ರಕ್ಷಕ್ ಬುಲೆಟ್‌ಗೆ ರಸಿಕತೆ ಇಲ್ಲ, ಹುಡುಗಿಯರ ಮೇಲೆ ಇಂಟ್ರೆಸ್ಟ್ ಕೂಡ ಇಲ್ಲ: ರಮೋಲಾ
ಭರ್ಜರಿ ಬ್ಯಾಚುಲರ್ಸ್ ರಿಯಾಲಿಟಿ ಶೋನ ಈ ಸೀಸನ್‌ನಲ್ಲಿ ರಕ್ಷಕ್ ಬುಲೆಟ್ ಹಾಗೂ ರಮೋಲಾ ಜೋಡಿ ಸಖತ್ ಮೋಡಿ ಮಾಡಿತ್ತು. ಕೊನೆಯಲ್ಲಿ ರಕ್ಷಕ್ ಜೋಡಿನೇ ಗೆಲ್ಲೋದು ಎಂಬ ನಿರೀಕ್ಷೆಯೂ ಸಾಕಷ್ಟಿತ್ತು. ಇನ್ನು ಈ ಜೋಡಿಯ ಫನ್ನಿ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ರನ್ನರ್ ಅಪ್ ರಕ್ಷಕ್ ಬುಲೆಟ್ ಹಾಗೂ ರಮೋಲಾ ಇತ್ತೀಚಿನ ಸಂದರ್ಶನದಲ್ಲಿ ಅಚ್ಚರಿ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಇದೇ ವೇಳೆ ರಕ್ಷಕ್‌ಗೆ ರಸಿಕತೆ ಇಲ್ಲ, ಹುಡುಗಿಯರ ಮೇಲೆ ಆಸಕ್ತಿ ಇಲ್ಲ ಎಂದು ರಮೋಲಾ ಹೇಳಿಕೊಂಡಿದ್ದಾರೆ.
'ನಿಜ ಹೇಳಬೇಕು ಅಂದ್ರೆ ನಮ್ಮಿಬ್ಬರ ನಡುವೆ ಬಾಂಡಿಂಗ್ ಚೆನ್ನಾಗಿತ್ತು. ರಕ್ಷಕ್ ಹೊರಗೆ ಮಾಸ್ ಆದ್ರೂ ತುಂಬಾ ಮುಗ್ಧ. ಮೊದಲೇ ನಾನು ಈ ಶೋನಲ್ಲಿ ರಕ್ಷಕ್ ಪಾರ್ಟ್‌ನರ್ ಆಗಿ ಬರಬೇಕು ಅಂತಿದ್ದೆ. ಅದೇ ನಿಜವಾಯ್ತು, ಇವನಿಗೆ ಡಿಂಪಲ್ ಬೀಳುತ್ತೆ. ತುಂಬಾ ಕ್ಯೂಟ್ ಆಗಿ ಕಾಣ್ತಾನೆ. ರಕ್ಷಕ್‌ಗೆ ಹುಡುಗಿಯರಲ್ಲಿ ಇಂಟ್ರೆಸ್ಟೇ ಇಲ್ಲ. ಮೊದಲು ಇವನಿಗೆ ಆಸಕ್ತಿ ತರಿಸಿ, ಆಮೇಲೆ ಹುಡುಗಿಯರನ್ನ ಹುಡುಕೋಕೆ ಬೇಕಾದ ಕ್ವಾಲಿಟೀಸ್ ತುಂಬಬೇಕಿತ್ತು' ಎಂದಿದ್ದಾರೆ ರಮೋಲಾ.

'ರವಿಚಂದ್ರನ್ ಅವರಿಂದಲೇ ರಕ್ಷಕ್ ನನಗೆ ಮುತ್ತು ಕೊಟ್ಟ. ಈ ಹಿಂದೆ ರಕ್ಷಕ್ ಬಗ್ಗೆ ವೇದಿಕೆಯಲ್ಲಿ ಹೇಳುವಾಗ ವಾಕ್ಯ ರಚನೆ ನನಗೆ ಸರಿಯಾಗಿ ಬರಲಿಲ್ಲ. ರಕ್ಷಕ್‌ಗೆ ಅದೇ ಇಲ್ಲ ಎಂದು ಹೇಳಿದ್ದು ಟ್ರೋಲ್ ಆಗಿತ್ತು. ಅದೇನು ಅಂದ್ರೆ "ರಸಿಕತೆ ಇಲ್ಲ" ಅಂತಾ ಹೇಳೋಕೆ ಬಂದೆ. ಆ ಮೇಲೆ ಕಾಮೆಂಟ್‌ಗಳಲ್ಲೂ ರಸಿಕತೆ ಅಂತ ತುಂಬಾ ಜನ ಹೇಳಿದ್ರು' ಎಂದು ಆ ಎಡವಟ್ಟಿನ ಬಗ್ಗೆ ಹೇಳಿದ್ದಾರೆ.
ಕಲ್ಲಾಗಿದ್ದ ನನ್ನ ಶಿಲೆ ಮಾಡಿದ್ದು ರಮೋಲಾ!
ಇನ್ನು ರಮೋಲಾ ತಮ್ಮ ಪಾರ್ಟ್‌ನರ್ ಆಗಿ ಸಿಕ್ಕ ವಿಚಾರವಾಗಿ ಮಾತನಾಡಿರುವ ರಕ್ಷಕ್, 'ಶೋಗೆ ಹೋದ ಮೇಲೆ ನಿಜಕ್ಕೂ ಚೇಂಜ್ ಆಗಿದ್ದೀನಿ. ನಾನು ಜೀವನದಲ್ಲಿ ಒಬ್ಬನೇ ಫೈಟ್ ಮಾಡಿಕೊಂಡು ಬೆಳೆದವನು. ನನ್ನ ಆಟಿಟ್ಯೂಡ್‌ನ ಚೇಂಜ್ ಮಾಡಿಸಿದ್ದೇ ಭರ್ಜರಿ ಬ್ಯಾಚುಲರ್ಸ್. ರಮೋಲಾ ಅಂತಹ ಏಂಜಲ್‌ನ ಕೊಟ್ರೆ ಯಾರ್ ತಾನೇ ಮಾತು ಕೇಳಲ್ಲ ಹೇಳಿ? ಇಂತಹ ಬ್ಯೂಟಿಫುಲ್ ಹುಡುಗಿ ಸಿಕ್ಕರೆ ಯಾರು ಬೇಕಾದ್ರೂ ಬದಲಾಗ್ತಾರೆ. ಇದು ತುಂಬಾ ಖುಷಿ ಕೊಟ್ಟ ವಿಚಾರ' ಎಂದು ಕಾಲೆಳೆದಿದ್ದಾರೆ.
'ರಮೋಲಾನ ಮುಟ್ಟೋಕೆ ನನಗೆ ನಾಚಿಕೆ ಆಗ್ತಿತ್ತು. ಹಾಗಿದ್ದಾಗ ಅವರಿಗೆ ಮುತ್ತು ಕೊಟ್ಟಿದ್ದೀನಿ ಅನ್ನೋವಷ್ಟು ಬದಲಾವಣೆ ನನ್ನಲ್ಲಿ ಮೂಡಿದೆ. ನಾನು ಕಲ್ಲು, ರಮೋಲಾ ಅವರು ಹುಳಿ ಇತ್ತು. ಅವರು ನನ್ನ ಶಿಲೆಯನ್ನಾಗಿ ಮಾಡಿದರು. ರಮೋಲಾ ಅವರು ಸಿಕ್ಕ ಮೇಲೆ ಇಬ್ಬರಿಗೂ ಚೆನ್ನಾಗಿತ್ತು. ಅದರಿಂದಲೇ ಜನ ನಮ್ಮನ್ನ ರನ್ನರ್ ಅಪ್‌ವರೆಗೆ ಕರೆದೊಯ್ದರು' ಎಂದು ಥ್ಯಾಂಕ್ಸ್ ಹೇಳಿದ್ದಾರೆ.












Click it and Unblock the Notifications