₹60,00,00,000 ವಂಚನೆ ಪ್ರಕರಣದಲ್ಲಿ ಬಾಲಿವುಡ್ ಶಿಲ್ಪಾ ಶೆಟ್ಟಿ & ರಾಜ್ ಕುಂದ್ರಾಗೆ, ಏನಿದು ಹೊಸ ಸಂಕಷ್ಟ ?!
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಹಾಗೂ ಅವರ ಪತಿ ಉದ್ಯಮಿ ರಾಜ್ ಕುಂದ್ರಾ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಕಳೆದ ಎರಡು ಮೂರು ವರ್ಷಗಳಿಂದಲೂ ನಟಿ ಶಿಲ್ಪಾ ಶೆಟ್ಟಿ ಮತ್ತು ಉದ್ಯಮಿ ರಾಜ್ ಕುಂದ್ರಾ ಅವರು ಒಂದಿಲ್ಲೊಂದು ವಿವಾದಗಳಲ್ಲಿ ಸಿಲುಕಿಕೊಳ್ಳುತ್ತಲ್ಲೇ ಇದ್ದಾರೆ. ಇದೀಗ ಬರೋಬ್ಬರಿ 60 ಕೋಟಿ ರೂಪಾಯಿ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ.
ನಟಿ ಶಿಲ್ಪಾ ಶೆಟ್ಟಿ ಹಾಗೂ ಉದ್ಯಮಿ ರಾಜ್ ಕುಂದ್ರಾ ದಂಪತಿ ಮುಂಬೈ ಮೂಲದ ಉದ್ಯಮಿಯೊಬ್ಬರಿಗೆ 60 ಕೋಟಿ ರೂ. ವಂಚನೆ ಆರೋಪ ಕೇಳಿ ಬಂದಿದೆ. ಈ ಪ್ರಕರಣವು ಸೆಲೆಬ್ರಿಟಿ ದಂಪತಿಗಳ ಈಗ ಕಾರ್ಯನಿರ್ವಹಿಸದ ಬೆಸ್ಟ್ ಡೀಲ್ ಟಿವಿ ಪ್ರೈವೇಟ್ ಲಿ.ಗಾಗಿ ಸಾಲ ಹಾಗೂ ಹೂಡಿಕೆ ಒಪ್ಪಂದಕ್ಕೆ ಸಂಬಂಧಿಸಿದೆ. ಉದ್ಯಮಿ ದೀಪಕ್ ಕೊಠಾರಿ ಅವರು 2015-2023ರ ವರ್ಷದ ನಡುವೆ ವ್ಯವಹಾರ ವಿಸ್ತರಣೆಗಾಗಿ 60.48 ಕೋಟಿ ರೂ.ಗಳನ್ನು ಕೊಟ್ಟಿದ್ದರು. ಆದರೆ, ಈ ದಂಪತಿಗಳು ಈ ಹಣವನ್ನು ಅವರ ವೈಯಕ್ತಿಕ ವೆಚ್ಚಗಳಿಗೆ ಖರ್ಚು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ವಿಷಯ ಬಾಲಿವುಡ್‌ನಲ್ಲಿ ಭಾರೀ ಸಂಚಲನ ಸೃಷ್ಟಿ ಮಾಡಿದೆ.

ಮೊದಲೇ ಸಾಕಷ್ಟು ವಿವಾಗಗಳಿಗೆ ಈ ದಂಪತಿ ಗುರಿಯಾಗಿದ್ದಾರೆ. ಉದ್ಯಮಿ ರಾಜ್ ಕುಂದ್ರಾ ಅವರು ವರ್ಷಗಳ ವರೆಗೆ ಮಾಧ್ಯಮಗಳಿಗೆ ಹಾಗೂ ಹೊರ ಜಗತ್ತಿಗೆ ಮುಖವನ್ನೇ ತೋರಿಸದೆ ಓಡಾಡುತ್ತಿದ್ದರು. ಇದರಿಂದ ಶಿಲ್ಪಾ ಶೆಟ್ಟಿ ಅವರಿಗೂ ಮುಜುಗರ ಎದುರಾಗಿತ್ತು. ಇದೀಗ ಈ ಪ್ರಕರಣದಲ್ಲಿ ಕೊಠಾರಿ ಅವರು 2015 ರಲ್ಲಿ ರಾಜೇಶ್ ಆರ್ಯ ಎಂಬ ಏಜೆಂಟ್ ಮೂಲಕ ಶೆಟ್ಟಿ-ಕುಂದ್ರ ಅವರ ಪರಿಚಯವಾಗಿದ್ದಾಗಿ ಹೇಳಿಕೊಂಡಿದ್ದಾರೆ. ಮುಂದುವರಿದು ಇದೇ ಸಮಯದಲ್ಲಿ, ದಂಪತಿಗಳು ಆನ್‌ಲೈನ್ ಶಾಪಿಂಗ್ ವೇದಿಕೆಯಾದ ಬೆಸ್ಟ್ ಡೀಲ್ ಟಿವಿಯ ನಿರ್ದೇಶಕರಾಗಿದ್ದರು. ಶಿಲ್ಪಾ ಶೆಟ್ಟಿ ಆಗ ಕಂಪನಿಯಲ್ಲಿ 87% ಕ್ಕೂ ಹೆಚ್ಚು ಷೇರುಗಳನ್ನು ಹೊಂದಿದ್ದರು ಎಂದು ಹೇಳಲಾಗಿದೆ.
ಆರ್ಯ ಅವರು ಕಂಪನಿಗೆ ವಾರ್ಷಿಕ 12% ಬಡ್ಡಿಯಲ್ಲಿ 75 ಕೋಟಿ ರೂಪಾಯಿ ಸಾಲ ಕೇಳಿದ್ದರು. ಆದರೆ ಹೆಚ್ಚಿನ ತೆರಿಗೆಗಳನ್ನು ತಪ್ಪಿಸುವ ಉದ್ದೇಶದಿಂದ ಈ ಮೊತ್ತವನ್ನು ಹೂಡಿಕೆ ಎಂದು ಪರಿಗಣಿಸುವಂತೆ ಸೂಚಿಸಲಾಗಿತ್ತು. ಅಲ್ಲದೇ ಈ ಸಂಬಂಧ ಮೀಟಿಂಗ್‌ಗಳು ನಡೆದು ಸಮಯಕ್ಕೆ ಸರಿಯಾಗಿ ಹಣವನ್ನು ಹಿಂದಿರುಗಿ
ಸಲಾಗುವುದು ಎನ್ನುವ ಭರವಸೆಯನ್ನೂ ಕೊಟ್ಟು ಒಪ್ಪಂದವನ್ನು ಫೈನಲ್ ಮಾಡಲಾಗಿತ್ತು ಎಂದು ಹೇಳಲಾಗಿದೆ.
ಒಟ್ಟಾರೆಯಾಗಿ ಅವರು ಒಪ್ಪಂದಕ್ಕಾಗಿ 60.48 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ವರ್ಗಾಯಿಸಿದ್ದಾರೆ. ಅಲ್ಲದೇ 3.19 ಲಕ್ಷ ರೂಪಾಯಿಗಳನ್ನು ಸ್ಟಾಂಪ್ ಡ್ಯೂಟಿಯಾಗಿ ಪಾವತಿ ಮಾಡಿದ್ದಾರೆ ಎಂದು ಹೇಳಲಾಗಿದೆ. 2015-2023ರ ಅವಧಿಯಲ್ಲಿ ಸೆಲೆಬ್ರಿಟಿ ದಂಪತಿಗಳು ವ್ಯವಹಾರ ಉದ್ದೇಶಗಳಿಗಾಗಿ ಹಣವನ್ನು ಪಡೆದುಕೊಂಡಿದ್ದು. ವೈಯಕ್ತಿಕ ಖರ್ಚುಗಳಿಗೆ ಬಳಸಿಕೊಂಡಿದ್ದಾರೆ ಎಂದು ದೂರುದಾರರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.












Click it and Unblock the Notifications