Darshan: ದರ್ಶನ್‌ ತಪ್ಪು ಮಾಡಿದ್ರೆ ಶಿಕ್ಷಯಾಗಲಿ, ಆದರೆ....! ರಾಜ್ ಬಿ ಶೆಟ್ಟಿ ಹೇಳಿದ್ದೇನು?

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್‌ ಬಗ್ಗೆ ಮಾತನಾಡಲು ಆರಂಭದಲ್ಲಿ ಸ್ಯಾಂಡಲ್‌ವುಡ್ ನಟ, ನಟಿಯರು ಹಿಂಜರಿದಿದ್ದರು. ಈಗ ಒಬ್ಬೊಬ್ಬರಾಗಿ ಪ್ರತಿಕ್ರಿಯೆ ನೀಡಲು ಆರಂಭಿಸಿದ್ದು, ಕೆಲವರು ದರ್ಶನ್ ಪರವಾಗಿ ಮಾತನಾಡಿದ್ದರೆ, ಉಳಿದವರು ಕಾನೂನು ಪ್ರಕಾರ ತೀರ್ಮಾನವಾಗಲಿ ಎಂದು ತಟಸ್ಥರಾಗಿದ್ದಾರೆ. ಈಗ ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ ಕೂಡ ದರ್ಶನ್ ಪ್ರಕರಣದ ಬಗ್ಗೆ ಮಾತನಾಡಿದ್ದಾರೆ.

ದರ್ಶನ್ ಅವರ ಬಂಧನದಿಂದ ಕನ್ನಡ ಚಿತ್ರರಂಗದ ಮೇಲೆ ಪರಿಣಾಮ ಬೀರಿದೆ. ಕನ್ನಡ ಸಿನಿಮಾ ರಂಗವನ್ನು ನೋಡುವ ರೀತಿ ಬದಲಾಗುತ್ತದೆ. ಚಿತ್ರರಂಗ ಎಂದರೆ ಎಲ್ಲವರೂ ನಮ್ಮವರೇ. ಕೆಜಿಎಫ್‌ ಕನ್ನಡ ಸಿನಿಮಾ, ನಮ್ಮ ಸಿನಿಮಾ ಅಂದಾಗ ಎಷ್ಟು ಖುಷಿಯಾಗುತ್ತದೋ, ಈ ರೀತಿ ಆರೋಪಗಳು ಬಂದಾಗ ಕೂಡ ಅದನ್ನು ಎದುರಿಸಬೇಕಾಗುತ್ತದೆ, ಸಿನಿಮಾರಂಗದಲ್ಲಿ ಎಲ್ಲರೂ ನಮ್ಮ ಸಂಬಂಧಿಕರೇ ಆಗಿರುತ್ತಾರೆ ಎಂದರು.

Raj B Shetty Speaks on Darshan s Arrest and Legal Proceedings

ತಪ್ಪು ಮಾಡಿದ್ದರೆ ಶಿಕ್ಷೆಯಾಗಲಿ

ದರ್ಶನ್ ಸರ್ ತಪ್ಪು ಮಾಡಿದ್ದರೆ ಅವರಿಗೆ ಶಿಕ್ಷೆಯಾಗಲಿ, ಆದರೆ ಅವರು ಹೊಸ ವ್ಯಕ್ತಿಯಾಗಿ ಜೈಲಿನಿಂದ ಹೊರಬರಲಿ ಎಂದರು. ಸಿನಿಮಾ ಜನ ಎಂದರೆ ಹೆಣ್ಣು ಕೊಡಲು ಹಿಂಜರಿಯುತ್ತಾರೆ, ಮನೆ ಬಾಡಿಗೆ ಕೊಡಲು ಹಿಂದೆ ಮುಂದೆ ನೋಡುತ್ತಾರೆ. ನಾವೇನೋ ಮಾಡಬಾರದ್ದನ್ನು ಮಾಡುತ್ತೇವೆ ಎನ್ನುವ ಭಾವನೆ ಇದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಈ ಘಟನೆ ಕನ್ನಡ ಚಿತ್ರರಂಗಕ್ಕೆ ದೊಡ್ಡ ಹೊಡೆತ. ಅವರಿಗೆ ಇರುವ ಅಭಿಮಾನಿ ಬಳಗ ಅಷ್ಟು ದೊಡ್ಡದು, ಅದು ದೇವರು ಕೊಟ್ಟದ್ದು, ನಾವು ಕೊಟ್ಟದ್ದಲ್ಲ ಎಂದರು. ಕಾನೂನು ಎಲ್ಲರಿಗೂ ಒಂದೇ, ದರ್ಶನ್ ಅವರು ತಪ್ಪು ಮಾಡಿದ್ದರೆ ಶಿಕ್ಷೆಯಾಗಬೇಕು. ಇಲ್ಲ ಎನ್ನುವುದು ಸಾಬೀತಾದರೆ ಬೇಗನೆ ಜೈಲಿನಿಂದ ಬಿಡುಗಡೆಯಾಗುತ್ತಾರೆ ಎನ್ನುವ ನಂಬಿಕೆ ಇದೆ ಎಂದರು.

ಎಲ್ಲರಲ್ಲಿಯೂ ಕ್ರೂರತ್ವ ಇರುತ್ತದೆ, ಯಾವುದೋ ಒಂದು ಸಂದರ್ಭ ಅದು ನಮಗೆ ಗೊತ್ತಿದ್ದೊ ಗೊತ್ತಿಲ್ಲದೆಯೂ ಹೊರ ಬರುತ್ತದೆ. ದರ್ಶನ್ ತಪ್ಪು ಮಾಡಿದ್ದಾರಾ ಇಲ್ಲವಾ ಎನ್ನುವುದನ್ನು ಕಾನೂನು ತೀರ್ಮಾನ ಮಾಡುತ್ತದೆ. ಅವರು ಲೀಡರ್ ತರ ಇದ್ದವರು, ಜೈಲಿನಿಂದ ಹೊರಬರುವಾಗ ಬದಲಾಗಿ ಬರಲಿ ಎಂದರು.

ಪರಪ್ಪನ ಅಗ್ರಹಾರಕ್ಕೆ ದಿನಕರ್ ಭೇಟಿ

ಪರಪ್ಪನ ಅಗ್ರಹಾರಕ್ಕೆ ದರ್ಶನ್ ಕುಟುಂಬದವರು, ಆಪ್ತರು ಭೇಟಿ ನೀಡುತ್ತಿದ್ದು ದರ್ಶನ್ ಅವರಿಗೆ ಧೈರ್ಯ ತುಂಬುತ್ತಿದ್ದಾರೆ. ಸಹೋದರ್ ದಿನಕರ್ ತೂಗುದೀಪ್ ಕೂಡ ನಟ ದರ್ಶನ್‌ರನ್ನು ಭೇಟಿ ಮಾಡಿ ಧೈರ್ಯ ಹೇಳಿದ್ದಾರೆ.

ಪತ್ನಿ ವಿಜಯಲಕ್ಷ್ಮಿ ಮತ್ತು ಮಗ ವಿನೀಶ್ ಕೂಡ ದರ್ಶನ್‌ರನ್ನು ಭೇಟಿ ಮಾಡಿದ್ದಾರೆ. ಮನೆ ಊಟ, ಹಾಸಿಗೆ ಮತ್ತು ಪುಸ್ತಕ ನೀಡುವಂತೆ ನಟ ದರ್ಶನ್‌ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದು ಜುಲೈ 19ರಂದು ವಿಚಾರಣೆ ನಡೆಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+