Darshan Thoogudeepa: ಪರಪ್ಪನ ಅಗ್ರಹಾರದಲ್ಲಿ ದರ್ಶನ್ ತೂಗುದೀಪ್ ಆರ್ಭಟ ಕಂಡು ಜೈಲು ಸಿಬ್ಬಂದಿಗೆ ನಡುಕ?
ದರ್ಶನ್ ತೂಗುದೀಪ್ ಪರಪ್ಪನ ಅಗ್ರಹಾರ ಜೈಲು ಸೇರಿದ್ದರು ಬದಲಾಗುತ್ತಿಲ್ಲ ಎಂಬ ಭಾರಿ ಗಂಭೀರ ಆರೋಪ ಕೇಳಿಬರುತ್ತಿದೆ. ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ 2ನೇ ಆರೋಪಿ ಆಗಿರುವ ದರ್ಶನ್ ತೂಗುದೀಪ್, ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಲ್ಲಿ ನರಳುತ್ತಿದ್ದಾರೆ. ಪರಿಸ್ಥಿತಿ ಹೀಗಿದ್ದರೂ ದರ್ಶನ್ ತೂಗುದೀಪ್ ಆರ್ಭಟ ಮತ್ತಷ್ಟು ಹೆಚ್ಚಾಗಿದೆ. ಹೀಗಾಗಿ ಜೈಲು ಸಿಬ್ಬಂದಿ ಪರದಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹಾಗಾದ್ರೆ ನಟ ದರ್ಶನ್ ಅವರ ವಿಚಾರದಲ್ಲಿ ಹಿಂಗೆಲ್ಲಾ ಆಗುತ್ತಿರುವುದು ಏಕೆ?
ದರ್ಶನ್ ತೂಗುದೀಪ್ ಅವರ ಹೆಸರು ಕೇಳಿದ್ರೆ ಬಾಲಿವುಡ್ ಟು ಟಾಲಿವುಡ್, ಕಾಲಿವುಡ್ ಟು ಮಾಲಿವುಡ್ ನಟ & ನಟಿಯರು ಒಂದು ಕ್ಷಣ ಯೋಚನೆ ಮಾಡುತ್ತಿದ್ದರು. ಯಾಕಂದ್ರೆ ಈ ನಮ್ಮ ಕನ್ನಡದ ನಟ ದರ್ಶನ್ ತೂಗುದೀಪ್ ಸಿನಿಮಾಗಳು ಆ ಮಟ್ಟಿಗೆ ಹವಾ ಇಟ್ಟಿದ್ದವು. ಅದರಲ್ಲೂ ದರ್ಶನ್ ತೂಗುದೀಪ್ ಸಿನಿಮಾಗಳ ಎದುರು ಪರಭಾಷೆ ಸಿನಿಮಾಗಳನ್ನ ರಿಲೀಸ್ ಮಾಡಿ ಗೆಲ್ಲುವುದು ತುಂಬಾ ಕಷ್ಟದ ವಿಚಾರ ಆಗಿತ್ತು. ಇಷ್ಟೆಲ್ಲಾ ಹೆಸರು & ಕೀರ್ತಿಯನ್ನು ಗಳಿಸಿದ್ದ ನಟ ದರ್ಶನ್ ತೂಗುದೀಪ್ ಮಾತ್ರ ಕೊಲೆ ಆರೋಪದಲ್ಲಿ ಜೈಲು ಸೇರಿದ್ದಾರೆ. ಈ ಸಮಯದಲ್ಲಿ ದರ್ಶನ್ ತೂಗುದೀಪ್ ಅವರ ವಿರುದ್ಧ ಮತ್ತೊಂದು ಗಂಭೀರ ಆರೋಪವನ್ನ ಮಾಡಲಾಗಿದ್ದು, ಪರಪ್ಪನ ಅಗ್ರಹಾರ ಜೈಲಿನ ಕೋಣೆಗಳಲ್ಲಿ ಹೊಸ ನಡುಕ ಶುರುವಾಗಿದೆ.

ದರ್ಶನ್ & ಜೈಲು ಸಿಬ್ಬಂದಿ ಕಿತ್ತಾಟ?
ಪರಪ್ಪನ ಅಗ್ರಹಾರದ ವಿಐಪಿ ಸೆಲ್‌ನಲ್ಲಿ ನಟ ದರ್ಶನ್ ತೂಗುದೀಪ್ ಅವರು ಇದ್ದಾರೆ. ಈ ರೀತಿ ವಿಐಪಿ ಸೆಲ್ ಅಂದ್ರೆ ಪ್ರಮುಖ ವ್ಯಕ್ತಿಗಳ ಜೈಲಿನ ಕೋಣೆಗಳ ಬಳಿ ಯಾವುದೇ ಖೈದಿ & ವ್ಯಕ್ತಿಗಳನ್ನ ಸುಳಿಯಲು ಕೂಡ ಬಿಡುವುದಿಲ್ಲ. ಆದರೆ ನಟ ದರ್ಶನ್ ಅವರು ಮಾತ್ರ ಇಲ್ಲಿ ಕೊಲೆ ಆರೋಪಿ ಆಗಿ ಪರಪ್ಪನ ಅಗ್ರಹಾರದ ವಿಐಪಿ ಸೆಲ್‌ನಲ್ಲಿ ಇದ್ದರೂ, ಜೈಲಿನ ಕೋಣೆ ಬಿಟ್ಟು ಹೊರಬಂದು ಓಡಾಡುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಹೀಗಾಗಿ, ದರ್ಶನ್ ಅವರಿಗೆ ಈ ಬಗ್ಗೆ ಬುದ್ಧಿ ಹೇಳಲು ಪರಪ್ಪನ ಅಗ್ರಹಾರದ ಜೈಲು ಸಿಬ್ಬಂದಿ ಮುಂದೆ ಬಂದರೆ ದರ್ಶನ್ ಏನ್ ಹೇಳುತ್ತಿದ್ದಾರಂತೆ ಗೊತ್ತಾ? ಮುಂದೆ ಓದಿ.
ನನ್ನ ತಂಟೆಗೆ ಬರಬೇಡಿ...
ಅಂದಹಾಗೆ ಇದೀಗ ಕೇಳಿಬಂದಿರುವ ಆರೋಪದ ಪ್ರಕಾರ, ದರ್ಶನ್ ತೂಗುದೀಪ್ ಜೈಲಿನಲ್ಲಿ ನಿಯಮ ಮೀರಿ ಓಡಾಡುತ್ತಿದ್ದಾರಂತೆ. ಇಂತಹ ಸಮಯದಲ್ಲಿ ಪರಪ್ಪನ ಅಗ್ರಹಾರದ ಕೆಲ ಸಿಬ್ಬಂದಿ ದರ್ಶನ್ ತೂಗುದೀಪ್ ಅವರಿಗೆ ಬುದ್ಧಿ ಹೇಳಿ ಹೀಗೆಲ್ಲ ಮಾಡಬೇಡಿ ಅಂತಾ ಹೇಳಿದಾಗ ನನ್ನ ತಂಟೆಗೆ ಬರಬೇಡಿ ಅಂತಾ 'ದಾಸ' ದರ್ಶನ್ ಆವಾಜ್ ಹಾಕುತ್ತಿದ್ದಾರೆ. ಅಲ್ಲದೆ ನಾನು ಜೈಲಿನಿಂದ ಹೊರಗೆ ಬಂದ ನಂತರ ಎಂಎಲ್‌ಎ ಆಗ್ತೀನಿ, ಅಂದ್ರೆ ಶಾಸಕ ಆಗ್ತೀನಿ ಆಗಲೇ ನಾನು ಎಲ್ಲಾ ನೋಡಿಕೊಳ್ತೀನಿ ಅಂತಾ ನಟ ದರ್ಶನ್ ಹೇಳುತ್ತಿದ್ದಾರೆ ಎಂಬ ಆರೋಪವನ್ನು ಮಾಡಲಾಗಿದೆ. ಸೋಷಿಯಲ್ ಮೀಡಿಯಾದಲ್ಲೂ ಈ ಬಗ್ಗೆ ಭಾರಿ ಚರ್ಚೆ ಆರಂಭವಾಗಿದೆ.
ದರ್ಶನ್ ಫ್ಯಾನ್ಸ್ vs ಧ್ರುವ ಸರ್ಜಾ!
ದರ್ಶನ್ ತೂಗುದೀಪ್ ಅವರು ಜೈಲಿಂದ ರಿಲೀಸ್ ಆಗಿ ಹೊರಗೆ ಬರುವವರೆಗು ಕನ್ನಡದ ಬೇರೆ ಯಾವುದೇ ಹೀರೋಗಳ ಸಿನಿಮಾ ನೋಡಬಾರದು ಎಂದು ಆಗ್ರಹಿಸುತ್ತಿದ್ದಾರೆ ದರ್ಶನ್ ಫ್ಯಾನ್ಸ್. ಹೀಗಿದ್ದಾಗಲೇ, ಧ್ರುವ ಸರ್ಜಾ ಅವರ 'ಮಾರ್ಟಿನ್' ಸಿನ್ಮಾ ರಿಲೀಸ್‌ಗೆ ರೆಡಿಯಾಗಿದೆ. ಅದ್ರಲ್ಲೂ 'ಮಾರ್ಟಿನ್' ಟ್ರೇಲರ್ ರಿಲೀಸ್ ಆಗಿದ್ದು, ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಏನು ಹೇಳ್ತಿದ್ದಾರೆ ಗೊತ್ತಾ? ಮಾರ್ಟಿನ್ ಟ್ರೇಲರ್ ಬಗ್ಗೆ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳ, ಕಮೆಂಟ್ ಏನು?? ಮುಂದೆ ಓದಿ.
ಫೈಟಿಂಗ್ ಬಲು ಜೋರು ಗುರೂ!
'ಆ್ಯಕ್ಷನ್ ಪ್ರಿನ್ಸ್' ಎಂಬ ಬಿರುದು ಪಡೆದ ಧ್ರುವ ಸರ್ಜಾರ ಬಹು ನಿರೀಕ್ಷಿತ ಸಿನಿಮಾ ಮಾರ್ಟಿನ್. ಈ ಕಾರಣಕ್ಕೆ 'ಮಾರ್ಟಿನ್' ಸಿನಿಮಾ ನೋಡಲು ಕೋಟ್ಯಂತರ ಫ್ಯಾನ್ಸ್ ಹಾಗೂ ಕನ್ನಡಿಗರು ಕಾಯುತ್ತಿದ್ದಾರೆ. ಇಂತಹ ಸಮಯದಲ್ಲೇ ದರ್ಶನ್ ತೂಗುದೀಪ್ ಅವರ ಫ್ಯಾನ್ಸ್ ಧ್ರುವ ಸರ್ಜಾ ಅವರ ಸಿನಿಮಾ 'ಮಾರ್ಟಿನ್' ಟ್ರೇಲರ್ ನೋಡಿ ಆಕ್ರೋಶ ಹೊರ ಹಾಕುತ್ತಿದ್ದಾರೆ. ಇದರ ಜತೆಗೆ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲೇ 'ಮಾರ್ಟಿನ್' ಟ್ರೇಲರ್ ಅತ್ಯಂತ ಕೆಟ್ಟ ಟ್ರೇಲರ್ ಅಂತಾ ಆರೋಪ ಮಾಡುತ್ತಿದ್ದಾರೆ. ಇದು ದರ್ಶನ್ ಫ್ಯಾನ್ಸ್ vs ಧ್ರುವ ಸರ್ಜಾ ಎಂಬ ರೀತಿ ವಾತಾವರಣ ಸೃಷ್ಟಿಸಿದೆ. ಅಲ್ದೆ, ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಜಗಳ ಶುರುವಾಗುವ ಮುನ್ಸೂಚನೆ ನೀಡುತ್ತಿದೆ.












Click it and Unblock the Notifications