Premada Oorali OTT: ಹೊಸ ದಾಖಲೆ ಬರೆದ ಸಿನಿಮಾ; ₹1ಕೋಟಿಗೆ ಆಡಿಯೋ ಹಕ್ಕು ಸೇಲ್, ಟಾಕ್ಸಿಕ್ ರೆಕಾರ್ಡ್ ಬ್ರೇಕ್?

Premada Oorali Movie: ಕನ್ನಡ ಚಿತ್ರರಂಗದಲ್ಲಿ ಮತ್ತೊಂದು ಮೈಲಿಗಲ್ಲು ನಿರ್ಮಿಸಿರುವ ಅತೀ ಕಡಿಮೆ ಬಜೆಟ್‌ನ 'ಪ್ರೇಮದ ಊರಲಿ' ಸಿನಿಮಾ ದಾಖಲೆಯ ಮೇಲೆ ದಾಖಲೆ ಮಾಡುತ್ತಿದೆ. ಸತತ 34 ದಿನಗಳ ಯಶಸ್ವಿ ಪ್ರದರ್ಶನದೊಂದಿಗೆ ಮುನ್ನುಗ್ಗುತ್ತಿರುವ ಸಿನಿಮಾ ವಿಶ್ವದಾದ್ಯಂತ ಭರ್ಜರಿ ಕಲೆಕ್ಷನ್‌ ಮಾಡಿದೆ. ಜೊತೆಗೆ ಈ ಸಿನಿಮಾದ ಆಡಿಯೋ ಹಕ್ಕು ಸಹ ದಾಖಲೆಯ ಬೆಲೆಗೆ ಮಾರಾಟವಾಗಿದೆ. ಈ ಮೂಲಕ ಸ್ಟಾರ್ ಹೀರೋಗಳ ಸಿನಿಮಾಗಳನ್ನು ಹಿಂದಿಕ್ಕಿದೆ. ಇನ್ನೂ ಈ ಸಿನಿಮಾದ OTT ಹಕ್ಕು ಸಹ 'ಟಾಕ್ಸಿಕ್' ಸಿನಿಮಾವನ್ನು ಮೀರಿಸಲಿದೆ.

ಮನೋಜ್ ಕುಮಾರ್ ಅವರ ನಿರ್ದೇಶನದಲ್ಲಿ ಸುಮಾರು 02 ಕೋಟಿ ರೂಪಾಯಿಯಲ್ಲಿ ನಿರ್ಮಾಣವಾದ 'ಪ್ರೇಮದ ಊರಲಿ' ಸಿನಿಮಾದ ಹಾಡುಗಳನ್ನು ಕಳೆದೊಂದು ತಿಂಗಳಿನಿಂದ ಪ್ರೇಕ್ಷಕರು ಗುನುಗುತ್ತಿದ್ದಾರೆ. ಇದೀಗ ಇದೇ ಮೆಲೋಡಿ ಹಾಡುಗಳ ಹಕ್ಕು ಬರೋಬ್ಬರಿ 01 ಕೋಟಿ ರೂಪಾಯಿಗೆ ಮಾರಾಟವಾಗಿದೆ. ಈ ಆಡಿಯೋ ಮಾರಾಟದ ಹಕ್ಕನ್ನು ಆನಂದ್ ಆಡಿಯೋ ಪಡೆದುಕೊಂಡಿದೆ.

Premada Oorali Movie

ದೊಡ್ಡ ಮೊತ್ತಕ್ಕೆ ಆಡಿಯೋ ಹಕ್ಕು ಸೇಲ್

ಈ ಮೂಲಕ ಕನ್ನಡದಲ್ಲಿ ಹೊಸಬರ ಸಿನಮಾವೊಂದರ ಆಡಿಯೊ ಹಕ್ಕು ಇಷ್ಟು ದೊಡ್ಡ ಮೊತ್ತಕ್ಕೆ ಮಾರಾಟವಾಗಿದ್ದು, ಇದೇ ಮೊದಲು. ಪ್ರೇಮದ ಊರಲಿ ಹಾಡುಗಳನ್ನು ಸುನಾದ್ ಗೌತಮ್ ಅವರ ಸಂಗೀತದಲ್ಲಿ ಮೂಡಿ ಬಂದಿವೆ. ಆಡಿಯೋ ಹಕ್ಕು ಹೆಚ್ಚಿನ ಹಣಕ್ಕೆ ಮಾರಾಟವಾದ ಸ್ಟಾರ್ ನಟರ ಟಾಪ್ 10 ಸಿನಿಮಾಗಳ ಸಾಲಿಗೆ ಸೇರಿದೆ.

ಟಾಕ್ಸಿಕ್ ರೆಕಾರ್ಡ್ ಬ್ರೇಕ್ ಸಾಧ್ಯತೆ

ಟಾಕ್ಸಿಕ್ ಸಿನಿಮಾದ OTT ಡಿಜಿಟಲ್ ಹಕ್ಕು ಮಾರಾಟಕ್ಕೆ 200 ಕೋಟಿ ರೂ.ಗೆ ಅಧಿಕ ಬೇಡಿಕೆ ಇಟ್ಟಿತ್ತು. ಸಿನಿಮಾ ಬಿಡುಗಡೆ ಮುನ್ನ 150 ಕೋಟಿ ರೂಪಾಯಿ ಕೆಲವು ಸಂಸ್ಥೆಗಳು ಕೇಳಿದ್ದವು. ಬಳಿಕ ಸಿನಿಮಾ ಸೋಲಿನಿಂದಾಗಿ ಟಾಕ್ಸಿಕ್ ಡಿಜಿಟಲ್ ಹಕ್ಕು 30ಕೋಟಿ ರೂಪಾಯಿಗೆ ಇಳಿಕೆ ಆಗಿದೆ. ಅಂದರೆ ಎಲ್ಲ ಭಾಷೆಗಳಲ್ಲಿ ಟಾಕ್ಸಿಕ್ ಸಿನಿಮಾ 30 ಕೋಟಿ ರೂ.ಗೆ ನೀಡಲು ಮುಂದಾಗಿದೆ.

ಆದರೆ ಪ್ರೇಮ್ ಊರಲಿ ಸಿನಿಮಾ ಸದ್ಯ 126ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದು, ಒಂದು ತಿಂಗಳಿನಿಂದ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಕಳೆದ ಎಲ್ಲ ದಾಖಲೆ ನೋಡಿದರೆ ಟಾಕ್ಸಿಕ್ ಸಿನಿಮಾಗಿಂತಲೂ ಅಧಿಕ ಬೆಲೆಗೆ ಅಂದಾಜು 50 ಕೋಟಿ ಅಧಿಕ ಬೆಲೆಗೆ ಸಿನಿಮಾದ OTT ಡಿಜಿಟಲ್ ಹಕ್ಕುಗಳು ಮಾರಾಟವಾಗುವ ನಿರೀಕ್ಷೆ ಇದೆ ಎನ್ನಲಾಗುತ್ತಿದೆ.

ಸದ್ಯ ಚಿತ್ರವು ಕರ್ನಾಟಕ, ಭಾರತದ ಇತರ ರಾಜ್ಯಗಳು ಸೇರಿದಂತೆ ವಿಶ್ವದ ಬೇರೆ ಬೇರೆ ದೇಶಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಹೀಗಾಗಿ ಇದರ OTT ಬಿಡುಗಡೆ ದಿನಾಂಕ, ಹಕ್ಕುಗಳ ಮಾರಾಟ ಕುರಿತು ಅಧಿಕೃತ ಮಾಹಿತಿ ಇನ್ನಷ್ಟೇ ಸಿಗಬೇಕಿದೆ.

ಯಾವ ಸ್ಟಾರ್ ಗಳ ಸಿನಿಮಾ ಹಿಂದಿಕ್ಕಿದೆ?

ನಟ ಸುದೀಪ್, ದಿ.ಪುನೀತ್ ರಾಜಕುಮಾರ್, ನಟ ದರ್ಶನ್ ಕುರುಕ್ಷೇತ್ರ ಸಿನಿಮಾದ ದಾಖಲೆಯನ್ನು 'ಪ್ರೇಮದ ಊರಲಿ' ಹಿಂದಿಕ್ಕಿದೆ. ಅಪ್ಪು ಅವರ 'ಜೇಮ್ಸ್' ಸಿನಿಮಾ 94 ಕೋಟಿ ರೂ. ಗಳಿಕೆ ಆಗಿತ್ತು, ಪೌರಾಣಿಕ ಸಿನಿಮಾ 'ಕುರುಕ್ಷೇತ್ರ' ಅಂದು 81 ಕೋಟಿ ರೂ. ಗಳಿಸಿದರೆ, ಸುದೀಪ್ ಅವರ 'ವಿಕ್ರಾಂತ್ ರೋಣ' ಸಿನಿಮಾ 100 ಆಸಪಾಸಿಗೆ ಕಲೆಕ್ಷನ್ ಮಾಡಿತ್ತು. ಇದೀಗ ಪ್ರೇಮದ ಊರಲಿ 130 ಕೋಟಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ಟಾಪ್ 10ಗಳ ಲಿಸ್ಟ್‌ನಲ್ಲಿ 9ನೇ ಸ್ಥಾನಕ್ಕೇರಿದೆ.

ಉಳಿದಂತೆ ಕೆ.ಜಿ.ಎಫ್ ಚಾಪ್ಟರ್ 2 (KGF 2) ರೂ. 1,215.00 ಕೋಟಿ, ಕಾಂತಾರ ಚಾಪ್ಟರ್ ರೂ. 852.36 ಕೋಟಿ, ಕಾಂತಾರ ರೂ. 407.82 ಕೋಟಿ, ಟಾಕ್ಸಿಕ್ ರೂ. 342.26 ಕೋಟಿ, ಮಹಾವತಾರ್ ನರಸಿಂಹ ರೂ. 326.82 ಕೋಟಿ, ಕೆ.ಜಿ.ಎಫ್ ಚಾಪ್ಟರ್ 1 ರೂ. 237.75 ಕೋಟಿ ಮತ್ತು ಸು ಫ್ರಂ ಸೋ ₹122.83 ಕೋಟಿ ಹಾಗೂ 777 ಚಾರ್ಲಿ ₹102.75 ಕೋಟಿ ರೂ. ಮಾಡಿದೆ. ಈ ಹಿಟ್ ಲಿಸ್ಟ್‌ಗಳ ಸಾಲಿಗೆ ಪ್ರೇಮದ ಊರಲಿ ಸೇರಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+