Niveditha Gowda: 'ಪಟ್ಟಣಗೆರೆ' ಶೆಡ್‌ಗೂ ನಿವೇದಿತಾ ಗೌಡಾಗೂ ಏನು ನಂಟು..? ನೆಟ್ಟಿಗರು ಹೇಳ್ತಾ ಇರೋದು ಏನು?
ಬೆಂಗಳೂರು, ಜೂನ್. 21: ಚಂದನವನದ ಮುದ್ದಾದ ಜೋಡಿ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಇತ್ತೀಚೆಗೆ ತಮ್ಮ ದಾಂಪತ್ಯ ಜೀವನಕ್ಕೆ ಫುಲ್ ಸ್ಟಾಪ್ ಇಟ್ಟು ವಿಚ್ಛೇದನ ತೆಗೆದುಕೊಂಡಿದ್ದಾರೆ. ಈ ಸುದ್ದಿ ಅವರ ಅಭಿಮಾನಿಗಳು ಮತ್ತು ರಾಜ್ಯದ ಜನತೆಗೆ ಒಂದು ಕ್ಷಣ ಶಾಕ್ ನೀಡಿದ್ದಂತು ಖಂಡಿತ.
ಇಬ್ಬರು ತಮ್ಮ ತಮ್ಮ ವೈಯಕ್ತಿಯ ಜೀವನದಲ್ಲಿ ಮುಂದುವರೆಯುವ ಕಾರಣ ಒಪ್ಪಿಗೆಯಿಂದಲೆ ವಿಚ್ಛೇದನ ತೆಗೆದುಕೊಂಡಿದ್ದರು. ಇಬ್ಬರ ಬಗ್ಗೆ ಬಮದ ಹಲವು ನೆಗೆಟಿವ್ ಕಾಮೆಂಟ್‌ಗಳಿಗೆ ಜೋಡಿಯಾಗಿಯೇ ಉತ್ತರ ಕೊಟ್ಟು ಬಾಯಿ ಮುಚ್ಚಿಸಿದರು. ಸದ್ಯ ವಿಚ್ಛೇದನದ ಬಳಿಕ ನಟಿ ನಿವೇದಿತಾ ಗೌಡ ಮೊದಲ ಇನ್‌ಸ್ಟಾಗ್ರಾಮ್ ರೀಲ್ಸ್ ಶೇರ್ ಮಾಡಿದ್ದಾರೆ. ಈ ರೀಲ್ಸ್‌ಗೆ ಬಂದಿರುವ ಕಾಮೆಂಟ್‌ಗಳನ್ನು ನೋಡಿದೆ ತಲೆ ತಿರುಗುವುದು ಗ್ಯಾರಂಟಿ.

ನಿವೇದಿತಾಗೂ ಪಟ್ಟಣಗೆರೆ ಲಿಂಕ್ ಇಟ್ಟ ನೆಟ್ಟಿಗರು!
ಬಿಗ್ ಬಾಸ್ ಮಾಜಿ ಸ್ಪರ್ಧಿ ಮತ್ತು ನಟಿ ನಿವೇದಿತಾ ಗೌಡ ಅವರ ಇನ್‌ಸ್ಟಾಗ್ರಾಮ್ ರೀಲ್ಸ್‌ಗೆ ತುಂಬಾ ನೆಗೆಟಿವ್ ಕಾಮೆಂಟ್‌ಗಳನ್ನು ಮಾಡುತ್ತಾರೆ. ಅವರ ದೇಹದ ಭಾಗಗಳನ್ನು ಕೆಟ್ಟದಾಗಿ ವರ್ಣಿಸಿ ಅಸಹ್ಯ ಮೆರೆಯುತ್ತಾರೆ. ಆದರೆ, ಡೈವೋರ್ಸ್ ಬಳಿಕ ಅವರು ಹಂಚಿಕೊಂಡಿರುವ ರೀಲ್ಸ್‌ಗೆ ಕಾಮೆಂಟ್ ಮಾಡಲು ಜನ ಭಯಪಡುತ್ತಿದ್ದಾರೆ. ಅದು ಕಾಮೆಂಟ್ ಬಾಕ್ಸ್‌ನಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿದೆ.
ನಟ ದರ್ಶನ್ ತನ್ನ ಆಪ್ತ ಸ್ನೇಹಿತಿ ಪವಿತ್ರಾ ಗೌಡಾಗೆ ಕೆಟ್ಟದಾಗಿ ಮೆಸೇಜ್ ಮಾಡಿದ್ದ ಎಂದು ಚಿತ್ರದುರ್ಗದ ರೇಣುಕಾಸ್ವಾಮಿ ಅವರನ್ನು ಕೊಲೆ ಮಾಡಿಸಿದ್ದಾರೆ ಎಂಬ ಆರೋಪದಲ್ಲಿ ಜೈಲಿನಲ್ಲಿದ್ದಾರೆ. ಆಗಿನಿಂದಲೂ ಸೆಲಬ್ರಿಟಿಗಳ ಫೋಟೋ, ವಿಡಿಯೋ, ರೀಲ್ಸ್‌ಗಳಿಗೆ ಕಾಮೆಂಟ್ ಮಾಡಲು ಜನ ಯೋಚಿಸುತ್ತಿದ್ದಾರೆ. ಕೊಟ್ಟ ಕಾಮೆಂಟ್‌ಗಳಿಗೆ ಯಾವ ರಿತಿಯ ಸಾವು ಬರಬಹುದು ಎಂಬ ಗೊಂದಲದಲ್ಲಿದ್ದಾರೆ. ಇದು ಈಗ ನಿವೇದಿತಾ ಅವರ ಪೋಸ್ಟ್‌ಗೆ ಕಾಮೆಂಟ್ ಮಾಡುವಾಗ ಜನ ಇದನ್ನೂ ಕೂಡ ನೆನಪು ಮಾಡಿಕೊಳ್ಳುತ್ತಿದ್ದಾರೆ.
ಕಾಮೆಂಟ್ ಹಾಕೋಕು ಮುಂಚೆ ಪಟ್ಟಣ ಗೆರೆ ಶೆಡ್ ನೆನಪು ಮಾಡಿಕೊಳ್ಳಿ!
ಚಂದನ್ ಶೆಟ್ಟಿ ಅವರಿಗೆ ವಿಚ್ಛೇದನ ಪಡೆದ ಬಳಿಕ ನಿವೇದಿತಾ ಗೌಡ ಹೊಸ ರೀಲ್ಸ್ ಹಂಚಿಕೊಂಡಿದ್ದಾರೆ. ಇದರಲ್ಲಿ ಸಕತ್ ಖುಷಿಯಿಂದ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋಗೆ ಸಾವಿರಾರು ಮಂದಿ ಕಾಮೆಂಟ್ ಮಾಡಿದ್ದು, 62 ಸಾವಿರಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ. ಜೊತೆಗೆ ನೆಟ್ಟಿಗರು ಮಾಡಿದ ಕಾಮೆಂಟ್‌ಗಳು ಇಲ್ಲಿವೆ.
'ಒಬ್ಬರಿಗೆ ಕಾಮೆಂಟ್ ಹಾಕೋಕು ಮುಂಚೆ ಪಟ್ಟಣ ಗೆರೆ ಶೆಡ್ ನೆನಪು ಮಾಡಿಕೊಂಡು ಅಕ್ರಿ...', 'ಏನೋ ಬಂದಿತ್ತು ಬಾಯಿಗೆ ಆದ್ರೆ ಷೆಡ್ ನೆನಪು ಆಗಿ ಸುಮ್ಮನೆ ಅದೇ....', 'ನಾನ್ ಕಾಮೆಂಟ್ ನೋಡ್ಕೊಂಡ್ ಹೋಗ್ತೀನಪ್ಪಾ....ಯಾಕ್ ಬೇಕು ಶೆಡ್ ಸಹವಾಸ....', 'ಶೆಡ್ ನೆನಪಾಗಿ ಅಭಿಮಾನಿಗಳು ಒಳ್ಳೆಯ ರೀತಿ ತಮ್ಮ ಅಭಿಪ್ರಾಯಗಳನ್ನು ಅಂಚಿಕೊಂಡಿದ್ದಾರೆ..', 'ಏನಾದ್ರು ಹೇಳ್ಬೇಕು ಅನ್ಕೊಂಡೆ...ಶೆಡ್ ನೆನಪಾಯ್ತು....'. 'ಶೆಡ್ ಖಾಲಿ ಇದೆ ...ಮೆಸೇಜ್ / ಕಾಮೆಂಟ್ ಮಾಡೋರು ನೋಡ್ಕೊಂಡ್ ಮಾಡಿ....', 'ಕೆಟ್ಟದಾಗಿ ಯಾರು ಕಮೆಂಟ್ ಹಾಕ್ತಿರೋ ಅವ್ರೆಲ್ಲಾ ಪಟ್ಟಣಗೆರೆ ಶೆಡ್ ಗೆ ಹೋಗೋಕೆ ರೆಡಿ ಆಗಿರಿ....', 'ಆಗಿದ್ರೆ ನಾವ್ ರೀಲ್ಸ್ ನೋಡೋ ಮುಂಚೆನೇ ಶೇಡ್ ನೆನಪು ಮಾಡ್ಕೋಬೇಕು, ನಾನು ಏನು ಕಾಮೆಂಟ್ ಮಾಡಲ್ಲ ಯಾಕ್ ಅಂದ್ರೆ.... ಗೊತ್ತಿರ್ಬೇಕ ಅಲ್ವಾ ನಿಮಗೂ ಅಷ್ಟೇ ಏನ ಅಂತೀರಾ...?', 'ಕಾಮೆಂಟ್ ಬಾಕ್ಸ್ ನೋಡಿ ಹಾಕ್ರೋ ಮಾರ್ರೆ ಶೇಡ್ ರೆಡಿ ಇರತ್ತೆ ಆಮೇಲೆ....', 'ಬೇಡಪ್ಪಾ ಈ ಹುಡ್ಗೀರ್ ಸಹವಾಸ ಮತ್ತೆ ನಮಿಗೆ ಶೆಡ್ಡಿಗೆ ಕರುದ್ ಬಿಡ್ತಾರೆ ಅದ್ಕೆ ನಾನು ಏನು ಮಾತಾಡಲ್ಲ....'.












Click it and Unblock the Notifications