ತುಂಬಾ ಮುದ್ದಾಗಿದ್ದೀಯ, ನಂಬರ್ ಕೊಡು ಫ್ಲರ್ಟ್ ಮಾಡ್ಬೇಕು: ಖ್ಯಾತ ನಟಿಗೆ ನಟನಿಂದಲೇ ಕಿರುಕುಳ
ಸೋಷಿಯಲ್ ಮೀಡಿಯಾದಲ್ಲಿ ನಟಿಯರ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡುವವರ ಸಂಖ್ಯೆ ಇತ್ತೀಚೆಗೆ ಹೆಚ್ಚಾಗಿದೆ. ಕೆಲವರು ಅವಾಚ್ಯವಾಗಿ ಕಾಮೆಂಟ್ ಮಾಡುವ ವಿಚಾರಗಳಿಂದಾಗಿ ನಟಿಯರು ನೊಂದಿದ್ದೂ ಉಂಟು. ಅಚ್ಚರಿಯೆಂದರೆ ಖ್ಯಾತ ನಟಿಗೆ ಮತ್ತೊಬ್ಬ ಖ್ಯಾತ ನಟನೊಬ್ಬ ಕೆಟ್ಟದಾಗಿ ಮೆಸೇಜ್ ಮಾಡಿರುವುದು ಬೆಳಕಿಗೆ ಬಂದಿದೆ. ನಟಿಗೆ ಅವಾಚ್ಯವಾಗಿ ಮೆಸೇಜ್ ಮಾಡಿದ್ದಲ್ಲದೆ ಆಕೆಯ ನಂಬರ್ ಕೂಡ ಕೇಳಿದ್ದಾರೆ. ಇದರೊಂದ ಮನನೊಂದ ಆ ನಟಿಯು ಮೆಸೇಜ್ ಸ್ಕ್ರೀನ್‌ಶಾಟ್ ಶೇರ್ ಮಾಡಿ ನಟ ಮುಖವಾಡ ಕಳಚಿಟ್ಟಿದ್ದಾರೆ.
ಮರಾಠಿ ಕಿರುತೆರೆಯ ಖ್ಯಾತ ನಟಿ ಪ್ರಾಚಿ ಪಿಸಾತ್ (Prachi Pisat) ಅವರಿಗೆ ಹಿರಿಯ ನಟ ಸುದೇಶ್ ಮಹಾಶಿಲ್ಕರ್ ಅವರು ಆಕ್ಷೇಪಾರ್ಹ ಸಂದೇಶಗಳನ್ನು ಕಳುಹಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಶಾಕಿಂಗ್ ವಿಚಾರವನ್ನು ಖುದ್ದಾಗಿ ನಟಿ ಸಾಮಾಜಿಕ ಮಾಧ್ಯಮದಲ್ಲಿ ನಟನ ಮೆಸೇಜ್ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡು ಆತನ ಬಣ್ಣ ಬಯಲು ಮಾಡಿದ್ದಾರೆ.

ನಟ ಸುದೇಶ್ ಮಹಾಶಿಲ್ಕರ್ ಇನ್‌ಸ್ಟಾಗ್ರಾಂ ಮತ್ತು ಫೇಸ್‌ಬುಕ್‌ನಲ್ಲಿ ಪದೇ ಪದೇ ಸಂದೇಶ ಕಳುಹಿಸುವ ಮೂಲಕ ಕಿರುಕುಳ ನೀಡುತ್ತಿದ್ದರು ನಟಿ ಪ್ರಾಚಿ ಆರೋಪ ಮಾಡಿದ್ದಾರೆ. ಮೆಸೇಜ್‌ನಲ್ಲಿ ನಟ ನನ್ನ ಫೋನ್ ನಂಬರ್ ಕೇಳಿದ್ದಲ್ಲದೆ ನನ್ನ ಜೊತೆ ಫ್ಲರ್ಟ್ ಮಾಡಲು ಇಷ್ಟ ಎಂದು ತನ್ನ ಬಯಕೆ ಹೇಳಿಕೊಂಡಿದ್ದಾರೆ. ಮರಾಠಿ ಭಾಷೆಯಲ್ಲೇ ಮೆಸೇಜ್ ಮಾಡಿದ್ದ ನಟ, ʼನಿನ್ನ ಮೊಬೈಲ್ ನಂಬರ್ ಕೊಡು, ನಾನು ನಿನ್ನ ಜೊತೆ ಫ್ಲರ್ಟ್ ಮಾಡಲು ಬಯಸುತ್ತೇನೆ. ನೀನು ಎಷ್ಟು ಮುದ್ದಾಗಿ ಕಾಣುತ್ತಿಯʼ ಎಂದು ಮೆಸೇಜ್ ಮಾಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
ಮತ್ತೊಂದು ಮೆಸೇಜ್‌ನಲ್ಲಿ, ʼಇತ್ತೀಚಿನ ದಿನಗಳಲ್ಲಿ ನೀವು ತುಂಬಾ ಸೆ*ಕ್ಸಿಯಾಗಿ ಕಾಣಿಸುತ್ತಿದ್ದೀರಿ, ವಾವ್!ʼ ಎಂದು ನಟ ಮೆಸೇಜ್ ಕಳಿಸಿರುವುದಾಗಿ ನಟಿ ಪ್ರಾಚಿ ಸ್ಕ್ರೀನ್‌ಶಾಟ್‌ಗಳನ್ನು ಶೇರ್‌ಮಾಡಿಕೊಂಡಿದ್ದಾರೆ. ಮೊದಲಿಗೆ ನಟ ಮೆಸೇಜ್‌ಗಳಿಗೆ ಉತ್ತರಿಸದ ನಟಿ ಸುಮ್ಮನಾಗಿದ್ದರು. ಆದರೆ ಪದೇ ಪದೇ ಮೆಸೇಜ್ ಮಾಡಿದ್ದರಿಂದ ಆತನಿಗೆ ಪಾಠ ಕಲಿಸಲು ಸೋಷಿಯಲ್ ಮೀಡಿಯಾದಲ್ಲೇ ಮೆಸೇಜ್ ಮಾಡಿದ್ದ ಎಲ್ಲ ಸ್ಕ್ರೀನ್‌ಶಾಟ್ ಶೇರ್ ಮಾಡಿಕೊಳ್ಳುವ ಮೂಲಕ ನಟನಿಗೆ ಸರಿಯಾದ ಬುದ್ಧಿ ಕಲಿಸಿದ್ದಾರೆ.
ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ತಮ್ಮ ಚಾಟ್‌ಗಳ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಳ್ಳುವ ಮೂಲಕ ಪ್ರಾಚಿ ಸಂದೇಶಗಳಿಗೆ ಸಾರ್ವಜನಿಕವಾಗಿ ಪ್ರತಿಕ್ರಿಯಿಸಿದ್ದಾರೆ. ನಾನು ಈ ಸ್ಕ್ರೀನ್‌ಶಾಟ್ ಪೋಸ್ಟ್ ಮಾಡಿದ್ದಕ್ಕೆ ಆತ ನನ್ನನ್ನು ಬೆದರಿಸಿದನು. ಪೋಸ್ಟ್ ಅನ್ನು ಡಿಲೀಟ್ ಮಾಡಲು ಹಾಗೂ ಮೌನವಾಗಿರಲು ನನ್ನ ಮೇಲೆ ಒತ್ತಡ ಹೇರಿದನು. ಅದಕ್ಕಾಗಿಯೇ ನಾನು ಈ ಪೋಸ್ಟ್ ಅನ್ನು ನನ್ನ ಇನ್‌ಸ್ಟಾಗ್ರಾಮ್ ಫೀಡ್‌ನಲ್ಲಿ ಇರಿಸಲು ಬಯಸುತ್ತೇನೆ. ಸುದೇಶ್ ಮಹಶಿಲ್ಕರ್ ಕ್ಷಮೆಯಾಚಿಸುವವರೆಗೆ ಈ ವಿಷಯವನ್ನು ಸುಮ್ಮನೆ ಬಿಡೋದಿಲ್ಲ. ಕ್ಷಮೆಯಾಚಿಸಲು ಬಯಸದಿದ್ದರೆ, ಇತರ ಮಹಿಳೆಯರು ಅವನ ಬಗ್ಗೆ ನನಗೆ ಹೇಳಿದ್ದನ್ನು ಕೂಡ ನಾನು ಹಂಚಿಕೊಳ್ಳುತ್ತೇನೆ ಎಂದು ತಿರುಗೇಟು ನೀಡಿದ್ದಾರೆ.
ಈ ಪೋಸ್ಟ್ ನೋಡಿ ನೆಟ್ಟಿಗರು ಫುಲ್ ಗರಂ ಆಗಿದ್ದಾರೆ. ಈ ವಿಚಾರದಲ್ಲಿ ಅನೇಕರು ನಟಿ ಪ್ರಾಚಿ ಅವರನ್ನು ಬೆಂಬಲಿಸಿದ್ದಾರೆ. ಪ್ರಾಚಿ ಅವರು ಮರಾಠಿ ದೂರದರ್ಶನ ಧಾರಾವಾಹಿಗಳಲ್ಲಿ ನಟಿಸುವ ಮೂಲಕ ಜನಪ್ರಿಯರಾಗಿದ್ದಾರೆ. ನಟ ಸುದೇಶ್ ಮಹಶಿಲ್ಕರ್ ಕೂಡ ಮರಾಠಿ ವೆಬ್ ಸರಣಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಸುದ್ದಿ ದೊಡ್ಡಮಟ್ಟದಲ್ಲಿ ಸೌಂಡ್ ಮಾಡುತ್ತಿದ್ದು, ನಟ ಈ ಆರೋಪಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.












Click it and Unblock the Notifications