Radhika Pandit: ರಾಧಿಕಾ ಪಂಡಿತ್ಗೆ 5 ಮಿಲಿಯನ್ ಫಾಲೋವರ್ಸ್, ಅವರು ಫಾಲೋ ಮಾಡೋದು ನಾಲ್ಕೇ ಜನ!
Radhika Pandit: ಸ್ಯಾಂಡಲ್ವುಡ್ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ ಫ್ಯಾನ್ ಫಾಲೋವಿಂಗ್ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಅದೀಗ 51 ಲಕ್ಷದ ಗಡಿಯನ್ನು ದಾಟಿದೆ. ಅಂದರೆ ಇನ್ಸ್ಟಾಗ್ರಾಂನಲ್ಲಿ ಸುಮಾರು 5.1 ಮಿಲಿಯನ್ನಷ್ಟು ಫಾಲೋವರ್ಸ್ ಆಗಿದ್ದಾರೆ. ಸಾಮಾನ್ಯವಾಗಿ ಸಿನಿಮಾಗಳಲ್ಲಿ ಬ್ಯುಸಿ ಆಗಿರುವ ನಟಿಯರಿಗೆ ಸೋಷಿಯಲ್ ಮೀಡಿಯಾಗಳಲ್ಲಿ ಲಕ್ಷಗಟ್ಟಲೆ ಫ್ಯಾನ್ ಫಾಲೋವಿಂಗ್ ಇರುತ್ತದೆ. ಆದರೆ ರಾಧಿಕಾ ಪಂಡಿತ್ ಮದುವೆ ಆದಮೇಲೆ ಸಿನಿಮಾದಲ್ಲಿ ಸಕ್ರಿಯವಾಗಿರಲಿಲ್ಲ. ಯಶ್ ಜೊತೆಗೆ 'ಸಂತು ಸ್ಟ್ರೈಟ್ ಫಾರ್ವರ್ಡ್' ಸಿನಿಮಾ ಮಾಡಿದ ಮೇಲೆ 'ಆದಿಲಕ್ಷ್ಮಿ ಪುರಾಣ' ಎಂಬ ಒಂದು ಸಿನಿಮಾ ಮಾಡಿದರೂ ಅದು ಅಂಥಾ ಹೆಸರು ಮಾಡಲಿಲ್ಲ. ಆಮೇಲೆ ಒಂದು ಮಲಯಾಳಂ ಸಿನಿಮಾದಲ್ಲೂ ಅಭಿನಯಿಸಿದ್ದರು. ಅದೂ ಹೆಚ್ಚು ಸದ್ದು ಮಾಡಿದಂಗಿಲ್ಲ. ಅಂದರೆ ಅವರ ಈಗಿನ ಫ್ಯಾನ್ ಫಾಲೋವಿಂಗ್ ಹೆಚ್ಚಳಕ್ಕೆ ಯಶ್ ಟಾಕ್ಸಿಕ್ನ ಪಾಪ್ಯುಲಾರಿಟಿ ಕಾರಣವಾ ಅನ್ನುವ ಮಾತು ಕೇಳಿ ಬರುತ್ತಿದೆ.
Radhika Pandit: ಆಕ್ಟಿಂಗ್ನಲ್ಲಿ ಮೀರಿಸೋರಿಲ್ಲ
ಒಂದು ಕಾಲದ ಸ್ಟಾರ್ ನಟಿ ಈ ರಾಧಿಕಾ ಪಂಡಿತ್. ಮೊದಲ ಸಿನಿಮಾ 'ಮೊಗ್ಗಿನ ಮನಸ್ಸು' ಸೂಪರ್ ಹಿಟ್. ಆಮೇಲೂ ಒಂದಿಷ್ಟು ಹಿಟ್ ಸಿನಿಮಾಗಳಲ್ಲಿ ನಟಿಸಿದ್ರು. ಶಿವಣ್ಣನ ಜೊತೆ 'ಕಡ್ಡಿಪುಡಿ', ಯಶ್ ಜೊತೆ 'ಡ್ರಾಮಾ', 'ಮಿ. ಆಂಡ್ ಮಿಸ್ಸೆಸ್ ರಾಮಾಚಾರಿ', ಧ್ರುವ ಸರ್ಜಾ ಜೊತೆಗಿನ 'ಅದ್ದೂರಿ' ಸಿನಿಮಾಗಳಲ್ಲಿ ಅವರ ನಟನೆ ನೋಡಿ ಬಹಳ ಮಂದಿ ಶಭಾಷ್ ಅಂದಿದ್ದರು. ನಟನೆಯಲ್ಲಿ ಅವರಿಗಿದ್ದ ಪ್ರತಿಭೆಯೇ ಅವರನ್ನು ಎತ್ತರಕ್ಕೆ ಏರಿಸಿತು. ಇಂದಿಗೂ ಕನ್ನಡ ಸಿನಿಮಾ ಪ್ರೇಕ್ಷಕರ ಪಾಲಿಗೆ ಅವರು ಸ್ಯಾಂಡಲ್ವುಡ್ ಸಿಂಡ್ರೆಲ್ಲಾನೇ ಆಗಿದ್ದಾರೆ. ಸಿನಿಮಾಗಳಲ್ಲಿ ನಟಿಸಲಿ ಬಿಡಲಿ, ಒಮ್ಮೆ ಅವರ ನಟನೆಗೆ ಮಾರು ಹೋದವರು ಅವರನ್ನು ಆರಾಧಿಸೋದು ಬಿಡಲಿಲ್ಲ.

Radhika Pandit: ಪ್ರಶಸ್ತಿ ವಿಜೇತ ನಟಿ
ರಾಧಿಕಾ ಪಂಡಿತ್ ಮೊಗ್ಗಿನ ಮನಸ್ಸು ಸಿನಿಮಾದಲ್ಲಿ ಚಂಚಲ ಅನ್ನುವ ಕಾಲೇಜ್ಗೆ ಹೋಗೋ ಟೀನೇಜ್ ಹುಡುಗಿ ಪಾತ್ರದಲ್ಲಿ ನಟಿಸಿದ್ದರು. ಇದರಲ್ಲಿನ ಅವರ ನಟನೆಗೆ ರಾಜ್ಯಪ್ರಶಸ್ತಿಯೂ ಬಂದಿತ್ತು. ಫಿಲಂಫೇರ್ನಲ್ಲಿ ಬೆಸ್ಟ್ ಆಕ್ಟ್ರೆಸ್ ಅವಾರ್ಡ್ ಬಂದಿತ್ತು. ಸೈಮಾ ಪ್ರಶಸ್ತಿಯನ್ನೂ ಗೆದ್ದುಕೊಂಡಿದ್ದರು.
ಮದುವೆ ಆದ್ಮೇಲೆ ಸಿನಿಮಾಕ್ಕೆ ಗುಡ್ಬೈ
ರಾಧಿಕಾ ಮದುವೆ ಆದಮೇಲೆ ಸಂಸಾರ ಸಾಗರದಲ್ಲಿ ಮುಳುಗಿ ಹೋದರು. ಇಬ್ಬರು ಮಕ್ಕಳ ಅಮ್ಮನಾಗಿ ಯಶ್ ಇಷ್ಟೆತ್ತರಕ್ಕೆ ಬೆಳೆಯಲು ಸಪೋರ್ಟಿವ್ ಆಗಿ ನಿಂತರು. 'ಅಂಥಾ ಪ್ರತಿಭಾನ್ವಿತ ನಟಿಯಾಗಿದ್ದರೂ ಯಾಕೆ ಸಿನಿಮಾದಲ್ಲಿ ನಟಿಸುತ್ತಿಲ್ಲ' ಎಂದರೆ, 'ನಟನೆಯಲ್ಲಿ ನನಗೆ ಪ್ರತಿಭೆ ಇರಬಹುದು, ಹಾಗೆಂದು ಫ್ಯಾಮಿಲಿ ಮ್ಯಾನೇಜ್ ಮಾಡೋದನ್ನು ಕಡಿಮೆ ಅಂತ ಯಾಕೆ ಅಂದುಕೊಳ್ಳಬೇಕು. ಅದರಲ್ಲೂ ತೃಪ್ತಿ, ನೆಮ್ಮದಿ ಇರುತ್ತಲ್ವಾ..' ಎಂದು ಉತ್ತರಿಸುತ್ತಾರೆ.
ಚಾರ್ಮ್ ಕಡಿಮೆ ಆಗಿಲ್ಲ
ರಾಧಿಕಾ ಪಂಡಿತ್ ಸಿನಿಮಾದಿಂದ ದೂರ ಉಳಿದರೂ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿದ್ದಾರೆ. ಆಗಾಗ ಫ್ಯಾಮಿಲಿ ಫೋಟೋ ಪೋಸ್ಟ್ ಮಾಡುತ್ತಿರುತ್ತಾರೆ. ಯಶ್ ಜೊತೆಗಿನ ಫೋಟೋ, ಮಕ್ಕಳು ಹೆತ್ತವರ ಜೊತೆ ಪ್ರವಾಸ ಮಾಡುವ ಫೋಟೋಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ಅವರ ಚಾರ್ಮ್ ಹೆಚ್ಚುತ್ತಲೇ ಇದೆ.
ಟಾಕ್ಸಿಕ್ ಇವೆಂಟ್ನ ಕೇಂದ್ರಬಿಂದು
ಬೆಂಗಳೂರಿನಲ್ಲಿ ಯಶ್ ನಟನೆಯ 'ಟಾಕ್ಸಿಕ್' ಸಿನಿಮಾದ ಟ್ರೇಲರ್ ಲಾಂಚ್ ನಡೆದಿತ್ತು. ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ, ಸೌತ್ ಇಂಡಿಯನ್ ಸೂಪರ್ ಸ್ಟಾರ್ ನಯನತಾರಾ ಮೊದಲಾದವರೆಲ್ಲ ಇದ್ದರೂ ಕ್ಯಾಮರ ಹೈಯೆಸ್ಟ್ ಫೋಕಸ್ ಆಗಿದ್ದು ರಾಧಿಕಾ ಪಂಡಿತ್ ಕಡೆಗೆ. ಸೋಷಿಯಲ್ ಮೀಡಿಯಾದಲ್ಲಿ ಅತೀ ಹೆಚ್ಚು ಓಡಿದ್ದು ಯಶ್ ಬಿಟ್ಟರೆ ಅವರದ್ದೇ ರೀಲ್ಸ್. ಆ ದಿನ ಸೊಗಸಾಗಿ ಸೀರೆ ಉಟ್ಟು ಬಂದ ರಾಧಿಕಾ ಚೆಲುವು ಕಂಡು ಸ್ಟಾರ್ ನಟಿಯರಿಗೂ ದಂಗಾಗಿದ್ದರೆ ಆಶ್ಚರ್ಯ ಇಲ್ಲ.
50 ಲಕ್ಷ ಫಾಲೋವರ್ಸ್
ರಾಧಿಕಾ ಪಂಡಿತ್ ಫ್ಯಾನ್ ಫಾಲೋವಿಂಗ್ 51 ಲಕ್ಷಕ್ಕೆ ಏರಿದ್ದಕ್ಕೆ ಅವರ ಈ ಚಾರ್ಮ್, ಯಶ್ ಅವರ ಫೇಮ್ ಎರಡೂ ಕಾರಣ ಅನ್ನಬಹುದು. ಯಶ್ ಅವರ ಟಾಕ್ಸಿಕ್ ಫೇಮ್ ಸಿಕ್ಕಾಪಟ್ಟೆ ಜಾಸ್ತಿ ಆಗುತ್ತಿದೆ. ಅದರ ಜೊತೆಗೆ ಯಶ್ ಅವರ ಮುದ್ದಾದ ಪತ್ನಿಯ ಬಗೆಗೂ ಜನರ ಕ್ರೇಜ್ ಹೆಚ್ಚಾಗುತ್ತಿದೆ. ಇದರಿಂದಲೂ ಅವರ ಫಾಲೋವಿಂಗ್ ಹೆಚ್ಚಾಗಿರಬಹುದು.
ರಾಧಿಕಾ ಫಾಲೋ ಮಾಡೋ ಆ ನಾಲ್ಕು ಜನ ಯಾರು?
51 ಲಕ್ಷ ಜನ ರಾಧಿಕಾ ಅವರನ್ನು ಫಾಲೋ ಮಾಡ್ತಿದ್ದರೂ ಅವರು ಫಾಲೋ ಮಾಡೋದು ನಾಲ್ಕು ಜನರನ್ನು ಮಾತ್ರ. ಇವರ ಪತಿ ಯಶ್. ತಮ್ಮ ಗೌರಂಗ್ ಪಂಡಿತ್, ನಾದಿನಿ ಸಹನಾ ಪಂಡಿತ್ ಹಾಗೂ ತಮ್ಮನ ಮಗುವಿನ ಪೇಜ್ ಅನ್ನು ಮಾತ್ರ ರಾಧಿಕಾ ಫಾಲೋ ಮಾಡ್ತಾರೆ. ವಿಶೇಷ ಅಂದರೆ ಯಶ್ ಸೋಷಲ್ ಮೀಡಿಯಾ ದಲ್ಲಿ ಫಾಲೋ ಮಾಡೋ ಏಕೈಕ ವ್ಯಕ್ತಿ ಅಂದರೆ ಅದು ರಾಧಿಕಾ ಪಂಡಿತ್.


Click it and Unblock the Notifications
