Meghana Raj: ಕನ್ನಡ ಚಿತ್ರರಂಗ ತೊರೆಯಲು ನಟಿ ಮೇಘನಾ ರಾಜ್ ನಿರ್ಧಾರ?
ಸ್ಯಾಂಡಲ್‌ವುಡ್ ನಟಿ ಮೇಘನಾ ರಾಜ್ ಬಗ್ಗೆ ಹೊಸ ಸುದ್ದಿಯೊಂದು ಹರಿದಾಡುತ್ತಿದೆ. ಮೇಘನಾ ಅವರು ತಮ್ಮ ಮದುವೆ ಹಾಗೂ ಪತಿ ಚಿರು ನಿಧನದ ನಂತರ ಸಿನಿಮಾಗಳಿಂದ ತುಸು ದೂರ ಉಳಿದಿದ್ದರು. ಮಗನ ಆರೈಕೆಯಲ್ಲೇ ಬ್ಯುಸಿಯಾಗಿದ್ದರು. ಮೇಘನಾ ಮತ್ತೆ ಕನ್ನಡ ಸಿನಿಮಾಗಳಲ್ಲಿ ನಟಿಸಬೇಕು ಎನ್ನುವುದು ಕನ್ನಡ ಪ್ರೇಕ್ಷಕರ ಒತ್ತಾಯವಾಗಿತ್ತು. ಆದರೆ ಮೇಘನಾ ಕನ್ನಡ ಚಿತ್ರರಂಗ ತೊರೆಯಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಮೇಘನಾ ನಿಜಕ್ಕೂ ಇಂತಹ ನಿರ್ಧಾರ ತೆಗೆದುಕೊಂಡ್ರಾ? ಅದಕ್ಕೆ ಕಾರಣವೇನು ಅನ್ನೋ ಮಾಹಿತಿ ಇಲ್ಲಿದೆ ನೋಡಿ.
ಮೇಘನಾ ಮೂಲತಃ ಕನ್ನಡದ ಸಿನಿ ಕುಟುಂಬದಲ್ಲೇ ಜನಿಸಿದರೂ ಬಣ್ಣದ ಲೋಕಕ್ಕೆ ಬಂದಿದ್ದು ಮಾತ್ರ ಬೇರೆ ಚಿತ್ರರಂಗಗಳಿಂದ. ಹೌದು ತೆಲುಗು ಸಿನಿಮಾ ಮೂಲಕ ಮೇಘನಾ ರಾಜ್ ಸಿನಿಮಾ ರಂಗಕ್ಕೆ ಬಂದಿದ್ದರು. ಬಳಿಕ ತಮಿಳು, ಮಲಯಾಳಂ ಸಿನಿಮಾಗಳಲ್ಲಿಯೂ ಮಿಂಚಿದ್ದರು. ಲೂಸ್ ಮಾದ ಯೋಗಿ ನಟನೆಯ ಪುಂಡ ಸಿನಿಮಾ ಮೂಲಕ ಅವರು ಸ್ಯಾಂಡಲ್‌ವುಡ್ ನಾಯಕಿಯಾಗಿದ್ದರು. ಬಳಿಕ ಬಹುಭಾಷೆಗಳಲ್ಲಿ ಮೇಘನಾ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದ್ದರು.

ಆದರೆ ಮೇಘನಾ ದಿಢೀರನೆ ಕನ್ನಡ ಚಿತ್ರರಂಗ ತೊರೆಯಲು ನಿರ್ಧರಿಸಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇತ್ತೀಚೆಗೆ ಕನ್ನಡ ಸಿನಿಮಾಗಳಲ್ಲಿ ಮೇಘನಾ ಅವರಿಗೆ ಅವಕಾಶಗಳು ಕಡಿಮೆಯಾದ ಕಾರಣ ಅವರು ಬೇರೆ ಚಿತ್ರರಂಗದತ್ತ ಮುಖ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಅಚ್ಚರಿ ಬೆಳವಣಿಗೆ ಎನ್ನುವಂತೆ ತಮಿಳಿನ ಖ್ಯಾತ ನಟನ ಸಿನಿಮಾದಲ್ಲಿ ಮೇಘನಾ ನಟಿಸಲಿದ್ದಾರೆ ಎಂದು ಸಹ ಮಾಧ್ಯಮಗಳಲ್ಲಿ ವರದಿಯಾಗಿದೆ.
ಮೇಘನಾ ನಿರ್ಧಾರಕ್ಕೆ ಕಾರಣವೇನು?
ಸೂಪರ್ ಸ್ಟಾರ್ ರಜನಿಕಾಂತ್ ಅವರ ಬಹುನಿರೀಕ್ಷಿತ ಜೈಲರ್-2 ಸಿನಿಮಾ ಈಗಾಗಲೇ ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ. ವರದಿಗಳ ಪ್ರಕಾರ ನಟಿ ಮೇಘನಾ ರಾಜ್ ಸರ್ಜಾ ಕೂಡ ಈ ಚಿತ್ರತಂಡವನ್ನು ಸೇರಿಕೊಂಡಿದ್ದಾರಂತೆ. ದಶಕಗಳ ಬಳಿಕ ಮೇಘನಾ ತಮಿಳು ಚಿತ್ರರಂಗಕ್ಕೆ ಈ ಸಿನಿಮಾ ಮೂಲಕ ಕಂಬ್ಯಾಕ್ ಆಗಲಿದ್ದಾರೆ. ಈ ಪ್ಯಾನ್-ಇಂಡಿಯನ್ ಚಿತ್ರದಲ್ಲಿ ಮೇಘನಾ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಮೂಲಗಳ ಪ್ರಕಾರ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಮೇಘನಾ ನಟಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದ್ದು, ಮೇಘನಾ ಈಗಾಗಲೇ ಕೆಲವು ದಿನಗಳಿಂದ ಚಿತ್ರೀಕರಣದಲ್ಲಿದ್ದಾರೆ. ಆದರೆ ಈ ಬಗ್ಗೆ ಅಧಿಕೃತ ದೃಢೀಕರಣ ಮತ್ತು ಅವರ ಪಾತ್ರದ ವಿವರಗಳು ಬಹಿರಂಗವಾಗಿಲ್ಲ. ಸದ್ಯ ಕನ್ನಡ ಸಿನಿಮಾಗಳಲ್ಲಿ ಅವಕಾಶಗಳು ಕಡಿಮೆಯಾಗಿರುವ ಹಿನ್ನೆಲೆ ಮೇಘನಾ ತಮಿಳಿನತ್ತ ಮುಖ ಮಾಡಿದ್ದಾರೆ. ಈ ಪ್ಯಾನ್ ಇಂಡಿಯಾ ಸಿನಿಮಾ ಮೂಲಕ ಮತ್ತೆ ಅವರು ಬಹುಭಾಷೆಗಳಲ್ಲಿ ಮಿಂಚಲಿದ್ದಾರೆ ಎಂದು ವರದಿಯಾಗಿದೆ.












Click it and Unblock the Notifications