Pushpa-2 Collection: ಪುಷ್ಪ-2 ಮೊದಲ ದಿನವೇ 100 ಕೋಟಿ ರೂಪಾಯಿ ಭರ್ಜರಿ ಕಲೆಕ್ಷನ್....
ಕೂಸು ಹುಟ್ಟೋದಕ್ಕೂ ಮೊದಲೇ ಕುಲಾವಿ ಹೊಲಿಸಿದರು ಅನ್ನೋ ರೀತಿಯಲ್ಲೇ 'ಪುಷ್ಪ-2'ಗೆ ಕೂಡ ಹೆಚ್ಚಾಗಿ ಬಿಲ್ಡಪ್ ನೀಡಿ, ಈಗ ಪುಷ್ಪ-2 ಸಿನಿಮಾ ಮಕಾಡೆ ಮಲಗಿದೆ ಎಂಬ ಆರೋಪ ಕೇಳಿ ಬಂದಿದೆ. 'ಪುಷ್ಪ-2' ಸಿನಿಮಾ ಬಗ್ಗೆ ಚರ್ಚೆ ಕೆಲ ದಿನಗಳಿಂದ ಬಲು ಜೋರಾಗಿ ನಡೆದಿತ್ತು 'ಪುಷ್ಪ-2' ಸಿನಿಮಾ ಅಷ್ಟು ಕಾಸು ಮಾಡುತ್ತೆ... ಇಷ್ಟು ಸಾವಿರ ಕೋಟಿ ರೂಪಾಯಿ ಗಳಿಸುತ್ತೆ ಅಂತೆಲ್ಲಾ ಜೋರು ಚರ್ಚೆ ನಡೆದವು. ಹೀಗಿದ್ದಾಗಲೇ, ಪುಷ್ಪ-2 ಮೊದಲ ದಿನವೇ 100 ಕೋಟಿ ರೂಪಾಯಿ ಭರ್ಜರಿ ಕಲೆಕ್ಷನ್....
ಅಂದಹಾಗೆ 'ಪುಷ್ಪ-2' ಸಿನಿಮಾ ಹೀನಾಯ ಸೋಲು ಕಂಡಿದೆ ಅಂತಾ ಒಂದು ಕಡೆ ಇದೀಗ ಚರ್ಚೆ ನಡೆಯುತ್ತಿದ್ದರೆ, ಮತ್ತೊಂದು ಕಡೆ 'ಪುಷ್ಪ-2' ಸಿನಿಮಾ 100 ಕೋಟಿ ರೂಪಾಯಿಗೂ ಹೆಚ್ಚು ಹಣ ಬಾಚಿದೆ ಅಂತಾ ಸುದ್ದಿ ಹಬ್ಬಿದೆ. 'ಪುಷ್ಪ-2' ಸಿನಿಮಾ ಅಲ್ಲು ಅರ್ಜುನ್ ಜೀವನದ ಅತಿದೊಡ್ಡ ಸಿನಿಮಾ. ಹೀಗಿದ್ದರೂ 'ಪುಷ್ಪ-2' ಸಿನಿಮಾ ಸೋತು ಸುಣ್ಣವಾಗಿದೆ ಎನ್ನುತ್ತಾ ಟ್ರೋಲ್ ಮಾಡಲಾಗುತ್ತಿದೆ. ಹೀಗಾಗಿ 'ಪುಷ್ಪ-2' ಸಿನಿಮಾ 100 ಕೋಟಿ ರೂಪಾಯಿಗೂ ಹೆಚ್ಚು ಹಣ ಮೊದಲ ದಿನವೇ ಕಲೆಕ್ಷನ್ ಮಾಡಿದೆಯಾ?

ಸಿನಿಮಾ ನೋಡಿ ತಲೆನೋವು ಬಂತು ಅಂತಾ...
ಹೌದು, ಕರ್ನಾಟಕ & ಕನ್ನಡಿಗರ ರಾಜಧಾನಿ ಬೆಂಗಳೂರಿನಲ್ಲಿ ಮಾತ್ರವಲ್ಲ ಖುದ್ದು ಆಂಧ್ರ & ತೆಲಂಗಾಣ ರಾಜ್ಯದಲ್ಲಿ ಕೂಡ 'ಪುಷ್ಪ-2' ಸಿನಿಮಾ ನೋಡಿದ ಅಭಿಮಾನಿಗಳು ರೊಚ್ಚಿಗೆದ್ದು ರಿಯಾಕ್ಷನ್ ಕೊಟ್ಟಿದ್ದಾರೆ. ಹಾಗೇ ಇನ್ನೂ ಕೆಲವರು ಈ ಸಿನಿಮಾ ನೋಡುವ ಬದಲು ಮನೆಗೆ ಹೋಗಿ ನಿದ್ದೆ ಮಾಡಬಹುದಿತ್ತು, ಹಾಗೆ... ಹೀಗೆ... ಅಂತೆಲ್ಲಾ ಮಾತನಾಡುತ್ತಿದ್ದಾರೆ. ಈ ಸಮಯದಲ್ಲೇ, 'ಪುಷ್ಪ-2' ಸಿನಿಮಾ 100 ಕೋಟಿ ರೂಪಾಯಿಗೂ ಹೆಚ್ಚು ಹಣ ಮೊದಲ ದಿನ ಕಲೆಕ್ಷನ್ ಮಾಡಿದೆಯಾ? ಎಂಬ ಪ್ರಶ್ನೆ ಕೂಡ ಕಾಡುತ್ತಿದೆ.
ಸಿನಿಮಾ ಬಗ್ಗೆ ಸಿಕ್ಕಾಪಟ್ಟೆ ಟ್ರೋಲ್!
'ಪುಷ್ಪ-2' ಸಿನಿಮಾ ಮಕಾಡೆ ಮಲಗಿದೆ & ನೋಡೋದಕ್ಕೆ ಧಾರಾವಾಹಿ ಅಂದ್ರೆ ಸೀರಿಯಲ್ ಥರನೇ ಇದೆ ಅಂತಾ ಪ್ರೇಕ್ಷಕರು ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧೆಡೆ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಹೀಗೆ 'ಪುಷ್ಪ-2' ಸಿನಿಮಾ ಬಗ್ಗೆ ಸರಿ ಇಲ್ಲ ಅನ್ನೋ ವಿಮರ್ಶೆ ವಿಡಿಯೋಗಳ ನಡುವೆ, ಒಂದೊಂದಲ್ಲ ಅಣ್ಣ... ಒಂದೊಂದಲ್ಲ... ಡೈಲಾಗ್‌ನ ಮಿಕ್ಸ್ ಮಾಡಿ ಸಿನಿಮಾ ನೋಡಿದ ಫ್ಯಾನ್ಸ್ ಹೇಳಿಕೆಗಳ ಜೊತೆಗೆ ಎಡಿಟ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಈಗ ಟ್ರೋಲ್ ಮಾಡಲಾಗುತ್ತಿದೆ.
ಒಟ್ನಲ್ಲಿ ಇದೆಲ್ಲಾ ಏನೇ ಇರಲಿ, 'ಪುಷ್ಪ-2' ಸಿನಿಮಾ ಬಗ್ಗೆ ಅಭಿಮಾನಿಗಳು ಇಟ್ಟುಕೊಂಡಿದ್ದ ಅತಿಯಾದ ನಿರೀಕ್ಷೆಗಳು ಇದೀಗ ಹುಸಿಯಾಗಿವೆ. ಅದರಲ್ಲೂ 'ಪುಷ್ಪ-2' ಸಿನಿಮಾದ ಎಷ್ಟೋ ಷೋಗಳು ಖಾಲಿ ಖಾಲಿ ಓಡಿವೆ ಎಂಬ ಆರೋಪ ಕೂಡ ಕೇಳಿ ಬಂದಿದ್ದು, ಮುಂದೆ ಇದೇ ವಿಚಾರ ದೊಡ್ಡ ಫ್ಯಾನ್ ವಾರ್‌ಗೆ ಕೂಡ ಕಾರಣವಾಗುವ ಸಾಧ್ಯತೆ ದಟ್ಟವಾಗಿದೆ.
ಅಲ್ಲು ಅರ್ಜುನ್ ನಿವೃತ್ತಿ ಗ್ಯಾರಂಟಿ?
'ಪುಷ್ಪ-2' ಹಂಗಿರುತ್ತೆ... 'ಪುಷ್ಪ-2' ಹಿಂಗಿರುತ್ತೆ... ಅಂತಾ ಬರೀ ಬಿಲ್ಡಪ್ ಕೊಟ್ಟಿದ್ದೇ ಕೊಟ್ಟಿದ್ದು. ಆದರೆ 'ಪುಷ್ಪ-2' ಸಿನಿಮಾ ಮಾತ್ರ ಹೆಂಗೆಂಗೋ ಇದೆ ಅಂತಾ ಪ್ರೇಕ್ಷಕರು ಆರೋಪ ಮಾಡುತ್ತಿದ್ದಾರೆ. 'ಪುಷ್ಪ-2' ಸಿನಿಮಾ ಮಕಾಡೆ ಮಲಗಿ ಒದ್ದಾಡುತ್ತಿದೆ, ಬರೀ ಬಿಲ್ಡಪ್ ತೋರಿಸಿ ಈ ಸಿನಿಮಾ ಮಾಡಲಾಗಿದೆ ಅಂತಾ ಪ್ರೇಕ್ಷಕರು ಆರೋಪ ಮಾಡುತ್ತಿದ್ದಾರೆ. ಹೀಗೆ ಹೀನಾಯ ಸೋಲು ಕಂಡ ನಂತರ ಅಲ್ಲು ಅರ್ಜುನ್ ಒದ್ದಾಡಿ ಹೋಗಿದ್ದು, ಭವಿಷ್ಯದ ಬಗ್ಗೆ ಕೂಡ ನಟ ಅಲ್ಲು ಅರ್ಜುನ್‌ಗೆ ಚಿಂತೆ ಶುರುವಾಗಿದೆ. ಈ ಸಮಯದಲ್ಲೇ, ಅಲ್ಲು ಅರ್ಜುನ್ ತೆಲುಗು ಸಿನಿಮಾ ರಂಗದಿಂದ ನಿವೃತ್ತಿಗಾಗಿ ಮಹತ್ವದ ಒತ್ತಾಯ ಕೂಡ ಕೇಳಿ ಬಂದಿದೆ.












Click it and Unblock the Notifications