Annayya Serial: ಮಗು ಮಾಡ್ಕೊಳ್ಳಲ್ಲ ಅಂದ ಅಣ್ಣಯ್ಯ, ಈಗ ಫಸ್ಟ್‌ನೈಟ್ ಮಾಡ್ಕೊಳ್ತಿದ್ದಾರಲ್ಲಾ; ಏನ್ ಕಥೆ?
ಅಣ್ಣಯ್ಯ ಧಾರಾವಾಹಿಯ ಕಥೆಯ ನಾಯಕ ಶಿವಣ್ಣ, ತನ್ನ ನಾಲ್ಕು ತಂಗಿಯರಿಗೂ ಸುಖ ಸುಮಧುರ ಜೀವನ ಕಾಣಬೇಕೆಂಬ ಆಕಾಂಕ್ಷೆಯೊಂದಿಗೆ ಅಣ್ಣಯ್ಯ ಬದುಕುತ್ತಾನೆ. ಮೊದಲಿನಿಂದಲೂ ನನ್ನ ನಾಲ್ಕು ಜನ ತಂಗಿಯರಿಗೆ ಒಳ್ಳೆಯ ಹುಡುಗ ಸಿಗಬೇಕು. ಸರಿಯಾದ ಮನೆಗಳಿಗೆ ವಿವಾಹ ಮಾಡಬೇಕು ಎಂಬ ಕನಸು ಹೊಂದಿದ್ದಾನೆ. ಇದರ ನಡುವೆ ಮಗು ಮಾಡಿಕೊಳ್ಳಿ ಎಂದು ಮನೆಯವರು ಒತ್ತಾಯಿಸಿದ್ದರು.
ಅಣ್ಣಯ್ಯ ಸೀರಿಯಲ್ ನಾಯಕ ನಟ ಶಿವಣ್ಣ ಇಬ್ಬರು ತಂಗಿಯರನ್ನ ಮದುವೆ ಮಾಡಿದ್ದಾರೆ. ಶಿವಣ್ಣನ ಮನೆಯ ಆಧಾರಸ್ತಂಭದಂತೆ ಇದ್ದ ತಂಗಿಯೊಬ್ಬಳು ಗಂಡನ ಮನೆಯಲ್ಲಿ ಅನೇಕ ಸವಾಲುಗಳನ್ನು ಎದುರಿಸುತ್ತಿದ್ದಾಳೆ, ಇನ್ನೊಬ್ಬಳು ತಂಗಿಯದು ಮತ್ತೊಂದು ಸಮಸ್ಯೆ. ರಶ್ಮಿಯನ್ನ ಅತ್ತೆ ಒಪ್ಪುತ್ತಿಲ್ಲ. ಇನ್ನೊಂದು ಕಡೆ ರಶ್ಮಿಯ ಮಾವ, ಶಿವಣ್ಣನ ಪ್ರೀತಿಯ ಮಾದಪ್ಪಣ್ಣ ಶಿವು, ಪಾರು ಮಕ್ಕಳು ಮಾಡ್ಕೊಳ್ಳೇ ಬೇಕು ಅಂತ ಕೂತಿದ್ದಾರೆ.

ಮಾದಪ್ಪಣ್ಣ ಶಿವು ಪಾರುಗೆ ಮಕ್ಕಳಾದರೆ ತನ್ನ ಮಗ, ಸೊಸೆಗೂ ಮಕ್ಕಳಾಗುತ್ತೆ, ಮನೆ ದೀಪ ಬೆಳಗುತ್ತೆ ಅನ್ನೋ ಆಸೆ ಅವರದ್ದು. ಇಲ್ಲೀತನ ಅಣ್ಣಯ್ಯ ಧಾರಾವಾಹಿಯ ನಾಯಕ ಶಿವಣ್ಣ ಮತ್ತು ಪಾರು ಒಂದು ತೀರ್ಮಾನಕ್ಕೆ ಬಂದಿದ್ದರು. ಅದು ಮಕ್ಕಳು ಮಾಡ್ಕೊಳ್ಳೋದು ಬೇಡ ಅನ್ನೋ ಡಿಸಿಶನ್. ತಮಗೆ ಮಕ್ಕಳಾದರೆ ಎಲ್ಲಿ ತಂಗಿಯರ ಮೇಲಿನ ಜವಾಬ್ದಾರಿಗೆ ಸಮಸ್ಯೆ ಆಗುತ್ತೋ ಅಂತ ಶಿವು ಮತ್ತು ಪಾರು ಹೆದರಿಕೊಂಡಿದ್ದರು.
ಇದೀಗ ಮಾದಪ್ಪಣ್ಣ ಹಾಗೂ ಇಬ್ಬರು ತಂಗಿಯ ಬಿಗಿಪಟ್ಟಿಗೆ ಈ ಮುದ್ದಾದ ಜೋಡಿ ಕರಗಿದ ಹಾಗೆ ಕಾಣಿಸುತ್ತದೆ. ಇದೀಗ ತಮಗೆ ಮಕ್ಕಳಾದರೇ ತಂಗಿಯರ ಮನೆಯಲ್ಲೂ ಹೊಸ ಜೀವ ಬರುತ್ತೆ ಅನ್ನೋ ಮಾತು ಕೇಳಿದ ಮೇಲೆ ಈ ಜೋಡಿ ಮನಸ್ಸು ಬದಲಿಸಿ ಮಕ್ಕಳನ್ನು ಮಾಡಲು ತೀರ್ಮಾನಿಸಿದಂತಿದೆ. ಮಗು ಮಾಡ್ಕೊಳ್ಳಲ್ಲ ಅಂದ ಶಿವು, ಪಾರು ಇದೀಗ ಫಸ್ಟ್ ನೈಟ್ ಮಾಡ್ಕೊಳ್ತಿದ್ದಾರಾ ಏನು ಕಥೆ ಎಂದು ವೀಕ್ಷಕರು ಪ್ರಶ್ನಿಸಿದ್ದಾರೆ.
ಶೃಂಗಾರದ ಹೊಂಗೇ ಮರ ಹೂ ಬಿಟ್ಟಿದೆ, ನಾಚಿಕೆ ನನ್ನ ಜೊತೆ ಟೂ ಬಿಟ್ಟಿದೆ' ಅನ್ನೋ ಸಾಂಗ್. ಬರೆದದ್ದು ಯೋಗರಾಜ ಭಟ್ಟರು. 'ಪಂಚತಂತ್ರ' ಅನ್ನೋ ಸಿನಿಮಾಕ್ಕೆ ಅದೊಂದು ರೊಮ್ಯಾಂಟಿಕ್ ಲವ್ ಸ್ಟೋರಿ.ಸಿನಿಮಾದಲ್ಲೇನೋ ಮದುವೆಗೂ ಮೊದಲಿನಲ್ಲೇ ಫಸ್ಟ್‌ನೈಟ್ ಮಾಡ್ಕೊಂಡ ಜೋಡಿಗೆ ಹಿನ್ನೆಲೆಯಾಗಿ ಈ ಸಾಂಗ್ ಬರುತ್ತೆ. ಆದರೆ ಅಣ್ಣಯ್ಯ ಧಾರಾವಾಹಿಯಲ್ಲಿ ಈ ಹಾಡು ಪಾರು ಮತ್ತು ಶಿವಣ್ಣ ಆಲಿಯಾಸ್ ಮಾರಿಗುಡಿ ಶಿವ ಆಲಿಯಾಸ್ ಮಾವ ನಡುವೆ ಮೂಡಿ ಬಂದಿದೆ. ಅಷ್ಟಕ್ಕೂ ಇದು ಮೇಲ್ನೋಟಕ್ಕೆ ಶಿವು ಮತ್ತು ಪಾರು ನಡುವಿನ ಫಸ್ಟ್ ನೈಟ್ ಸಾಂಗ್‌ನಂತೆ ಕಂಡು ಬಂದಿದೆ.












Click it and Unblock the Notifications