ಚೆನ್ನೈ ಬಂದರಿನ 100 ಕೂಲಿಗಳಿಗೆ ಒನ್ಇಂಡಿಯಾದಿಂದ "ಕೂಲಿ" ಸಿನಿಮಾ ವೀಕ್ಷಣೆಗೆ ವ್ಯವಸ್ಥೆ
ನಟ ರಜನಿಕಾಂತ್ ಅಭಿನಯದ "ಕೂಲಿ" ಸಿನಿಮಾ ತೆರೆ ಮೇಲೆ ಉತ್ತಮ ಪ್ರದರ್ಶನ ಕಾಣುತ್ತಿದೆ. ಈ ಹಿನ್ನೆಲೆ ಒನ್ ಇಂಡಿಯಾ ಇದೇ ಮೊದಲ ಬಾರಿಗೆ ಚೆನ್ನೈ ಬಂದರಿನಲ್ಲಿ ಕೆಲಸ ಮಾಡುವ 100 ಕೂಲಿಗಳನ್ನು ತನ್ನ 50 ಓದುಗರೊಂದಿಗೆ ಬಹುನಿರೀಕ್ಷಿತ "ಕೂಲಿ" ಸಿನಿಮಾದ ವಿಶೇಷ ಪ್ರದರ್ಶನಕ್ಕಾಗಿ ಕರೆತರುವ ಮೂಲಕ ಮಹತ್ವದ ಹೆಜ್ಜೆ ಇಟ್ಟಿದೆ. ಈ ಮೂಲಕ ಸಿನಿಮಾ ಪ್ರದರ್ಶನವನ್ನು ನಿಜ ಜೀವನದ ನಾಯಕರ ಸಂಭ್ರಮಾಚರಣೆಯಾಗಿ ಬದಲಾಯಿಸಿದೆ.
"ಚೆನ್ನೈ ಬಂದರಿನಿಂದ ದೊಡ್ಡ ಪರದೆಯವರೆಗೆ" (From Chennai Harbour to the Big Screen) ಎಂಬ ವಿಶೇಷ ಅಭಿಯಾನದ ಮೂಲಕ ತೆರೆಯ ಮೇಲಿನ ಮತ್ತು ನಿಜಜೀವನದ "ಕೂಲಿ"ಗಳನ್ನು ಒಂದು ವೇದಿಕೆಯಡಿ ಒಗ್ಗೂಡಿಸುವ ಪ್ರಯತ್ನ ಮಾಡಿದೆ. ನಿಜವಾದ ಕೂಲಿಗಳು ಹಾಗೂ ತಮ್ಮ ಕುರಿತಾದ ಕೂಲಿ ಸಿನಿಮಾದ ನಡುವೆ ಸೇತುವೆಯಾಗಲು ಈ ಅಭಿಯಾನವನ್ನು ವಿನ್ಯಾಸಗೊಳಿಸಲಾಗಿದೆ. ಪ್ರತಿನಿತ್ಯವೂ ಶ್ರಮ ಪಡುವ ಕೂಲಿಗಳನ್ನು ಗೌರವಾನ್ವಿತ ಅತಿಥಿಗಳಾಗಿ ಈ ಸಿನಿಮಾ ವೀಕ್ಷಿಸಲು ಆಹ್ವಾನಿಸಲಾಯಿತು. ಸ್ಪರ್ಧೆಯ ಮೂಲಕ 50 ಮಂದಿ ಓದುಗರು ಕೂಡ ಈ ಸಿನಿಮಾ ಪ್ರದರ್ಶನಕ್ಕೆ ಜೊತೆಯಾಗಿದ್ದಾರೆ. ಈ ಅಭಿಯಾನವನ್ನು ಸಂತೋಷ ಮತ್ತು ಗೌರವದ ಕ್ಷಣವಾಗಿ ಯಶಸ್ವಿಯಾಗಿ ಪರಿವರ್ತಿಸಿದರು.

"ಒನ್‌ಇಂಡಿಯಾದಲ್ಲಿ, ನಾವು ಪರದೆಯ ಮೇಲೆ ಹೇಳಲಾಗುವ ಕಥೆಗಳ ಶಕ್ತಿಯನ್ನು ಮಾತ್ರವಲ್ಲದೆ, ಪ್ರತಿದಿನ ಮೌನವಾಗಿ ಬದುಕುವ ಕಥೆಗಳ ಶಕ್ತಿಯನ್ನು ಕೂಡ ನಂಬುತ್ತೇವೆ. ಚೆನ್ನೈ ಬಂದರಿನ ಕೂಲಿಗಳು ಮತ್ತು ನಮ್ಮ ಓದುಗರನ್ನು ಕೂಲಿ ಸಿನಿಮಾ ಪ್ರದರ್ಶನಕ್ಕಾಗಿ ಒಟ್ಟುಗೂಡಿಸುವ ಮೂಲಕ ಸಿನಿಮಾವನ್ನು ಆಚರಿಸುವಾಗ ನಾವು ಕೂಲಿ ಕೆಲಸ ಮಾಡುವ ನಿಜವಾದ ವೀರರ ಕುರಿತು ಬೆಳಕು ಚೆಲ್ಲಲು ಬಯಸಿದ್ದೇವೆ. ಇದು ನಿಜ ಜೀವನ, ನೈಜ ಹೋರಾಟಗಳು ಮತ್ತು ನೈಜ ಭಾರತವನ್ನು ಗೌರವಿಸುವ ನಮ್ಮ ವಿಧಾನ ಎಂದು ಒನ್‌ಇಂಡಿಯಾದ ಸಿಇಒ ರಾವಣನ್ ಎನ್. ವಿವರಿಸಿದ್ದಾರೆ.
ಚಿತ್ರಮಂದಿರವು ಕೇವಲ ಚಪ್ಪಾಳೆಗಳೊಂದಿಗೆ ಮಾತ್ರ ಪ್ರತಿಧ್ವನಿಸಲಿಲ್ಲ. ಅದು ಹೃದಯಸ್ಪರ್ಶಿಯಾದ ಪ್ರತಿಕ್ರಿಯೆಗಳು, ಕೃತಜ್ಞತೆಯ ಭಾವನೆಗಳು ಮತ್ತು ಹಬ್ಬದ ಸಂಭ್ರಮವನ್ನು ಹಂಚಿಕೊಂಡ ಸಾಮೂಹಿಕ ಮನೋಭಾವದಿಂದ ತುಂಬಿತ್ತು. ಪ್ರಮುಖ ದೃಶ್ಯಗಳಲ್ಲಿ ಕೇಳಿದ ಹರ್ಷೋದ್ಗಾರಗಳಿಂದ ಹಿಡಿದು ಆ ಪ್ರದರ್ಶನವು ಸಿನಿಮಾ ಮತ್ತು ನಿಜ ಜೀವನದ ಹೀರೋಗಳ ನಡುವಿನ ಆಳವಾದ ಭಾವನಾತ್ಮಕ ಬಾಂಧವ್ಯವನ್ನು ಪ್ರತಿಬಿಂಬಿಸಿತು.

ಈ ವಿಶಿಷ್ಟ ಅಭಿಯಾನದ ಮೂಲಕ ಒನ್‌ಇಂಡಿಯಾ ಒನ್ಇಂಡಿಯಾ ಮನರಂಜನೆಗೆ ಸಹಾನುಭೂತಿ, ಗೌರವಕ್ಕೆ ವ್ಯಾಪ್ತಿ ಮತ್ತು ಕಥನಕ್ಕೆ ಸಾಮಾಜಿಕ ಪರಿಣಾಮವನ್ನು ಬೆರೆಸುವ ತನ್ನ ಸಾಮರ್ಥ್ಯವನ್ನು ಮತ್ತೆ ತೋರಿಸಿದೆ. ಒಂದು ಸಿನಿಮಾ ಬಿಡುಗಡೆ ಕೇವಲ ಪ್ರಚಾರವಷ್ಟೇ ಅಲ್ಲದೆ, ಸ್ವತಃ ಒಂದು ಕಥೆಯಾಗಿ ರೂಪುಗೊಳ್ಳಬಹುದು ಎಂಬುದನ್ನು ಸಾಬೀತುಪಡಿಸುತ್ತದೆ.












Click it and Unblock the Notifications