Master Anand: 'ನಯನಾನ ನೋಡಿದ ಮೇಲೆ ಆನಂದ್‌ಗೆ ನನ್ನ ಮೇಲೆ ಇಂಟ್ರಸ್ಟ್‌ ಕಮ್ಮಿ ಆಯ್ತು'

ಯಶಸ್ವಿನಿ ಮಾಸ್ಟರ್‌ ಆನಂದ್ ಇದೀಗ ತಮ್ಮದೇ ಆದ ಹೊಸ ಯೂಟ್ಯೂಬ್ ಚಾನೆಲ್‌ ಕೂಡ ತೆರೆದಿದ್ದು, ತಾವೇ ನಿರೂಪಕಿಯಾಗಿ ವಿಭಿನ್ನವಾಗಿ ಶೋ ನಡೆಸಿಕೊಂಡು ಹೋಗುತ್ತಿದ್ದಾರೆ. ಕನೆಕ್ಟ್‌ ಕನ್ನಡ(Konnect Kannada) ಎನ್ನುವ ಇವರ ಯೂಟ್ಯೂಬ್‌ ಚಾನೆಲ್‌ನಲ್ಲಿ ವಿಶೇಷವಾದ ಅತಿಥಿಗಳನ್ನೇ ಕರೆಸುತ್ತಿದ್ದು, ಬಹಳ ಯಶಸ್ವಿಯಾಗಿ ಕಾರ್ಯಕ್ರಮ ನಡೆಸಿಕೊಂಡು ಹೋಗುತ್ತಿದ್ದಾರೆ.

ಇದೀಗ ಯಶಸ್ವಿನಿ ಮಾಸ್ಟರ್‌ ಆನಂದ್ ಅವರ ಕನೆಕ್ಟ್‌ ಕನ್ನಡ ಯೂಟ್ಯೂಬ್‌ ಚಾನೆಲ್‌ಗೆ ಕಾಮಿಡಿ ಕಿಲಾಡಿಗಳು ನಯನ ಅತಿಥಿಯಾಗಿ ಬಂದಿದ್ದು, ಈ ಸಂಚಿಕೆಯಲ್ಲಿ ಮಾಸ್ಟರ್‌ ಆನಂದ್ ಅವರ ಬಗ್ಗೆ ಇಬ್ಬರು ಮಾತನಾಡಿದ್ದಾರೆ. ಮೊದಲು ಕಾಮಿಡಿ ಕಿಲಾಡಿಗಳಿಗೆ ಆಯ್ಕೆಯಾದ ಬಗ್ಗೆ ಮಾತನಾಡಿದ ನಯನಾ, 'ಆನಂದ್‌ ಸರ್‌ ಇತ್ತೀಚಿಗೆ ಹೇಳಿದರು, ಇವಳು ಬೇಕು. ಇವಳು ಮಾಡುತ್ತಾಳೆ, ಇವಳು ಶೋಗೆ ಬೇಕು ಅಂತಾ ಐದು ಸೆಂಕೆಂಡ್‌ ಅಲ್ಲಿ ಆಯ್ಕೆ ಮಾಡಿಕೊಂಡರಂತೆ.

Master Anand Wife Yashaswini And Comedy Khiladigalu Nayana Video Goes Viral

ನನಗೆ ನನ್ನ ಮೇಲೆ ಆ ನಂಬಿಕೆ ಇರಲಿಲ್ಲ. ನನಗೆ ನಟನೆ ಬಗ್ಗೆ ಏನೂ ಗೊತ್ತಿರಲಿಲ್ಲ. ಆದರೆ ನನ್ನ ಒಳಗೆ ನನಗೆ ಗಾಂಚಾಲಿ ಒಂದು ಏನಿತ್ತು ಅಂದರೆ ನನಗೆ ಕೊಟ್ಟಿರುವುದನ್ನು ನಾನು ಮಾಡುತ್ತೇನೆ. ಏನೇ ಕೊಟ್ಟರೂ ಮಾಡಬೇಕು ಗೊತ್ತಿಲ್ಲ ಅಂತಾ ಮಾತ್ರ ಹೇಳಬಾರದು. ಅದಂತೂ ಕಲಿತಿದ್ದೆ ನಾನು. ಗೊತ್ತಿಲ್ಲ ಅನ್ನೋದು ನನ್ನ ಬಾಯಲ್ಲಿ ಬರಲೇಬಾರದು. ನೀವು ಹೇಳಿಕೊಡಿ ಸರ್‌ ನಾನು ಕಲಿಯುತ್ತೇನೆ ಅಂತಾ ಇದ್ದೆ' ಎಂದು ನಯನಾ ಹೇಳಿದ್ದಾರೆ.

ನಯನಾ ಮಾತು ಕೇಳಿದ ಯಶಸ್ವಿನಿ, 'ಬಹುಶಃ ಆನಂದ್‌ಗೆ ಅವತ್ತಿನಿಂದ ನನ್ನ ಮೇಲೆ ಇಂಟ್ರಸ್ಟ್‌ ಕಮ್ಮಿ ಆಗಿದ್ದು' ಎಂದು ಹೇಳಿದ್ದಾರೆ. ಇದಕ್ಕೆ ಉತ್ತರಿಸಿದ ನಯನಾ, 'ಅಷ್ಟಿದ್ದರೂ ನೀವು ಯಾಕೆ ಎರಡು ಮಕ್ಕಳು ಮಾಡಿಕೊಂಡ್ರೀ, ಇಂಟ್ಟಸ್ಟ್‌ ಕಮ್ಮಿ ಆಗುತ್ತಿದೆ ಅಂತಾ ಗೊತ್ತಾದಾಗ ಮನೆ ಬಿಟ್ಟು ಕಳುಹಿಸಬೇಕಿತ್ತು ನಾನು ನೋಡಿಕೊಳ್ಳುತ್ತಿದೆ' ಎಂದು ತಮಾಷೆಯಾಗಿ ಉತ್ತರ ಕೊಟ್ಟಿದ್ದಾರೆ.

Master Anand Wife Yashaswini And Comedy Khiladigalu Nayana Video Goes Viral

'ನಮ್ಮ ಮೂವರ ಮಧ್ಯೆ ಟ್ರಯಾಂಲ್‌ ಲವ್‌ ಸ್ಟೋರಿ ಇದೆ. ಈ ಟ್ರಯಾಂಲ್‌ ಲವ್‌ ಸ್ಟೋರಿಯನ್ನು ಕನೆಕ್ಟ್‌ ಮಾಡಿದ್ದೇ ನೀವು. ನಾನು ಸರ್‌, ಗುರುಗಳು ಅಂತಾ ಇದ್ದೆ. ಆಮೇಲೆ ಜಗ್ಗೇಶ್‌ ಸರ್‌ ರೇಗಿಸಿ, ರೇಗಿಸಿ ನನಗೆ ಇಲ್ಲದೇ ಇರುವ ಫೀಲಿಂಗ್ಸ್‌ ಎಲ್ಲಾ ಹುಟ್ಟುವ ಹಾಗೆ ಮಾಡಿದರು. ಆಮೇಲೆ ನಾನು ಅಂದುಕೊಂಡೆ ನೀವಾದರೂ ಬೈಯುತ್ತೀರಾ ಅಂತಾ ಆದರೆ ನೀವೇ ಎಂಜಾಯ್‌ ಅಂದುಬಿಟ್ರಿ.

ನಿಮ್ಮಿಬ್ಬರ ನಡುವೆ ಇರುವ ಆ ಪ್ರೀತಿ ನಂಬಿಕೆ ನೋಡಿ ನನಗೆ ತುಂಬಾ ಖುಷಿ ಆಯ್ತು. ಆನಂದ್‌ ಸರ್‌ ಜೊತೆ ಕೂಡ ಈ ಬಗ್ಗೆ ಮಾತನಾಡಿದ್ದೆ ಅವರು ಕೂಡ ನಿಮ್ಮಿಬ್ಬರ ನಡುವೆ ಅಷ್ಟು ನಂಬಿಕೆ, ಪ್ರೀತಿ ಇದೆ ಅಂತಾ ಹೇಳಿದ್ದರು' ಎಂದು ನಯನಾ ಹೇಳಿದ್ದಾರೆ.

Master Anand Wife Yashaswini And Comedy Khiladigalu Nayana Video Goes Viral

ಚರ್ಚೆಗೆ ಗ್ರಾಸವಾದ ನಯನ-ಮಾಸ್ಟರ್ ಆನಂದ್ ಲವ್ವಿ ಡವ್ವಿ ಟೈಟಲ್‌

ಇನ್ನು ಈ ಹಿಂದೆ ನಯನ ಸಂದರ್ಶನದ ಪ್ರೋಮೋದ ವಿಡಿಯೋವನ್ನು ಯಶಸ್ವಿನಿ ಮಾಸ್ಟರ್‌ ಆನಂದ್ ಮೊದಲು ತಮ್ಮ ಕನೆಕ್ಟ್‌ ಕನ್ನಡ ಯೂಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆ ಮಾಡಿದ್ದರು. ಆದರೆ ಈ ಪ್ರೋಮೋ ಯಶಸ್ವಿನಿ ಮಾಸ್ಟರ್‌ ಆನಂದ್‌ ನೀಡಿದ್ದ ಟೈಟಲ್‌ ಚರ್ಚೆಗೆ ಗ್ರಾಸವಾಗಿತ್ತು.

ಬರಿ ನಗುವೇ ತುಂಬಿರುವ ಪ್ರೋಮೋಗೆ ಯಶಸ್ವಿನಿ ಮಾಸ್ಟರ್‌ ಆನಂದ್ ಕೊಟ್ಟಿರುವ ಟೈಟಲ್‌ ಅಪ್ರಸುತ್ತವಾಗಿದೆ ಎನ್ನುವಂತಿತ್ತು. ನಯನಾ ಸಂದರ್ಶನದ ವಿಡಿಯೋ ಪ್ರೋಮೋಗೆ, ಕಾಮಿಡಿ ಕಿಲಾಡಿಗಳು ನಯನ-ಮಾಸ್ಟರ್ ಆನಂದ್ ಲವ್ವಿ ಡವ್ವಿ ಎಂದು ಯಶಸ್ವಿನಿ ಟೈಟಲ್‌ ನೀಡಿದ್ದರು. ಈ ಟೈಟಲ್‌ ನೋಡಿದವರು ವಿಡಿಯೋ ಕ್ಲಿಕ್‌ ಮಾಡಿ ಪ್ರೋಮೋ ನೋಡಿ ಈ ವಿಡಿಯೋಗೆ ಇಂದೆಥಹ ಟೈಟಲ್‌ ಯಶಸ್ವಿನಿ ಮಾಸ್ಟರ್‌ ಆನಂದ್ ಅವರೇ ಅಂತಾ ಅಂದುಕೊಂಡಿದ್ದರು. ಈ ಪ್ರೋಮೋ ವೈರಲ್‌ ಆಗಿ ಅತಿಹೆಚ್ಚು ವೀಕ್ಷಣೆ ಪಡೆದುಕೊಂಡಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+