ಆಸ್ತಿ ಅಡವಿಟ್ಟ ಖ್ಯಾತ ನಟಿ ರಾಕುಲ್ ಪತಿ, ಮದುವೆಯಾದ ಒಂದೇ ವರ್ಷಕ್ಕೆ ಏನಾಯ್ತು?
ಕನ್ನಡದ "ಗಿಲ್ಲಿ" ಸಿನಿಮಾದಲ್ಲಿ ನಟಿಸಿದ್ದ ರಾಕುಲ್ ಪ್ರೀತ್ ಸಿಂಗ್ ಇಂದು ದೊಡ್ಡ ಸ್ಟಾರ್ ನಟಿಯಾಗಿ ಬೆಳೆದಿದ್ದಾರೆ. ತಮಿಳು, ತೆಲುಗು, ಬಾಲಿವುಡ್ ಸೇರಿದಂತೆ ಹಲವು ಭಾಷೆಗಳಲ್ಲಿ ಮಿಂಚುತ್ತಿರುವ ಅವರು ಬಾಲಿವುಡ್ ನಿರ್ಮಾಪಕ, ನಟ ಜಾಕಿ ಭಗ್ನಾನಿ ಅವರೊಂದಿಗೆ ಒಂದು ವರ್ಷದ ಹಿಂದೆಯಷ್ಟೇ ಮದುವೆಯಾಗಿದ್ದರು. ರಾಕುಲ್ ಕೂಡ ಟಾಪ್ ನಟಿಯಾಗಿರುವುದರಿಂದ ಕೋಟಿ ಆಸ್ತಿಯನ್ನು ಹೊಂದಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ, ಮದುವೆಯಾದ ಒಂದೇ ವರ್ಷದಲ್ಲಿ ರಾಕುಲ್ ಪತಿ ಜಾಕಿ ಅವರು ತಮ್ಮ ಆಸ್ತಿ ಅಡ ಇಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಅವರೇ ಬಹಿರಂಗವಾಗಿ ಹೇಳಿಕೊಂಡು ಕಾರಣವೂ ನೀಡಿದ್ದಾರೆ.
ಗೋವಾದಲ್ಲಿ ಕಳೆದ ವರ್ಷ ರಾಕುಲ್-ಜಾಕಿ ಅವರ ಮದುವೆ ಅದ್ಧೂರಿಯಾಗಿ ನೆರವೇರಿತ್ತು. ಇಬ್ಬರೂ ಕೂಡ ಆರ್ಥಿಕವಾಗಿ ಶ್ರೀಮಂತ ಕುಟುಂಬಗಳು ಎಂದು ಎಲ್ಲರ ಕಣ್ಣುಕುಕ್ಕುವಂತಿದ್ದರು. ಇತ್ತ ರಾಕುಲ್ ಸಿನಿಮಾ ಮೂಲಕ ಕೋಟಿ ಕೋಟಿ ಸಂಪಾದನೆ ಮಾಡಿದರೆ, ಅತ್ತ ಪತಿ ಸಿನಿಮಾ ನಿರ್ಮಾಪಕರಾಗಿ ಕೋಟಿಗಳ ಒಡೆಯ ಎಂದು ಕರೆಸಿಕೊಂಡಿದ್ದರು. ಇನ್ನೇನು ಇವರ ವೈವಾಹಿಕ ಜೀವನ ಚೆನ್ನಾಗಿದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಜಾಕಿ ಅವರು ಮದುವೆಯಾದ ಒಂದೇ ವರ್ಷಕ್ಕೆ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾಗಿ ಹೇಳಿಕೊಂಡಿದ್ದಾರೆ.

ಈ ವಿಚಾರ ಕೇಳಿ ಎಲ್ಲರೂ ಶಾಕ್‌ಗೆ ಒಳಗಾಗಿದ್ದಾರೆ. ಕೋಟಿ ಕೋಟಿ ಆಸ್ತಿಯ ಒಡೆಯರಾದ ರಾಕುಲ್ ದಂಪತಿಗೆ ಏನಾಯ್ತು? ಆರ್ಥಿಕ ಸಂಕಷ್ಟಕ್ಕೆ ಸಿಲುಕಲು ಹೇಗೆ ಸಾಧ್ಯ? ಎಂದು ಪ್ರಶ್ನೆ ಕೇಳಿದ್ದಾರೆ. ಆಶ್ವರ್ಯವೆನಿಸಿದರೂ ಇದು ನಿಜ, ಈ ಬಗ್ಗೆ ಖುದ್ದು ಜಾಕಿ ಅವರೇ ಸ್ಪಷ್ಟನೆ ನೀಡಿದ್ದಾರೆ. ಬಾಲಿವುಡ್ ನಟರಾದ ಟೈಗರ್ ಶ್ರಾಫ್ ಮತ್ತು ಅಕ್ಷಯ್ ಕುಮಾರ್ ನಟನೆಯ ಹೈ-ಬಜೆಟ್ ಚಿತ್ರ ಬಡೇ ಮಿಯಾ ಚೋಟೆ ಮಿಯಾ ರಿಲೀಸ್ ಆಗಿತ್ತು. ಆದರೆ ಈ ಸಿನಿಮಾದಿಂದಾಗಿ ಬಾಕ್ಸ್ ಆಫೀಸ್‌ನಲ್ಲಿ ಕಳಪೆ ಪ್ರದರ್ಶನದ ಪರಿಣಾಮ ಈ ಸಿನಿಮಾ ನಿರ್ಮಾಪಕನಾಗಿ ದೊಡ್ಡ ಆರ್ಥಿಕ ನಷ್ಟವನ್ನು ಅನುಭವಿಸಿದ್ದಾಗಿ ಹೇಳಿಕೊಂಡಿದ್ದಾರೆ.

ನಮ್ಮ ನೋವು ಯಾರಿಗೂ ಅರ್ಥವಾಗಲ್ಲ!
ಇತ್ತೀಚೆಗೆ ಅವರು ಈ ಬಗ್ಗೆ ಮಾತನಾಡಿದ್ದು, ಮೊದಲ ಬಾರಿಗೆ ಸಿನಿಮಾ ಹಿಂದಿನ ತಮ್ಮ ನೋವನ್ನು ಬಿಚ್ಚಿಟ್ಟಿದ್ದಾರೆ. ನಮ್ಮ ಸಿನಿಮಾ ಹಾಕಿದ ಹಣಕ್ಕಿಂತ ಬಾಕ್ಸ್ ಆಫೀಸ್‌ನಲ್ಲಿ ಶೇಕಡಾ 50ಕ್ಕಿಂತ ಕಡಿಮೆ ಗಳಿಸಿತು. ನಾವು ಅನುಭವಿಸಿದ ನೋವುಗಳನ್ನು ಯಾರೂ ನಿಜವಾಗಿಯೂ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಈ ಚಿತ್ರವನ್ನು ನಿರ್ಮಿಸಲು, ನಾವು ನಮ್ಮ ಮನೆಯನ್ನು ಅಡ ಇಟ್ಟಿದ್ದೇವೆ. ಆದರೆ ಈಗ ಈ ಸಮಸ್ಯೆಗಳ ಬಗ್ಗೆ ಮಾತನಾಡುವುದು ಅರ್ಥಹೀನ. ನಾನು ನನ್ನ ಗುರಿಯನ್ನು ತಲುಪಲು ಸಾಧ್ಯವಾಗದಿದ್ದರೂ, ಸಿನಿಮಾದಿಂದ ಹಣ ಗಳಿಸುವುದು ನನ್ನ ಉದ್ದೇಶ ಎಂದು ಜಾಕಿ ಹೇಳಿದ್ದಾರೆ.

ಸಿನಿಮಾದ ಅಂತ್ಯವು ನನಗೆ ಒಂದು ಅಮೂಲ್ಯವಾದ ಜೀವನದ ಪಾಠವನ್ನು ಹೇಳಿತು. ದೊಡ್ಡ ಪ್ರಮಾಣದ ನಿರ್ಮಾಣ ಮಾತ್ರ ಸಿನಿಮಾದ ಯಶಸ್ಸನ್ನು ಖಚಿತಪಡಿಸುವುದಿಲ್ಲ ಎಂಬುದನ್ನು ತೋರಿಸಿದೆ. ನಮ್ಮ ವಿಷಯದಲ್ಲಿ ಪ್ರೇಕ್ಷಕರ ಅಸಮರ್ಥತೆಯ ಹಿಂದಿನ ಕಾರಣಗಳನ್ನು ನಾವು ಪರಿಗಣಿಸಬೇಕು. ಪ್ರೇಕ್ಷಕರ ತೀರ್ಪು ಯಾವಾಗಲೂ ಸರಿಯಾಗಿರುತ್ತದೆ. ನಾನು ಇದರಿಂದಲೂ ಕಲಿಯುತ್ತೇನೆ. ಪ್ರೇಕ್ಷಕರನ್ನು ನಾನು ದೂರುವುದಿಲ್ಲ. ಇಂತಹ ದೋಷಗಳು ಮತ್ತೆ ಎದುರಾಗದಂತೆ ನೋಡಿಕೊಳ್ಳುತ್ತೇನೆ ಎಂದು ಜಾಕಿ ಭಗ್ನಾನಿ ಹೇಳಿದ್ದಾರೆ.












Click it and Unblock the Notifications