Darshan Thoogudeepa: ಮತ್ತೊಬ್ಬರಿಗೆ ಪಟ್ಟಣಗೆರೆ ಶೆಡ್ ಫಿಕ್ಸ್? ಪವಿತ್ರಾ ಗೌಡಗೆ ಮತ್ತೊಬ್ಬ ಹುಡುಗನಿಂದಲೂ ಮೆಸೇಜ್?
ದರ್ಶನ್ ತೂಗುದೀಪ್ ಅವರು ಬಳ್ಳಾರಿ ಜೈಲಿನಲ್ಲಿ ಪರದಾಡಲು ಪವಿತ್ರಾ ಗೌಡ ಕಾರಣವೆಂಬ ಆರೋಪವನ್ನ ಇದೀಗ, ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಮಾಡುತ್ತಿದ್ದಾರೆ. ಈ ಮೂಲಕ ದರ್ಶನ್ ತೂಗುದೀಪ್ ಅವರ ಜೀವನಕ್ಕೆ ಪವಿತ್ರಾ ಗೌಡ ವಿಲನ್ ಎನ್ನುವ ರೀತಿಯೇ ಇದೀಗ ಬಿಂಬಿಸುತ್ತಿದ್ದಾರೆ ಫ್ಯಾನ್ಸ್. ಆದರೆ ಇದೇ ಸಮಯದಲ್ಲಿ ಮತ್ತೊಂದು ಪ್ರಶ್ನೆಯು ಈಗ ಮೂಡಿದೆ. ಪವಿತ್ರಾ ಗೌಡಗೆ ಮತ್ತೊಬ್ಬ ಹುಡುಗನಿಂದಲೂ ಮೆಸೇಜ್ ಬಂದಿತ್ತಾ? ಮತ್ತೊಬ್ಬ ವ್ಯಕ್ತಿಗೆ ರೇಣುಕಾಸ್ವಾಮಿ ರೀತಿಯಲ್ಲೇ ಪಟ್ಟಣಗೆರೆ ಶೆಡ್ ಫಿಕ್ಸ್ ಆಯ್ತಾ?
ಪವಿತ್ರಾ ಗೌಡ ಸಹವಾಸಕ್ಕೆ ಬಂದ ಎಂಬ ಕಾರಣ, ದರ್ಶನ್ ತೂಗುದೀಪ್ & ಗ್ಯಾಂಗ್ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಎತ್ತಾಕೊಂಡು ಬಂದು ಪಟ್ಟಣಗೆರೆ ಶೆಡ್‌ನಲ್ಲಿ ಬರ್ಬರ ಕೊಲೆಯನ್ನ ಮಾಡಿರುವ ಆರೋಪ ಕೇಳಿಬಂದಿತ್ತು. ಪವಿತ್ರಾ ಗೌಡ ಹಿಂದೆ ಬಿದ್ದಿದ್ದ ರೇಣುಕಾಸ್ವಾಮಿ ಹಲವು ದಿನಗಳಿಂದಲೂ ಮೆಸೇಜ್ ಮಾಡ್ತಿದ್ದ. ರೇಣುಕಾಸ್ವಾಮಿ ಸಾಯುವ ಮೊದಲು ಪವಿತ್ರಾ ಗೌಡಗೆ ಕಳಿಸಿದ್ದ ಮೆಸೇಜ್‌ಗಳಿಗೆ ರೀಪ್ಲೇ ಕೂಡ ಬಂದಿತ್ತು ಎಂಬ ಆರೋಪ ಇದೆ. ಇಷ್ಟೆಲ್ಲದರ ನಡುವೆ, ಮತ್ತೊಬ್ಬ ವ್ಯಕ್ತಿಯಿಂದಲೂ ಪವಿತ್ರಾ ಗೌಡಗೆ 'ಮುದ್ದು ಹೆಂಡ್ತಿ.. ಮುದ್ದು ಹೆಂಡ್ತಿ..' ಅಂತಾ ಮೆಸೇಜ್ ಹೋಗಿತ್ತಂತೆ! ಹೀಗಾಗಿ ರೇಣುಕಾಸ್ವಾಮಿ ರೀತಿಯಲ್ಲೇ ಪಟ್ಟಣಗೆರೆ ಶೆಡ್ ಫಿಕ್ಸ್ ಆಯ್ತಾ?

ಪಟ್ಟಣಗೆರೆ ಶೆಡ್ ಫಿಕ್ಸ್ ಆಯ್ತಾ?
ಅಂದಹಾಗೆ ದರ್ಶನ್ ತೂಗುದೀಪ್ & ಪವಿತ್ರಾ ಗೌಡ ನಡುವೆ ಲಿವಿನ್ ರಿಲೇಷನ್‌ಶಿಪ್ ಇತ್ತು ಎಂಬ ವಿಚಾರ ಬಟಾ ಬಯಲಾಗಿದೆ. ಲಿವಿನ್ ರಿಲೇಷನ್‌ಶಿಪ್ ಅಂದ್ರೆ ಮದುವೆ ಆಗದೆಯೇ, ಗಂಡ & ಹೆಂಡತಿ ರೀತಿ ಬಾಳುವುದು ಮತ್ತು ಜೀವನ ನಡೆಸುವುದು. ಈ ರೀತಿ ಇದ್ದಾಗಲೇ, ದರ್ಶನ್ ತೂಗುದೀಪ್ ಅವರಿಗೆ ಪವಿತ್ರಾ ಗೌಡ ಅಂದ್ರೆ ಪಂಚ ಪ್ರಾಣ ಆಗಿದ್ದರು. ಹೀಗಾಗಿಯೇ ದರ್ಶನ್ ತೂಗುದೀಪ್ ಅವರು ಪವಿತ್ರಾ ಗೌಡರನ್ನ 'ಮುದ್ದು ಹೆಂಡ್ತಿ.. ಮುದ್ದು ಹೆಂಡ್ತಿ..' ಅಂತಾ ಕರೆಯುತ್ತಿದ್ದರು. ಆದರೆ ದರ್ಶನ್ ತೂಗುದೀಪ್ ಜೊತೆಗೆ ಹೇಮಂತ್ ಎಂಬ ವ್ಯಕ್ತಿಯು ಕೂಡ ಪವಿತ್ರಾ ಗೌಡರನ್ನ 'ಮುದ್ದು ಹೆಂಡ್ತಿ.. ಮುದ್ದು ಹೆಂಡ್ತಿ..' ಅಂತಾ ಕರೆಯುತ್ತಿದ್ದರಾ?
'ಮುದ್ದು ಹೆಂಡ್ತಿ.. ಮುದ್ದು ಹೆಂಡ್ತಿ..'
ದರ್ಶನ್ ತೂಗುದೀಪ್ ಪ್ರಕರಣಕ್ಕೆ ಇದೀಗ ಸ್ಫೋಟಕ ತಿರುವು ಸಿಗುತ್ತಿದೆ, ಅದು ಏನಪ್ಪ ಅಂದ್ರೆ ದರ್ಶನ್ ತೂಗುದೀಪ್ ಅವರ ಬಳಿ ಇದ್ದ ಸಿಮ್ ಅವರ ಹೆಸರಿನಲ್ಲಿ ಇಲ್ಲ, ಬದಲಾಗಿ ಸಿಮ್ ಹೇಮಂತ್ ಎಂಬ ಹೆಸರಲ್ಲಿ ಇತ್ತು ಎಂದು ಆರೋಪ ಮಾಡಲಾಗಿದೆ. ಹೀಗಾಗಿ ಪವಿತ್ರಾ ಗೌಡಗೆ ಹೇಮಂತ್ ಎಂಬ ವ್ಯಕ್ತಿ 'ಮುದ್ದು ಹೆಂಡ್ತಿ.. ಮುದ್ದು ಹೆಂಡ್ತಿ..' ಅಂತಾ ಮೆಸೇಜ್ ಕಳಿಸಿ, ಮುದ್ದು ಮುದ್ದಾಗಿ ಮಾತನಾಡಿದ್ದನಾ? ಎಂಬ ಪ್ರಶ್ನೆ ಮೂಡಿದೆ.
ಆದರೆ ಸಿಮ್ ಖುದ್ದಾಗಿ, ನಟ ದರ್ಶನ್ ತೂಗುದೀಪ್ ಬಳಸುತ್ತಿದ್ದರು ಎಂದು ಆರೋಪಿಸಲಾಗಿದ್ದು ಸಂಚಲನವೇ ಸೃಷ್ಟಿ ಆಗಿದೆ. ಮತ್ತೊಂದು ಕಡೆ, ರೇಣುಕಾಸ್ವಾಮಿ ರೀತಿಯಲ್ಲೇ ಮತ್ತೊಬ್ಬ ವ್ಯಕ್ತಿಗೆ ಪಟ್ಟಣಗೆರೆಯ ಶೆಡ್ ಫಿಕ್ಸ್ ಆಗುವುದು ತಪ್ಪೋಯ್ತು ಅಂತಾ ಟ್ರೋಲ್ ಮಾಡಲಾಗುತ್ತಿದೆ! ಇದಕ್ಕೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ತಕ್ಕ ಉತ್ತರ ನೀಡಿ, ವಿರೋಧಿಗಳ ಬಾಯಿ ಮುಚ್ಚಿಸುತ್ತಿದ್ದಾರೆ.












Click it and Unblock the Notifications