Allu Arjun: ಅಲ್ಲು ಅರ್ಜುನ್ ಭೇಟಿಗೆ 1600 ಕಿಮೀ. ಸೈಕಲ್‌ನಲ್ಲಿ ಬಂದ ಅಭಿಮಾನಿ, ನಟ ಮಾಡಿದ್ದೇನು?
ದಕ್ಷಿಣ ಭಾರತದ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ತೆಲುಗಿನ ನಟ ಅಲ್ಲು ಅರ್ಜುನ್ (Allu Arjun) ಅವರು 'ಪುಪ್ಪ' ಸಿನಿಮಾ ಮೂಲಕ ಹೆಚ್ಚು ಪ್ರಸಿದ್ಧಿ ಪಡೆದಿದ್ದಾರೆ. ದಕ್ಷಿಣ ಭಾರತ ನಟ ಇಡೀ ಭಾರತಾದ್ಯಂತ ಅಭಿಮಾನಿ ಸಂಪಾದಿಸಿದ್ದಾರೆ. ಈ ಕಾರಣದಿಂದ ಅವರೊಬ್ಬ ಅಭಿಮಾನಿಯು ಬರೋಬ್ಬರಿ 1600 ಕಿಲೋ ಮೀಟರ್ ಸೈಕಲ್ ತುಳಿದುಕೊಂಡು ಬಂದು ನೆಚ್ಚಿನ ನಟನನ್ನು ಭೇಟಿ ಮಾಡಿದ್ದಾರೆ.
ಹೌದು, ಅಚ್ಚರಿ ಎನ್ನಿಸಿದರೂ ಇದು ಸತ್ಯ. ಈ ಕುರಿತು ವಂಸಿ ಕಾಕಾ ಎಂಬುವವರು ಅಲ್ಲು ಅರ್ಜುನ್ ಅವರನ್ನು ಟ್ಯಾಗ್ ಮಾಡಿ, ಪೋಸ್ಟ್ ಹಂಚಿಕೊಂಡಿದ್ದಾರೆ. ಅದರಲ್ಲಿ ಅಭಿಮಾನಿಯು ನೆಚ್ಚಿನ ನಟನನ್ನು ನೋಡಲು ಬಂದ ವಿಡಿಯೋ ಇದೆ. ಹಾಗಾದರೆ ಬಹುದೂರದಿಂದ ಬಂದ ಅಭಿಮಾನಿ ಕಂಡು ಅಲ್ಲು ಅರ್ಜುನ್ ಅವರು ಮಾಡಿದ್ದೇನು? ಇಲ್ಲಿದೆ ಮಾಹಿತಿ.

ಈ ಅಭಿಮಾನಿಯು ಉತ್ತರ ಪ್ರದೇಶದ ಅಲಿಗರ್‌ನಿಂದ ಹೈದರಾಬಾದ್‌ಗೆ ನಟ ಅಲ್ಲು ಅರ್ಜುನ್ ನೋಡಲು ಸೈಕಲ್ ಮೂಲಕ ಆಗಮಿಸಿದ್ದಾರೆ. ರಸ್ತೆ, ಹೆದ್ದಾರಿಗಳ ಮೂಲಕ ಸಾಗಿ, ಹೈದರಾಬಾದ್‌ಗೆ ಆಗಮಿಸಿದ ಫ್ಯಾನ್ ಅಲ್ಲು ಅರ್ಜುನ್ ಅವರನ್ನು ಕಂಡು ಖುಷಿಪಟ್ಟಿದ್ದಾರೆ.
ವಿಶೇಷ ಅಭಿಮಾನಿಯೊಂದಿಗೆ ನಟ ಆದರದ ಮಾತು
ಉತ್ತರ ಪ್ರದೇಶದಿಂದ ಸೈಕಲ್‌ನಲ್ಲಿ ಬಂದ ವಿಶೇಷ ಅಭಿಮಾನಿಯನ್ನು ಬಲು ಆದರದಿಂದ ಅಲ್ಲು ಅರ್ಜುನ್ ಅವರು ಬರೆಮಾಡಿಕೊಂಡಿದ್ದಾರೆ. ನಗುಮೊಗದಿಂದ ಅಭಿಮಾನಿ ಜೊತೆಗೆ ಮಾತನಾಡಿ ಕಳುಹಿಸಿದ್ದಾರೆ.
A fan cycled over 1600 km from Aligarh, Uttar Pradesh, to Hyderabad to meet his hero, Icon Star @alluarjun. pic.twitter.com/CYYudDHOJ8
— Vamsi Kaka (@vamsikaka) October 16, 2024
ನನಗೆ ಅಲ್ಲು ಅರ್ಜುನ್ ಅವರನ್ನು ನೋಡಿ ಮಾತೆ ಬರುತ್ತಿಲ್ಲ. ನಿಜಕ್ಕೂ ಅವರು ಉತ್ತಮ, ವಿನಯವಂತ ಸ್ಟಾರ್ ನಟ. ಅವರನ್ನು ಸಿನಿಮಾದಲ್ಲಿ ನೋಡಿದ್ದಕ್ಕಿಂತ ಇಲ್ಲಿ ನೋಡಿದ್ದೆ ಅತ್ಯಂದ ವಿಶೇಷ ಎನ್ನಿಸಿತು. ತಂದೆ ತಾಯಿ ಆಶೀರ್ವಾದಿಂದ ನಾನು ಅವರನ್ನು ಮುಖಾ ಮುಖಿಯಾಗಿ ನೋಡಿದ್ದೇನೆ ಎಂದು ಆ ಅಭಿಮಾನಿ ಭಾವುಕರಾಗಿದ್ದಾರೆ.
ಅಲ್ಲು ಅರ್ಜುನ್ 'ಪುಷ್ಪಾ 2' ನಲ್ಲಿ ಬ್ಯೂಸಿ
ಸದ್ಯ ನಟ ಅಲ್ಲು ಅರ್ಜುನ್ ಅವರು ಪುಷ್ಪಾ 2 ಸಿನಿಮಾದಲ್ಲಿ ಬ್ಯೂಸಿಯಾಗಿದ್ದಾರೆ. ಇದು ಪ್ಯಾನ್ ಇಂಡಿಯಾ ಸಿನಿಮಾ ಆಗಿದೆ. ಇದರಲ್ಲಿ ನಟಿ ರಶ್ಮಿಕಾ ಮಂದಣ್ಣ ಅವರು ನಾಯಕಿ ಆಗಿ ನಟಿಸಿದ್ದಾರೆ. ಪುಷ್ಪಾ ಮೊದಲ ಭಾಗದ ಸಿನಿಮಾ ಹಿಟ್ ಆಗಿತ್ತು. ಇದೀಗ ಅದರ ಮುಂದುವರಿದ ಭಾಗವು ಇದೇ ಡಿಸೆಂಬರ್ ಗೆ ಬಿಡುಗಡೆ ಆಗಲಿದೆ. ನವೆಂಬರ್‌ನಿಂದ ಚಿತ್ರತಂಡ ಪ್ರಚಾರ ಕಾರ್ಯ ಶುರು ಮಾಡಲಿದೆ..












Click it and Unblock the Notifications