡೆ ನಿರ್ಲಕ್ಷ್ಯದ ಕಾರಣಕ್ಕೆ ಇಂತಹ ದುರಂತಗಳು ಸಂಭವಿಸಿದರೆ ಇನ್ನೂ ಕೆಲವು ಕಡೆ ದಿಢೀರ್ ಅಪಾಯ ಎದುರಾಗುತ್ತದೆ.
ಆದರೆ ಕಾಂತಾರಾ ಸಿನಿಮಾ ದೊಡ್ಡ ಸಿನಿಮಾ ಆಗಿರುವ ಕಾರಣಕ್ಕೆ, ಎಲ್ಲರ ಕಣ್ಣು ಕಾಂತಾರಾ ಸಿನಿಮಾದ ಮೇಲೆ ಇದೆ. ಹೀಗಾಗಿ ಇದೆಲ್ಲಾ ಇಷ್ಟು ದೊಡ್ಡ ಸುದ್ದಿಯಾಗುತ್ತಿದೆ ಎಂದಿದ್ದಾರೆ ಅನೂಪ್ ಭಂಡಾರಿ ಅವರು. ಆದರೆ ಇದೆಲ್ಲವನ್ನೂ ಮೀರಿ ಕಾಂತಾರಾ ಸಿನಿಮಾ ಮತ್ತೊಂದು ದೊಡ್ಡ ಹಿಟ್ ಆಗುತ್ತದೆ ಎಂಬ ಆಶಯ ಕೂಡ ವ್ಯಕ್ತಪಡಿಸಿದ್ದಾರೆ. ಈ ಮೂಲಕ ರಂಗಿತರಂಗ, ವಿಕ್ರಾಂತ್ ರೋಣ ರೀತಿಯ ಭಾರಿ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾಗಳ ನಿರ್ದೇಶಕ ಅನೂಪ್ ಭಂಡಾರಿ ಅವರು ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾ ಬೆನ್ನಿಗೆ ನಿಂತು ಬೆಂಬಲ ನೀಡಿದ್ದಾರೆ. ನಿರ್ದೇಶಕ ಅನೂಪ್ ಭಂಡಾರಿ ಅವರ ಈ ಹೇಳಿಕೆ ಇದೀಗ ಕನ್ನಡ ಸಿನಿಮಾ ಇಂಡಸ್ಟ್ರಿ ಗಮನ ಸೆಳೆದಿದೆ.












Click it and Unblock the Notifications