ದುಬೈಯಲ್ಲಿ ಹುಟ್ಟುಹಬ್ಬ ಆಚರಿಸಿದ ಮೇಘನಾ ರಾಜ್

ಸ್ಯಾಂಡಲ್‌ವುಡ್‌ ನಟ ಚಿರಂಜೀವಿ ಸರ್ಜಾ ಅಗಲಿದ ನೋವಿನಿಂದ ಮೇಘನಾ ರಾಜ್ ಹೊರಬರಲು ಪ್ರಯತ್ನಿಸುತ್ತಿದ್ದಾರೆ. ರಿಯಾಲಿಟಿ ಶೋ, ಸಿನಿಮಾ ಮತ್ತು ಪ್ರವಾಸಕ್ಕೆ ಹೋಗುವ ಮೂಲಕ ಮೇಘನಾ ರಾಜ್ ನಾರ್ಮಲ್ ಆಗುತ್ತಿದ್ದಾರೆ. ಇದೀಗ ಅವರು ಗರ್ಲ್ಸ್ ಟ್ರಿಪ್ ಮಾಡಿದ್ದು ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಹಾಗಾದರೆ ಮೇಘನಾ ರಾಜ್ ದುಬೈಗೆ ಯಾರೊಂದಿಗೆ ಹೋಗಿದ್ದರು? ಯಾರ ಹುಟ್ಟುಹಬ್ಬವನ್ನು ಅವರು ಆಚರಿಸಿದರು? ಎಲ್ಲವನ್ನೂ ತಿಳಿಯೋಣ.

ಮೇಘನಾ ರಾಜ್ ಕನ್ನಡದ ಟಾಪ್ ನಟಿಯರಲ್ಲಿ ಒಬ್ಬರು. ನಟ ಚಿರಂಜೀವಿ ಸರ್ಜಾ ಅವರ ಪತ್ನಿ. ಚಿರು ಹಾಗೂ ಮೇಘನಾ ಸ್ಯಾಂಡಲ್‌ವುಡ್‌ನಲ್ಲಿ ಕ್ಯೂಟ್ ಕಪಲ್‌ ಕೂಡ ಹೌದು. ಆದರೆ ಇವರ ಇಬ್ಬರ ಮೇಲೆ ಅದ್ಯಾವ ಕೆಟ್ಟ ದೃಷ್ಟಿ ಬಿತ್ತೋ ಗೊತ್ತಿಲ್ಲ ಚಿರು ಕೊರೊನಾ ಸಂದರ್ಭದಲ್ಲಿ ನಿಧನರಾದರು. ಈ ನೋವಿನಿಂದ ಹೊರಬರಲು ಮೇಘನಾ ರಾಜ್ ಅವರಿಗೆ ವರ್ಷಗಳೇ ತೆಗೆದುಕೊಂಡಿವೆ. ಇದೀಗ ಮೇಘನಾ ಆ ಕಹಿ ಘಟನೆಯನ್ನು ಮರೆಯಲು ಪ್ರಯತ್ನಿಸುತ್ತಿದ್ದಾರೆ. ಈ ನಡುವೆ ತುಂಬಾ ವರ್ಷಗಳ ಬಳಿಕ ತಮ್ಮ ಗೆಳತಿಯೊಂದಿಗೆ ದುಬೈ ಪ್ರವಾಸಕ್ಕೆ ಮೇಘನಾ ತೆರಳಿದ್ದರು.

meghana raj celebrates actress ananya birthday in dubai

ಹೌದು ಮೇಘನಾ ರಾಜ್ ಹಾಗೂ ನಟಿ ಅನನ್ಯ ತುಂಬಾ ಒಳ್ಳೆಯ ಸ್ನೇಹಿತೆಯರು. ಮೇಘನಾ ಮತ್ತು ಅನನ್ಯಾ ಮಲಯಾಳಂ ಚಿತ್ರ 100 ಡಿಗ್ರಿ ಸೆಲ್ಸಿಯಸ್ ಸೇರಿದಂತೆ ಒಂದೆರಡು ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಈ ಮೂಲಕ ಇಬ್ಬರೂ ಆತ್ಮೀಯ ಬಾಂಧವ್ಯವನ್ನು ಹೊಂದಿದ್ದಾರೆ.

ಅಲ್ಲದೆ ಅನನ್ಯ ಮೇಘನಾ ರಾಜ್ ಸೀಮಂತದ ಕಾರ್ಯಕ್ರಮದಲ್ಲೂ ಭಾಗಿಯಾಗಿದ್ದರು. ಮನೆಯ ಹಲವು ಕಾರ್ಯಕ್ರಮದಲ್ಲಿ ಅನನ್ಯ ಭಾಗವಹಿಸಿ ಮೇಘನಾ ರಾಜ್ ಅವರ ಅತ್ಯಂತ ಹತ್ತಿರದ ಗೆಳತಿಯಾಗಿದ್ದಾರೆ. ಹೀಗಾಗಿ ತಮ್ಮ ಗೆಳತಿ ಅನನ್ಯ ಅವರ ಹುಟ್ಟುಹಬ್ಬವನ್ನು ಆಚರಿಸಲು ಮೇಘನಾ ರಾಜ್ ದುಬೈಗೆ ತೆರಳಿದ್ದರು.

meghana raj celebrates actress ananya birthday in dubai

ದುಬೈನಲ್ಲಿ ಅನನ್ಯಾಗೆ ಉಡುಗೊರೆಯನ್ನು ಖರೀದಿ ಮಾಡಿದ ಮೇಘನಾ ರಾಜ್ ಸರ್ಪೈಸ್ ಕೊಟ್ಟಿದ್ದಾರೆ. ಜೊತೆಗೆ ದುಬೈನಲ್ಲಿ ಒಂದೊಳ್ಳೆ ಹೋಟೆಲ್‌ನಲ್ಲಿ ಅನನ್ಯ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಮೇಘನಾ ರಾಜ್ ಕೊಟ್ಟ ಉಡುಗೊರೆಗೆ ಅನನ್ಯ ಸಖತ್ ಖುಷಿಯಾಗಿದ್ದು ಕಂಡುಬಂದಿದೆ. ಈ ವಿಡಿಯೋವನ್ನು ಮೇಘನಾ ರಾಜ್ ತಮ್ಮ ಯೂಟ್ಯೂಬ್ ಚಾನಲ್‌ನಲ್ಲಿ ಹಂಚಿಕೊಂಡಿದ್ದಾರೆ.

Take a Poll

ಅನನ್ಯಾಗೆ ವ್ಯಾನಿಟಿ ಬ್ಯಾಗ್‌ ಅನ್ನು ಕೊಟ್ಟ ಮೇಘನಾ ವಿಶ್ ಮಾಡಿದ್ದಾರೆ. ಜೊತೆಗೆ ರಾಯನ್‌ಗೂ ಕೂಡ ಆಟಿಕೆಗಳನ್ನು ಖರೀದಿ ಮಾಡಿದ್ದಾರೆ. ಒಂದೊಳ್ಳೆ ಮಾಲ್‌ಗೆ ತೆರಳಿ ಅಲ್ಲಿ ಬಗೆ ಬಗೆಯ ಆಟಿಕೆ‌ಗಳನ್ನು ನೋಡಿ ಮೇಘನಾ ಖುಷಿ ಪಟ್ಟಿದ್ದಾರೆ. ಮಗ ರಾಯನ್‌ಗೆ ಯಾವ ಆಟಿಕೆ ಖರೀದಿ ಮಾಡಬೇಕು ಅನ್ನೋದನ್ನು ನೂರು ಬಾರಿ ಯೋಚಿಸಿದ್ದು ಕಂಡು ಬಂದಿದೆ.

ಮೇಘನಾ ರಾಜ್ ಹಂಚಿಕೊಂಡ ಈ ವಿಡಿಯೋಕ್ಕೆ ಸಾಕಷ್ಟು ಲೈಕ್ಸ್ ಬಂದಿವೆ. ಜನ ಮೇಘನಾ ರಾಜ್ ಅವರ ಈ ವಿಡಿಯೋವನ್ನು ಮೆಚ್ಚಿಕೊಂಡಿದ್ದಾರೆ. ಹೀಗೆ ಖುಷಿಯಾಗಿರಿ ಎಂದು ಹಾರೈಸಿದ್ದಾರೆ. ಒಟ್ಟಿನಲ್ಲಿ ಮೇಘನಾ ರಾಜ್ ತಮ್ಮ ಜೀವನದಲ್ಲಿ ನಡೆದ ಕಹಿ ಘಟನೆಗಳಿಂದ ಹೊರಬರಲು ಪ್ರಯತ್ನಿಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+