Bigg Boss: ಬಿಗ್‌ಬಾಸ್ ಮನೆಗೆ ಬಂದ ಸೆಲೆಬ್ರಿಟಿ: ಎಗರೆಗರಿ ಮುತ್ತು ಕೊಟ್ಟ ರಜತ್!
ಬಿಗ್‌ಬಾಸ್ ಮನೆಗೆ ಸೆಲೆಬ್ರಿಟಿ ಒಬ್ಬರು ಎಂಟ್ರಿ ಕೊಟ್ಟಿದ್ದಾರೆ. ಇದರಿಂದ ಸಿಕ್ಕಾಪಟ್ಟೆ ಖುಷಿಯಾದ ರಜತ್ ಅವರ ಸಂತೋಷವನ್ನು ಮುತ್ತು ಕೊಡುವ ಮೂಲಕ ವ್ಯಕ್ತಪಡಿಸಿದ್ದಾರೆ. ಇದರಿಂದ ಮನೆ ಮಂದಿಯಲ್ಲಾ ಶಾಕ್ ಆಗಿದ್ದು ಕಣ್ಣು ಬಾಯಿ ಬಿಟ್ಟುಕೊಂಡು ರಜತ್ ಕುಣಿದಾಟವನ್ನು ನೋಡಿದ್ದಾರೆ. ಅಷ್ಟಕ್ಕೂ ಆ ಸೆಲೆಬ್ರಿಟಿ ಯಾರು ಗೊತ್ತಾ? ರಜತ್ ಮುತ್ತು ಕೊಟ್ಟಿದ್ದು ಯಾರಿಗೆ ಎಂದು ಗೊತ್ತಾದರೆ ನೀವು ಇಂದಿನ ಬಿಗ್ ಬಾಸ್ ಸಂಚಿಕೆಯನ್ನು ನೋಡುವುದನ್ನ ಮಿಸ್ ಮಾಡೋದೇ ಇಲ್ಲ.
ಹೌದು... ಬಿಗ್‌ಬಾಸ್ ಮನೆಗೆ ವೈಲ್ಡ್ ಕಾರ್ಡ್ ಆಗಿ ಎಂಟ್ರಿ ಕೊಟ್ಟ ರಜತ್ ಕೆಲವೇ ದಿನಗಳಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. ಮೂಲ ಸ್ಪರ್ಧಿಗಳಿಗೆ ಠಕ್ಕರ್ ಕೊಡ್ತಾ ಭರ್ಜರಿಯಾಗಿ ಆಟ ಆಡುತ್ತಿರುವ ರಜತ್ ಬಿಗ್‌ಬಾಸ್ ಮನೆಯ ಇತರ ಸ್ಪರ್ಧಿಗಳಿಗೆ ಕಠಿಣ ಸ್ಪರ್ಧಿ ಅಂದರೆ ತಪ್ಪಾಗಲ್ಲ. ಈ ವಾರದ 'ಎಸ್ ಆರ್ ನೋ' ಟಾಸ್ಕ್ ವೇಳೆ ತಲೆ ಕೂದಲನ್ನು ನೋ ಎನ್ನದೆ ತೆಗೆಸಿಕೊಂಡ ರಜತ್ ಬಿಗ್‌ಬಾಸ್ ವೀಕ್ಷಕರಿಗೆ ತುಂಬಾನೇ ಹತ್ತಿರವಾಗಿದ್ದಾರೆ.

ಬಿಗ್‌ಬಾಸ್ ಇತಿಹಾಸದಲ್ಲೇ ಇದು ಮೊದಲ ಬಾರಿಗೆ ವೈಲ್ಡ್ ಕಾರ್ಡ್ ಸ್ಪರ್ಧಿಯೊಬ್ಬರು ಕೆಲವೇ ದಿನದಲ್ಲಿ ವೀಕ್ಷಕರಿಗೆ ಹತ್ತಿರವಾಗಿರುವುದು ಅಂದರೆ ತಪ್ಪಾಗಲ್ಲ. ಇದರಿಂದಾಗಿ ಬಿಗ್‌ಬಾಸ್ ಇತ್ತೀಚೆಗೆ ವೀಕ್ಷಕರಿಗೆ ಭಾರೀ ಕೂತೂಹಲವನ್ನು ಮೂಡಿಸಿದೆ. ಇನ್ನೂ ದಿನದಿಂದ ದಿನಕ್ಕೆ ಬಿಗ್‌ಬಾಸ್ ಮನೆಯಲ್ಲಿ ಆಟ ಕಠಿಣವಾಗುತ್ತಿದ್ದು, ಮುಖವಾಡಗಳು ಕಳಚಿ ಬೀಳುತ್ತಿವೆ.
ಗುಂಪುಗಾರಿಕೆಗೆ ತೆರೆ ಬೀಳುವ ಲಕ್ಷಣಗಳು ಕಾಣಿಸುತ್ತಿದ್ದು ಅಸಲಿ ಯಾವುದು ನಕಲಿ ಯಾವುದು ಎಲ್ಲವೂ ಸ್ಪಷ್ಟವಾಗಿ ದೊಡ್ಮನೆಯಲ್ಲಿ ಕಾಣಿಸತೊಡಗಿದೆ. ಒಂದೆಡೆ ಗುಂಪುಗಾರಿಕೆ ಆಟ, ಮತ್ತೊಂದೆಡೆ ವೈಯಕ್ತಿಕ ಆಟ, ಮಗದೊಂದು ಕಡೆ ಆಟವೇ ಆಡದ ಗುಂಪು ಇವೆಲ್ಲವೂ ಸ್ಪಷ್ಟವಾಗಿ ಕಾಣಿಸುತ್ತಿವೆ. ಇನ್ನೂ ರಜತ್ ಬಗ್ಗೆ ಹೇಳುವ ಹಾಗೇ ಇಲ್ಲ. ಅವರ ನೇರ ನುಡಿ, ಆಟದಿಂದ ವೀಕ್ಷಕರಿಗೆ ಹತ್ತಿರವಾಗುತ್ತಲೇ ಇದ್ದಾರೆ. ಇಂದಿನ ಟಾಸ್ಕ್‌ನಲ್ಲೂ ರಜತ್ ಸಖತ್ ಕಾಮಿಡಿಯಾಗಿ ಆಟ ಆಡಿರುವುದು ಕಂಡು ಬಂದಿದೆ.

ಬಿಗ್‌ಬಾಸ್ ಮನೆಗೆ ಬಂದ ಸೆಲೆಬ್ರಿಟಿ
ಇಂದಿನ ಸಂಚಿಕೆಯ ಹೊಸ ವಿಡಿಯೋ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಬಿಗ್‌ಬಾಸ್ ಮನೆಯಲ್ಲಿ ಮಂಜು ಅವರು ಸೆಲೆಬ್ರಿಟಿ ಆಗಿದ್ದಾರೆ. ಇದಕ್ಕೆ ಖುಷಿಯಾಗಿ ಓಡೋಡಿ ಬಂದ ರಜತ್ ಸರ್.... ನಾನು ನಿಮ್ಮ ಅಭಿಮಾನಿ ಸರ್ ಎಂದು ಕೈ ಕುಲುಕಿದ್ದಾರೆ. ಓಡೋಡಿ ಬಂದ ರಜತ್ ಅವರನ್ನು ಮಂಜು ಅವರ ಬಾಡಿಗಾರ್ಡ್ ಆದ ತ್ರಿವಿಕ್ರಮ್ ಅವರು ತಡೆಯುತ್ತಾರೆ. ಆದರೂ ರಜತ್ ನುಗ್ಗುತ್ತಾ ಸೆಲೆಬ್ರಿಟಿ ಮಂಜು ಬಳಿ ಪ್ರಯತ್ನ ಮಾಡುತ್ತಾರೆ.
ಇದೇ ವೇಲೆ ಇತ್ತ ಐಶ್ವರ್ಯ ಅವರು ಕೂಡ ನಿರೂಪರಣೆ ಮಾಡುತ್ತಿರುವುದು ಕಂಡು ಬರುತ್ತದೆ. ಸೆಲೆಬ್ರಿಟಿ ಬಂದಾಗ ಫ್ಯಾನ್ಸ್ ಅಬ್ಬರದ ಬಗ್ಗೆ ಐಶ್ವರ್ಯ ವಿವರಿಸುತ್ತಾರೆ. ಈ ಪ್ರೋಮೋವನ್ನು ನೋಡಿದರೆ, ಜನರ ನಡುವೆ ಸೆಲೆಬ್ರಿಟಿ ಬಂದಾಗ ಸಂದರ್ಭ ಹೇಗೆ ಬದಲಾಗುತ್ತದೆ ಎನ್ನುವುದನ್ನು ಸ್ಪರ್ಧಿಗಳು ತೋರಿಸುತ್ತಿರುವಂತೆ ಕಂಡು ಬಂದಿದೆ.
ಎಗರೆಗರಿ ಮುತ್ತು ಕೊಟ್ಟ ರಜತ್
ಇನ್ನೂ ಇದೇ ವೇಳೆ ತ್ರಿವಿಕ್ರಮ್ ಅವರಿಂದ ತಪ್ಪಿಸಿಕೊಂಡು ಬಂದ ರಜತ್ ಎಗರಿ ಸೆಲೆಬ್ರಿಟಿ ಮಂಜು ಅವರಿಗೆ ಮುತ್ತು ಕೊಟ್ಟಿದ್ದಾರೆ. ಇದರಿಂದ ಅಲ್ಲಿದ್ದವರೆಲ್ಲಾ ಜೋರಾಗಿ ಕಿರುಚಾಡುವುದು ಕಂಡು ಬಂದಿದೆ. ಈ ವೀಡಿಯೋವನ್ನು ನೋಡಿದ ಬಿಗ್‌ಬಾಸ್ ವೀಕ್ಷಕರು ಸಿಕ್ಕಾಪಟ್ಟೆ ನಗಾಡಿದ್ದಾರೆ.
ತಕ್ಷಣ ರಜತ್ ಅವರನ್ನು ದೂರಕ್ಕೆ ಕಳುಹಿಸಿ ಬಂದ ತ್ರಿವಿಕ್ರಮ್ ಮಂಜು ಅವರಿಗೆ ಸರ್... ಏನಾದ್ರು ಆಯ್ತಾ ಸರ್ ಎಂದು ಕೇಳುತ್ತಾರೆ. ಒಟ್ಟಿನಲ್ಲಿ ಇಂದಿನ ಸಂಚಿಕೆ ಸಖತ್ ಕಾಮಿಡಿಯಾಗಿದ್ದು ವೀಡಿಯೋವೇ ನೋಡುವ ಕುತೂಹಲವನ್ನು ಸೃಷ್ಟಿಸಿದೆ. ರಜತ್ ಹಾಗೂ ಮಂಜು ಅವರ ಕಾಮಿಡಿಗೆ ಜನ ನಕ್ಕುನಕ್ಕು ಸುಸ್ತಾಗಿದ್ದಾರೆ.
ರಜತ್ ಜೊತೆ ಚೈತ್ರಾ ಗಲಾಟೆ
ಬಿಗ್‌ಬಾಸ್ ಮನೆಯಲ್ಲಿ ಮತ್ತೆ ಚೈತ್ರಾ ಜಗಳವಾಡಿದ್ದಾರೆ. ಚೈತ್ರಾ ಕೂಗಾಟಕ್ಕೆ ರಜತ್ ತಾಳ್ಮೆ ಕಟ್ಟೆ ಒಡೆದು ಹೋಗಿದೆ. ಆಟದ ವೇಳೆ ಚೈತ್ರಾ ದೊಡ್ಡದಾಗಿ ಜಗಳವಾಡಿರುವುದು ಇಂದಿನ ವೀಡಿಯೋದಲ್ಲಿ ಕಂಡು ಬಂದಿದೆ. ರಜತ್ ಕೂಡ ಚೈತ್ರಾಗೆ ಸರಿಯಾಗೇ ಕ್ಲಾಸ್ ತೆಗೆದುಕೊಂಡಿದ್ದಾರೆ.
ಬಿಗ್‌ಬಾಸ್ ಕ್ಯಾಪ್ಟನ್ಸಿ ಟಾಸ್ಕ್ ಅನ್ನು ಸ್ಪರ್ಧಿಗಳಿಗೆ ನೀಡಿದ್ದಾರೆ. ಈ ಟಾಸ್ಕ್ ವೇಳೆ ಚೈತ್ರಾ ಹಾಗೂ ರಜತ್ ಜೋರು ಗಲಾಟೆ ಮಾಡಿದ್ದಾರೆ. ಅಲ್ಲದೆ ಚೈತ್ರಾ ಬಾಯಿಗೆ ಮನೆ ಮಂದಿಯೆಲ್ಲಾ ಸುಸ್ತಾಗಿ ಹೋಗಿದ್ದು ತುಂಬಾ ಕಿರಿಕಿರಿಯಾಗುತ್ತಿದೆ ಎಂದೆಲ್ಲಾ ಮಾತನಾಡಿಕೊಳ್ಳುತ್ತಿದ್ದಾರೆ. ಜೊತೆಗೆ ಚೈತ್ರಾ ಅವರದ್ದು ಆಟಕ್ಕಿಂತ ಮಾತೇ ಜಾಸ್ತಿ ಅಂತ ಮನೆ ಮಂದಿಯಲ್ಲಾ ಮಾತನಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಈ ವಾರ ಕಿಚ್ಚನ ಚಪ್ಪಾಳೆ ಯಾರಿಗೆ ಅನ್ನೋದಕ್ಕಿಂತ ಕಿಚ್ಚನ ಕ್ಲಾಸ್ ಯಾರಿಗೆ ಎನ್ನುವುದನ್ನು ನೋಡಲು ಪ್ರೇಕ್ಷಕರು ಕಾತುರರಾಗಿದ್ದಾರೆ.












Click it and Unblock the Notifications