Pavithra Gowda: ಪವಿತ್ರಾ ಸೌಂದರ್ಯ ರಹಸ್ಯ- ಆರು ತಿಂಗಳು ಜೈಲಿನಲ್ಲಿದ್ದು ಆಕರ್ಷಕವಾಗಿ ಹೊಳೆದಿದ್ದು ಹೇಗೆ ಪವಿತ್ರಾ ಗೌಡ?
ಆರು ತಿಂಗಳು ಜೈಲಿನಲ್ಲಿ ಇದ್ದರೆ ಯಾರೇ ಆಗಲಿ ಸೊರಗಿ ಹೋಗಿರುತ್ತಾರೆ. ಜೈಲಿನಲ್ಲಿ ಕೊರಗಿ ಕೊರಗಿ ಹೊರಬಂದ್ರೆ ಸಾಕಪ್ಪಾ ದೇವರೇ ಅಂತ ಬೇಡಿಕೊಳ್ತಾರೆ. ಬಾಡಿ ಬೆಂಡಾಗಿರುತ್ತಾರೆ. ದರ್ಶನ್ ಸಹ ಬಳ್ಳಾರಿ ಜೈಲಿನಿಂದ ಹೊರ ಬರುವಾಗ ಇದೇ ರೀತಿ ಇದ್ದರು. ಆದರೆ ಪವಿತ್ರಾ ಗೌಡ ಮಾತ್ರ ಪಳ ಪಳ ಹೊಳೆಯುತ್ತಿದ್ದರು. ಫುಲ್ ಫ್ರೆಶ್ ಆಗಿ ಪರಪ್ಪನ ಅಗ್ರಹಾರ ಜೈಲಿನಿಂದ ಹೊರಬಂದಿದ್ದಾರೆ ಪವಿತ್ರಾ. ಹಾಗಾದರೆ ಪವಿತ್ರಾ ಗೌಡ ಅವರ ಈ ಸೌಂದರ್ಯದ ರಹಸ್ಯ ಏನು? ಜೈಲಿನಲ್ಲಿದ್ದರೂ ಕೂಡ ಅವರು ಕೊಂಚವೂ ಕೂಡ ಬದಲಾಗಿರಲಿಲ್ಲ ಯಾಕೆ?
ನಿಜವಾಗಲೂ ಪವಿತ್ರಾ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದು ಬಂದ್ರಾ? ಆರು ತಿಂಗಳು ಅವರು ಜೈಲೂಟ ತಿಂದುಕೊಂಡೇ ಕಾಲ ಕಳೆದ್ರಾ? ಎಂಬ ಪ್ರಶ್ನೆ ಹುಟ್ಟುವಷ್ಟು ಪವಿತ್ರಾ ಬದಲಾಗಿರಲಿಲ್ಲ. ಅವರನ್ನು ನೋಡಿದವರು ಯಾರೂ ಕೂಡ ಪವಿತ್ರಾ ಜೈಲಿನಲ್ಲಿ ಇದ್ದರು ಅನ್ನೋದನ್ನು ಒಪ್ಪುವುದೇ ಇಲ್ಲ. ಪವಿತ್ರಾ ಗೌಡ ಅಷ್ಟೊಂದು ಆರೋಗ್ಯವಾಗಿ ಆಕರ್ಷಕವಾಗಿ ನಗುಮೊಗದಿಂದ ಜೈಲಿನಿಂದ ಆಚೆ ಬಂದಿದ್ದಾರೆ. ಜೈಲಿನಿಂದ ಹೊರಬರುವಾಗ ಅವರ ಮುಖದಲ್ಲಿ ಯಾವುದೇ ರೀತಿಯ ಅಂಜಿಕೆ ಅಳುಕು ಕಂಡು ಬರಲೇ ಇಲ್ಲ. ಅರಾಮಾಗಿ ಶೂಟಿಂಗ್ ಹೋಗುವಂತೆ ಜೈಲಿನಿಂದ ನಡೆದುಕೊಂಡು ಬಂದರು ಪವಿತ್ರಾ.

ಇನ್ನೂ ಪವಿತ್ರಾ ಗೌಡ ಜೈಲು ಪ್ರಕ್ರಿಯೆಯನ್ನು ಮುಗಿಸಿ ಜೈಲಿನಿಂದ ಹೊರಬಂದ ರೀತಿ ಮಾತ್ರ ಸಿನಿಮಾ ಸೀನ್ ನಂತೆ ಕಂಡಿದೆ. ಸುತ್ತುಮುತ್ತ ಹತ್ತಾರು ಪೊಲೀಸರು, ಆರೋಪಿಗಳ ಸಂಬಂಧಿಕರು ಹೀಗೆ ಮೂವತ್ತಕ್ಕೂ ಹೆಚ್ಚು ಜನ ಬರುತ್ತಿದ್ದರೆ ಮಧ್ಯದಲ್ಲಿ ಪವಿತ್ರಾ ಗೌಡ ಬರುತ್ತಿದ್ದರು. ಜೈಲಿನಿಂದ ಬಿಡುಗಡೆಯಾದ ಖುಷಿಯಲ್ಲಿ ತಮ್ಮ ತಮ್ಮನೊಂದಿಗೆ ಮಾತಾಡಿಕೊಂಡು ಬಂದ ಪವಿತ್ರಾ ಗೌಡ ನಂತರ ತಮ್ಮ ಸಂಬಂಧಿಕರ ಸಹಾಯದಿಂದ ಕಾರು ಹತ್ತಿ ತೆರಳಿದರು. ಪವಿತ್ರಾ ಜೈಲಿನಲ್ಲಿ ಇದ್ದು ಹೊರಗಡೆ ಇದ್ದವರಂತೆ ಕಂಡಿದ್ದು ಹೇಗೆ? ಅವರು ನಿಜವಾಗಿಯೂ ಜೈಲೂಟಾ ತಿಂದರಾ?
ಜೈಲುಟಾ ತಿಂದು ಹೀಗಿದ್ರಾ ಪವಿತ್ರಾ?
ಜೈಲಿನಲ್ಲಿ ಇದ್ದ ದರ್ಶನ್ ಅವರನ್ನ ನೋಡಿ ಪವಿತ್ರಾ ಅವರನ್ನು ನೋಡುವುದಕ್ಕೂ ತುಂಬಾನೇ ವ್ಯತ್ಯಾಸವಿದೆ. ಯಾಕೆಂದರೆ ಪವಿತ್ರಾ ತುಂಬಾ ನಗುನಗುತಾ ಲವಲವಿಕೆಯಿಂದ ಹೊರಬಂದರೆ, ದರ್ಶನ್ ಸೊಂಟ ಹಿಡಿದುಕೊಂಡು ನಡುಯಲು ಕಷ್ಟಪಡುತ್ತಾ, ಸೊರಗಿ, ಗಡ್ಡ ಮೀಸೆ ಬಿಟ್ಟುಕೊಂಡು ಹೊರಬಂದಿದ್ದಾರೆ. ಬಹುಶ: ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಿದ್ದರೆ ಪವಿತ್ರಾ ಅವರಂತೆ ನಗುನಗುತ್ತಲೇ ಬರ್ತಾಯಿದ್ದರು ಎನ್ನುತ್ತಿದ್ದಾರೆ ಜನ. ಯಾಕೆ ಗೊತ್ತಾ?

ಜೈಲಿನಲ್ಲಿ ದರ್ಶನ್‌ಗೆ ಸಿಕ್ಕ ಸೌಲಭ್ಯ ಪವಿತ್ರಾಗೂ ಸಿಕ್ಕಿತ್ತಾ?
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಿಗರೇಟ್ ಸೇದುತ್ತಾ, ಕೈಯಲ್ಲಿ ಒಂದು ಗ್ಲಾಸ್ ಹಿಡಿದುಕೊಂಡು ಕುಳಿತ ದರ್ಶನ್ ಫೋಟೋ ವೈರಲ್ ಆದ ಬಳಿಕ ಅವರನ್ನು ಬಳ್ಳಾರಿ ಜೈಲಿಗೆ ಕಳುಹಿಸಲಾಗಿತ್ತು. ಬಳ್ಳಾರಿ ಜೈಲಿಗೆ ಹೋದ ಬಳಿಕವಷ್ಟೇ ದರ್ಶನ್‌ಗೆ ನಿಜವಾದ ಜೈಲಿನ ದರ್ಶನ ಆಗಿದ್ದು.
ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ತುಂಬಾ ಐಷಾರಾಮಿ ಜೀವನ ನಡೆಸುತ್ತಿದ್ದರು ಎನ್ನುವ ಸುದ್ದಿಗಳು ಹರಿದಾಡಿವೆ. ದರ್ಶನ್ ಜೈಲಿನಲ್ಲಿ ಇರುವಾಗ ಮೊಬೈಲ್, ಸಿಗರೇಟ್, ಎಣ್ಣೆ, ದಿಂಬು, ಹಾಸಿಗೆ, ಬೇಕಾದಾಗಲೆಲ್ಲಾ ಬೇಕಾದ ವಸ್ತು, ಮಾಂಸಾಹಾರ ಸಿಗುತ್ತಿತ್ತು ಎನ್ನುವ ಆರೋಪ ಕೇಳಿ ಬಂದಿತ್ತು. ಹೀಗಾಗಿ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರುವಾಗ ಚೆನ್ನಾಗಿಯೇ ಕಂಡುಬಂದಿದ್ದರು ಎನ್ನಲಾಗುತ್ತಿದೆ. ಆದರೆ ಬಳ್ಳಾರಿ ಜೈಲಿಗೆ ಹೋದ ಬಳಿಕ ಯಾವುದೇ ಸೌಲಭ್ಯಗಳಿಲ್ಲದೆ ಕೈದಿಗಳಂತೆ ಅವರನ್ನು ನೋಡಿಕೊಂಡಾಗ ಅವರ ಆರೋಗ್ಯ ಸ್ಥಿತಿ ಬದಲಾಗಿದೆ ಎನ್ನಲಾಗುತ್ತಿದೆ.
ಪರಪ್ಪನ ಅಗ್ರಹಾರ ಮಹಿಳಾ ಜೈಲಿನಲ್ಲಿ ಇದ್ದ ಪವಿತ್ರಾಗೂ ಈ ಐಷಾರಾಮಿ ಸೌಲಭ್ಯ ಸಿಕ್ಕಿರಬಹುದು ಎನ್ನಲಾಗುತ್ತಿದೆ. ಯಾಕೆಂದರೆ ಈ ಹಿಂದೆ ಜೈಲಿನಿಂದ ಹೊರಬರುವಾಗ ಪವಿತ್ರಾ ತುಟಿಗೆ ಲಿಪ್‌ಸ್ಟಿಕ್ ಹಾಕಿಕೊಂಡು ಟಚ್‌ಅಪ್ ಮಾಡಿಕೊಂಡು ಬಂದಿದ್ದರು. ಜೈಲಿನಲ್ಲಿ ಇದಕ್ಕೆಲ್ಲಾ ಅವಕಾಶವೇ ಇಲ್ಲ. ಹೀಗಿರುವಾಗ ಪವಿತ್ರಾಗೆ ಲಿಪ್‌ಸ್ಟಿಕ್ ಹೇಗೆ ಸಿಕ್ಕದೆ ಎನ್ನುವ ಚರ್ಚೆ ಕೂಡ ಉಂಟಾಗಿತ್ತು.
ಹೀಗೆ ಪವಿತ್ರಾಗೇ ಮೇಕಪ್ ಮಾಡಿಕೊಳ್ಳಲು ವಸ್ತುಗಳು ಸಿಕ್ಕಿವೆ ಅಂದರೆ ತಿನ್ನಲು ಹಾಗೂ ಹಾಯಾಗಿರಲು ಸೌಲಭ್ಯಗಳು ಸಿಕ್ಕಿರಬಹುದು ಎನ್ನುವ ಶಂಕೆ ಮೂಡಿದೆ. ಪವಿತ್ರಾ ಅವರನ್ನು ಕಾಣದ ಕೈಗಳು ಜೈಲಿನಲ್ಲಿ ನೋಡಿಕೊಂಡಿವೆ ಎನ್ನಲಾಗುತ್ತಿದೆ. ಇದರ ಹಿಂದೆ ದರ್ಶನ್ ಇರಬಹುದು ಅಂತಲೂ ಹೇಳಲಾಗುತ್ತಿದೆ. ಹಾಗಾದರೆ ಜೈಲಿನಲ್ಲಿ ಪವಿತ್ರಾ ಅವರನ್ನು ನೋಡಿಕೊಂಡ್ರಾ ದರ್ಶನ್?
ವಜ್ರಮುನೇಶ್ವರ ಪವರ್‌ಫುಲ್ ದೇವರು
ತಲಘಟ್ಟಪುರದ ವಜ್ರಮುನೇಶ್ವರ ತುಂಬಾ ಪವರ್‌ಫುಲ್ ದೇವರು ಎನ್ನಲಾಗುತ್ತದೆ. ಕೆಲ ವರ್ಷಗಳ ಹಿಂದೆ ಪವಿತ್ರಾ ತಾಯಿಗೆ ಕಣ್ಣಿನ ಸಮಸ್ಯೆಯಾಗಿ ಕಣ್ಣಿನ ದೃಷ್ಟಿ ಹೋಗಿತ್ತಂತೆ. ಆ ವೇಳೆ ಮುನೇಶ್ವರನಿಗೆ ಹರಕೆ ಕಟ್ಟಿಕೊಂಡಿದ್ದರಂತೆ. ಹೀಗೆ ಪೂಜೆ ಬಳಿಕ ಪವಿತ್ರಾ ತಾಯಿಗೆ ದೃಷ್ಟಿ ಬಂದಿತ್ತಂತೆ. ಬಳಿಕ ಕುಟುಂಬದ ಸದಸ್ಯರೆಲ್ಲರೂ ಸೇರಿ ಮುನೇಶ್ವರ ಸನ್ನಿಧಾನದಲ್ಲಿ ವಿಶೇಷ ಪೂಜೆ ಮಾಡಿಸಿದ್ದರು.
ಈ ಪೂಜೆಯಲ್ಲಿ ನಟ ದರ್ಶನ್ ಸಹ ಭಾಗಿಯಾಗಿದ್ದರು ಎನ್ನಲಾಗುತ್ತದೆ. ಈ ಎಲ್ಲಾ ಕಾರಣಕ್ಕೆ ಇಲ್ಲಿನ ವಜ್ರಮುನೇಶ್ವರನ ಮೇಲೆ ಪವಿತ್ರಾ ಕುಟುಂಬಕ್ಕೆ ತುಂಬಾ ನಂಬಿಕೆ ಇದೆ. ಹೀಗಾಗಿ ಪವಿತ್ರಾ ಜೈಲಿಗೆ ಹೋದಾಗಲೂ ತಾಯಿ ಭಾಗ್ಯಮ್ಮ ಹರಕೆ ಕಟ್ಟಿದ್ದರು. ಪವಿತ್ರಾ ಜೈಲಿನಿಂದ ಹೊರ ಬಂದ ಬಳಿಕ ಅದನ್ನು ಅವರು ತೀರಿಸಿದ್ದಾರೆ. ಆದರೆ ಇಲ್ಲಿ ಅಸಲಿ ಟ್ವಿಸ್ಟ್ ಬೇರೆನೇ ಇದೆ.
ದರ್ಶನ್ ಹೆಸರಿನಲ್ಲಿ ಅರ್ಚನೆ
ಯಾವುದೇ ಪೋಷಕರಿಗಾಗಲಿ ತಮ್ಮ ಮಗಳು ಮದುವೆಯಾಗಿ ಹೆಂಡತಿ-ಮಗ ಬದುಕಿರುವ ಗಂಡಸಿನ ಜೊತೆ ಸ್ನೇಹ ಮಾಡಿದ್ದಾಳೆ ಅಂದರೆ ಸಹಿಸಿಕೊಳ್ಳುವುದಿಲ್ಲ. ಆದರೆ ಪವಿತ್ರಾ ಜೈಲಿನಿಂದ ಬಂದ ಬಳಿಕ ತಲಘಟ್ಟಪುರದ ವಜ್ರಮುನೇಶ್ವರ ದೇಗುಲದಲ್ಲಿ ಪೂಜೆ ಮಾಡಿಸುವಾಗ ದರ್ಶನ್ ಅವರ ಹೆಸರಿನಲ್ಲಿ ಪವಿತ್ರಾ ಹಾಗೂ ತಾಯಿ ಭಾಗ್ಯಮ್ಮ ಪೂಜೆ ಮಾಡಿಸಿದ್ದಾರೆ. ಇದು ಜೈಲಿನಲ್ಲಿ ಇದ್ದ ಪವಿತ್ರಾ ಅವರನ್ನು ಇಷ್ಟು ದಿನ ದರ್ಶನ್ ನೋಡಿಕೊಂಡಿರಬಹುದು ಎನ್ನುವ ಸೂಚನೆಯನ್ನು ನೀಡಿದೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.
ದರ್ಶನ್‌ಗೆ ರಾಜಕಾರಣಿಗಳಿಂದ ಹಿಡಿದು ರೌಡಿಶೀಟರ್‌ಗಳ ಪರಿಚಯ ಕೂಡ ಇದೆ. ಹೀಗಾಗಿನೇ ಪರಪ್ಪನ ಅಗ್ರಹಾರ ಜೈಲಿನಲ್ಲಿ ಅವರು ತುಂಬಾ ಐಷಾರಾಮಿ ಜೀವನ ನಡೆಸುತ್ತಿದ್ದರು ಎಂದು ಅವರನ್ನು ಬಲವರು ಹೇಳುತ್ತಾರೆ. ದರ್ಶನ್ ಐಷಾರಾಮಿ ಜೀವನದ ಫೋಟೋ ವೈರಲ್ ಆಗಿಲ್ಲ ಅಂದಿದ್ರೆ ದರ್ಶನ್ ಕೂಡ ಪವಿತ್ರಾ ಅವರಂತೆ ಪಳ ಪಳ ಹೊಳೆಯುತ್ತಾ ಜೈಲಿನಿಂದ ಹೊರಬಂದಿರುತ್ತಿದ್ದರು ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಅದೇನೇ ಆಗಲಿ. ಜೈಲಿನಲ್ಲಿ ಇರುವಾಗಲೂ ಆ ಪವಿತ್ರಾ ಸಂಬಂಧ ಹಾಗೇ ಇತ್ತು ಎಂದು ಹೇಳಲಾಗುತ್ತಿರುವುದು ಮಾತ್ರ ಸುಳ್ಳಲ್ಲ.












Click it and Unblock the Notifications