ನಮ್ ಬಾಸ್ ವಿಗ್ ಹಾಕಲ್ಲ, ಒಂದು ಕೂದಲೂ ಉದುರಿಲ್ಲ: ದರ್ಶನ್‌ಗೆ ಟಾಂಗ್ ಕೊಟ್ಟ ಸುದೀಪ್ ಫ್ಯಾನ್
ನಟ ಕಿಚ್ಚ ಸುದೀಪ್ ಅವರು ಹೊಸ ಹೇರ್‌ಸ್ಟೈಲ್‌ನಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳು ಫಿದಾ ಆಗಿದ್ದಾರೆ. ಈ ಹಿಂದೆ ಸುದೀಪ್ ಅವರ ಹೆಬ್ಬುಲಿ ಹೇರ್‌ಸ್ಟೈಲ್ ಟ್ರೆಂಡ್ ಆಗಿತ್ತು. ಇದೀಗ ಕರ್ಲೀ (ಗುಂಗುರು) ಹೇರ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಬಿಗ್‌ಬಾಸ್ ಪ್ರೋಮೋದಲ್ಲೂ ಇದೇ ಗೆಟಪ್‌ನಲ್ಲಿ ಪ್ರತ್ಯಕ್ಷವಾಗಿದ್ದು, ಈ ಸೀಸನ್‌ನಲ್ಲಿ ಸುದೀಪ್ ಅವರ ಹೇರ್‌ಸ್ಟೈಲ್ ಬದಲಾಗಿದೆ. ಸುದೀಪ್ ಅವರ ಹುಟ್ಟುಹಬ್ಬದ ಅಂಗವಾಗಿ ಇದೇ ಲುಕ್‌ನಲ್ಲಿ ಫ್ಯಾನ್ಸ್ ಮುಂದೆ ಬಂದಿದ್ದರು. ಇದನ್ನು ನೋಡಿ ಅವರ ಅಭಿಮಾನಿಯೊಬ್ಬರು, 'ನಮ್ ಬಾಸ್ ಬೇರೆ ನಟರಂತೆ ವಿಗ್ ಹಾಕಲ್ಲ' ಎಂದು ನಟ ದರ್ಶನ್ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದು, ಈ ವಿಡಿಯೋ ವೈರಲ್ ಆಗಿದೆ.
ಸುದೀಪ್ ಅವರು ಹೊಸ ಸಿನಿಮಾಗಾಗಿ ಈ ಹೇರ್‌ಸ್ಟೈಲ್ ಮಾಡಿಸಿಕೊಂಡಿದ್ದು, ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. 'ನನ್ನ ಪಾತ್ರಕ್ಕೂ ಹಳೆಯ ಹೇರ್‌ಸ್ಟೈಲ್‌ಗೂ ಸರಿಹೊಂದಲಿಲ್ಲ. ಈ ಹೇರ್‌ಸ್ಟೈಲ್ ಮೇಂಟೇನೆನ್ಸ್ ಕಷ್ಟ ಆಗ್ತಿಲ್ಲ. ಆದರೆ ಈಗ ಬೆರಳುಗಳು ಮೊದಲಿನಂತೆ ಕೂದಲ ಒಳಗೆ ಹೋಗಲ್ಲ. ಪದೇ ಪದೇ ಸರಿ ಮಾಡಿಕೊಳ್ಳಬೇಕು ಅಂತೇನಿಲ್ಲ. ಈ ರೀತಿಯ ಹೇರ್‌ಸ್ಟೈಲ್ ಮಾಡಿಸಿಕೊಳ್ಳೋದು ದೊಡ್ಡದಲ್ಲ, ಅದನ್ನ ಮೆಂಟೇನ್ ಮಾಡದಿದ್ರೆ ಚೆನ್ನಾಗಿ ಕಾಣಲ್ಲ' ಎಂದಿದ್ದಾರೆ ಕಿಚ್ಚ.

'ಈ ಹೇರ್‌ಸ್ಟೈಲ್ ಮಾಡಿಕೊಂಡ ಮೇಲೆ ಪ್ರತಿದಿನ ಸ್ನಾನ ಮಾಡಲೇಬೇಕು. ಇಲ್ಲದಿದ್ರೆ ಬೆಳಿಗ್ಗೆ ಎದ್ದಾಗ ಮುಖ ನೋಡೋಕೆ ಆಗಲ್ಲ ಎಂದು ಕಿಚ್ಚ ಜೋಕ್ ಮಾಡಿದ್ದಾರೆ. ಇನ್ನು ಬಿಗ್‌ಬಾಸ್‌ನ ಪ್ರತಿ ವೀಕೆಂಡ್‌ನಲ್ಲೂ ವಿಭಿನ್ನ ಗೆಟಪ್‌ನಲ್ಲಿ ಬರೋಕೆ ಆಗಲ್ಲ. ಹೇರ್‌ಸ್ಟೈಲಿಶ್ ಹೆಸರನ್ನೇ ಈಗಲೇ ಹೇಳಲ್ಲ. ಈಗ ಏನಾದ್ರೂ ನಾನು ಅವನ ಹೆಸರು ಹೇಳಿದ್ರೆ, ಅವನು ಬ್ಯುಸಿ ಆಗ್ತಾನೆ. ಆಮೇಲೆ ನನಗೇ ಸಿಗೋದಿಲ್ಲ' ಎಂದು ಕಿಚ್ಚ ಪತ್ರಕರ್ತರ ಕಾಲೆಳೆದಿದ್ದಾರೆ.
'ಬೇರೆ ನಟರು ವಿಗ್ ಹಾಕ್ತಾರೆ'
'ಬೇರೆ ನಟರಿಗೆ ಹೋಲಿಸಿಕೊಂಡರೆ ವಿಗ್ ತುಂಬಾ ಯೂಸ್ ಮಾಡ್ತಿದ್ದಾರೆ. ಆದ್ರೆ ನಮ್ಮ ಬಾಸ್‌ದು ಒಂದೇ ಒಂದು ಕೂದಲು ಉದುರಿಲ್ಲ' ಎಂದು ಸುದೀಪ್ ಅಭಿಮಾನಿಯೊಬ್ಬರು ಹೇಳಿದ್ದಾರೆ. 'ಅವರನ್ನ ನೋಡಿದ್ರೆ 52 ವರ್ಷ ಆಗಿದೆ ಅಂತ ಅನಿಸೋದೇ ಇಲ್ಲ, ಇನ್ನೂ 28 ವರ್ಷದವರಂತೆ ತುಂಬಾ ಚೆನ್ನಾಗಿ ಕಾಣ್ತಾರೆ. ನಮ್ ಸುದೀಪ್ ಬಾಸ್ ಹುಡುಗಿಯರಿಗಿಂತಲೂ ಸಖತ್ತಾಗಿ ಕೂದಲನ್ನ ಮೇಂಟೇನ್ ಮಾಡಿದ್ದಾರೆ. ಹುಡುಗಿಯರೂ ಅಷ್ಟು ಚೆನ್ನಾಗಿ ಕೂದಲನ್ನ ಆರೈಕೆ ಮಾಡಲ್ಲ, ಸುದೀಪ್ ಅವರ ಈ ಲುಕ್ ತುಂಬಾ ಚೆನ್ನಾಗಿದೆ' ಎಂದಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.
ಸುದೀಪ್ ಅವರು ಹೆಬ್ಬುಲಿ ಸಿನಿಮಾಗಾಗಿ ವಿಶೇಷ ಹೇರ್‌ಸ್ಟೈಲ್ ಮಾಡಿದ್ದರು. ಅದು ಆಗ ಹೆಬ್ಬುಲಿ ಹೇರ್ ಕಟ್ ಎಂದೇ ಫೇಮಸ್ ಆಗಿತ್ತು. ಅವರ ಅಭಿಮಾನಿಗಳು ಅದೇ ರೀತಿ ಹೇರ್ ಕಟ್ ಮಾಡಿಸಿಕೊಂಡು ಟ್ರೆಂಡ್ ಹುಟ್ಟುಹಾಕಿದ್ದರು. ಬಳಿಕ ವಿಕ್ರಾಂತ್ ರೋಣ ಸಿನಿಮಾದಲ್ಲೂ ಸುದೀಪ್ ಅವರ ಹೇರ್‌ಸ್ಟೈಲ್ ಬದಲಾಗಿತ್ತು. ಈಗ ಮುಂದಿನ ಸಿನಿಮಾಗಳಿಗಾಗಿ ಕಿಚ್ಚ ಮತ್ತೆ ಹೇರ್‌ಸ್ಟೈಲ್ ಬದಲಿಸಿದ್ದಾರೆ. ಸುದೀಪ್ ತಮ್ಮ ಹೊಸ ಲುಕ್ ಮೂಲಕ ಸುದ್ದಿಯಾಗುತ್ತಿದ್ದಾರೆ.












Click it and Unblock the Notifications