ಮೇಘನಾ ರಾಜ್ 2ನೇ ಮದುವೆ ವಿಚಾರ, ಆ ವ್ಯಕ್ತಿ ಒಪ್ಪಿದರೆ ಮದುವೆ ಫಿಕ್ಸ್... Meghana Raj
ಮೇಘನಾ ರಾಜ್ ಅವರು ಚಿರಂಜೀವಿ ಸರ್ಜಾ ಅವರನ್ನ ಕಳೆದುಕೊಂಡ ನಂತರ ಮತ್ತೊಂದು ಮದುವೆಯನ್ನ ಆಗುತ್ತಾರೆ ಅಂತಾ ದೊಡ್ಡ ಚರ್ಚೆ ನಡೆಯುತ್ತಿತ್ತು. ಅದರಲ್ಲೂ ಕೆಲವರಿಗೆ ಈ ಬಗ್ಗೆ ನಟಿ ಮೇಘನಾ ರಾಜ್ ಅವರು ವಾರ್ನಿಂಗ್ ಕೂಡ ಕೊಟ್ಟಿದ್ದರು. ಮತ್ತೊಂದು ಕಡೆ ಮೇಘನಾ ರಾಜ್ 2ನೇ ಮದುವೆ ವಿಚಾರ ಭಾರಿ ದೊಡ್ಡ ಚರ್ಚೆಗೆ ವೇದಿಕೆ ಕೂಡ ಒದಗಿಸಿತ್ತು. ಹೀಗಿದ್ದಾಗಲೇ, ಮೇಘನಾ ರಾಜ್ 2ನೇ ಮದುವೆ ವಿಚಾರ, ಆ ವ್ಯಕ್ತಿ ಒಪ್ಪಿದರೆ ಮದುವೆ ಫಿಕ್ಸ್...
ಕನ್ನಡ ಸಿನಿಮಾ ರಂಗದಲ್ಲಿ ಮೇಘನಾ ರಾಜ್ ಅವರು ದೊಡ್ಡ ಹವಾ ಎಬ್ಬಿಸಿದ್ದರು, ತಮ್ಮ ಮನೋಜ್ಞ ಅಭಿನಯ ಹಾಗೂ ಸ್ಕ್ರೀನ್ ಪ್ರೆಸೆನ್ಸ್ ಮೂಲಕ ಕ್ವೀನ್ ಅಂತಾನೇ ಅಭಿಮಾನಿಗಳಿಂದ ಕರೆಸಿಕೊಳ್ಳುತ್ತಿದ್ದರು ನಟಿ ಮೇಘನಾ ರಾಜ್ ಅವರು. ಇಂತಹ ಸಮಯದಲ್ಲೇ, ಮೇಘನಾ ರಾಜ್ ಅವರು ಚಿರಂಜೀವಿ ಸರ್ಜಾರ ಜೊತೆ ಪ್ರೀತಿಯಲ್ಲಿ ಬಿದ್ದು ಮದುವೆ ಕೂಡ ಆಗಿದ್ದರು. ಹೀಗೆ ಇಬ್ಬರೂ ಮದುವೆ ಆದ ನಂತರ ಕರ್ನಾಟಕ ಪೂರ್ತಿ ಸಂಭ್ರಮ ಕೂಡ ವ್ಯಕ್ತಪಡಿಸಿತ್ತು. ಆದರೆ ಯಾರದ್ದೋ ದೃಷ್ಟಿ ತಾಗಿ, ಕೊನೆಗೆ ಘೋರ ದುರಂತವೂ ನಡೆದು ಹೋಗಿತ್ತು...

ಮೇಘನಾ ರಾಜ್ 2ನೇ ಮದುವೆ ವಿಚಾರ...
ಮೇಘನಾ ರಾಜ್ ಅವರು 2ನೇ ಮದುವೆ ಆಗುತ್ತಾರಾ? ಅನ್ನೋ ವಿಚಾರ ಪದೇ ಪದೇ ಚರ್ಚೆಗೆ ಬರ್ತಾನೆ ಇದೆ. ಮೇಘನಾ ರಾಜ್ ಅವರು ಚಿರಂಜೀವಿ ಸರ್ಜಾ ಅವರನ್ನ 2018ರಲ್ಲಿ ಮದುವೆ ಆಗಿದ್ದರು, ಆದರೆ ವಿಧಿ ಅವರ ಜೀವನದಲ್ಲಿ ಬಿರುಗಾಳಿ ಎಬ್ಬಿಸಿತ್ತು. ಚಿರಂಜೀವಿ ಸರ್ಜಾ ಅವರು 2020 ಜೂನ್ 7 ಭಾನುವಾರದ ದಿನ ತಮ್ಮ 39ನೇ ವಯಸ್ಸಿನಲ್ಲಿ ಜೀವ ಬಿಟ್ಟಿದ್ದರು. ಹೀಗಿದ್ದಾಗಲೇ, ಮೇಘನಾ ರಾಜ್ 2ನೇ ಮದುವೆ ವಿಚಾರ, ಆ ವ್ಯಕ್ತಿ ಒಪ್ಪಿದರೆ ಮದುವೆ ಫಿಕ್ಸ್...
2ನೇ ಮದುವೆ ವಿಚಾರ ಪ್ರಸ್ತಾಪದ ಬಗ್ಗೆ...
ನಟಿ ಮೇಘನಾ ರಾಜ್ ಅವರು ತಮ್ಮ 2ನೇ ಮದುವೆ ಬಗ್ಗೆ ಈಗ ಮಹತ್ವದ ಹೇಳಿಕೆಯನ್ನು ನೀಡಿದ್ದು, '2ನೇ ಮದುವೆ ಬಗ್ಗೆ ಜನ ಏನು ಆಲೋಚಿಸುತ್ತಾರೆ ಎಂದು ನಾನು ಯೋಚಿಸಲ್ಲ ಎಂದಿದ್ದಾರೆ. 'ಯಾವುದಾದರೂ ವ್ಯಕ್ತಿ ನನ್ನ ಜೀವನದಲ್ಲಿ ಬರುತ್ತಾರೋ ಗೊತ್ತಿಲ್ಲ. ಚಿರುಗೆ ಈ ವ್ಯಕ್ತಿ ಸರಿ ಅಂತಾ ಅನಿಸಿದರೆ ಆಗ ಚಿರು ಅದನ್ನ ಮಾಡಿಸುತ್ತಾರೆ. ಯಾವ ವ್ಯಕ್ತಿಯೂ ಸರಿ ಇಲ್ಲ ಅಂತಾ ಅನಿಸಿದರೆ ಚಿರು ಕಳಿಸೋದೆ ಇಲ್ಲ. ಆಗ ನಾನು ಹೀಗೇ ಇದ್ದು ಬಿಡುತ್ತೇನೆ' ಎನ್ನುವ ಮೂಲಕ ನಟಿ ಮೇಘನಾ ರಾಜ್ ತಮ್ಮ 2ನೇ ಮದುವೆಯ ಬಗ್ಗೆ ಮಾತನಾಡಿದ್ದೂ ಅಲ್ಲದೆ, ಚಿರು ಅಂದ್ರೆ ಚಿರಂಜೀವಿ ಅವರನ್ನ ಈಗಲೂ ಎಷ್ಟು ಪ್ರೀತಿ ಮಾಡುತ್ತಾರೆ ಎಂಬುದನ್ನ ತಿಳಿಸಿದ್ದಾರೆ. ಈ ಮೂಲಕ ನಟಿ ಮೇಘನಾ ರಾಜ್ ಅವರು ಇದೀಗ ತಮ್ಮ 2ನೇ ಮದುವೆ ಚರ್ಚೆಗೂ ಮುಕ್ತಿ ಹಾಡಿದ್ದಾರೆ.












Click it and Unblock the Notifications