ಸರಿಗಮಪ ಪ್ರೇರಣೆ: ಯುವ ಗಾಯಕರಿಗೆ ಗುಡ್‌ನ್ಯೂಸ್ ಕೊಟ್ಟ ಹಿನ್ನೆಲೆ ಗಾಯಕ ವಿಜಯ್ ಪ್ರಕಾಶ್
ಪ್ರಸಿದ್ಧ ಹಿನ್ನೆಲೆ ಗಾಯಕ ವಿಜಯ್ ಪ್ರಕಾಶ್ ಅವರು ಬೆಂಗಳೂರಿನಲ್ಲಿ ಸಂಗೀತ ಕ್ಲಬ್ ಪ್ರಾರಂಭಿಸಿದ್ದಾರೆ. ವಿಪಿ ಕಲ್ಚರ್ ಕ್ಲಬ್ ಎಂದು ಕರೆಯಲ್ಪಡುವ ಈ ಕೇಂದ್ರವು ಬೆಂಗಳೂರಿನ ಬನಶಂಕರಿಯಲ್ಲಿದೆ. ಇದು ಯುವಕರಿಗಾಗಿ ಕಾರ್ಯಾಗಾರಗಳನ್ನು ಆಯೋಜಿಸುತ್ತಿದೆ. ಇದೊಂದು ವಿನೂತನ ಕಾರ್ಯಕ್ರಮವಾಗಿದೆ. ದೇವರನಾಮಗಳು (ಹರಿದಾಸ ಸಂಪ್ರದಾಯದ ಸಂಯೋಜನೆಗಳು) ಕುರಿತು ಮೊದಲ ಕಾರ್ಯಾಗಾರವು ನಡೆದಿದ್ದು. ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಹೇಳಲಾಗಿದೆ.
ಇಂದು ನಾನು ಗಳಿಸಿರುವುದೆಲ್ಲವೂ ಸಂಗೀತ ಮತ್ತು ಕಲೆಯಿಂದಾಗಿ. ನಾನು ಕಲಿತಿರುವುದನ್ನು ಸಮಾಜಕ್ಕೆ ಮರಳಿಸುವ ಸಮಯ ಬಂದಿದೆ ಎಂದು ನಾನು ಭಾವಿಸಿದೆ. ಆ ಸಂದರ್ಭದಲ್ಲಿ ನನ್ನ ಪತ್ನಿ ಮಹತಿ (ಗಾಯಕಿಯೂ ಹೌದು) ಮತ್ತು ನಾನು ಕಲೆಯನ್ನು ಕಲಿಯಲು ಮತ್ತು ಕಲಿಸಲು ಉತ್ಸಾಹ ಹೊಂದಿರುವ ಯುವಕರಿಗಾಗಿ ಒಂದು ಕ್ಲಬ್ ಪ್ರಾರಂಭಿಸಲು ನಿರ್ಧರಿಸಿದೆವು ಎಂದು ವಿಜಯ್ ಪ್ರಕಾಶ್ ಅವರು ಹೇಳಿದ್ದಾರೆ ಎಂದು DH ವರದಿ ಮಾಡಿದೆ.

ಇನ್ನು ಈ ಕ್ಲಬ್ 15 ರಿಂದ 20ರ ಗುಂಪುಗಳಿಗೆ ವಿವಿಧ ಪ್ರಕಾರಗಳ ಸಂಗೀತ ಕಾರ್ಯಾಗಾರಗಳನ್ನು ಆಯೋಜಿಸಲಿದೆ. ದಾಖಲಾತಿ ಹೆಚ್ಚಾಗಿ ಮೊದಲು ಬಂದವರಿಗೆ ಮೊದಲ ಆದ್ಯತೆ ಎಂದು ನಿಗದಿ ಮಾಡಲಾಗಿದೆ. ಆದ್ಯಾಗೂ ಕೆಲವು ಸಂದರ್ಭಗಳಲ್ಲಿ ಅರ್ಜಿದಾರರನ್ನು ಅವರು ಸಲ್ಲಿಸುವ ಆಡಿಯೊ ಮಾದರಿಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ ಎಂದು ಹೇಳಲಾಗಿದೆ. ನಾವು ಈ ಸಂಗೀತ ಕ್ಲಬ್‌ನಲ್ಲಿ ಭಾಗವಹಿಸುವವರ ಸಂಖ್ಯೆಯನ್ನು ಸೀಮಿತ ಅಥವಾ ನಿರ್ದಿಷ್ಟ ಜನರಿಗೆ ಸೀಮಿತವಾಗಿರಿಸಲು ಇಚ್ಛಿಸುತ್ತೇವೆ. ಈ ರೀತಿ ಮಾಡುವುದರಿಂದ ಪ್ರತಿಯೊಬ್ಬರ ಗಾಯಕರಿಗೂ ಸಮಯ ಕೊಡಲು ಸಾಧ್ಯವಾಗಲಿ. ವೈಯಕ್ತಿಕವಾಗಿ ಗಮನ ಕೊಡುವುದಕ್ಕೂ ಸಮಯ ಸಿಗಲಿದೆ ಎಂದು ವಿಜಯ್ ಅವರು ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಯುವ ಗಾಯಕ / ಗಾಯಕಿಯರಿಗಾಗಿ ಹಲವು ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ಕ್ಲಬ್ ನೃತ್ಯ ಹಾಗೂ ಇನ್ನಿತರ ಕಲಾ ಪ್ರಕಾರಗಳನ್ನು ಪ್ರಾರಂಭಿಸುವ ಉದ್ದೇಶ ಇದೆ. ಇನ್ನು ಈ ಕಾರ್ಯಾಗಾರಗಳನ್ನು ನಡೆಸಲು ಪರಿಣಿತರನ್ನು ಆಹ್ವಾನಿಸಲಿದ್ದೇವೆ. ಈ ಕಾರ್ಯಾಗಾರಗಳನ್ನು ಗ್ರಾಮೀಣ ಪ್ರದೇಶಗಳಿಗೆ ವಿಸ್ತರಿಸುವ ಉದ್ದೇಶವನ್ನೂ ಹೊಂದಿದೆ.
"ಸ ರಿ ಗ ಮ ಪ" ಕಾರ್ಯಕ್ರಮದ ಜಡ್ಜ್ ಆದ ಸಂದರ್ಭದಲ್ಲಿ ಕರ್ನಾಟಕದಾದ್ಯಂತ ಪ್ರತಿಭಾವಂತ ಗಾಯಕರು ಇದ್ದಾರೆ ಎನ್ನುವ ವಿಷಯವನ್ನು ನಾನು ತಿಳಿದುಕೊಂಡಿದ್ದೇನೆ. ಆದರೆ ಹಲವರಿಗೆ ಸಂಗೀತ ಶಾಲೆಗಳು ಅಥವಾ ಕಲಿಯಲು ಆನ್‌ಲೈನ್ ಸೌಲಭ್ಯಗಳು ಇಲ್ಲ. ಈ ಕಾರಣಕ್ಕಾಗಿಯೇ ನನ್ನ ಅನುಭವಗಳನ್ನು ಮತ್ತು ಹಿರಿಯರಿಂದ ನಾನು ಕಲಿತದ್ದನ್ನು ಹಂಚಿಕೊಳ್ಳಲು ಕಾರ್ಯಾಗಾರಗಳನ್ನು ನಡೆಸಲು ಮುಂದಾಗಿದ್ದೇನೆ ಎಂದು ಈ ಕ್ಲಬ್‌ನ ಹಿಂದಿನ ಉದ್ದೇಶವನ್ನು ವಿಜಯ್ ಅವರು ಹಂಚಿಕೊಂಡಿದ್ದಾರೆ.
ಕೃತಕ ಬುದ್ಧಿಮತ್ತೆ (ಎಐ) ಎಲ್ಲವನ್ನೂ ಸಾಧ್ಯವಾಗಿಸುತ್ತಿರುವ ಈ ಸಮಯದಲ್ಲಿ, ಕ್ಲಬ್ ಮೂಲಕ ಜನರು ಭೇಟಿಯಾಗುವ ಮತ್ತು ಸಂಗೀತ ಮತ್ತು ಕಲೆಯ ಕುರಿತು ಆಲೋಚನೆಗಳನ್ನು ವಿನಿಮಯ ಮಾಡಿಕೊಳ್ಳುವ ಹಾಗು ಮುಖ್ಯವಾಗಿ ಜನ ಸಂಪರ್ಕ ಸಾಧಿಸುವುದಕ್ಕೆ ಪ್ರಯತ್ನಿಸುತ್ತಿರುವುದಾಗಿ ವಿಜಯ್ ಪ್ರಕಾಶ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಅಲ್ಲದೇ ತಂತ್ರಜ್ಞಾನ ಮುಖ್ಯ, ಆದರೆ ವೈಯಕ್ತಿಕವಾಗಿ ಮಾತನಾಡಿದಾಗ ಅಥವಾ ವಿಚಾರ ವಿನಿಮಯ ಮಾಡಿಕೊಂಡ ಸಂದರ್ಭದಲ್ಲಿ ಕಲೆ ಹೆಚ್ಚು ಸುಂದರವಾಗಿರುತ್ತದೆ ಎಂದಿದ್ದಾರೆ.












Click it and Unblock the Notifications