Bigg Boss: ಅರ್ಧ ಮೀಸೆ ಬೋಳಿಸಿಕೊಂಡು ಬಿಗ್‌ಬಾಸ್‌ ಮನೆ ಬಿಟ್ಟು ಹೋಗ್ತೀನಿ- ರಜತ್ ಸವಾಲ್

ಬಿಗ್‌ಬಾಸ್‌ ಮನೆಯಲ್ಲಿ ವೈಲ್ಡ್‌ ಕಾರ್ಡ್ ರಜತ್ ಘರ್ಜನೆ ಜೋರಾಗಿದೆ. ಅವರ ಕೂಗಾಟಕ್ಕೆ ಮನೆ ಮಂದಿಯೆಲ್ಲಾ ಸೈಲೆಂಟ್ ಆಗಿದ್ದಾರೆ. ಅವರು ಹಾಕುವ ಸವಾಲಿಗೆ ಮನೆಯ ಸ್ಪರ್ಧಿಗಳು ಗಪ್‌ ಚುಪ್ ಆಗಿದ್ದಾರೆ. ಅಷ್ಟಕ್ಕೂ ರಜತ್‌ ಗಲಾಟೆ ಮಾಡಿದ್ದು ಯಾರೊಂದಿಗೆ ಹಾಗೂ ಯಾಕೆ ಗೊತ್ತಾ.. ಮುಂದೆ ಹೇಳ್ತೀವಿ ಓದಿ..

ಬಿಗ್ ಬಾಸ್ ಮನೆಯಲ್ಲಿ ಚೈತ್ರ ಕುಂದಾಪುರ ಅವರೊಂದಿಗೆ ರಜತ್‌ ಜಗಳವಾಡುತ್ತಿರುವುದು ಕಂಡು ಬಂದಿದೆ. ನೀವು ಕೊಟ್ಟ ಕಾರಣ ಸೂಕ್ತವಾಗಿಲ್ಲ ಅಂತ ರಜತ್ ಚೈತ್ರಾ ಜೊತೆಗೆ ಗಲಾಟೆ ಮಾಡಿದ್ದಾರೆ. ಚೈತ್ರಾ ಜೊತಗಿನ ಜೋರು ಜಗಳಕ್ಕೆ ಮನೆ ಮಂದಿಯಲ್ಲಾ ಮೂಕಪ್ರೇಕ್ಷಕರಾಗಿ ಕುಳಿತಿರುವುದು ಕಂಡು ಬಂದಿದೆ.

rajat challenges chaitra kundapura in bigg boss kannada house video viral on social media

ರಜತ್ ಸವಾಲ್

ಗಲಾಟೆ ವೇಳೆ ರಜತ್ ಸವಾಲ್ ಕೂಡ ಹಾಕಿದ್ದಾರೆ. ನೀವು ಕೊಟ್ಟ ಕಾರಣ ಸುದೀಪ್ ಸರ್ ಸರಿ ಅಂದ್ರೆ ಅರ್ಧ ಮೀಸೆ ಬೋಳಿಸಿಕೊಂಡು ಬಿಗ್‌ಬಾಸ್‌ ಮನೆ ಬಿಟ್ಟು ಹೋಗ್ತೀನಿ ಅಂತ ರಜತ್ ಸವಾಲ್ ಹಾಕಿದ್ದಾರೆ. ಅಷ್ಟಕ್ಕೂ ಏನಿದು ಗಲಾಟೆ? ರಜತ್ ಸವಾಲು ಹಾಕಿದ್ದು ಯಾರಿಗೆ?

ಚೈತ್ರಾ ರಜತ್ ನಡುವೆ ಸವಾಲಿನ ಫೈಟಿಂಗ್

ದೊಡ್ಮನೆಗೆ ಆಗಮಿಸಿದ ಕೆಲವೇ ದಿನಗಳಲ್ಲಿ ತಮ್ಮದೇ ಆದ ಹವಾ ಕ್ರಿಯೇಟ್ ಮಾಡಿದ ರಜತ್ ಬಿಗ್‌ಬಾಸ್‌ ಪ್ರೇಕ್ಷಕರ ನೆಚ್ಚಿನ ಸ್ಪರ್ಧಿಯಾಗಿದ್ದಾರೆ. ಅವರ ಖಡಕ್ ಮಾತು, ಆಟ ಆಡುವ ಪರಿ ಎಲ್ಲವೂ ಬಿಗ್‌ಬಾಸ್‌ ನೋಡುಗರನ್ನು ರಂಜಿಸುತ್ತಿದೆ. ತಮ್ಮ ವಿರುದ್ಧ ಪಿತೂರಿ ಮಾಡುವವರನ್ನು ಸೈಲೆಂಟ್ ಅಥವಾ ವೈಲೆಂಟ್‌ ಆಗಿ ಸದೆಬಡಿಯುವ ರಜತ್ ಸೇರಿಗೆ ಸವಾ ಸೇರು ಎನ್ನುತ್ತಾ ಆಟವಾಡುತ್ತಿದ್ದಾರೆ. ಹೀಗೆ ರಜತ್‌ ಹಾಗೂ ಚೈತ್ರಾ ಜೊತೆಗೂ ವಾಗ್ದಾವ ನಡೆದಿದೆ. ಚೈತ್ರಾ ಕುಂದಾಪುರ ನಾಮಿನೇಟ್ ಮಾಡಲು ಕೊಟ್ಟ ಕಾರಣಕ್ಕೆ ರಜತ್‌ ಗರಂ ಆಗಿದ್ದು ಕಂಡು ಬಂದಿದೆ.

rajat challenges chaitra kundapura in bigg boss kannada house video viral on social media

''ಮೊನ್ನೆ ತಾನೆ ಸುದೀಪ್ ಸರ್ ನೆಲ ನೆಕ್ಕಂಗ್ ಉಗಿದಿದ್ದಾರೆ. ಕೊಡೋ ಕಾರಣಗಳನ್ನು ಕರೆಕ್ಟಾಗಿ ಕೊಡ್ರೋ ಅಂತ. ಅವರ ಗುಂಡಿ ಅವರೇ ತೋಡಿ ಮಲ್ಕೊಂಡು ನಂಗೇಳ್ತವರೆ ಇವಾಗ. ತಾಯ್ತಾ ಕಟ್ಟಿಸಿಕೊಳ್ಳಿ ಅಂತ ಹೇಳಿದ್ನಂತೆ ನಾಮಿನೇಟ್ ಮಾಡಿದ್ರಂತೆ. ಸುದೀಪ್ ಸರ್‌ ಬರ್ತಾರೆ ಅವರಿಗೇಳ್ರಿ. ಒಂದು ವೇಳೆ ಅವರು ನೀವು ಕೊಟ್ಟ ಕಾರಣ ಸರಿ ಅಂದರೆ ಆಗಲೇ ಮನೆ ಬಿಟ್ಟು ಹೋಗ್ತೀನಿ. ನೀವು ಕೊಟ್ಟಿರುವ ಕಾರಣಗಳನ್ನು ಸುದೀಪ್ ಸರ್ ಸರಿ ಅಂದರೆ ಅರ್ಧ ಮೀಸೆ ಬೋಳಿಸಿಕೊಳ್ತೇನಿ'' ಅಂತ ರಜತ್ ಚೈತ್ರಾ ಕುಮದಾಪುರ ಅವರಿಗೆ ಸವಾಲ್ ಹಾಕಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಕೆಲವೇ ಸೆಕೆಮಡ್‌ಗಳ ಈ ವಿಡಿಯೋದಲ್ಲಿ ರಜತ್ ಹಾಗೂ ಚೈತ್ರಾ ನಡುವೆ ವಾಗ್ವಾದ ಮಾಡುವುದು ಇದೆ. ಈ ಸಂಚಿಕೆ ಇಂದು ಪ್ರಸಾರವಾಗಲಿದ್ದು, ರಜತ್ ಚೈತ್ರಾಗೆ ಉಗಿಯುತ್ತಿರುವುದಕ್ಕೆ ನಿಖರ ಕಾರಣ ಗೊತ್ತಾಗಲಿದೆ.

ದೊಡ್ಮನೆಯಲ್ಲಿ ಹವಾ ಕ್ರಿಯೇಟ್ ಮಾಡಿದ ರಜತ್

ರಜತ್ ವೈಲ್ಡ್‌ ಕಾರ್ಡ್‌ ಸ್ಪರ್ಧಿಯಾಗಿರುವುದರಿಂದ ಅರವತ್ತು ದಿನಗಳಿಂದ ಮನೆಯಲ್ಲಿರುವ ಸ್ಪರ್ಧಿಗಳಿಗೆ ಕೊಂಚ ಟಫ್ ಕಾಮಿಟೇಷನ್‌ ಕೊಡಬೇಕಾಗಿರುವುದು ಅಗತ್ಯ ಇದೆ. ಆದರೆ ಇದಕ್ಕೆ ಅವಕಾಶಗಳನ್ನು ನೀಡಲು ಮೂಲ ಸ್ಪರ್ಧಿಗಳ ಅಡೆತಡೆ ಹೆಚ್ಚಾಗುತ್ತಿದ್ದು ರಜತ್ ಕೋಪ ನೆತ್ತಿಗೇರುತ್ತಿದೆ.

ಆರಂಭದಲ್ಲಿ ಗೋಲ್ಡ್ ಸುರೇಶ್ ಅವರೊಂದಿಗೆ ಜಗಳವಾಡುವ ವೇಳೆ ಅವಾಚ್ಯ ಪದಗಳನ್ನು ಬಳಕೆ ಮಾಡಿ ಬೇಸರ ತಂದಿದ್ದ ರಜತ್ ನಂತರ ಅವರ ಆಟ, ಅವರ ನೇರ ಮಾತುಗಳಿಂದ ಪ್ರೇಕ್ಷಕರ ನೆಚ್ಚಿನ ಸ್ಪರ್ಧಿಯಾಗುತ್ತಿದ್ದಾರೆ. ಅಷ್ಟೇ ಅಲ್ಲದೆ ಮನೆಯಲ್ಲಿರುವ ಇತರ ಸ್ಪರ್ಧಿಗಳಿಗೂ ತಮಗೊಬ್ಬ ಕಠಿಣ ಪ್ರತಿಸ್ಪರ್ಧಿ ಬಂದ ಅನ್ನೋ ಆತಂಕವನ್ನು ಹೆಚ್ಚಿಸಿದ್ದಾರೆ. ಹೀಗಾಗಿ ಬಿಗ್‌ಬಾಸ್‌ ನೋಡುಗರಿಗೆ ರಜತ್ ಕುತೂಹಲವನ್ನು ಹೆಚ್ಚಿಸಿದ್ದು ಸುಳ್ಳಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+