Puneeth Rajkumar: ಅಪ್ಪು ವಾಪಸ್ ಬಂದು ಬಿಡುತ್ತಾನೆ ಅನಿಸುತ್ತಿತ್ತು: ರಾಘಣ್ಣ ಭಾವುಕ

ಪುನೀತ್ ರಾಜ್ಕುಮಾರ್ ನಟನೆಯ 'ಅಪ್ಪು' ಸಿನಿಮಾ ನಿನ್ನೆ (ಮಾರ್ಚ್ 14) ಮರು ಬಿಡುಗಡೆ ಆಗಿದೆ. ಅಭಿಮಾನಿಗಳು ಬಲು ಅದ್ಧೂರಿಯಾಗಿ ಸಿನಿಮಾ ಅನ್ನು ಸ್ವಾಗತಿಸಿದ್ದಾರೆ. ಪುನೀತ್ ರಾಜ್‌ಕುಮಾರ್ 50ನೇ ಹುಟ್ಟುಹಬ್ಬದ ಹಿನ್ನೆಲೆ 'ಅಪ್ಪು' ರೀ-ರಿಲೀಸ್ ಆಗಿದ್ದು, ಅಭಿಮಾನಿಗಳು ಭರ್ಜರಿಯಾಗಿ ಸಿನಿಮಾವನ್ನ ಸ್ವಾಗತಿಸಿದ್ದಾರೆ. ಇತ್ತ ರಾಘವೇಂದ್ರ ರಾಜ್‌ಕುಮಾರ್ ಕುಟುಂಬ ಚಿತ್ರಮಂದಿರಕ್ಕೆ ಆಗಮಿಸಿ 'ಅಪ್ಪು' ಚಿತ್ರ ವೀಕ್ಷಿಸಿದ್ದಾರೆ. ಈ ವೇಳೆ, ಸಿನಿಮಾ ನೋಡಿ ಅಪ್ಪು ವಾಪಸ್ ಬಂದು ಬಿಡುತ್ತಾನೋ ಅನಸ್ತು ಎಂದು ಸಹೋದರನನ್ನು ನೆನೆದು ರಾಘವೇಂದ್ರ ರಾಜ್‌ ಕುಮಾರ್‌ ಅವರು ಭಾವುಕರಾಗಿದ್ದಾರೆ.

ಅಪ್ಪು' ಸಿನಿಮಾ ವೀಕ್ಷಿಸಿದ ಬಳಿಕ ಮಾಧ್ಯಮಗಳ ಜೊತೆಗೆ ರಾಘವೇಂದ್ರ ರಾಜ್‌ ಕುಮಾರ್‌ ಅವರು ಮಾತನಾಡಿ. ಅಭಿಮಾನಿಗಳ ಜಾತ್ರೆ ನೋಡಿದ್ರೆ ಒಂದು ಕಡೆ ನೋವಾಗುತ್ತದೆ, ಇನ್ನೊಂದು ಕಡೆ ಖುಷಿಯಾಗುತ್ತದೆ. 'ಅಪ್ಪು' ಸಿನಿಮಾ ರಿಲೀಸ್ ಆದ ಆ ದಿನಕ್ಕೆ ನಾವು ಹೋಗಬಾರದು. ಆಗ ಅಪ್ಪಾಜಿ, ಅಮ್ಮ, ಅಪ್ಪು ಇದ್ದರು. ಆ ದಿನಗಳು ನೆನಪಾಗುತ್ತದೆ. ಹೀಗಿರುವಾಗ ಈಗ ಸಿನಿಮಾ ರಿಲೀಸ್‌ ಆಗಿ 23 ವರ್ಷ ಆದ್ರೂ 'ಅಪ್ಪು' ಸಿನಿಮಾದ ಡೈಲಾಗ್, ಲಿರಿಕ್ಸ್ ಅನ್ನು ಅಭಿಮಾನಿಗಳು ಮರೆತಿಲ್ಲ. ಎಲ್ಲರೂ ಅಪ್ಪುನ ಸಂಭ್ರಮಿಸಿದರು. ಸಿನಿಮಾ ನೋಡಿ ಅಪ್ಪು ವಾಪಸ್ ಬಂದು ಬಿಡುತ್ತಾನೋ ಅನಸ್ತು ಎಂದು ತಿಳಿಸಿದ್ದಾರೆ.

raghavendra rajkumar talks about Puneeth Rajkumar appu film

ಸಹೋದರ ಪುನೀತ್‌ ರಾಜ್‌ ಕುಮಾರ್‌ ಈಗ ಇಲ್ಲ ತುಂಬಾ ಕಷ್ಟ ಆಗುತ್ತದೆ. ಪಿಕ್ಚರ್ ನೋಡಿದಾಗ ಅಪ್ಪು ಬಂದು ಬಿಡುತ್ತಾನೆ ಅನಿಸುತ್ತಿತ್ತು. ಈ ಸಿನಿಮಾದಿಂದ ನೀವೆಲ್ಲಾ ಅವರಿಗೆ ಪವರ್ ಸ್ಟಾರ್ ಅಂತ ಬಿರುದು ನೀಡಿದ್ರಿ. ಅದನ್ನು ನಾವು ಯಾವತ್ತೂ ಮರೆಯೋದಿಲ್ಲ. ನಿಮ್ಮ ಅಪ್ಪು ಸಿನಿಮಾ ಮೂಲಕ ನಮ್ಮ ಜೊತೆಯಿದ್ದಾರೆ. ಹೀಗೆ ಅವರ ಸಿನಿಮಾ ರಿಲೀಸ್ ಮಾಡಿ ನೋಡ್ತಾ ಇರೋಣ ಎಂದು ರಾಘಣ್ಣ ಹೇಳಿದರು.

ಇನ್ನೂ ಅಪ್ಪು ಸಿನಿಮಾ ಬೆಂಗಳೂರಿನ ಮೆಜೆಸ್ಟಿಕ್‌ ಭಾಗದ ಹೆಚ್ಚಿನೆಲ್ಲ ಥೇಟರ್‌ಗಳ ಮುಂಭಾಗ ಅಭಿಮಾನಿಗಳ ಜಾತ್ರೆಯೇ ನೆರೆದಿತ್ತು. ಹಲವು ಟಿವಿ, ಸಿನಿಮಾ ಸೆಲೆಬ್ರಿಟಿಗಳೂ ಅಭಿಮಾನಿಗಳ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು. ಇತ್ತ ಸಿನಿಮಾದ ನಾಯಕಿ ರಕ್ಷಿತಾ ಪ್ರೇಮ್‌ ಥೇಟರ್‌ನಲ್ಲಿ ಅಭಿಮಾನಿಗಳ ನಡುವೆ ಚಿತ್ರ ವೀಕ್ಷಿಸಿ ಕಣ್ಣೀರಾದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ನಟಿ ರಕ್ಷಿತಾ ಪ್ರೇಮ್‌ ಅವರು, ಅಪ್ಪು ಸಿನಿಮಾ ಈಗಲೂ ಫ್ರೆಶ್ ಎನಿಸುತ್ತದೆ. ಇದು ಎವರ್ ಗ್ರೀನ್ ಸ್ಟೋರಿ. ಅಪ್ಪು ಮತ್ತು ಸುಚಿ ನಡುವಿನ ಲವ್ ಸ್ಟೋರಿ ಅದ್ಭುತವಾದದ್ದು. ಸಖತ್ ಹಾರ್ಟ್ ಟಚಿಂಗ್ ಅನಿಸುತ್ತದೆ. ಸಿನಿಮಾ ನೋಡುತ್ತಾ ನೋಡುತ್ತಾ, ಅಪ್ಪು ನೆನಪು ತೀವ್ರವಾಗಿ ಕಾಡಿತು. ಅವರು ಇವತ್ತು ನಮ್ಮೊಂದಿಗೆ ಇರಬೇಕಿತ್ತು ಎಂದು ಭಾವುಕರಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+