Pushpa-2 New Poster: ಎರಡನೇ ಹಾಡಿನ ಹೊಸ ಪೋಸ್ಟರ್ ರಿಲೀಸ್: ಸಿಹಿಸುದ್ದಿ ಕೊಟ್ಟ ರಶ್ಮಿಕಾ, ಹೆಚ್ಚಾಯ್ತು ಕಾತರ
ನವದೆಹಲಿ, ಮೇ 28: ನಟ ಅಲ್ಲು ಅರ್ಜುನ್ ಹಾಗೂ ನಟಿ ರಶ್ಮಿಕಾ ಮಂದಣ್ಣಾ ಅಭಿನಯದ 'ಪುಷ್ಪ 2: ದಿ ರೂಲ್' (Pushpa 2 Song) ಸಿನಿಮಾದ ಎರಡನೇ ಹಾಡು ನಾಳೆ ಬುಧವಾರ ಬಿಡುಗಡೆ ಆಗಲಿದೆ. ಇದಕ್ಕೂ ಮೊದಲೇ ಚಿತ್ರತಂಡ ಹಾಡಿನ ಪೋಸ್ಟರ್ ಒಂದನ್ನು ರಿಲೀಸ್ (Pushpa 2 Poster) ಮಾಡುವ ಮೂಲಕ ಅಭಿಮಾನಿಗಳ ಕುತೂಹಲ ಕೆರಳಿಸಿದೆ.
ಚಿತ್ರತಂಡ ಬಿಡುಗಡೆ ಮಾಡಿರುವ ಈ ಹೊಸ ಪೋಸ್ಟರ್‌ನಲ್ಲಿ ಸಿನಿಮಾದ ಮುಖ್ಯ ಪಾತ್ರಧಾರಿಗಳಾದ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಹಾಡಿನಲ್ಲಿ ಭರ್ಜರಿ ಸ್ಟಪ್ಸ್ ಹಾಕಿದ್ದಾರೆ. ಮಿಂಚಿಂಗ್ ಲೈಟ್ಸ್, ಕಲರ್‌ಫುಲ್ ಬೃಹತ್ ಸೆಟ್‌ವೊಂದರಲ್ಲಿ ಡಾನ್ಸ್ ವಿಡಿಯೋ ಸೆರೆಹಿಡಿಯಲಾಗಿದೆ. ಸದ್ಯ ಅಲ್ಲು, ರಶ್ಮಿಕಾ ಇರುವ ಪೋಸ್ಟರ್ ಬಿಡುಗಡೆ ಆಗಿದೆ.

ಪೋಸ್ಟರ್‌ನಲ್ಲಿ ಹೇಗಿದ್ದಾರೆ ಅಲ್ಲು ಅರ್ಜುನ್, ರಶ್ಮಿಕಾ?
ನಟಿ ರಶ್ಮಿಕಾ ಮಂದಣ್ಣಾ ಅವರು ತಮ್ಮ ಇನ್ಸ್‌ಸ್ಟಾಗ್ರಾಮ್ ನಲ್ಲಿ ಪುಷ್ಪ ಹಾಡಿನ ಪೋಸ್ಟರ್ ಹಂಚಿಕೊಂಡಿದ್ದಾರೆ. ಇದರಲ್ಲಿ ಅಲ್ಲು ಅರ್ಜುನ್ ಅವರು ಕ್ಯಾಶುಯಲ್ ಬಟ್ಟೆಯಲ್ಲಿ ಸ್ಪೆಕ್ಟ್ಸ್ ಹಾಕಿಕೊಂಡು ಸ್ಟೈಲಿಶ್ ಲುಕ್ ನಲ್ಲಿ ಪೋಸ್ಟ್ ಕೊಟ್ಟಿದ್ದಾರೆ. ಪೋಸ್ಟರ್‌ನಲ್ಲಿ ಪುಷ್ಟ್ ಸಿನಿಮಾದಲ್ಲಿ ಬಣ್ಣದ ಪಟ್ಟಿ ಪಟ್ಟಿ ಹಾಫ್ ಶರ್ಟ್ ಇಲ್ಲದಾಗಿದೆ. ಫಲ್ ಸ್ಲೀವ್ ಟೀ ಶರ್ಟ್‌ನಲ್ಲಿ ಅಲ್ಲು ಅರ್ಜುನ್ ಕಂಡು ಬರುತ್ತಾರೆ.
ರಶ್ಮಿಕಾ ಮಂದಣ್ಣ ಫ್ಯೂಷನ್ ಸೀರೆ ಉಟ್ಟುಕೊಂಡು ಸಹಜವಾಗಿ ಕಾಣಿಸಿಕೊಂಡಿದ್ದಾರೆ. ಇನ್ನೂ 'ನಾವು ಕಾಯಲು ಸಾಧ್ಯವಿಲ್ಲ. ನಿಮ್ಮ ಪುಷ್ಪಾ ಮತ್ತು ಶ್ರೀವಲ್ಲಿ' ಎಂದು ರಶ್ಮಿಕಾ ಮಂದಣ್ಣ ಪೋಸ್ಟರ್ ಶೇರ್ ಮಾಡಿಕೊಂಡು ಇನ್ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ. ಸದ್ಯ ಈ ಪೋಸ್ಟರ್ ಸಖತ್ ಟ್ರೆಂಡ್ ಕ್ರಿಯೇಟ್ ಮಾಡುತ್ತಿದೆ.
ನಾಳೆ ಪುಷ್ಪ 2 ಸಿನಿಮಾ ಕಪಲ್ ಸಾಂಗ್ ರಿಲೀಸ್
ಪುಷ್ಪ 2 ಸಿನಿಮಾ ಕಪಲ್ ಸಾಂಗ್ #Pushpa2SecondSingle Out ನಾಳೆ ಬುಧವಾರ ಮೇ 28ರಂದು ಬೆಳಗ್ಗೆ 11.07 ಬಿಡುಗಡೆಗೊಳ್ಳಲಿದೆ. ರಶ್ಮಿಕಾ ಪೋಸ್ಟ್‌ಗೆ ಗಾಯಕಿ ಶ್ರೇಯಾ ಘೋಷಾಲ್ ನಾನು ಹಾಡು ಬಿಡುಗಡೆಗೆ ಕಾತರಳಾಗಿದ್ದೇನೆ, ತುಂಬಾ ಉತ್ಸುಕನಾಗಿದ್ದೇನೆ' ಎಂದು ಕಾಮೆಂಟ್ ಮಾಡಿದ್ದಾರೆ.

ಕಳೆದ ವಾರವಷ್ಟೇ ರಶ್ಮಿಕಾ ಎರಡನೇ ಹಾಡಿನ ಸೊಸಿಕಿ BTS ಕ್ಲಿಪ್‌ನೊಂದಿಗೆ ಹುಕ್ ಸ್ಟೆಪ್ ವಿಡಿಯೋ ಕ್ಲಿಪ್ ಹಂಚಿಕೊಂಡಿದ್ದರು. ಇದು ಎಲ್ಲ ಭಾಷೆಗಳಲ್ಲೂ ಬಂದಿದ್ದು, ಅಭಿಮಾನಿಗಳ ಹೆಚ್ಚು ಹೆಚ್ಚು ಶೇರ್ ಮಾಡಿಕೊಂಡಿದ್ದರು. ಎರಡನೇ ಹಾಡು ಬಿಡುಗಡೆಗೆ ಚಿತ್ರತಂಡ ನಟಿಯ ಹುಕ್ ಸ್ಟೆಪ್ ಅನ್ನು ಪ್ರೊಮೋ ಆಗಿ ಬಳಕೆ ಮಾಡಿಕೊಂಡಿದ್ದರು.
'ಶೂ ಡ್ರಾಪ್ ಸ್ಟೆಪ್' ಅಭಿಮಾನಿಗಳು ಫುಲ್ ಖುಷ್
ನಟ ಅಲ್ಲು ಅರ್ಜುನ್ ತಮ್ಮ ಇನ್‌ಸ್ಟಾಗ್ರಾಮ್ ನಲ್ಲಿ ಮೊದಲ 'ಪುಷ್ಪಾ ಪುಷ್ಪಾ' ಹಾಡಿನ ತುಣುಕನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು 'ಶೂ ಡ್ರಾಪ್ ಸ್ಟೆಪ್' ಮಾಡಿದ್ದಾರೆ. ಅದು ರೀಲ್ಸ್ ವಿಡಿಯೋದಲ್ಲಿ ಟ್ರೆಂಡಿಂಗ್ ಮಾಡಲಾಗಿದೆ. ರೀಲ್ಸ್ ಸ್ಟಾರ್ಸ್ ಆ ಸಿಗ್ನೇಚರ್ ಸ್ಟೆಪ್ ಮಾಡುವ ಮೂಲಕ ಹಾಡನ್ನು ಆನಂದಿಸಿದ್ದಾರೆ. ಈ ಬಗ್ಗೆ ಅಲ್ಲು ಅರ್ಜುನ್ ಬರೆದುಕೊಂಡು ಪೋಸ್ಟ್‌ಗೆ #Pushpa2TheRule ಮತ್ತು #Pushpa2FirstSingle ಎಂಬ ಹ್ಯಾಶ್‌ಟ್ಯಾಗ್ ಹಾಕಿದ್ದಾರೆ.
ಅಲ್ಲು ಅರ್ಜುನ್ ಪೋಸ್ಟ್‌ಗೆ ಕೆಲವರು ಕಾಮೆಂಟ್ ಮಾಡಿದ್ದು, ಅದಕ್ಕೆ ನಟ ಪ್ರತ್ಯುತ್ತರ ನೀಡಿದ್ದಾರೆ. ಪುಷ್ಪಾ - ದಿ ರೂಲ್ ಅನ್ನು ಸುಕುಮಾರ್ ನಿರ್ದೇಶಿಸಿದ್ದಾರೆ. ಇದೇ ವರ್ಷ ಮುಂದಿನ ಆಗಸ್ಟ್‌ನಲ್ಲಿ ತೆರೆಗೆ ಬರಲು ಸಿನಿಮಾ ಸಜ್ಜಾಗಿದೆ. 2023ರಲ್ಲಿ ನಡೆದ 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಅಲ್ಲು ಅರ್ಜುನ್ ಅಭಿನಯಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಇಂದು ಬುಧವಾರ ಬೆಳಗ್ಗೆ 11.07 ಗಂಟೆಗೆ ಪುಷ್ಪ2 ಸಿನಿಮಾದ ಕಲರ್‌ಫುಲ್ ಹಾಡು ಬಿಡುಗಡೆ ಆಗಲಿದೆ. ಈ ಚಿತ್ರ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಈಗಾಗಲೇ ಮೊದಲ ಚಾಪ್ಟರ್ ರಿಲೀಸ್ ಆಗಿ ಭಾರೀ ಸುದ್ದಿ ಮಾಡಿತ್ತು. ಎರಡನೇ ಭಾಗದ ಕರೆ ನೋಡಲು ಅಲ್ಲು ಅಭಿಮಾನಿಗಳು ಕಾತರರಾಗಿದ್ದಾರೆ.












Click it and Unblock the Notifications