Megha Shetty: ಕಾಲಿವುಡ್‌ಗೆ ಕಾಲಿಟ್ಟ ಮೇಘಾ ಶೆಟ್ಟಿ: ತಮಿಳು ಹೊಸ ಸಿನಿಮಾದಲ್ಲಿ ಕನ್ನಡತಿಗೆ ಆಫರ್

ಬೆಂಗಳೂರು, ಮಾರ್ಚ್‌ 12: ಸೀರಿಯಲ್ ಮೂಲಕ ಬಂದ ಮನೆ ಮಾತಾಗಾಗಿ ಕನ್ನಡ ಚಿತ್ರರಂಗದಲ್ಲಿ ನೆಲೆ ಕಂಡು ಕೊಂಡು ಬ್ಯೂಟಿಫೂಲ್ ಚೆಲುವೆಯರಿಗೆ ಪರಭಾಷಾ ಚಿತ್ರರಂಗದಲ್ಲಿ ಸಾಕಷ್ಟು ಬೇಡಿಕೆ ಇದೆ. ಸ್ಯಾಂಡಲ್‌ವುಡ್ ಬ್ಯೂಟೀಸ್ ಆಶಿಕಾ ರಂಗನಾಥ್, ಶ್ರೀಲೀಲಾ, ರಶ್ಮಿಕಾ ಮಂದಣ್ಣ, ರುಕ್ಮಿಣಿ ವಸಂತ, ಸಪ್ತಮಿ ಗೌಡ ಸಾಲಿಗೆ ನಟಿ ಮೇಘಾ ಶೆಟ್ಟಿ ಅವರು ಸೇರಿದ್ದಾರೆ. ಏಕೆಂದರೆ ಈ ನಟಿಗೆ ತಮಿಳಿನಲ್ಲಿ ಒಂದೊಳ್ಳೆ ಸಿನಿಮಾ ಆಫರ್ ಬಂದಿದೆ.

ತಮಿಳು, ತೆಲುಗು, ಹಿಂದಿ ಭಾಷೆಯ ಸಿನಿಮಾಗಳಲ್ಲಿ ಸ್ಯಾಂಡಲ್‌ವುಡ್ ನಟಿಯರು ಮಿಂಚುತ್ತಿದ್ದಾರೆ. ಪ್ಯಾನ್ ಇಂಡಿಯಾ ಸ್ಟಾರ್‌ಗಳ ಜೊತೆಗೆ ಕನ್ನಡ ನಟಿಮಣಿಯರು ಮಿಂಚುತ್ತಿದ್ದಾರೆ. ಇದೀಗ ಕನ್ನಡತಿ ನಟಿ ಮೇಘಾ ಶೆಟ್ಟಿ ಅವರು ಕಾಲಿವುಡ್ ಪ್ರವೇಶಿಸಿದ್ದಾರೆ. ಇಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದು, ಇತ್ತೀಚೆಗೆ ಆ ಹೊಸ ತಮಿಳು ಸಿನಿಮಾದ ಮುಹೂರ್ತವು ಸರಳವಾಗಿ ಜರಗಿದೆ.

Megha Shetty One More Kannada Actress Enter to Collywood industry from KFI

ತಮಿಳು ಸಿನಿಮಾದಲ್ಲಿ ನಟಿಸುತ್ತಿರುವುದಾಗಿ ನಟಿ ಮೇಘಾ ಶೆಟ್ಟಿ ಅವರೇ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. 'ಹೊಸ ಆರಂಭ' ಎಂದು ಬರೆದುಕೊಂಡು ಒಂದಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ. 'ಕಾಲೈಯಾನ್' ಚಿತ್ರದ ಶಿರ್ಷಿಕೆಯಾಗಿದ್ದು, ಎಂ ಗುರು ಅವರು ಚಿತ್ರಕತೆ ಬರೆದು ನಿರ್ದೇಶಿಸುತ್ತಿದ್ದಾರೆ. ಝಾಂಬರ ಎಂಟರ್‌ಟೈನ್‌ಮೆಂಟ್ ಅಡಿಯಲ್ಲಿ ಧರ್ಮರಾಜ್ ವೇಲುಚಾಮಿ ಅವರು ಸಿನಿಮಾ ನಿರ್ಮಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಮೇಘಾ ಶೆಟ್ಟಿ ನಾಯಕಿಯಾಗಿದ್ದಾರೆ.

ಕನ್ನಡದಲ್ಲಿ ಇತ್ತೀಚೆಗೆ ಅವರು ನಟಿಸಿದ್ದ 'ಕೈವಾ' ಸಿನಿಮಾ ಬಳಿಕ ಅವರು ಕೆಲವು ಸಿನಿಮಾಗಳಲ್ಲಿ ಬ್ಯೂಸಿ ಇದ್ದಾರೆ. ಈ ಮಧ್ಯೆ ಅವರಿಗೆ ತಮಿಳಿನಲ್ಲಿ ಆಫರ್ ಗಿಟ್ಟಿಸಿಕೊಂಡಿದ್ದಕ್ಕೆ ಅವರ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಕೆಲವರು ನೆಚ್ಚಿನ ನಟಿಗೆ 'ವಿ‍ಷ್' ಕೂಡ ಮಾಡಿದ್ದಾರೆ. ಮತ್ತೊಬ್ಬರು 'ಕನ್ನಡ ಬಿಟ್ಟು ಬೇರೆ ಭಾಷೆಗೆ ಹೋಗುತ್ತಿದ್ದೀರಾ?' ಎಂದು ಆಶ್ಚರ್ಯದಿಂದ ಪ್ರಶ್ನಿಸಿದ್ದಾರೆ.

Megha Shetty One More Kannada Actress Enter to Collywood industry from KFI

ಮಾರ್ಚ್‌ 10ರಂದು ಸೋಮವಾರ ಸೆಟ್ಟೇರಿರುವ ತಮಿಳಿನ ಈ 'ಕಾಲೈಯಾನ್' ಸಿನಿಮಾವು ಉತ್ತಮ ಕಥೆ ಹೊಂದಿದ್ದು, ಪ್ರಮುಖ ಪಾತ್ರಗಳು ಸಿನಿಮಾದಲ್ಲಿರ ಇರಲಿವೆ. ನಿರ್ದೇಶಕರ ಚೊಚ್ಚಲ ಚಿತ್ರ ಆದರೂ ಸಹಿತ ಕಥೆಗೆ ಪ್ರಾಮುಖ್ಯತೆ ನೀಡಲಾಗಿದೆ. ಹಳ್ಳಿ ಸೊಗಡಿನಲ್ಲಿ ಚಿತ್ರ ಮೂಡಿ ಬರಲಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

ಕನ್ನಡದಲ್ಲೂ ನಟಿ ಮೇಘಾ ಶೆಟ್ಟಿ ಬ್ಯೂಸಿ

'ಕೈವಾ' ಸಿನಿಮಾ ನಂತರ ಕನ್ನಡದಲ್ಲಿ ಮೇಘಾ ಶೆಟ್ಟಿ ಅವರ ಮತ್ತ್ಯಾವ ಸಿನಿಮಾ ಇತ್ತೀಚೆಗೆ ತೆರೆಗೆ ಬಂದಿಲ್ಲ. 'ಆಪರೇಷನ್ ಲಂಡನ್ ಕೆಫೆ', 'ಗ್ರಾಮಾಯಣ', 'ಚೀತಾ' ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಇದೀಗ ತಮಿಳಿನತ್ತ ಮುಖ ಮಾಡಿರುವ ಅವರು, ಈ ಹಿಂದೆ ಗೋಲ್ಡನ್ ಸ್ಟಾರ್ ಗಣೇಶ್ ಅವರೊಂದಿಗೆ ತ್ರಿಬಲ್ ರೈಡಿಂಗ್, ಡಾರ್ಲಿಂಗ್ ಕೃಷ್ಣ ಅವರೊಂದಿಗೆ 'ದಿಲ್ ಪಸಂದ್' ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಪಾರ ಅಭಿಮಾನಿ ಬಳಗ ಸಂಪಾದಿಸಿದ್ದಾರೆ.

Take a Poll

ಸೌಂದರ್ಯ, ಆರೋಗ್ಯಕ್ಕೆ ನಟಿ ಆದ್ಯತೆ

ಕನ್ನಡದ 'ಜೊತೆ ಜೊತೆಯಲಿ' ಸಿರಿಯಲ್‌ನಲ್ಲಿ ಅನು ಸಿರಮನೆ ಪಾತ್ರಕ್ಕೆ ಬಣ್ಣ ಹಚ್ಚಿ ಮನೆ ಮಾತಾಗಿರುವ ನಟಿ ಮೇಘಾ ಶೆಟ್ಟಿ, ಸ್ಯಾಂಡಲ್‌ವುಡ್ ಜೊತೆಗೆ ಕಾಲಿವುಡ್‌ನಲ್ಲೂ ಆಫರ್ ಗಿಟ್ಟಿಸಿಕೊಳ್ಳುವಷ್ಟು ಬೆಳೆದಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯವಾಗಿರುವ ಈ ನಟಿಯು ಸೌಂದರ್ಯ, ಆರೋಗ್ಯಕ್ಕೆ ಹೆಚ್ಚು ಒತ್ತು ನೀಡುತ್ತಾರೆ. ಜಿಮ್‌ನಲ್ಲಿ ಅವರು ಬೆವರಿಳಿಸಿದ, ಸಾಹಸದ ವಿಡಿಯೋಗಳನ್ನು, ಚೆಂದ ಫೋಟೋಗಳನ್ನು ಅವರು ಸಾಮಾಜಿಕ ಜಾಲತಾಣ ಇನ್ಸ್ಟ್‌ಗ್ರಾಮ್‌ನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+