Mokshitha Pai: ಟ್ರಿಪ್ ಮೂಡ್‌ನಲ್ಲಿ ಮೋಕ್ಷಿತಾ ಪೈ: ಹೋಗಿದ್ದು ಎಲ್ಲಿಗೆ?

ಬಿಗ್‌ಬಾಸ್‌ ಕನ್ನಡ ಸೀಸನ್ 11 ಖ್ಯಾತಿಯ ಮೋಕ್ಷಿತಾ ಪೈ ಸದ್ಯ ಟ್ರಿಪ್ ಮೂಡ್‌ನಲ್ಲಿ ಇದ್ದಾರೆ. ಬೇಸಿಗೆ ಬಿಸಿಲಿಗೆ ಕೂಲ್ ಆಗಿರುವ ರೆಸಾರ್ಟ್‌ಗೆ ತೆರಳಿ ಮಜಾ ಮಾಡುತ್ತಿದ್ದಾರೆ. ಸ್ನೇಹಿತರೊಂದಿಗೆ ಮೋಜು ಮಸ್ತಿ ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ ಮೋಕ್ಷಿತಾ. ಹಾಗಾದರೆ ಮೋಕ್ಷಿತಾ ಹೋಗಿದ್ದು ಎಲ್ಲಿಗೆ?

ಮೋಕ್ಷಿತಾ ಪೈ ಬಿಗ್‌ಬಾಸ್‌ ಮನೆಯಿಂದ ಹೊರ ಬಂದ ಬಳಿಕ ತನ್ನ ಗೆಳತಿ ಮಾನ್ಸಿ ಜೋಷಿ ಮದುವೆ ಕಾರ್ಯಕ್ರಮದಲ್ಲಿ ತುಂಬಾನೇ ಬ್ಯೂಸಿ ಆಗಿದ್ದರು. ಮನೆ, ಸಿನಿಮಾ ಅಂತ ಬಿಡುವಿಲ್ಲದೆ ಕೆಲಸದಲ್ಲಿ ನಿರತರಾಗಿದ್ದ ಮೋಕ್ಷಿತಾ ಬಿಗ್‌ಬಾಸ್‌ ಸಹ ಸ್ಪರ್ಧಿ ರಂಜಿತ್ ನಿಶ್ಚಿತಾರ್ಥದಲ್ಲಿ ಭಾಗಿಯಾಗಿ ಸರ್ಪೈಸ್ ಕೊಟ್ಟಿದ್ದರು. ಈ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದೀಗ ಅವರು ಪ್ರವಾಸಕ್ಕೆ ತೆರಳಿದ್ದು ಪ್ರವಾಸದ ಫೋಟೋಗಳನ್ನೂ ಹಂಚಿಕೊಂಡಿದ್ದಾರೆ.

mokshitha pai in a trip mood Where did she go

ಹೌದು.. ಬಿಗ್‌ಬಾಸ್‌ ಮನೆಯಲ್ಲಿ ಗೆಲ್ಲುವ ಕುದುರೆ ಆಗಿ ಜನಮನ ಗೆದ್ದ ಮೋಕ್ಷಿತಾ ಪೈ ತಮ್ಮ ಸ್ನೇಹಿತರೊಂದಿಗೆ ಕೇರಳ ತೆರಳಿದ್ದಾರೆ. ಕೇರಳದಲ್ಲಿ ಒಂದೊಳ್ಳೆ ನೇಚರ್ ಇರುವ ರೆಸಾರ್ಟ್‌ನಲ್ಲಿ ಸ್ಟೈ ಮಾಡಿ, ಅಲ್ಲಿ ಫೋಟೋ ಶೂಟ್ ಮಾಡಿ ಖುಷಿ ಪಟ್ಟಿದ್ದಾರೆ. ಅಲ್ಲದೆ ತಮ್ಮ ಸ್ನೇಹಿತರೊಂದಿಗೆ ಟ್ರಕ್ಕಿಂಗ್ ಹೋಗಿ ನೇಚರ್ ಅನ್ನು ಎಂಜಾಯ್ ಮಾಡಿದ್ದಾರೆ ಮೋಕ್ಷಿತಾ.

ಮೋಕ್ಷಿತಾ ಪೈ ಮುಂದಿನ ಸಿನಿಮಾ

ಇನ್ನೂ ಮೋಕ್ಷಿತಾ ಪೈ ಪಾರು ಧಾರಾವಾಹಿ ಮೂಲಕ ಮನೆಮಾತಾದ ನಟಿ. ಇದೀಗ ಅವರು ಸಿನಿಮಾವೊಂದರಲ್ಲಿ ನಾಯಕ ನಟಿಯಾಗಿ ಪಾತ್ರ ಮಾಡುತ್ತಿದ್ದಾರೆ. ಅವರ ಮೊದಲ ಸಿನಿಮಾದ ಬಗ್ಗೆ ಅಭಿಮಾನಿಗಳಿಗೆ ಭಾರೀ ಕುತೂಹಲ ಮೂಡಿದೆ. 'ಮಿಡಲ್ ಕ್ಲಾಸ್ ರಾಮಾಯಣ' ಸಿನಿಮಾ ಮೂಲಕ ಮೊದಲ ಬಾರಿಗೆ ಮೋಕ್ಷಿತಾ ದೊಡ್ಡ ಪರದೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಚಿತ್ರೀಕರಣ ಈಗಾಗಲೇ ಮುಗಿದಿದ್ದು, ಈ ಸಿನಿಮಾದಲ್ಲಿ ಮೋಕ್ಷಿತಾ ಕಪ್ಪು ಹುಡುಗಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾ ಬಿಡುಗಡೆಯ ಬಗ್ಗೆ ಚಿತ್ರ ತಂಡ ಯಾವುದೇ ಅಪ್ಡೇಟ್ ಕೊಟ್ಟಿಲ್ಲ.

mokshitha pai in a trip mood Where did she go

ಇತ್ತೀಚೆಗೆ ಮೋಕ್ಷಿತಾ ಐಶ್ವರ್ಯ ಹಾಗೂ ಶಶಿರ್ ಶಾಸ್ತ್ರಿ ಜೊತೆಗೆ ಮೋಕ್ಷಿತಾ ಪ್ರವಾಸ ಕೈಗೊಂಡಿದ್ದರು. ಅಲ್ಲದೆ ಇತ್ತೀಚೆಗಷ್ಟೇ ತಮ್ಮ ಸಂಬಂಧಿಕರೊಬ್ಬರ ಮದುವೆಗೆ ನಟಿ ಮೋಕ್ಷಿತಾ ಪೈ ಭೇಟಿ ಮಾಡಿದ್ದರು. ಕಸಿನ್ ವೆಡ್ಡಿಂಗ್‌ನಲ್ಲಿ ಮಿಂಚಿನ ಮೋಕ್ಷಿತಾ ಪೈ ಅವರಿಗೆ 'ನಿಮ್ಮ ಮದುವೆ ಯಾವಾಗ?' ಎಂದು ಫ್ಯಾನ್ಸ್ ಕಾಮೆಂಟ್ ಮಾಡುವ ಮೂಲಕ ಪ್ರಶ್ನೆ ಮಾಡಿದ್ದರು.

ಆದರೆ ಈ ಬಗ್ಗೆ ಮೋಕ್ಷಿತಾ ಯಾವುದೇ ಅಪ್ಡೇಟ್ ಕೊಟ್ಟಿಲ್ಲ. ಯಾಕೆಂದರೆ ಬಿಗ್‌ಬಾಸ್‌ ಮನೆಯಿಂದ ಹೊರ ಬಂದ ಬಳಿಕ ನೀಡಿದ ಸಂದರ್ಶನದಲ್ಲೂ ಮೋಕ್ಷಿತಾ ಪೈಗೆ ಮದುವೆ ಬಗ್ಗೆ ಕೇಳಿದಾಗ ಅವರು, 'ತಮಗೆ ಸಾಕಷ್ಟು ಹೊಣೆಗಾರಿಕೆ ಇದೆ. ನನ್ನ ಸಹೋದರ, ಕುಟುಂಬ ಎಲ್ಲವನ್ನು ನಿಭಾಯಿಸಬೇಕು. ಹೀಗಾಗಿ ನಾನು ಸದ್ಯ ಮದುವೆ ಬಗ್ಗೆ ಯೋಚನೆ ಮಾಡಿಲ್ಲ' ಎಂದಿದ್ದರು.

ಅಲ್ಲದೆ ತಮಗೆ ತಮ್ಮನ್ನು ಮದುವೆ ಆಗುವ ಹುಡುಗ ತಮ್ಮನ್ನು ಅರ್ಥ ಮಾಡಿಕೊಳ್ಳುವರು ಆಗಿರಬೇಕು. ತಮ್ಮ ಎಲ್ಲಾ ವಿಚಾರಗಳನ್ನು ಹುಡುಗ ತಿಳಿದಿರಬೇಕು. ಇದಿಷ್ಟೆ ನನಗಿರುವ ಆಸೆ ಎಂದು ಮೋಕ್ಷಿತಾ ಸಂದರ್ಶನವೊಂದರಲ್ಲಿ ಹೇಳಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+