ದರ್ಶನ್ ಫ್ಯಾನ್ ಅನ್ಕೊಂಡು ರೋಡಿಗಿಳಿದ್ರೆ ಒದೆ ಬೀಳೋದು ಪಕ್ಕಾ!
ನಟ ದರ್ಶನ್ ಕೊಲೆ ಆರೋಪದಲ್ಲಿ ಸದ್ಯ ಪೊಲೀಸರ ಅತಿಥಿಯಾಗಿದ್ದಾರೆ. ಅಪಾರ ಅಭಿಮಾನಿಗಳನ್ನು ಹೊಂದಿರುವ ಅವರು ಎರಡು ದಿನಗಳಿಂದ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿದ್ದಾರೆ. ಇನ್ನು ತಮ್ಮ ನೆಚ್ಚಿನ ನಟನನ್ನು ನೋಡಲು ಠಾಣೆ ಬಳಿ ಹೋದ ಅಭಿಮಾನಿಗಳಿಗೆ ಪೊಲೀಸರು ಲಾಠಿ ಏಟಿನ ರುಚಿ ತೋರಿಸಿದ್ದಾರೆ.
ನಟ ದರ್ಶನ್ ಅಪಾರ ಅಭಿಮಾನಿ ಬಳಗ ಹೊಂದಿರುವುದು ನಿಜ, ಆದರೆ ಕೆಲವು ಹುಚ್ಚು ಅಭಿಮಾನಿಗಳು, ದರ್ಶನ್ ಕೊಲೆ ಆರೋಪಿಯಾಗಿದ್ದರೂ ಅವರಿಗೆ ಬೆಂಬಲ ಕೊಡುತ್ತಿದ್ದಾರೆ. ಅದರಲ್ಲೂ ಕೊಲೆ ಮಾಡಿದ್ದರೂ ನಮ್ಮ ಬಾಸ್ ಮಾಡಿದ್ದು ಸರಿ ಎನ್ನುವಂತಹ ತಿಕ್ಕಲುತನದ ಪೋಸ್ಟ್‌ಗಳನ್ನು ಮಾಡುತ್ತಿದ್ದಾರೆ.

ಹೀಗೆ ತಮ್ಮ ನೆಚ್ಚಿನ ನಟನನ್ನು ನೋಡಲು ಠಾಣೆ ಬಳಿ ಹೋದ ಅಭಿಮಾನಿಗಳು ಈಗ ಲಾಠಿ ಏಟಿನ ರುಚಿ ನೋಡಿದ್ದಾರೆ. ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆ ಎದುರು ಡಿ ಬಾಸ್ ಎಂದು ಕೂಗುತ್ತಿದ್ದ ಅಭಿಮಾನಿಗಳ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದು, ಅಲ್ಲಿಂದ ಓಡಿಸಿದ್ದಾರೆ.
ದರ್ಶನ್ ಮತ್ತು ಪವಿತ್ರಾ ಗೌಡರನ್ನು ಕೊಲೆಯಾದ ಸ್ಥಳ ಮಹಜರಿಗೆ ಕರೆದುಕೊಂಡು ಹೋಗುವ ಸಂದರ್ಭದಲ್ಲಿ ಹೆಚ್ಚಿನ ಅಭಿಮಾನಿಗಳು ಜಮಾಯಿಸಿದ್ದ ಕಾರಣ ಪೊಲೀಸರು ಗುಂಪು ಚದುರಿಸಲು ಲಾಠಿ ಬೀಸಬೇಕಾಯಿತು.
ಅಲ್ಲದೆ ಪಟ್ಟಣಗೆರೆ ಬಳಿ ಇರುವ ಶೆಡ್‌ನಲ್ಲಿ ಸ್ಥಳ ಮಹಜರು ಮಾಡಲು ತೆರಳಿದ್ದ ವೇಳೆ ಕೂಡ ಹೆಚ್ಚಿನ ಅಭಿಮಾನಿಗಳು ಸ್ಥಳದಲ್ಲಿ ಜಮಾಯಿಸಿದ್ದರು. ಪೊಲೀಸರು ಅಭಿಮಾನಿಗಳನ್ನು ನಿಯಂತ್ರಿಸಲು ಹೆಣಗಾಡಿದರು.
ಜಾಮೀನು ಸಿಗೋದು ಅನುಮಾನ
ಕೊಲೆ ಪ್ರಕರಣವಾಗಿರುವ ಕಾರಣ ನಟ ದರ್ಶನ್‌ಗೆ ಶೀಘ್ರದಲ್ಲೇ ಜಾಮೀನು ಸಿಗುವುದು ಕಷ್ಟ ಎನ್ನಲಾಗಿದೆ. ನಟ ದರ್ಶನ್ ವಿರುದ್ಧ ಪ್ರಬಲ ಸಾಕ್ಷಿಗಳು ಇರುವ ಕಾರಣ ಪ್ರಕರಣ ಹೆಚ್ಚು ಗಂಭೀರವಾಗಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪವಿತ್ರಾ ಗೌಡ ಎ1 ಆರೋಪಿಯಾಗಿದ್ದು, ದರ್ಶನ್ ಎ2 ಆರೋಪಿಯಾಗಿದ್ದಾರೆ.
ಅಭಿಮಾನ ಇರಲಿ ಅಂಧಾಭಿಮಾನ ಬೇಡ
ಯಾವುದೇ ನಟ, ರಾಜಕಾರಣಿ, ಪಕ್ಷದ ಬಗ್ಗೆ ಅಭಿಮಾನ ಇರಲಿ, ಆದರೆ ಅಂಧಾಭಿಮಾನ ಯಾವುದೇ ಕಾರಣಕ್ಕೂ ಒಳ್ಳೆಯದಲ್ಲ. ನಿಮಗೆ ಹೆಚ್ಚು ಕಡಿಮೆಯಾದರೆ ಯಾವ ನಟನೂ ನಿಮ್ಮ ಕುಟುಂಬದ ಜೊತೆ ಇರುವುದಿಲ್ಲ ಎನ್ನುವುದು ನೆನಪಿದ್ದರೆ ಉತ್ತಮ. ನಾಳೆ ಏನಾದರೂ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆ ಮುಂದೆ ನಾನು ಡಿ ಬಾಸ್ ಅಭಿಮಾನಿ ಎಂದು ಹೋದರೆ, ಲಾಠಿ ಏಟು ಬೀಳುವುದು ಗ್ಯಾರಂಟಿ.












Click it and Unblock the Notifications