ರಂಗಾಯಣ ರಘು ಅಭಿನಯದ ‘ಶಾಖಾಹಾರಿ’ ಫಸ್ಟ್ ಲುಕ್ ಹೆಂಗಿದೆ ಗೊತ್ತಾ?

ಕನ್ನಡ ಸಿನಿಮಾ ರಂಗಕ್ಕೆ ಇನ್ನೇನು 100 ವರ್ಷ ತುಂಬಲಿದೆ. ಹೀಗೆ ಸೆಂಚ್ಯುರಿ ಹೊಸ್ತಿಲಲ್ಲಿ ಇರುವ ಚಂದನವನದ ಅಂಗಳದಲ್ಲಿ ನೂರಾರು ಪೋಷಕ ನಟರು ಮಿಂಚಿದ್ದಾರೆ. ಆದ್ರೆ ಈ ಎಲ್ಲಾ ನಟರಿಗಿಂತ ಪೋಷಕ ಪಾತ್ರದಲ್ಲಿ ತುಂಬಾನೆ ಡಿಫರೆಂಟ್ ಅನಿಸೋದು ರಂಗಾಯಣ ರಘು ಅವರು. ಹೌದು, ಇಷ್ಟುದಿನ ಪೋಷಕ ಪಾತ್ರದಲ್ಲಿ ಮಿಂಚುತ್ತಿದ್ದ ರಂಗಾಯಣ ರಘು ಅವರು ಇದೀಗ ಹೀರೋ ಆಗಲು ಸಿದ್ಧರಾಗಿದ್ದಾರೆ.

ಯೆಸ್, ಕನ್ನಡ ಚಿತ್ರರಂಗದಲ್ಲಿ ತಮ್ಮದೇ ವಿಭಿನ್ನ ಅಭಿಯನದ ಮೂಲಕ ಛಾಪು ಮೂಡಿಸಿದ ರಂಗಾಯಣ ರಘು ಅವರು ನೂರಾರು ಸಿನಿಮಾದಲ್ಲಿ ಮಿಂಚಿದ್ದಾರೆ. ಅದರಲ್ಲೂ ಕನ್ನಡಿಗರ ರತ್ನ ಪುನೀತ್ ರಾಜ್‌ಕುಮಾರ್ ಅವರ ಸಿನಿಮಾಗಳಲ್ಲಿ ರಂಗಾಯಣ ರಘು ಅವರ ಪೋಷಕ ಪಾತ್ರ ನೋಡುವುದೇ ಒಂದು ಹಬ್ಬ. ಹೀಗೆ ಪೋಷಕ ಪಾತ್ರಕ್ಕೆ ಜೀವ ತುಂಬುತ್ತಾ, ಕನ್ನಡ ಸಿನಿ ಪ್ರೇಕ್ಷಕರನ್ನು ರಂಜಿಸುತ್ತಿದ್ದ ರಂಗಾಯಣ ರಘು ಅವರು ಇದೀಗ ಫುಲ್ ಟೈಂ ಹೀರೋ ಆಗ್ತಿದ್ದಾರೆ.

Rangayana Raghu attracts fans with first look of his new Kannada movie Shakahari

ರಂಗಾಯಣ ರಘು + ಹೊಸ ನಿರ್ದೇಶಕ = ??

ಹೌದು ರಂಗಾಯಣ ರಘು ಮುಖ್ಯಭೂಮಿಕೆಯಲ್ಲಿ ನಟಿಸಿರುತ್ತಿರುವ 'ಶಾಖಾಹಾರಿ' ಸಿನಿಮಾ ಫಸ್ಟ್ ಲುಕ್ ರಿಲೀಸ್ ಆಗಿದೆ. ಹಿಂದೆ ಯೋಗರಾಜ್ ಭಟ್ ಅವರು, ಇದೇ ಸಿನಿಮಾದ ಟೈಟಲ್ ಪೋಸ್ಟರ್ ಅನಾವರಣ ಮಾಡಿದ್ದರು. ಇದೀಗ ಶಾಖಾಹಾರಿ ಸಿನಿಮಾದಲ್ಲಿನ ರಂಗಾಯಣ ರಘು ಅವರ ಲುಕ್ ರಿಲೀಸ್ ಮಾಡಲಾಗಿದ್ದು, ಸಿನಿ ರಸಿಕರಲ್ಲಿ ಕುತೂಹಲ ಡಬಲ್ ಆಗಿದೆ. ಇನ್ನೂ ಸಂದೀಪ್ ಸುಂಕದ್ ಶಾಖಾಹಾರಿ ಚಿತ್ರದ ಸೂತ್ರಧಾರ. ಈಗಾಗ್ಲೇ ಕೆಲ ಕಿರುಚಿತ್ರ ನಿರ್ದೇಶಿಸಿದ ಅವರಿಗೆ, ಇದು ಮೊದಲನೇ ಸಿನಿಮಾ. ಸಹ ನಿರ್ದೇಶಕನಾಗಿ & ಬರಹಗಾರರಾಗಿ ಅನುಭವ ಪಡೆದ ಸಂದೀಪ್ 'ಶಾಖಾಹಾರಿ' ಸಿನಿಮಾಗೆ ಕಥೆ ಬರೆದು ನಿರ್ದೇಶನ ಕೂಡ ಮಾಡುತ್ತಿದ್ದಾರೆ.

ಸಿನಿಮಾದ ಕಥೆ ಏನು ಗೊತ್ತಾ?

ಮಲೆನಾಡು ತೀರ್ಥಹಳ್ಳಿಯ ಒಂದು ಊರಲ್ಲಿ ನಡೆಯುವ ಒಂದಷ್ಟು ನಿಗೂಢ ಘಟನೆ ಸುತ್ತ ಈ ಸಿನಿಮಾದ ಕಥೆ ಸಾಗುತ್ತದೆ. ಹೋಟೆಲ್‌ನಲ್ಲಿ ಅಡುಗೆ ಮಾಡುವ ಭಟ್ಟನಾಗಿ, ರಂಗಾಯಣ ರಘು ಅವರು ಈ ಸಿನಿಮಾದಲ್ಲಿ ಮಿಂಚಲಿದ್ದಾರೆ. ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಗೋಪಾಲಕೃಷ್ಣ ದೇಶಪಾಂಡೆ ನಟಿಸಿದ್ದಾರೆ. ಸುಜಯ್ ಶಾಸ್ತ್ರಿ ಕೂಡ ಈ ಸಿನಿಮಾದ ಒಂದು ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಪ್ರತಿಮಾ ನಾಯಕ್, ಹರಿಣಿ, ವಿನಯ್ ಮತ್ತು ಶ್ರೀಹರ್ಷ ಗೋಭಟ್ಟ ಸೇರಿದಂತೆ ನಿಧಿ ಹೆಗ್ಡೆ ಮುಂತಾದವರು ಈ ಸಿನಿಮಾದ ಪಾತ್ರ ವರ್ಗಕ್ಕೆ ಸಾಥ್ ಕೊಟ್ಟಿದ್ದಾರೆ.

ಮಲೆನಾಡಿನಲ್ಲೇ ಕಂಪ್ಲೀಟ್ ಶೂಟಿಂಗ್

ಇನ್ನು ರಾಜೇಶ್ ಕೀಳಂಬಿ ಹಾಗೂ ರಂಜಿನಿ ಪ್ರಸನ್ನ ಅವರು ಜೊತೆಗೂಡಿ ಕೀಳಂಬಿ ಮೀಡಿಯಾ ಲ್ಯಾಬ್ ಸಂಸ್ಥೆ ಮೂಲಕ 'ಶಾಖಾಹಾರಿ' ಸಿನಿಮಾವನ್ನ ನಿರ್ಮಾಣ ಮಾಡ್ತಿದ್ದಾರೆ. ವಿಶ್ವಜಿತ್ ರಾವ್ ಛಾಯಾಗ್ರಹಣ, ಶಶಾಂಕ್ ನಾರಾಯಣ ಸಂಕಲನ, ಮಯೂರ್ ಅಂಬೆಕಲ್ಲು ಸಂಗೀತ ಈ ಚಿತ್ರಕ್ಕೆ ಇದ್ದು, ಆಶಿಕ್ ಕುಸುಗೊಳ್ಳಿ ಕೂಡ ಸಾಥ್ ಕೊಟ್ಟಿದ್ದಾರೆ. ಇನ್ನು ಈ ಸಿನಿಮಾದ ಚಿತ್ರೀಕರಣ ಮುಗಿದಿದ್ದು, ಶೀಘ್ರದಲ್ಲೇ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತವೆ. ಪೂರ್ತಿ ಮಲೆನಾಡಿನಲ್ಲೇ ಶೂಟ್ ಆಗಿರುವ 'ಶಾಖಾಹಾರಿ' ಚಿತ್ರ ಇದೀಗ ತನ್ನ ಫಸ್ಟ್ ಲುಕ್ ಮೂಲಕ ಗಮನ ಸೆಳೆದಿದೆ.

Rangayana Raghu attracts fans with first look of his new Kannada movie Shakahari

ದುನಿಯಾ ಸಿನಿಮಾ ಮೂಲಕ ಕನ್ನಡಿಗರ ಪ್ರತಿ ಮನೆಯಲ್ಲೂ ರಂಗಾಯಣ ರಘು ಅವರು ಸುದ್ದಿಯಾದರು. ಹಾಗೇ ಅದಕ್ಕೂ ಮೊದಲೇ ಅವರು ಕನ್ನಡ ಸಿನಿಮಾಗಳಲ್ಲಿ ಮಿಂಚಿದ್ರು. ಒಟ್ನಲ್ಲಿ ಪೋಷಕ ಪಾತ್ರದಲ್ಲಿ ಕನ್ನಡಿಗರ ಮನ ಗೆದ್ದಿದ್ದ ಹಿರಿಯ ನಟ ರಂಗಾಯಣ ರಘು, ಇದೀಗ ಮುಖ್ಯಭೂಮಿಕೆಯಲ್ಲಿ ಕೂಡ ಮಿಂಚಲು ಬರುತ್ತಿದ್ದಾರೆ. ಇದೀಗ ರಿಲೀಸ್ ಆಗಿರುವ 'ಶಾಖಾಹಾರಿ' ಸಿನಿಮಾದ ಫಸ್ಟ್ ಲುಕ್ ಅಭಿಮಾನಿಗಳ ಕುತೂಹಲವನ್ನ ಮತ್ತಷ್ಟು ಹೆಚ್ಚು ಮಾಡಿದೆ. ಅಲ್ಲದೆ 'ಶಾಖಾಹಾರಿ' ದೊಡ್ಡ ಹಿಟ್ ಕೊಡುವ ಮುನ್ಸೂಚನೆ ನೀಡುತ್ತಿದೆ. ಈ ಪ್ರಶ್ನೆಗಳಿಗೆ ಉತ್ತರ ಪಡೆಯಲು ಇನ್ನಷ್ಟು ದಿನ ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+