Rashmika Mandanna: 'ರಶ್ಮಿಕಾ ಶೆಟ್ಟಿ' ಬಗ್ಗೆ ಪುನೀತ್ ರಾಜಕುಮಾರ್ ಹೇಳಿದ್ದು ಕೊನೆಗೂ ನಿಜವಾಯ್ತು...

ಬೆಂಗಳೂರು, ಜುಲೈ 01: ಬಹುಬೇಡಿಕೆಯ, ಬಹುಭಾಷಾ ನಟಿ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣಾ (Rashmika Mandanna) ಅವರು ಆಗಷ್ಟೇ ಕಾಲೇಜು ಮುಗಿಸಿ ಪುಟ್ಟ ಹುಡುಗಿಯಂತಿದ್ದ ಸಂದರ್ಭದಲ್ಲಿ ಅವರಿಗೆ ಕನ್ನಡದಲ್ಲಿ ನಟಿಸಲು ಅವಕಾಶ ಸಿಕ್ಕಿತ್ತು. ಅವರ ನಟನೆಯ 'ಸಾನ್ವಿ ಜೋಸೆಪ್' ಪಾತ್ರ ಎಲ್ಲರಿಗೂ ಹತ್ತಿರವಾಗುತ್ತಿದ್ದಂತೆ ರಶ್ಮಿಕಾ ಅದೃಷ್ಟ ಖುಲಾಯಿಸಿತು. ನಂತರ ಅವರು ಕಾಲಿಟ್ಟ ಕಡೆಯಲ್ಲಿ ಬಿಗ್ ಬಜೆಟ್, ಪ್ಯಾನ್ ಇಂಡಿಯಾ ಸಿನಿಮಾಗಳ ಮೂಡಿಬಂದವು. ರಶ್ಮಿಕಾ ಬೇಡಿಕೆ ಹೆಚ್ಚುತ್ತಲೇ ಹೋಯಿತು. ಭಾಷೆ ಗಡಿ ಮೀರಿ ಬೆಳೆದ ರಶ್ಮಿಕಾ ಬಗ್ಗೆ ಅಂದು ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಹೇಳಿದ್ದ ಮಾತು ನಿಜವಾಯಿತು.

ಕನ್ನಡದಿಂದ ತೆಲುಗು ಸಿನಿಮಾದತ್ತ ತೆರಳಿದ್ದ ನಾಯಕಿ ರಶ್ಮಿಕಾ ಮರಳಿ ಕನ್ನಡಕ್ಕೆ ಬಂದಿಲ್ಲ. ಟಾಲಿವುಡ್, ಕಾಲಿವುಡ್, ಬಾಲಿವುಡ್‌ನಲ್ಲಿ ಸಖತ್ ಬ್ಯೂಸಿಯಾಗಿದ್ದ ಬಿಟ್ಟಿದ್ದಾರೆ. ಬರಿ ಸ್ಟಾರ್ ಹಿರೋಯಿನ್ ಅಲ್ಲ, ಪ್ಯಾನ್ ಇಂಡಿಯಾ ಹಿರೋಯಿನ್ ಆಗಿ ಅತೀ ಕಡಿಮೆ ವಯಸ್ಸಿನಲ್ಲಿ ಸಾಧನೆ ಮಾಡಿದ್ದಾರೆ. ಇದಕ್ಕು ಮೊದಲು ಅವರು ಕನ್ನಡದ ಒಂದೆರಡು ಸಿನಿಮಾಗಳಲ್ಲಿ ನಟಿಸಿದ್ದರು. ಅದರಲ್ಲಿ 'ಅಂಜನಿಪುತ್ರ' ಸಿನಿಮಾ ಸಹ ಒಂದು.

Puneeth Rajkumar s prediction about Rashmika Mandanna s film Career Came True For This Reason

ಈ ಸಿನಿಮಾ ನಂತರ ವೇದಿಕೆ ಮೇಲೊಂದರಲ್ಲಿ ನಟ ಪವರ್ ಸ್ಟಾರ್ ಹಾಗೂ ನಟಿ ರಶ್ಮಿಕಾ ಇಬ್ಬರು ಅತಿಥಿಗಳಾಗಿ ತೆರಳಿದ್ದ ವೇಳೆ ಪುನೀತ್ ಅವರು 'ರಶ್ಮಿಕಾ ಶೆಟ್ಟಿ' ಎಂದು ಕರೆದಿದ್ದರು. ಅವರ ಭವಿಷ್ಯದ ಬಗ್ಗೆ ಕೆಲವು ಮಾತುಗಳನ್ನು ಆಡಿದ್ದರು. ಆ ವಿಡಿಯೋ ಇವತ್ತಿಗೂ ಹರಿದಾಡುತ್ತಲೇ ಇದೆ. ಅಪ್ಪು ಮಾತು ಕೇಳಿ ರಶ್ಮಿಕಾ ನಾಚಿ ನೀರಾಗಿದ್ದರು.

'ಕಿರಿಕ್ ಪಾರ್ಟಿ' ಸಿನಿಮಾ ಮೂಲಕ ಬೆಳ್ಳಿ ತೆರೆ ಮೇಲೆ ಕಾಣಿಸಿಕೊಂಡ ನಟಿ ರಶ್ಮಿಕಾ ಮಂದಣ್ಣಾ ಅವರಿಗೆ ಹಾಗು ನಟ ರಕ್ಷಿತ್ ಶೆಟ್ಟಿ ಅವರ ಮಧ್ಯ ಲವ್ ಆಗಿ ಇಬ್ಬರಿಗೂ ನಿಶ್ಚಿತಾರ್ಥ ಸಹ ಆಗಿತ್ತು. ನಂತರ ಅದು ಮುರಿದು ಬಿತ್ತು. ಇವರಿಬ್ಬರ ಲವ್ ಚಾಲ್ತಿಯಲ್ಲಿದ್ದಾಗಲೇ ನಡೆದಿದ್ದ ವೇದಿಕೆ ಕಾರ್ಯಕ್ರಮ ಮೇಲೆ ಅಪ್ಪು 'ರಶ್ಮಿಕಾ ಶೆಟ್ಟಿ' ಎಂದು ಹೇಳಿ ಕಾಲೆಳೆದಿದ್ದರು. ನೀವು ಭವಿಷ್ಯದಲ್ಲಿ ಹೀಗೆಲ್ಲ ಆಗಬೇಕು ಎಂದು ಹೇಳಿದ್ದರು. ಕೊನೆಗೂ ಅದರಂತೆ ಆಗಿದೆ ಎಂದು ಎಲ್ಲರಿಗೂ ಅನ್ನಿಸುತ್ತದೆ. ಅಷ್ಟಕ್ಕೂ ಪುನೀತ್ ರಾಜಕುಮಾರ್ ಅವರು ಹೇಳಿದ್ದೇನು?...

Puneeth Rajkumar s prediction about Rashmika Mandanna s film Career Came True For This Reason

ರಶ್ಮಿಕಾ ಬಗ್ಗೆ ಹೇಳಿ ಎಂದಾಗ ಅಪ್ಪು ಅವರು..''ರಶ್ಮಿಕಾ ಶೆಟ್ಟಿ ಬಗ್ಗೆನಾ..? ಎಂದು ಉದ್ಘಾರ ತೆಗೆಯುತ್ತಿದ್ದಂತೆ ರಶ್ಮಿಕಾ ಅವರು 'ಯಾಕ್ ಸರ್ ಸುಮ್ಮನಿರಿಸಿ ಸರ್' ಎಂದು ನಾಚಿಕೆಯಿಂದ ಹೇಳುತ್ತಾರೆ.. ಬ್ಯಾಕ್‌ಗ್ರೌಂಡ್‌ನಲ್ಲಿ ಕಿರಿಕ್ ಪಾರ್ಟಿ ಸಿನಿಮಾದ ಮ್ಯೂಸಿಕ್ ಬರುತ್ತಿದ್ದಂತೆ ಎಲ್ಲರು ನಗಾಡುತ್ತಾರೆ...

ರಶ್ಮಿಕಾ ಭವಿಷ್ಯದ ಬಗ್ಗೆ ಅಪ್ಪು ಮಾತುಗಳು..

''ರಶ್ಮಿ ಕಾ ಮಂದಣ್ಣ ಅವರು ಬಗ್ಗೆ ನಮ್ಮ ಸೆಟ್‌ನಲ್ಲಿ ತುಂಬ ಪುಟ್ಟ ಹುಡುಗಿ, ನಮಗೆಲ್ಲರಿಗೂ ಚಿಕ್ಕ ಮಗು ತರಾ ವಯಸ್ಸಿನಲ್ಲಿ ನನಗಿಂತ ತುಂಬಾ ಚಿಕ್ಕ ಹುಡುಗಿ ಅವಳು, ತುಂಬ ಒಳ್ಳೆ ಹುಡುಗಿ. ಹಾರ್ಡ್ ವರ್ಕರ್, ಸಾಕಷ್ಟು ಚೆನ್ನಾಗಿ ಸಿನಿಮಾ ಮಾಡಬೇಕು. ಎಲ್ಲ ಭಾಷೆಗಳಲ್ಲಿ ಸಿನಿಮಾ ಮಾಡಬೇಕು. ದುಡ್ಡಿಗಿಂತ ಒಳ್ಳೆಯ ಹೆಸರು ಸಂಪಾದಿಸಬೇಕು ಅಂತಾ ಮನಸ್ಸಲ್ಲಿ ಒಳ್ಳೆಯ ಗುರಿ ಇಟ್ಟುಕೊಂಡು ಬಂದಂತಾ ಹುಡುಗಿ ಅವಳು. ಒಳ್ಳೆಯದಾಗಲಿ ಅವಳ ಜೊತೆ ಕೆಲಸ ಮಾಡಿದ್ದು ನನಗೆ ತುಂಬಾ ಖುಷಿ ಕೊಟ್ಟಿದೆ'' ಎಂದು ನಟ ಪುನೀತ್ ಹೇಳಿದ್ದಾರೆ.

ಅಪ್ಪು ಮಾತುಗಳೇ ನಿಜವಾದವು: ಫ್ಯಾನ್ಸ್ ಹೇಳಿದ್ದೇನು

ಕಾಕತಾಳಿಯವೋ ಏನು ಎಂಬಂತೆ ಅಪ್ಪು ಅವರು ಹೇಳಿದ ಎಲ್ಲ ಮಾತುಗಳು ನಡೆದಿವೆ. ಕನ್ನಡ ಕೆಲವು ಸಿನಿಮಾಗಳ ಬೆನ್ನಲ್ಲೆ ತೆಲುಗಿನ 'ಚಲೋ' ಸಿನಿಮಾ ಮೂಲಕ ಟಾಲಿವುಡ್ ಗೆ ತೆರಳಿದರು. ನಂತರ ವಿಜಯ್ ದೇವರಕೊಂಡ ಜತೆಗಿನ ಸಿನಿಮಾಗಳು ಪ್ರೇಕ್ಷರನ್ನು ರಂಜಿಸಿದವು. ಆರಂಬದಲ್ಲಿ ಬಾಲಿವುಡ್‌ನಲ್ಲಿ ಅಷ್ಟಾಗಿ ದೊಡ್ಡ ಹಿಟ್ ಸಿಗದಿದ್ದರು ಸಹ 'ಅನಿಮಲ್' ಸಿನಿಮಾ ಮೂಲಕ ಸಾಕಷ್ಟು ಖ್ಯಾತ ಪಡೆದ ನಟ ರಶ್ಮಿಕಾ ಮುಂದೆ ಸಾಲು ಸಾಲು ಸಿನಿಮಾ ಆಫರ್ ಬಂದವು. ನಂತರ ಪ್ಯಾನ್ ಇಂಡಿಯಾ ಸಿನಿಮಾ 'ಪುಷ್ಪಾ' ಸರಣಿ ಸಿನಿಮಾ ಮಾಡಿದರು. ರಶ್ಮಿಕಾ ಜನಪ್ರಿಯತೆ ಹೆಚ್ಚುತ್ತಲೇ ಹೋಯಿತು. ನ್ಯಾಷನಲ್ ಕ್ರಷ್, ಬಹು ಬೇಡಿಕೆ ನಟಿ, ಬಹುಭಾಷಾ ನಟಿಯ ಸಾಲಿಗೆ ಸೇರಿದರು. ಹೆಸರು, ಕೀರ್ತಿ, ಹಣ ಎಲ್ಲವು ಅವರನ್ನು ಹುಡುಕಿಕೊಂಡು ಬಂತು. ನೋಡ ನೋಡುತ್ತಿದ್ದಂತೆ ಕೆಲವೇ ವರ್ಷಗಳಲ್ಲಿ ಭಾರತೀಯ ಸ್ಟಾರ್ ನಟಿಯಾಗಿ ಗುರುತಿಸಿಕೊಂಡರು.

ಇದೆಲ್ಲ ನೋಡಿದರೆ ಅಂದು ಅಪ್ಪು ಅವರ ಬಾಯಲ್ಲಿ ಬಂದ ಎಲ್ಲ ಮಾತುಗಳು ಇಂದು ನಿಜವಾಗಿವೆ. ಆ ಮಾತು ನಟಿಯ ಇಂದಿನ ಜೀವನಕ್ಕೆ ಸೂಕ್ತವಾಗಿದೆ ಎಂಬುದು ಸಾಬೀತಾದಂತಿದೆ. ಈ ವಿಡಿಯೋ ನೋಡಿದ ಅದೆಷ್ಟೋ ಅಭಿಮಾನಿಗಳು ಪ್ರತಿಕ್ರಿಯಿಸಿದ್ದಾರೆ.

''ಓ ಮೇಡಂಗೆ ಇಲ್ಲಿದೆ ನೋಡಿ ಆಶೀರ್ವಾದ ನಮ್ಮ ಅಪ್ಪು ಬಾಸ್ ಕಡೆಯಿಂದ ಅದಕ್ಕೆ ನೀವು ಈ ರೇಂಜ್ ಹೋಗಿರೋದು ಸ್ವಲ್ಪ ಇದೆಲ್ಲ ನೆನಸಿಕೊಳ್ಳಿ ಎಂದಿದ್ದಾರೆ. ಜೋತೆ ಗಿರದ ಜೀವ ಎಂದೆಂದಿಗೂ ಜೀವಂತ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಈ ಮೂಲಕ ಅಪ್ಪು ಅವರ ಆಶಿರ್ವಾದ, ಹರಕೆ ಇದ್ದವರು ಸಿನಿಮಾದಲ್ಲಿ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಾರೆ ಎಂದು ಫ್ಯಾನ್ಸ್ ಸ್ಮರಿಸಿದ್ದಾರೆ. ಅಪ್ಪು ಮಾತುಗಳನ್ನು ಹಾಡಿ ಹೊಗಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+