Mohanlal: ಮಲಯಾಳಂ ನಟ ಮೋಹನ್‌ಲಾಲ್ ಆಸ್ಪತ್ರೆಗೆ ದಾಖಲು
ಖ್ಯಾತ ಮಲಯಾಳಂ ನಟ ಮೋಹನ್‌ಲಾಲ್ ಅವರನ್ನು ಕೊಚ್ಚಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ತೀವ್ರ ಜ್ವರ, ಉಸಿರಾಟದ ತೊಂದರೆ ಮತ್ತು ಸ್ನಾಯು ನೋವು ಸೇರಿದಂತೆ ಇತರೆ ರೋಗಲಕ್ಷಣಗಳು ಕಂಡುಬಂದ ಕಾರಣ ಅವರನ್ನು ಕೊಚ್ಚಿಯಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನಿಡಲಾಗುತ್ತಿದೆ. ವೈದ್ಯಕೀಯ ಹೇಳಿಕೆಯ ಪ್ರಕಾರ, ಮೋಹನ್‌ಲಾಲ್ ಅವರಿಗೆ ಉಸಿರಾಟದ ಸೋಂಕು ಇರಬಹುದು ಎಂದು ಶಂಕಿಸಲಾಗಿದೆ.
ಚಿತ್ರರಂಗದ ಬಗ್ಗೆ ಅಪ್‌ಡೇಟ್ ನೀಡುವ ಶ್ರೀಧರ್ ಪಿಳ್ಳೈ ಎನ್ನುವವರು ಮೋಹನ್‌ಲಾಲ್ ಅವರ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದು, 64 ವರ್ಷದ ಹಿರಿಯ ನಟ ಮೋಹನ್‌ಲಾಲ್ ಅವರಿಗೆ ಐದು ದಿನಗಳ ಕಾಲ ಸಾರ್ವಜನಿಕ ಸಂವಹನ ತಪ್ಪಿಸಲು ಮತ್ತು ಕೊಟ್ಟಿರುವ ಔಷಧಿಗಳನ್ನು ಸರಿಯಾಗಿ ತೆಗೆದುಕೊಳ್ಳುವಂತೆ ಸಲಹೆ ನೀಡಲಾಗಿದೆ.

'ಲೂಸಿಫರ್ 2: ಎಂಪುರಾನ್' ಚಿತ್ರೀಕರಣವನ್ನು ಮುಗಿಸಿದ ನಂತರ ಮತ್ತು ಅವರ ನಿರ್ದೇಶನದ ಚೊಚ್ಚಲ 'ಬರೋಜ್' ನ ನಿರ್ಮಾಣದ ನಂತರ, ಮೋಹನ್ ಲಾಲ್ ಗುಜರಾತ್‌ನಿಂದ ಕೊಚ್ಚಿಗೆ ಮರಳಿದರು, ಅಲ್ಲಿ ಅವರ ಆರೋಗ್ಯ ಪರಿಸ್ಥಿತಿ ಹದಗೆಟ್ಟಿತು. ಇತ್ತೀಚಿನ ವೈದ್ಯಕೀಯ ವರದಿಗಳ ಪ್ರಕಾರ ನಟನ ಆರೋಗ್ಯದಲ್ಲಿ ಸುಧಾರಣೆ ಕಂಡಿದ್ದು, ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದು, ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.
ಬಿಡುಗಡೆಗೆ ಸಿದ್ದವಾದ ಬರೋಜ್
ಅಕ್ಟೋಬರ್ 2ರಂದು ಮೋಹನ್ ಲಾಲ್ ಅವರ ನಿರ್ದೇಶನದ ಮೊದಲ ಸಿನಿಮಾ ಬರೋಜ್ ಬಿಡುಗಡೆಯಾಗಲಿದೆ. ಇದು ಹಿರಿನ ನಟ ಮೋಹನ್‌ಲಾಲ್ ಅವರ ಮೊದಲ ನಿರ್ದೇಶನದ ಸಿನಿಮಾವಾಗಿದ್ದು, ಹೆಚ್ಚಿನ ಕುತೂಹಲ ಕೆರಳಿಸಿದೆ.












Click it and Unblock the Notifications