Prabhas: ಶೀಘ್ರದಲ್ಲೇ ಪ್ರಭಾಸ್ ಮದುವೆ; ಹುಡುಗಿ ಯಾರು?
ಬಾಹುಬಲಿ ಸಿನಿಮಾ ಮೂಲಕ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿರುವ ತೆಲುಗು ನಟ ಪ್ರಭಾಸ್ ಕೊನೆಗೂ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಬಂದಿದೆ. ತೆಲುಗು ಸಿನಿಮಾರಂಗದ ಸೂಪರ್ ಸ್ಟಾರ್ ನಟರೊಬ್ಬರೇ ಪ್ರಭಾಸ್ ಮದುವೆ ಸುದ್ದಿಯನ್ನು ಬಹಿರಂಗಪಡಿಸಿದ್ದಾರೆ. ಹಲವು ಬಾರಿ ಪ್ರಭಾಸ್ ಮದುವೆ ವದಂತಿಗಳು ಬಂದಿದ್ದರೂ ಪ್ರಭಾಸ್ ಮಾತ್ರ ಸಿನಿಮಾ ಕಡೆ ಗಮನ ಹರಿಸಿದ್ದರು. ಆದರೆ ಈ ಬಾರಿ ದೊಡ್ಡ ನಟನೇ ಪ್ರಭಾಸ್ ಸಿನಿಮಾ ಬಗ್ಗೆ ಮಾತನಾಡಿರುವುದು ಕುತೂಹಲ ಕೆರಳಿಸಿದೆ.
ಆರ್ ಆರ್ ಆರ್ ಸಿನಿಮಾ ಮೂಲಕ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿದ ತೆಲುಗು ನಟ ರಾಮ್ ಚರಣ್ ಈಗ ಗೇಮ್ ಚೇಂಜರ್ ಆಗಿ ತೆರೆ ಮೇಲೆ ಬಂದಿದ್ದಾರೆ. ಶಂಕರ್ ನಿರ್ದೇಶನದ ಬಹು ನಿರೀಕ್ಷಿತ ಬಹು ಭಾಷಾ ಸಿನಿಮಾ ಶುಕ್ರವಾರ ಬಿಡುಗಡೆಯಾಗಿದ್ದು ಉತ್ತಮ ಪ್ರದರ್ಶನ ಕಾಣುತ್ತಿದೆ.

ತೆಲುಗಿನ ಶೋ ಅನ್‌ಸ್ಟಾಪಬಲ್ ವಿತ್ ಎನ್‌ಬಿಕೆ ಸೀಸನ್ 4 ನಲ್ಲಿ ಭಾಗವಹಿಸಿ ಮಾತನಾಡುವ ಸಂದರ್ಭದಲ್ಲಿ ರಾಮ್ ಚರಣ್ ಈ ವಿಚಾರ ಬಹಿರಂಗಪಡಿಸಿದ್ದಾರೆ. ಹಿರಿಯ ನಟ ಬಾಲಕೃಷ್ಣ ಈ ಕಾರ್ಯಕ್ರಮ ನಡೆಸಿಕೊಡುತ್ತಿದ್ದು, ತೆಲುಗಿನ ಜನಪ್ರಿಯ ಶೋಗಳಲ್ಲಿ ಇದು ಒಂದಾಗಿದೆ.
ಪ್ರಭಾಸ್ ಮದುವೆ ಫಿಕ್ಸ್
ರಾಮ್ ಚರಣ್ ಹೇಳಿಕೆ ಪ್ರಕಾರ ಇದೇ ವರ್ಷದಲ್ಲಿ ಪ್ರಭಾಸ್ ಮದುವೆ ನಡೆಯಲಿದೆ. ಆಂಧ್ರ ಪ್ರದೇಶದ ಗಾನಪವರಂನ ಹುಡುಗಿಯನ್ನು ಪ್ರಭಾಸ್ ಮದುವೆಯಾಗಲಿದ್ದಾರೆ ಎಂದು ರಾಮ್ ಚರಣ್ ಹೇಳಿರುವುದು ಇದೀಗ ಪ್ರಭಾಸ್ ಅಭಿಮಾನಿಗಳ ಖುಷಿ ಹೆಚ್ಚಿಸಿದೆ.
ಶೋನ ಟ್ರೇಲರ್ ಮಾತ್ರ ಬಿಡುಗಡೆಯಾಗಿದ್ದು ರಾಮ್ ಚರಣ್ ಹೇಳಿರುವ ಕೆಲವು ದೃಶ್ಯಗಳನ್ನು ತೋರಿಸಲಾಗಿದೆ. ಜನವರಿ 14ರಂದು ಶೋ ಪ್ರಸಾರವಾಗಲಿದ್ದು ಪ್ರಭಾಸ್ ಮದುವೆ ಬಗ್ಗೆ ಮತ್ತಷ್ಟು ಮಾಹಿತಿ ಹೊರಬೀಳುವ ಸಾಧ್ಯತೆ ಇದೆ.
ಪ್ರಭಾಸ್ ಅಭಿಮಾನಿಗಳ ಸಂಭ್ರಮ
ಹಲವು ವರ್ಷಗಳಿಮದ ಪ್ರಭಾಸ್ ಅಭಿಮಾನಿಗಳು ನೆಚ್ಚಿನ ನಟ ಮದುವೆ ಅಪ್‌ಡೇಟ್‌ಗಾಗಿ ಕಾಯುತ್ತಿದ್ದಾರೆ. ಪ್ರಭಾಸ್‌ಗೆ ಈಗಾಗಲೇ 45 ವರ್ಷವಾಗಿದ್ದು ಇನ್ನೂ ಮದುವೆ ಯಾವಾಗ ಎನ್ನುವ ಚಿಂತೆ ಅಭಿಮಾನಿಗಳದ್ದಾಗಿದೆ. ಹಲವು ವರ್ಷಗಳ ಹಿಂದೆ ಪ್ರಭಾಸ್ ಅನುಷ್ಕಾ ಶೆಟ್ಟಿಯನ್ನು ಪ್ರೀತಿಸುತ್ತಿದ್ದಾರೆ ಎಂದು ವರದಿಯಾಗಿತ್ತು. ಆದರೆ ಜೋಡಿ ಈ ಸುದ್ದಿಯನ್ನು ನಿರಾಕರಿಸಿತ್ತು.
ಬಾಹುಬಲಿ ಸಿನಿಮಾದಲ್ಲಿ ನಟಿಸಿದ ಬಳಿಕ ಇಬ್ಬರು ಮದುವೆಯಾದರೆ ಚನ್ನಾಗಿರುತ್ತದೆ ಎಂದು ಅಭಿಮಾನಿಗಳು ಬಯಸಿದ್ದರು ಆದರೆ, ನಾವಿಬ್ಬರೂ ಒಳ್ಳೆ ಸ್ನೇಹಿತರು ಮಾತ್ರ ಎಂದು ಹೇಳಿದ್ದ ಪ್ರಭಾಸ್, ಅನುಷ್ಕಾ ಗಾಳಿ ಸುದ್ದಿಗೆ ಬ್ರೇಕ್ ಹಾಕಿದ್ದರು.
ಇದೀಗ ಪ್ರಭಾಸ್ ಮನೆಯಲ್ಲಿ ನೋಡಿದ ಹುಡುಗಿಯನ್ನೇ ಮದುವೆಯಾಗುತ್ತಿದ್ದಾರೆ ಎನ್ನುವ ಸುದ್ದಿ ಸಿಕ್ಕಿದೆ. ಸಲಾರ್ ಬಳಿಕ ಪ್ರಭಾಸ್ ಹಲವು ಸಿನಿಮಾಗಳಲ್ಲಿ ನಿರತರಾಗಿದ್ದಾರೆ. ಹೊಂಬಾಳೆ ಜೊತೆ ಮೂರು ಸಿನಿಮಾ ಮಾಡಲು ಪ್ರಭಾಸ್ ಒಪ್ಪಂದ ಮಾಡಿಕೊಂಡಿದ್ದಾರೆ. ಸಾಲು ಸಾಲು ಸಿನಿಮಾ ನಡುವೆ ಪ್ರಭಾಸ್ ಮದುವೆ ಯಾವಾಗ ಎನ್ನುವ ಪ್ರಶ್ನೆಗೆ ಶೀಘ್ರದಲ್ಲೇ ಉತ್ತರ ಸಿಗುವ ಸಾಧ್ಯತೆ ಇದೆ.












Click it and Unblock the Notifications