Mokshitha Pai: ಸ್ನೇಹಿತೆಯ ಮದುವೆಯಲ್ಲಿ ಭಾವುಕರಾದ ಮೋಕ್ಷಿತಾ ಪೈ
ಪಾರು ಧಾರವಾಹಿಯ ನಟಿ ಮಾನ್ಸಿ ಜೋಷಿ ಮದುವೆಯಲ್ಲಿ ನಟಿ ಮೋಕ್ಷಿತಾ ಪೈ ಭಾಗವಹಿಸಿರುವ ವಿಚಾರ ಎಲ್ಲರಿಗೂ ಗೊತ್ತಿದೆ. ಆತ್ಮೀಯ ಸ್ನೇಹಿತೆ ಮಾನ್ಸಿ ಮದುವೆಯಲ್ಲಿ ಮಿಂಚಿದ ಮೋಕ್ಷಿತಾ ಕಣ್ಣೀರು ಹಾಕಿದ್ದಾರೆ. ಹಾಗಾದರೆ ಮೋಕ್ಷಿತಾ ಕಣ್ಣೀರು ಹಾಕಿದ್ದು ಯಾಕೆ? ಮೋಕ್ಷಿತಾ ಕಣ್ಣೀರು ಹಾಕಲು ಕಾರಣ ಏನು?
ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಟಾಪ್ 4 ಸ್ಪರ್ಧಿಯಾದ ಮೋಕ್ಷಿತಾ ತಮ್ಮ ಆತ್ಮೀಯ ಸ್ನೇಹಿತೆ ಮಾನ್ಸಿ ಜೋಷಿ ಮದುವೆಯಲ್ಲಿ ಭಾಗಿಯಾಗಿ ಸಖತ್ ಎಂಜಾಯ್ ಮಾಡಿದ್ದಾರೆ. ಮದುವೆ ಪೂರ್ವ ಕಾರ್ಯಗಳ ಫೋಟೋಗಳನ್ನು ಹಂಚಿಕೊಂಡು ಖುಷಿ ಪಟ್ಟಿದ್ದಾರೆ. ಅಲ್ಲದೆ ಮಾನ್ಸಿಗೆ ಸರ್ಪೈಸ್ ಕೊಟ್ಟ ವಿಡಿಯೋವನ್ನೂ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಹೌದು.. ಮಾನ್ಸಿ ಜೋಷಿ ಅವರು ಜಯಂತ್ ಎನ್ನುವವರ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಪಾರು ಸೀರಿಯಲ್ ಮೂಲಕ ನಟಿ ಮಾನ್ಸಿ ಹಾಗೂ ಮೋಕ್ಷಿತಾ ಪರಿಚಯವಾಗಿದ್ದರು. ಪಾರು ಸೀರಿಯಲ್ ಮುಗಿದ ಬಳಿಕ ಮೋಕ್ಷಿತಾ ಬಿಗ್‌ಬಾಸ್ ಮನೆಗೆ ಹೋದರು. ಈ ವೇಳೆ ಮಾನ್ಸಿ ಮೋಕ್ಷಿತಾ ಅವರಿಗೆ ಓಟ್ ಮಾಡುವಂತೆ ಸೋಶಿಯಲ್ ಮೀಡಿಯಾಗಳಲ್ಲಿ ಪ್ರಮೋಷನ್ ಮಾಡುತ್ತಿದ್ದರು. ಮೋಕ್ಷಿತಾ ಬಿಗ್‌ಬಾಸ್ ಮನೆಯಲ್ಲಿ ಹೆಚ್ಚು ದಿನ ಉಳಿಯಲು ಮಾನ್ಸಿ ಅವರ ಪಾತ್ರ ತುಂಬಾ ದೊಡ್ಡದು.
ನಟಿ ಮೋಕ್ಷಿತಾ ಅವರು ಬಿಗ್‌ಬಾಸ್ ಮನೆಯಲ್ಲಿ ರನ್ನರ್ ಅಪ್ ಆಗುವವರೆಗೂ ಮಾನ್ಸಿ ಜೋಷಿ, ಮೋಕ್ಷಿತಾ ಅವರ ಸೋಶಿಯಲ್ ಮೀಡಿಯಾ ಅಕೌಂಟ್ ಅನ್ನು ಹ್ಯಾಂಡಲ್ ಮಾಡುತ್ತಿದ್ದರು. ಅಷ್ಟರ ಮಟ್ಟಿಗೆ ಮೋಕ್ಷಿತಾ ಹಾಗೂ ಮಾನ್ಸಿ ಅವರು ತುಂಬಾ ಒಳ್ಳೆಯ ಸ್ನೇಹಿತರಾಗಿದ್ದಾರೆ.
ಸ್ನೇಹಿತೆಯ ಮದುವೆಯಲ್ಲಿ ಭಾವುಕರಾದ ಮೋಕ್ಷಿತಾ ಪೈ
ಬಿಗ್‌ಬಾಸ್ ಮನೆಯಲ್ಲಿ ಇರುವಷ್ಟು ದಿನ ಮಾನ್ಸಿ ಮೋಕ್ಷಿತಾ ಅವರಿಗೆ ತುಂಬಾ ಸಹಾಯ ಮಾಡಿದ್ದಾರೆ. ಸಿನಿ ತಾರೆಯರ ಬಳಿ ಹೋಗಿ ಮೋಕ್ಷಿತಾ ಗೆಲುವಿಗಾಗಿ ಓಟ್ ಮಾಡಿ ಎಂದು ಕೇಳಿಕೊಂಡು ವಿಡಿಯೋಗಳನ್ನು ಹಂಚಿಕೊಂಡಿದ್ದರು ಮಾನ್ಸಿ. ಅಲ್ಲದೆ ಹಳೆಯ ಬಿಗ್‌ಬಾಸ್ ಸ್ಪರ್ಧಿಗಳ ಬಳಿ ಹೋಗಿ ಕೂಡ ಅವರು ಮೋಕ್ಷಿತಾಗೆ ಓಟ್ ಮಾಡುವಂತೆ ಕೇಳಿಕೊಂಡಿದ್ದರು. ಹೀಗೆ ಮೋಕ್ಷಿತಾ ಪೈ ಬಿಗ್‌ಬಾಸ್ ಮನೆಯಲ್ಲಿ ಉಳಿದುಕೊಳ್ಳಲು ಮಾನ್ಸಿ ಅವರ ಪಾತ್ರ ತುಂಬಾ ದೊಡ್ಡದಾಗಿದೆ.
ಹೀಗಾಗಿ ಮೋಕ್ಷಿತಾ ಅವರು ಮಾನ್ಸಿ ಮದುವೆಯ ಎಲ್ಲಾ ಕಾರ್ಯಗಳಲ್ಲೂ ಭಾಗಿಯಾಗಿದ್ದರು. ಅಲ್ಲದೆ ಸರ್ಪೈಸ್ ಕೂಡ ಕೊಟ್ಟಿದ್ದರು. ಇದೇ ವೇಳೆ ಮಾನ್ಸಿಗೆ ಜಯಂತ್ ತಾಳುಕಟ್ಟುತ್ತಿದ್ದಂತೆ ಮೋಕ್ಷಿತಾ ಅವರ ಕಣ್ಣು ತುಂಬಿಕೊಂಡಿತ್ತು. ಮಾನ್ಸಿ ಮೋಕ್ಷಿತಾಗೆ ಕೇವಲ ಗೆಳತಿ ಮಾತ್ರವಲ್ಲ, ಸಹೋದರಿ ಇದ್ದಂತೆ. ಮೋಕ್ಷಿತಾರ ಆತ್ಮೀಯರಲ್ಲಿ ಮಾನ್ಸಿ ಪ್ರಮುಖರು.
ಮಾನ್ಸಿ ಕೂಡ ಮೋಕ್ಷಿತಾ ಅವರೊಂದಿಗೆ ಬಲವಾದ ಸ್ನೇಹವನ್ನು ಹೊಂದಿದ್ದಾರೆ. ಮೋಕ್ಷಿತಾ ಅವರ ಏಳು ಬೀಳುಗಳಲ್ಲಿ ಹೆಗಲಾಗಿ ನಿಂತಿದ್ದಾರೆ. ಮೋಕ್ಷಿತಾ ತಮ್ಮ ಕುಟುಂಬಸ್ಥರಿಗಾಗಿ ಪಡುವ ಕಷ್ಟ ಮಾನ್ಸಿಗೆ ಮಾತ್ರವಲ್ಲ ಬಹುತೇಕ ಅವರ ಅಭಿಮಾನಿಗಳ ಮನ ಮುಟ್ಟಿದೆ. ಮಾನ್ಸಿಗೂ ಕೂಡ ಮೋಕ್ಷಿತಾ ಬಗ್ಗೆ ಆರಂಭದಲ್ಲಿ ತಿಳಿದಿರಲಿಲ್ಲ. ಕಾಲ ನಂತರ ಅವರ ಜೀವನದ ಬಗ್ಗೆ ತಿಳಿದು ಮಾನ್ಸಿ ಮನ ಕರಗಿತ್ತು. ಹೀಗಾಗಿ ಮೋಕ್ಷಿತಾ ಅವರೊಂದಿಗೆ ಮಾನ್ಸಿ ಆಳವಾದ ಸ್ನೇಹ ಹೊಂದಿದ್ದಾರೆ. ಹೀಗಾಗಿ ಮೋಕ್ಷಿತಾ ಕಣ್ಣಲ್ಲಿ ನೀರು ಕಾಣಿಸಿಕೊಂಡಿದೆ. ಒಟ್ಟಿನಲ್ಲಿ ಮದುವೆ ಕಾರ್ಯಗಳಲ್ಲಿ ಮೋಕ್ಷಿತಾ ಭಾಗವಹಿಸಿದ್ದು ಮಾನ್ಸಿಗೆ ಖುಷಿ ತಂದಿದ್ದು ಮಾತ್ರ ಸುಳ್ಳಲ್ಲ.












Click it and Unblock the Notifications