2ನೇ ಮದುವೆ ಮತ್ತು ವಿಜಯ್ ರಾಘವೇಂದ್ರ ಬಗ್ಗೆ ಮಾತನಾಡಿದ ಮೇಘನಾ ರಾಜ್... Meghana Raj
ಮೇಘನಾ ರಾಜ್ ಅವರು ಕನ್ನಡ ಸಿನಿಮಾ ಇಂಡಸ್ಟ್ರಿಯ ಮನೆ ಮಗಳು, 1990 ರಲ್ಲಿ ಹುಟ್ಟಿದ್ದ ನಟಿ ಮೇಘನಾ ರಾಜ್ ಅವರು ತಮ್ಮ ನಟನಾ ಸಾಮರ್ಥ್ಯದಿಂದ ಬಹುಬೇಗ ಹೀರೋಯಿನ್ ಆದರು. ಅಲ್ಲದೇ ಕನ್ನಡದಲ್ಲಿ ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡಿರುವ ಮೇಘನಾ ರಾಜ್ ಅವರು ದೊಡ್ಡ ಹೆಸರು ಮಾಡಿದ್ದರು. ಹೀಗಿದ್ದಾಗಲೇ ಚಿರಂಜೀವಿ ಸರ್ಜಾರ ಜೊತೆಗೆ ಮದುವೆ ಕೂಡ ಆಗಿತ್ತು. ಚಿರಂಜೀವಿ ಸರ್ಜಾ & ಮೇಘನಾ ಸರ್ಜಾ ಲವ್ ಮಾಡಿ ಮದುವೆ ಆಗಿದ್ದರು. ಹೀಗಿದ್ದಾಗಲೇ ವಿಧಿಯಾಟ ಘೋರವಾಗಿತ್ತು...
ಮೇಘನಾ ರಾಜ್ ಅವರ ತಂದೆ & ತಾಯಿ ಕೂಡ ಕನ್ನಡ ಸಿನಿಮಾ ರಂಗದಲ್ಲಿ ದೊಡ್ಡ ಸ್ಟಾರ್ಸ್. ಅಂದಹಾಗೆ ಮೇಘನಾ ರಾಜ್ ಅವರು 2ನೇ ಮದುವೆ ಆಗುವ ಬಗ್ಗೆ ಕೆಲವು ದಿನಗಳ ಹಿಂದೆ ರಿಯಾಕ್ಷನ್ ಕೊಟ್ಟಿದ್ದ ವಿಡಿಯೋ ವೈರಲ್ ಆಗಿತ್ತು. ನಟಿ ಮೇಘನಾ ರಾಜ್ ಅವರು ತಮ್ಮ ಮಗನ ಭವಿಷ್ಯ ಉಜ್ವಲಗೊಳಿಸಿ, ರಾಯನ್ ರಾಜ್‌ಗೆ ಉತ್ತಮ ಭವಿಷ್ಯ ಕಟ್ಟಿಕೊಡಲು ಈಗ ಸಾಕಷ್ಟು ಕಷ್ಟಪಡುತ್ತಿದ್ದಾರೆ. ಹೀಗಿದ್ದಾಗಲೇ, 2ನೇ ಮದುವೆ ಮತ್ತು ವಿಜಯ್ ರಾಘವೇಂದ್ರ ಬಗ್ಗೆ ಮಾತನಾಡಿದ ಮೇಘನಾ ರಾಜ್...

2ನೇ ಮದುವೆ ಬಗ್ಗೆ ಮೇಘನಾ ರಾಜ್...
ಮೇಘನಾ ರಾಜ್ ಅವರು ಬೆಂಗಳೂರಿನಲ್ಲೇ ಓದಿ ಬೆಳೆದವರು ಹಾಗೂ ಅತ್ಯುತ್ತಮ ನಟಿ ಹೌದು. ನಟಿ ಮೇಘನಾ ರಾಜ್ ಅವರು 1990ರ ಮೇ 3 ರಂದು ಕರ್ನಾಟಕದ ರಾಜಧಾನಿ ಬೆಂಗಳೂರು ನಗರದಲ್ಲಿ ಹುಟ್ಟಿದರು. ನಟಿ ಮೇಘನಾ ರಾಜ್ ಅವರು 2018 ರಲ್ಲಿ ಚಿರಂಜೀವಿ ಸರ್ಜಾ ಅವರ ಜೊತೆಗೆ ಸಪ್ತಪದಿ ತುಳಿದು ಮದುವೆ ಕೂಡ ಆಗಿದ್ದರು. ಆದರೆ ವಿಧಿಯ ಕೈವಾಡ ಚಿರಂಜೀವಿ ಸರ್ಜಾ ಅವರು 2020ರ ಜೂನ್ 7 ರಂದು ಅಕಾಲಿಕ ಮರಣ ಹೊಂದಿದರು. ಹೀಗಿದ್ದಾಗಲೇ, 2ನೇ ಮದುವೆ ಮತ್ತು ವಿಜಯ್ ರಾಘವೇಂದ್ರ ಬಗ್ಗೆ ಮಾತನಾಡಿದ ಮೇಘನಾ ರಾಜ್...
ಮೇಘನಾ ರಾಜ್ ಅವರು ಹೇಳಿದ್ದು ಇಷ್ಟು...
ಹೌದು, ನಟಿ ಮೇಘನಾ ರಾಜ್ ಅವರು ತಮ್ಮ 2ನೇ ಮದುವೆ ಬಗ್ಗೆ ಮಾತನಾಡಿದ್ದಾರೆ. ನಟಿ ಮೇಘನಾ ರಾಜ್ ಖಾಸಗಿ ಸಂದರ್ಶನ ಒಂದರಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ಹಾಗೇ ಇದೇ ವೇಳೆ ಸೋಷಿಯಲ್ ಮೀಡಿಯಾದಲ್ಲಿ ವಿಜಯ್ ರಾಘವೇಂದ್ರ ಬಗ್ಗೆ ಮಾತನಾಡುವ & ಟ್ರೋಲ್ ಮಾಡುವ ಪೇಜ್‌ಗಳ ವಿರುದ್ಧ ಕೂಡ ಗರಂ ಆಗಿದ್ದಾರೆ ನಟಿ ಮೇಘನಾ ರಾಜ್. ಮತ್ತೊಂದು ಕಡೆ ತಮ್ಮ 2ನೇ ಮದುವೆ ಬಗ್ಗೆ ಮೇಘನಾ ರಾಜ್ ಅವರು ಮಾತನಾಡುತ್ತಾ, ಭವಿಷ್ಯದಲ್ಲಿ ಈ ಬಗ್ಗೆ ಒಂದು ನಿರ್ಧಾರ ತೆಗೆದುಕೊಳ್ಳುವ ಮಾತು ಆಡಿದ್ದಾರೆ. ಅಲ್ಲದೆ ಮೇಘನಾ ರಾಜ್ 2ನೇ ಮದುವೆ ಆಗುತ್ತಾರಾ? ಎಂಬ ಅಭಿಮಾನಿಗಳ ಪ್ರಶ್ನೆಗೆ ಉತ್ತರವೂ ಸಿಕ್ಕಿದೆ. ಹಾಗಾದರೆ, ನಟಿ ಮೇಘನಾ ರಾಜ್ ತಮ್ಮ 2ನೇ ಮದುವೆ ಬಗ್ಗೆ ಏನಂದ್ರು? ಮುಂದೆ ಓದಿ.
ನಟಿ ಮೇಘನಾ ರಾಜ್ ತಮ್ಮ 2ನೇ ಮದುವೆ ಬಗ್ಗೆ ಇದೀಗ ಮಹತ್ವದ ಹೇಳಿಕೆ ನೀಡಿದ್ದಾರೆ. '2ನೇ ಮದುವೆ ಬಗ್ಗೆ ಜನ ಏನು ಆಲೋಚಿಸುತ್ತಾರೆ ಎಂದು ನಾನು ಯೋಚಿಸಲ್ಲ. ನಾನು ಏನು ಮಾಡಬೇಕು ಎಂದುಕೊಳ್ಳುತ್ತೇನೆ ಅದು ಆಗುತ್ತಿಲ್ಲ. ನಾನು ಕೂಡ ಸಾಮಾನ್ಯ ವ್ಯಕ್ತಿ' ಎನ್ನುವ ಜೊತೆಗೆ 'ಯಾವುದಾದರೂ ವ್ಯಕ್ತಿ ನನ್ನ ಜೀವನದಲ್ಲಿ ಬರುತ್ತಾರೋ ಗೊತ್ತಿಲ್ಲ. ಚಿರುಗೆ ಈ ವ್ಯಕ್ತಿ ಸರಿ ಅಂತಾ ಅನಿಸಿದರೆ ಆಗ ಚಿರು ಅದನ್ನು ಮಾಡಿಸುತ್ತಾರೆ. ಯಾವ ವ್ಯಕ್ತಿಯೂ ಸರಿ ಇಲ್ಲ ಅಂತಾ ಅನಿಸಿದರೆ ಚಿರು ಕಳಿಸೋದೆ ಇಲ್ಲ. ಆಗ ನಾನು ಹೀಗೇ ಇದ್ದು ಬಿಡುತ್ತೇನೆ' ಎನ್ನುವ ಮೂಲಕ ನಟಿ ಮೇಘನಾ ರಾಜ್ ತಮ್ಮ 2ನೇ ಮದುವೆ ಬಗ್ಗೆ ಮಾತನಾಡಿದ್ದೂ ಅಲ್ಲದೆ, ಚಿರು ಅಂದ್ರೆ ಚಿರಂಜೀವಿ ಅವರನ್ನ ಈಗಲೂ ಎಷ್ಟು ಪ್ರೀತಿ ಮಾಡುತ್ತಾರೆ ಎಂಬುದನ್ನ ತಿಳಿಸಿದ್ದಾರೆ.












Click it and Unblock the Notifications